83ನೇ ವಸಂತಕ್ಕೆ ಕಾಲಿಟ್ಟ ರೋಲ್ ಮಾಡೆಲ್, ಉದ್ಯಮಿ, ಸಹೃದಯಿ ರತನ್ ಟಾಟಾ!
First Published Dec 28, 2020, 9:21 PM IST
ದಿಗ್ಗಜ ಉದ್ಯಮಿ, ಶ್ರೀಮಂತ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ರತನ್ ಟಾಟಾ ಇಂದು 83ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರತನ್ ಟಾಟಾ ಕೈಗಾರಿಕೆ, ಉದ್ಯಮ ಸಾಮ್ರಾಜ್ಯವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಚತುರ. ಎಲ್ಲರ ರೋಲ್ ಮಾಡೆಲ್ ಆಗಿರುವ ರತನ್ ಟಾಟಾ, ಭಾರತೀಯ ಕೈಕಾರಿಕೋದ್ಯಮಿಗಳ ಮಾರ್ಗದರ್ಶಿಯಾಗಿದ್ದಾರೆ. ಇದೆಲ್ಲವನ್ನೂ ಹೊರತು ಪಡಿಸಿದರೆ, ಸರಳ, ಸಜ್ಜನಿಕೆಯ ಸಹೃದಯಿ ರತನ್ ಟಾಟಾಗೆ ನಾಯಿಗಳೆಂದರೇ ಅಷ್ಟೇ ಪ್ರೀತಿ. 83ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ರತನ್ ಟಾಟಾ ಕುರಿತು ರೋಚಕ ಮಾಹಿತಿ ಇಲ್ಲಿದೆ.

ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲ ಟಾಟಾ ಸಮೂಹ ಸಂಸ್ಥೆ ಬೆಳೆಸಿದ ಕೀರ್ತಿ ರತನ್ ಟಾಟಾಗೆ ಸಲ್ಲುತ್ತದೆ. ವಿಶ್ವದಲ್ಲೇ ಅತೀ ಹೆಚ್ಚು ಗೌರವ ಸಂಪದಾಸಿರುವ, ಅತೀ ಹೆಚ್ಚು ಗೌರವಿಸಲ್ಪಟ್ಟ ಉದ್ಯಮಿ ರತನ್ ಟಾಟಾ.

1937ರ ಡಿಸೆಂಬರ್ 28ರಂದು ಹುಟ್ಟಿದ ರತನ್ ಟಾಟಾ, ಇಂದು 83ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1971ರಲ್ಲಿ ಟಾಟಾ ಸಮೂಹ ಸಂಸ್ಥೆಗಳ ಡೈರೆಕ್ಟರ್ ಇನ್ ಚಾರ್ಜ್ ಆಗಿ ಟಾಟಾದಲ್ಲಿ ಹೊಸ ಅಧ್ಯಾಯ ಆರಂಭಿಸಿದ ರತನ್ ಟಾಟಾ, ನಂತರ ಇತಿಹಾಸ ಸೃಷ್ಟಿಸಿದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?