ಜುಲೈ ಒಂದರಿಂದ ಬ್ಯಾಂಕ್ ನಿಯಮ ಬದಲಾಗಲಿದೆ. ಬ್ಯಾಂಕ್, ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಿದೆ. ಯಾವೆಲ್ಲ ರೂಲ್ಸ್ ಬದಲಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಜುಲೈ ಒಂದರಿಂದ ಖಾಸಗಿ ವಲಯದ ಬ್ಯಾಂಕು (bank)ಗಳ ಕೆಲ ನಿಯಮಗಳು ಬದಲಾಗ್ತಿವೆ. ಒಂದ್ಕಡೆ, ಎಚ್ ಡಿಎಫ್ ಸಿ ಬ್ಯಾಂಕ್ (HDFC Bank) ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದ ಕೆಲ ನಿಯಮಗಳನ್ನು ಬದಲಾಯಿಸಿದ್ರೆ, ಐಸಿಐಸಿಐ ಬ್ಯಾಂಕ್ ಕೂಡ ತನ್ನ ಶುಲ್ಕದಲ್ಲಿ ಬದಲಾವಣೆ ಮಾಡ್ತಿದೆ. ಜುಲೈನಿಂದ ಯಾವೆಲ್ಲ ನಿಯಮ ಬದಲಾಗುತ್ತೆ ಎನ್ನುವ ಮಾಹಿತಿ ಇಲ್ಲಿದೆ.
ಯಾವೆಲ್ಲ ಬದಲಾವಣೆ ಮಾಡ್ತಿದೆ ಎಚ್ ಡಿ ಎಫ್ ಸಿ ಬ್ಯಾಂಕ್ ? : ಎಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ (Credit Card) ಬಳಸಿ ನೀವು MPL, Dream 11 ನಂತಹ ಗೇಮಿಂಗ್ ಅಪ್ಲಿಕೇಶನ್ ಬಳಸ್ತಿದ್ದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಇನ್ಮುಂದೆ ನೀವು ತಿಂಗಳಿಗೆ ಹತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಿದ್ರೆ ಶೇಕಡಾ ಒಂದಕ್ಕಿಂತ ಹೆಚ್ಚು ಶುಲ್ಕವನ್ನು ಪಾವತಿಸ್ಬೇಕು. Mobikwik, Paytm, Ola Money ಮತ್ತು Freecharge ನಂತಹ ಮೂರನೇ ವ್ಯಕ್ತಿಯ ವ್ಯಾಲೆಟ್ಗಳಲ್ಲಿ ತಿಂಗಳಿಗೆ ಹತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಹಾಕಿದ್ರೂ, ಶೇಕಡಾ ಒಂದಕ್ಕಿಂತ ಹೆಚ್ಚು ಶುಲ್ಕ ಪಾವತಿಸ್ಬೇಕು. ಪೆಟ್ರೋಲ್, ಡಿಸೇಲ್ ಗೆ 15 ಸಾವಿರ ರೂಪಾಯಿಗಿಂತ ಹೆಚ್ಚು ಖರ್ಚು ಮಾಡಿದ್ರೆ ಹೆಚ್ಚುವರಿ ಶೇಕಡಾ 1 ಶುಲ್ಕವನ್ನು ಪಾವತಿಸಬೇಕು. ಕರೆಂಟ್, ನೀರು ಮತ್ತು ಗ್ಯಾಸ್ ಗೆ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚು ಪಾವತಿಸಿದ್ರೆ ಅದಕ್ಕೆ ಶೇಕಡಾ 1 ಶುಲ್ಕವನ್ನು ಬ್ಯಾಂಕ್ ವಿಧಿಸ್ತಿದೆ.
ಐಸಿಐಸಿಐ ಬ್ಯಾಂಕ್ ಯಾವೆಲ್ಲ ನಿಯಮ ಬದಲಿಸ್ತಿದೆ? : ಖಾಸಗಿ ವಲಯದ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್, ಐಎಂಪಿಎಸ್ ಮತ್ತು ಎಟಿಎಂ ಮೇಲೆ ವಿಧಿಸುವ ಕೆಲವು ಶುಲ್ಕಗಳನ್ನು ಬದಲಾಯಿಸ್ತಿದೆ. ನೀವು ಇದಕ್ಕೆ ಬೇರೆ ಯಾವುದೇ ಬ್ಯಾಂಕ್ ಬಳಸಿದ್ರೂ, ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ಅಂದ್ರೆ, ಮೆಟ್ರೋ ನಗರಗಳಲ್ಲಿ, ನೀವು ಬೇರೆ ಎಟಿಎಂನಿಂದ ಪ್ರತಿ ತಿಂಗಳು ಮೂರು ಉಚಿತ ವಹಿವಾಟುಗಳನ್ನು ಪಡೆಯುತ್ತೀರಿ. ಸಣ್ಣ ನಗರಗಳಲ್ಲಿ, ನಿಮಗೆ ಐದು ಉಚಿತ ವಹಿವಾಟು ಸಿಗುತ್ತೆ. ಇದ್ರ ನಂತ್ರ ನೀವು ಆರನೇ ಬಾರಿ ಹಣ ವಿತ್ ಡ್ರಾ ಮಾಡಿದಾಗ ಈ ಹಿಂದೆ 21 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು. ಆದ್ರೀಗ ಅದನ್ನು 23 ರೂಪಾಯಿಗೆ ಏರಿಸಲಾಗಿದೆ. ನೀವು ಬ್ಯಾಲೆನ್ಸ್ ಪರಿಶೀಲಿಸಿದರೆ ಅಥವಾ ಹಣಕಾಸಿನೇತರ ಕೆಲಸ ಮಾಡಿದರೆ, ಪ್ರತಿ ವಹಿವಾಟಿಗೆ 8.5 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ಇದರ ಹೊರತಾಗಿ, ಈಗ ನೀವು ಐಎಂಪಿಎಸ್ ಮೂಲಕ ಹಣವನ್ನು ಕಳುಹಿಸಲು ಅಂದರೆ ತ್ವರಿತ ಸೇವೆಗೆ ನಿಮ್ಮ ವಹಿವಾಟಿನ ಪ್ರಕಾರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ, 1 ಸಾವಿರ ರೂಪಾಯಿ ಪ್ರತಿ ವಹಿವಾಟಿಗೆ 2.5 ರೂಪಾಯಿ ಪಾವತಿಸಬೇಕು. 1 ಸಾವಿರದಿಂದ 1 ಲಕ್ಷ ರೂಪಾಯಿಗೆ ಪ್ರತಿ ವಹಿವಾಟಿಗೆ 5 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. 1 ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ಪ್ರತಿ ವಹಿವಾಟಿಗೆ 15 ರೂಪಾಯಿ ಪಾವತಿಸಬೇಕಾಗುತ್ತದೆ.
ಗ್ರಾಹಕರು ಪ್ರತಿ ತಿಂಗಳು ಮೂರು ಬಾರಿ ಮಾತ್ರ ಉಚಿತ ನಗದು ಹಿಂಪಡೆಯುವ ಸೌಲಭ್ಯವನ್ನು ಪಡೆಯುತ್ತಾರೆ. ಇದರ ನಂತ್ರ ನೀವು ಪ್ರತಿ ಬಾರಿ ನಗದು ಹಿಂಪಡೆಯುವಾಗ 150 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒಂದು ತಿಂಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಹಣ ವಿತ್ಡ್ರಾ ಮಾಡಿದರೆ, ಪ್ರತಿ 1,000 ಕ್ಕೆ 3.5 ರೂಪಾಯಿ ಅಥವಾ 150 ರೂಪಾಯಿ ಶುಲ್ಕ ವಿಧಿಸಬೇಕು. ಇನ್ನು ಸಾಮಾನ್ಯ ಡೆಬಿಟ್ ಕಾರ್ಡ್ಗೆ ಬ್ಯಾಂಕ್ ವಾರ್ಷಿಕ 300 ರೂಪಾಯಿ ಪಾವತಿಸಬೇಕು. ಗ್ರಾಮೀಣ ಪ್ರದೇಶದ ಗ್ರಾಹಕರ ವಾರ್ಷಿಕ ಶುಲ್ಕ 150 ರೂಪಾಯಿ ಆಗಿದೆ. ಕಾರ್ಡ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ಹೊಸ ಕಾರ್ಡ್ ಪಡೆಯಲು 300 ಶುಲ್ಕವನ್ನು ಪಾವತಿಸಬೇಕಾಗುತ್ತದೆ.
