ಒಂದೇ ವರ್ಷದಲ್ಲಿ 500 ರೂ ಮುಖಬೆಲೆಯ ನೋಟುಗಳ ಬಳಕೆ ಭಾರೀ ಏರಿಕೆ!

ದೇಶದಲ್ಲಿ 500 ರು. ಮುಖಬೆಲೆಯ ನೋಟುಗಳ ಬಳಕೆ ಭಾರೀ ಹೆಚ್ಚಿದೆ. ಚಲಾವಣೆಯ ಒಟ್ಟು ನೋಟಿನಲ್ಲಿ ಶೇ.86ರಷ್ಟು ಪಾಲು ಹೆಚ್ಚಿದ್ದು,  ₹ 2000 ಮುಖಬೆಲೆ ನೋಟು ಹಿಂಪಡೆತದ ಪರಿಣಾಮ ಇದಾಗಿದೆ.

RBI Annual Report share of Rs 500 denomination currency notes in overall currency has jumped gow

ಮುಂಬೈ (ಮೇ.31): 2000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ಬಳಿಕ ದೇಶದಲ್ಲಿ 500 ರು. ಮುಖಬೆಲೆಯ ನೋಟುಗಳ ಬಳಕೆ ಭಾರೀ ಹೆಚ್ಚಿದೆ. ಹಾಲಿ ದೇಶದಲ್ಲಿ ಒಟ್ಟು ಚಲಾವಣೆಯಲ್ಲಿರುವ ನೋಟುಗಳ ಪೈಕಿ 500 ರು. ಮುಖಬೆಲೆಯ ನೋಟುಗಳ ಪ್ರಮಾಣವೇ ಶೇ.86.5ರಷ್ಟಿದೆ ಎಂದು ಆರ್‌ಬಿಐನ ವರದಿ ಹೇಳಿದೆ.

ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 78 ಸಾವಿರ ಕೋಟಿ ರೂ ಅನಾಥ!

ಕಳೆದ ವರ್ಷದ ಇದೇ ಅವಧಿಯಲ್ಲಿ 500 ರು.ಮುಖಬೆಲೆಯ ನೋಟಿನ ಪ್ರಮಾಣ ಶೇ.77.1ರಷ್ಟಿತ್ತು. ಒಂದು ವರ್ಷದಲ್ಲಿ ಈ ಪ್ರಮಾಣ ಶೇ.86.5ಕ್ಕೆ ತಲುಪಿದೆ. 2000 ರು. ಮುಖಬೆಲೆಯ ನೋಟು ಹಿಂಪಡೆದಿದ್ದೇ ಇದಕ್ಕೆ ಕಾರಣ. ಹಾಲಿ 500 ರು.ಮುಖಬೆಲೆಯ 5.16 ಲಕ್ಷ ನೋಟು ಚಲಾವಣೆಯಲ್ಲಿದೆ. ನಂತರದ ಸ್ಥಾನದಲ್ಲಿ 10 ರು. ನೋಟಿದೆ. ಅದರ ಪ್ರಮಾಣ 2.49 ಲಕ್ಷ ಎಂದು ವರದಿ ಹೇಳಿದೆ.

ಇನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ಶೇ.3.9 ಮತ್ತು ಪ್ರಮಾಣ ಶೇ.7.8ರಷ್ಟು ಹೆಚ್ಚಳವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಡಿಮೆ. 2024ನೇ ಹಣಕಾಸು ವರ್ಷದಲ್ಲಿ ನೋಟು ಮುದ್ರಣಕ್ಕಾಗಿ 5101 ಕೋಟಿ ರು. ವ್ಯಯಿಸಲಾಗಿದೆ ಎಂದು ವರದಿ ಹೇಳಿದೆ.

ಬರೋಬ್ಬರಿ 500 ಗ್ರಾಂ ಚಿನ್ನ ಕಳ್ಳಸಾಗಣೆ ವೇಳೆ ಶಶಿ ತರೂರ್‌ ಆಪ್ತನ ಸೆರೆ, ಸಂಸದ ಶಾಕ್!

ಚಿನ್ನದ ಬಾಂಡಲ್ಲಿ 27000 ಕೋಟಿ ರು. ಹೂಡಿಕೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೂಡಿಕೆದಾರರು ಚಿನ್ನದ ಬಾಂಡ್‌ಗಳಲ್ಲಿ ಭರ್ಜರಿ 27000 ಕೋಟಿ ರು. ಹೂಡಿಕೆ ಮಾಡಿದ್ದಾರೆ. ಇದು ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚು. ಹೀಗೆ ಹೂಡಿಕೆ ಮಾಡಿರುವ ಹಣವನ್ನು ಚಿನ್ನಕ್ಕೆ ಪರಿವರ್ತಿಸಿದರೆ ಅದು ಅಂದಾಜು 45 ಟನ್‌ ಚಿನ್ನಕ್ಕೆ ಸಮ ಎಂದು ಆರ್‌ಬಿಐ ಹೇಳಿದೆ. ಹಣಕಾಸು ವರ್ಷದಲ್ಲಿ ಆರ್‌ಬಿಐ ಒಟ್ಟು 4 ಹಂತದಲ್ಲಿ ಚಿನ್ನದ ಬಾಂಡ್‌ ಬಿಡುಗಡೆ ಮಾಡಿತ್ತು.

Latest Videos
Follow Us:
Download App:
  • android
  • ios