ಬರೋಬ್ಬರಿ 500 ಗ್ರಾಂ ಚಿನ್ನ ಕಳ್ಳಸಾಗಣೆ ವೇಳೆ ಶಶಿ ತರೂರ್ ಆಪ್ತನ ಸೆರೆ, ಸಂಸದ ಶಾಕ್!
ಇಂದಿರಾಗಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 35 ಲಕ್ಷ ರು. ಮೌಲ್ಯದ 500 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಆಪ್ತನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ನವದೆಹಲಿ (ಮೇ.31): ನಗರದ ಇಂದಿರಾಗಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 35 ಲಕ್ಷ ರು. ಮೌಲ್ಯದ 500 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಆಪ್ತ ಹಾಗೂ ಮಾಜಿ ಸಿಬ್ಬಂದಿಯೊಬ್ಬರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತರೂರ್‌ರ ಆಪ್ತ ಶಿವಪ್ರಸಾದ್‌ರರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಪರಿಚಯಸ್ಥರಿಂದ ವಿದೇಶದಿಂದ ವಿದೇಶದಿಂದ ತಂದ ಚಿನ್ನವನ್ನು ಪಡೆದುಕೊಳ್ಳುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಜಮ್ಮುವಿನಲ್ಲಿ 150 ಅಡಿ ಆಳದ ಕಮರಿಗೆ ಉರುಳಿ ಬಿದ್ದ ಬಸ್, 22 ಶಿವ ಖೋರಿ ಯಾತ್ರಿಕರು ಬಲಿ, 69 ಮಂದಿಗೆ ಗಾಯ
ಕೇರಳದ ತಿರುವನಂತಪುರ ಕ್ಷೇತ್ರದ ಹಾಲಿ ಸಂಸದ ಶಶಿ ತರೂರ್ ಘಟನೆ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿ, ನಾನು ಚುನಾವಣಾ ಪ್ರಚಾರ ಹಿನ್ನೆಲೆ ಧರ್ಮಶಾಲಾದಲ್ಲಿದ್ದಾಗ ಈ ವಿಷಯ ಕೇಳಿ ಅಚ್ಚರಿಯಾಗಿದೆ. ಅವರು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು, ಅನುಕಂಪದ ಆಧಾರದಲ್ಲಿ ಅವರನ್ನು ನಿವೃತ್ತಿ ಬಳಿಕ ಅರೆಕಾಲಿಕ ನೌಕರರಾಗಿ ನೇಮಿಸಿಕೊಳ್ಳಲಾಗಿತ್ತು’ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಟ್ಸಪ್ ಚಾಟಿಂಗ್: ಯುವಕರಿಬ್ಬರ ಹೊಡೆದಾಟ!
ಇನ್ನೊಂದೆಡೆ ‘ಕಾಂಗ್ರೆಸ್ ಹಾಗೂ ಸಿಪಿಎಂ ಚಿನ್ನ ಅಕ್ರಮ ಸಾಗಾಣೆಯಲ್ಲಿ ಮೈತ್ರಿಕೂಟ ರಚಿಸಿಕೊಂಡಿವೆ. ಮೊದಲಿಗೆ ಮುಖ್ಯಮಂತ್ರಿಯ ಕಾರ್ಯದರ್ಶಿ ಚಿನ್ನ ಅಕ್ರಮ ಸಾಗಣೆಯಲ್ಲಿ ಸಿಕ್ಕಿಬಿದ್ದರು. ಈಗ ಸಂಸದರ ಆಪ್ತನನ್ನು ಕೂಡ ಬಂಧಿಸಲಾಗಿದೆ’ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.