ವಸಂತ್ ಗಿಳಿಯಾರ್

ಕೊರಂಗ್ರಪಾಡಿ ಎಂಬ ಪುಟ್ಟ ಹಳ್ಳಿಯಿಂದ ಬಂದು 1993ರಲ್ಲಿ ಬಂಜಾರ ಎಂಬ ರೆಸ್ಟೋರೆಂಟ್ ಆರಂಭಿಸಿ ಹಗಲು ರಾತ್ರಿ ಶ್ರಮಪಟ್ಟು ಯಶಸ್ಸು ಪಡೆದು ಅದರಿಂದ ಸ್ಫೂರ್ತಿ ಹೊಂದಿ ನಾಲ್ಕಾರು ಉದ್ಯಮ ಆರಂಭಿಸಿ ಅದರಲ್ಲೂ ಗೆದ್ದು ಇವತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಸಾಹಸಿ ಕನ್ನಡಿಗನ ಹೆಸರು ಕೆ. ಪ್ರಕಾಶ್ ಶೆಟ್ಟಿ.

ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಅವರದು ಬಹಳ ದೊಡ್ಡ ಹೆಸರು. ರಾಷ್ಟ್ರ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಹೋಟೆಲುಗಳು ಪ್ರಸಿದ್ಧಿ ಪಡೆದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟು ದೊಡ್ಡ ಹೆಸರಿದ್ದರೂ ತಮ್ಮ ಹೋಟೆಲಿನ ಹುಡುಗನ ಜೊತೆಯೇ ಕುಳಿತು ಊಟ ಮಾಡುವಷ್ಟು ಸರಳತೆಯನ್ನು ಉಳಿಸಿಕೊಂಡಿರುವ ಪ್ರಕಾಶ್ ಶೆಟ್ಟರು ಕನ್ನಡ ನಾಡಿನ ಆಸ್ತಿ ಎಂದರೆ ತಪ್ಪಿಲ್ಲ. ಕನ್ನಡ ಸಿನಿಮಾ ಬೇರೆ ಭಾಷೆಗೆ ಹೋದರೆ ಅದು ಕನ್ನಡದ ಹಿರಿಮೆ. ಕನ್ನಡ ನಾಡಿನ ಮಂದೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಅದು ನಮ್ಮ ನಾಡಿನ ಹೆಮ್ಮೆ. ಪ್ರಕಾಶ್ ಶೆಟ್ಟರು ನಮ್ಮ ನಾಡಿನಿಂದ ಹೋಗಿ ಬೇರೆ ಬೇರೆ ಕಡೆಯಲ್ಲಿ ತಮ್ಮ ಉದ್ದಿಮೆ ಆರಂಭಿಸಿ ಹೆಸರು ಗಳಿಸಿದ್ದಾರೆ. ಈಗ ಅವರನ್ನು ಎಲ್ಲಿ ನೋಡಿದರೂ ಕನ್ನಡಿಗ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಆ ಮೂಲಕ ಅವರು ಕನ್ನಡದ ಘನತೆ ಎತ್ತಿ ಹಿಡಿದಿದ್ದಾರೆ.

ಹೋಟೆಲ್ ಉದ್ಯಮ ಅಂದ್ರೆ ಗೌರವದ ಉದ್ದಿಮೆ. ಅವರು ಒಳ್ಳೆಯ ಊಟ, ತಿಂಡಿ ಕೊಟ್ಟರೆ ಜನ ಅವರಿಗೆ ಕೃತಜ್ಞರಾಗಿರುತ್ತಾರೆ. ಪ್ರೀತಿಯಿಂದ ನೋಡುತ್ತಾರೆ. ಒಳ್ಳೆಯ ಶುಚಿರುಚಿಯಾದ ಆಹಾರ ಕೊಟ್ಟರೆ ಜನ ಕೈಬಿಡುವುದಿಲ್ಲ. ಪ್ರಕಾಶ್ ಶೆಟ್ಟರು ಬೇರೆ ಬೇರೆ ಕಡೆಯ ಜನರಿಗೆ ಶುಚಿ ರುಚಿಯ ಆಹಾರ ನೀಡಿ ಅವರ ಪ್ರೀತಿ ಗಳಿಸಿದ್ದಾರೆ.

ನಮ್ಮ ನಾಡಿನ ಆಹಾರವೂ ನಮ್ಮ ಸಂಸ್ಕೃತಿಯ ಭಾಗ. ಆಹಾರದ ಮೂಲಕ ನಮ್ಮ ಸಂಸ್ಕ್ರೃತಿಯನ್ನು ಬೇರೆಡೆಯ ಜನರಿಗೆ ಪರಿಚಯಿಸಿದ ಕೀರ್ತಿಯೂ ಪ್ರಕಾಶ್ ಶೆಟ್ಟರಿಗೆ ಸಲ್ಲುತ್ತದೆ. ಹಾಗೆ ನೋಡಿದರೆ ಕನ್ನಡದ ಕೀರ್ತಿಯನ್ನು ಬೇರೆ ರಾಜ್ಯಕ್ಕೆ, ಬೇರೆ ದೇಶದಲ್ಲಿ ಪಸರಿಸಿದ ಮಹನೀಯರ ಸಾಲಿನಲ್ಲಿ ಪ್ರಕಾಶ್ ಶೆಟ್ಟರೂ ನಿಲ್ಲುತ್ತಾರೆ. ಕನ್ನಡ ಕಟ್ಟಿದ ಕೀರ್ತಿಯಲ್ಲಿ ಇವರ ಪಾಲೂ ದೊಡ್ಡದಿದೆ.

ಈ ಪ್ರಕಾಶಣ್ಣನಿಗೆ ಲ್ಯಾಂಬೆಟ್ರಾ ಗಾಡಿಯೂ ಗೊತ್ತು ಮರ್ಸಿಡೀಸ್‌ಬೆಂಝೂ ಗೊತ್ತು!

ಬಂಟ ಸಮಾಜದಲ್ಲಿ ಸಾವಿರಾರು ಕೋಟಿ ಶ್ರೀಮಂತರು ಹಲವರಿದ್ದಾರೆ ಹಾಲಾಡಿ ಶ್ರೀನಿವಾಸ ಶೆಟ್ಟರು ಹೇಳುವಂತೆ ಅದರಲ್ಲಿ ಬಹುತೇಕರು ತಮ್ಮ ಕಿಸೆಗೆ ಹೊಲಿಗೆ ಹಾಕಿಕೊಂಡವರೇ ಹೆಚ್ಚು! ಆದರೆ ಕೊರಂಗ್ರಪಾಡಿಯ ಪ್ರಕಾಶ್ ಶೆಟ್ಟರ ಬದುಕು ಹಾಗಲ್ಲ. ಜೊತೆಗೆ ಆಡಂಬರಕ್ಕೂ ದಾನ ಮಾಡಿದವರೂ ಅಲ್ಲ. ಪ್ರಕಾಶ್ ಶೆಟ್ಟರ ಕೊಡುಗೆಗಳೆಲ್ಲವೂ ಶಾಶ್ವತವಾದ ಕಾರ್ಯಗಳಿಗೇ ಹೆಚ್ಚು.

ಮುಕೇಶ್‌ ಅಂಬಾನಿಯಿಂದ ಮತ್ತೊಂದು ದೈತ್ಯ ಇ-ಕಾಮರ್ಸ್ ಕಂಪನಿ

ಮುಲ್ಕಿ ಸುಂರ್ದ ರಾಮ್ ಶೆಟ್ಟರ ಸ್ಮೃತಿ ಅಚ್ಚಳಿಯದೆ ಉಳಿಯಲು ಅವರಿಗೆ ಈ ಸಮಾಜ ಸಣ್ಣದೊಂದು ಕೃತಜ್ಞತೆ ಹೇಳಲು ಅವರ ಉಪಕಾರಸ್ಮೃತಿ ಮಾಡಲಾದರೂ ಒಂದು ಸ್ಮರಣ ಭವನ ಬೇಕು ಎನ್ನುವ ನಿಟ್ಟಿನಲ್ಲಿ ಪ್ರಕಾಶಣ್ಣನೇ ಅದನ್ನ ತಾನೇ ಮುಂದೆ ನಿಂತು ಬಹುಕೋಟಿ ವೆಚ್ಚದಲ್ಲಿ ಕಟ್ಟಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ, ಧಾರ್ಮಿಕ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ
ಅಪಾರ. ಅಮೃತಶಿಲೆಯ ಹೆಸರಿಗಾಗಿ ದಾನ-ಧರ್ಮ ಮಾಡಿದವರು ಅವರಲ್ಲ.ಕೊಟ್ಟ ಕೊಡುಗೆಗಳಲ್ಲಿ ಸಾತ್ವಿಕವಾದ ಸ್ವಾರ್ಥ ಪ್ರತಿಯೊಬ್ಬನಿಗೂ ಇದ್ದೇ ಇರುತ್ತದೆ. ಅದಕ್ಕೆ ಪ್ರಕಾಶಣ್ಣನೂ ಹೊರತಾದವರಲ್ಲ.

ವಿಶ್ವಸಂಸ್ಥೆಯಲ್ಲಿ ಉದ್ಯಮಿ ಮಾಧವಿ ಶಂಕರ್‌ ಭಾಷಣ

ಪ್ರಕಾಣ್ಣ ಬದುಕಿನಲ್ಲಿ ಸಂಕಟವನ್ನ, ಸಂಕಷ್ಟವನ್ನ ಮತ್ತು ಉನ್ನತಿಯನ್ನ ಸಮಾನವಾಗಿ ಕಂಡು ಬಲ್ಲವರು. ಲ್ಯಾಂಬೆಟ್ರಾ ಗಾಡಿಯಲ್ಲಿ ಓಡಿಯೂ ಗೊತ್ತು ಮರ್ಸಿಡಿಸ್ ಬೆಂಝಿನಲ್ಲಿ ಓಡಾಡಿಯೂ ಗೊತ್ತು ಎಂಬತೆ ಬದುಕಿದ ಪ್ರಕಾಶಣ್ಣ, ಯಶಸ್ಸೆಂದರೆ ಹಣ ಮಾತ್ರವೇ ಅಲ್ಲ ಮನಸುಗಳನ್ನ ಗೆಲ್ಲುವುದೂ ಹೌದು ಎನ್ನುವಂತೆ ಬದುಕಿ ತೋರಿಸಿದವರು. ಎಂದೋ ಹುಡುಗನೊಬ್ಬನ ಕೆಲಸಕ್ಕಾಗಿ ಕಾಲ್ ಮಾಡಿ ಮಾತಾಡಿದ್ದೆ ಅಷ್ಟರಲ್ಲಿ ಅವನಿಗೂ ಬೇರೆ ಕೆಲಸ ಸಿಕ್ಕು ದುಬೈಗೆ ಹೋಗಿಯಾಗಿತ್ತು. ಅದಾಗಿ ಹಲವು ತಿಂಗಳ ನಂತರ ಉಳ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯಕ್ರಮಕ್ಕೆ ಬಂದಾಗ ಸಿಕ್ಕಿದ ಪ್ರಕಾಶಣ್ಣ ಮೊದಲು ಕೇಳಿದ್ದ್ ’ನಿಮ್ಮ ಆ ಹುಡುಗ ಎಲ್ಲಿ ಹೋದ? ರೆಸ್ಯೂಮ್ ಕಳಿಸಲೇ ಇಲ್ಲ. ನಾನು ಹೇಳಿ ಇಟ್ಟಿದ್ದೆ’ ಎಂದಾಗ ಈ ಮನುಷ್ಯನೊಳಗಿನ ನಿಜವಾದ ಶ್ರೀಮಂತ ನನಗೆ ಕಾಣಿಸಿದ್ದ. ಪ್ರಕಾಶಣ್ಣನಿಗೆ ಒಳಿತೇ ಆಗಲಿ ಎಂದು ಹಾರೈಸುತ್ತೇನೆ.