Asianet Suvarna News Asianet Suvarna News

Repo Rate:ಸತತ 9ನೇ ಬಾರಿ ರೆಪೋ, ರಿವರ್ಸ್ ರೆಪೋ ದರ ಬದಲಾಯಿಸದ RBI

ಒಮಿಕ್ರಾನ್ ವೈರಸ್ ಭೀತಿ ಜೊತೆಗೆ ಕೋವಿಡ್ -19 ಆಘಾತದಿಂದ ದೇಶದ ಆರ್ಥಿಕತೆ ಇನ್ನೂ ಚೇತರಿಸಿಕೊಂಡಿರದ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಪ್ರಸ್ತುತ ರೆಪೋ ದರ ಶೇ.4  ಹಾಗೂ ರಿವರ್ಸ್ ರೆಪೋ ದರ ಶೇ. 3.35 ಇದೆ. 

RBI keeps repo rate unchanged ninth consecutive time anu
Author
Bangalore, First Published Dec 8, 2021, 1:32 PM IST
  • Facebook
  • Twitter
  • Whatsapp

ನವದೆಹಲಿ (ಡಿ.8): ಭಾರತೀಯ ರಿಸರ್ವ್ ಬ್ಯಾಂಕ್ (RBI)ಹಣಕಾಸು ನೀತಿ ಸಮಿತಿ (MPC)ಈ ಬಾರಿಯೂ ರೆಪೋ ದರದಲ್ಲಿ (Repo rate)ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬುಧವಾರ (ಡಿ.8) ಈ ನಿರ್ಧಾರವನ್ನು ಪ್ರಕಟಿಸಿದ ಎಂಪಿಸಿ, ಪ್ರಸಕ್ತವಿರೋ ಶೇ.4 ರೆಪೋ ದರವನ್ನು ಮುಂದುವರಿಸೋದಾಗಿ ತಿಳಿದೆ. ಈ ಮೂಲಕ ಸತತ 9ನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ರಿವರ್ಸ್ ರೆಪೋ (Reverse Repo) ದರದಲ್ಲಿ ಕೂಡೆ ಯಾವುದೇ ಬದಲಾವಣೆ ಮಾಡಿಲ್ಲ. ರಿವರ್ಸ್ ರೆಪೋ ದರ ಈ ಹಿಂದಿನಂತೆ ಶೇ. 3.35 ಮುಂದುವರಿಯಲಿದೆ.  ಆರ್ ಬಿಐ ಗವರ್ನರ್  ಶಕ್ತಿಕಾಂತ್ ದಾಸ್ (Shaktikanta Das) ನೇತೃತ್ವದಲ್ಲಿ 6 ಸದಸ್ಯರನ್ನೊಳಗೊಂಡ ಎಂಪಿಸಿ ಸಭೆ ಸೋಮವಾರ (ಡಿ.6)  ಪ್ರಾರಂಭಗೊಂಡಿದ್ದು ಇಂದು (ಡಿ.8) ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ಇಂದು ದವಿಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ್ದಾರೆ. 

ಸತತ 9ನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ
ಎಂಪಿಸಿ ಅಕ್ಟೋಬರ್ ನಲ್ಲಿ ನಡೆಸಿದ್ದ ಸಭೆಯಲ್ಲಿ ಕೂಡ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆರ್ ಬಿಐ 2020ರ ಮೇ 22ರಂದು ಕೊನೆಯದಾಗಿ ರೆಪೋ ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಬದಲಾವಣೆ ಮಾಡಿತ್ತು. ಇದು 2001ರ ಏಪ್ರಿಲ್ ನಿಂದ ಈ ತನಕದ ಅತ್ಯಂತ ಕಡಿಮೆ ರೆಪೋ ದರವಾಗಿತ್ತು'.  ಆರ್ಥಿಕತೆ ಮೇಲೆ ಕೋವಿಡ್ 19 (COVID-19) ಬೀರಿರೋ ಪ್ರಭಾವದಿಂದ ಚೇತರಿಕೆ ಕಾಣೋ ತನಕ ಹಾಗೂ ಸುದೀರ್ಘ ಸಮಯದಲ್ಲಿ ಸುಸ್ಥಿರ ಪ್ರಗತಿ ಸಾಧಿಸೋ ಉದ್ದೇಶದಿಂದ ಎರಡು ಪ್ರಮುಖ ದರಗಳಲ್ಲಿ ಬದಲಾವಣೆ ಮಾಡಿಲ್ಲ' ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆ : ಕೇಂದ್ರ ಸರ್ಕಾರ

ರೆಪೋ ದರ (Repo rate)ಎಂದರೇನು?
ರೆಪೋ ದರವೆಂದ್ರೆ ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಅವಶ್ಯಕತೆ ಬಿದ್ದಾಗ ನೀಡೋ ಸಾಲದ(Loan)ಮೇಲೆ ವಿಧಿಸೋ ಬಡ್ಡಿದರವಾಗಿದೆ. ಆರ್ ಬಿಐ ರೆಪೋ ದರದಲ್ಲಿ ಬದಲಾವಣೆ ಮಾಡೋ ಮೂಲಕ ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸುತ್ತದೆ.  ದೇಶದಲ್ಲಿ ಹಣದುಬ್ಬರ (Inflation)ಹೆಚ್ಚಿದಾಗ ಆರ್ ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ. ಇದ್ರಿಂದ  ಬ್ಯಾಂಕ್ ಗಳು ಆರ್ ಬಿಐನಿಂದ ಸಾಲ ಪಡೆಯೋದನ್ನು ಕಡಿಮೆ ಮಾಡುತ್ತವೆ. ಇದ್ರಿಂದ ದೇಶದ ಆರ್ಥಿಕತೆಯಲ್ಲಿ ಹಣದ ಹರಿವು ಸಹಜವಾಗಿ ತಗ್ಗುತ್ತದೆ. ಇದ್ರಿಂದ ಹಣದುಬ್ಬರವನ್ನು ತಗ್ಗಿಸಲು ಸಾಧ್ಯವಾಗುತ್ತದೆ. ಅದೇರೀತಿಯಲ್ಲಿ ದೇಶದ ಆರ್ಥಿಕತೆಯಲ್ಲಿ ಹಣದ ಹರಿವು ಕಡಿಮೆಯಿದ್ದಾಗ ಆರ್ ಬಿಐ ರೆಪೋ ದರವನ್ನು ತಗ್ಗಿಸುತ್ತದೆ. 

ರಿವರ್ಸ್ ರೆಪೋ (Reverse Repo)ಎಂದರೇನು?
ಇದು ಬ್ಯಾಂಕುಗಳು ಆರ್ ಬಿಐನಲ್ಲಿ ಠೇವಣಿಯಿರಿಸಿರೋ (Deposit) ಹಣಕ್ಕೆ ಪಡೆಯೋ ಬಡ್ಡಿದರವಾಗಿದೆ. ದೇಶದ ಆರ್ಥಿಕತೆಯಲ್ಲಿ ಹಣದ ಹರಿವು ಹೆಚ್ಚಿದ್ದಾಗ ಆರ್ ಬಿಐ ರಿವರ್ಸ್ ರೆಪೋ ದರವನ್ನು ಏರಿಕೆ ಮಾಡುತ್ತದೆ. ಆಗ ಬ್ಯಾಂಕುಗಳು ಹೆಚ್ಚಿನ ಬಡ್ಡಿ ಗಳಿಸಲು ಆರ್ ಬಿಐಯಲ್ಲಿ ಹೆಚ್ಚಿನ ಹಣವನ್ನು ಠೇವಣಿಯಿಡುತ್ತವೆ. 

ಕೊರೋನಾ ಪಿಡುಗಿದ್ದರೂ ಧನಿಕರ ಸಂಪತ್ತು ದಾಖಲೆ ಏರಿಕೆ!

ಯಥಾಸ್ಥಿತಿ ಕಾಯ್ದುಕೊಳ್ಳಲು ಮನವಿ
ರಿವರ್ಸ್ ರೆಪೋ ದರ ಹೆಚ್ಚಳ ಮಾಡಿ ಆರ್ಥಿಕತೆಯಲ್ಲಿ ನಗದು ಲಭ್ಯತೆ ಪ್ರಮಾಣವನ್ನು ಸಹಜ ಸ್ಥಿತಿಗೆ ತರೋ ನಿರ್ಧಾರವನ್ನು ಆರ್ ಬಿಐ ಕೈಗೊಳ್ಳದಂತೆ ಎಸ್ ಬಿಐ ಆರ್ಥಿಕ ತಜ್ಞರು ಈ ಹಿಂದೆ ಆರ್ ಬಿಐಗೆ ಮನವಿ ಮಾಡಿದ್ದರು. 

Follow Us:
Download App:
  • android
  • ios