ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮತ್ತೊಮ್ಮೆ ದಾಖಲೆ ಬರೆದಿದೆ. ಮೊದಲ ಬಾರಿ ಗೇಮಿಂಗ್ ರಿಚಾರ್ಜ್ ಪ್ಲಾನ್ ಶುರು ಮಾಡಿದೆ. ಎರಡು ಯೋಜನೆಯಲ್ಲಿ ಏನೆಲ್ಲ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ.
ಅಗ್ಗದ ಬೆಲೆಗೆ ಅನಿಯಮಿತ ಸೇವೆ ನೀಡೋದ್ರಲ್ಲಿ ಪ್ರಸಿದ್ಧಿ ಪಡೆದಿರುವ ಜಿಯೋ (Jio) ಈಗ ಹೊಸ ಆಫರ್ ಜೊತೆ ಬಂದಿದೆ. ಎರಡು ಹೊಸ ಪ್ಲಾನ್ ಗಳನ್ನು ಜಿಯೋ ಬಿಡುಗಡೆ ಮಾಡಿದೆ. ಗೇಮಿಂಗ್ ನಲ್ಲಿ ಆಸಕ್ತಿ ಇರುವ ಜನರಿಗೆ ಇದು ಸೂಕ್ತ ಪ್ಲಾನ್. ಗೇಮಿಂಗ್ ರಿಚಾರ್ಜ್ ಪ್ಲಾನ್ ಶುರು ಮಾಡುವ ಮೂಲಕ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ಗೇಮಿಂಗ್ ರಿಚಾರ್ಜ್ ಪ್ಲಾನ್ (Gaming Recharge Plan) ಶುರು ಮಾಡಿದ ಮೊದಲ ಟೆಲಿಕಾಂ ಕಂಪನಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ. ಜಿಯೋದ ಈ ಸ್ಪೇಷಲ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಡೇಟಾ, ಕಾಲಿಂಗ್, ಎಸ್ ಎಂಎಸ್ ಜೊತೆ ಇನ್ನೂ ಅನೇಕ ಸೌಲಭ್ಯಗಳು ಸಿಗಲಿವೆ.
ಎರಡು ಪ್ಲಾನ್ ಬಿಡುಗಡೆ ಮಾಡಿದ ಜಿಯೋ : ಗೇಮರ್ ಗಳನ್ನು ಗಮನದಲ್ಲಿಟ್ಟುಕೊಂಡು ಜಿಯೋ ಎರಡು ಪ್ಲಾನ್ ಬಿಡುಗಡೆ ಮಾಡಿದೆ. ಕ್ರಾಫ್ಟನ್ ಜೊತೆ ಒಪ್ಪಂದ ಮಾಡಿಕೊಂಡಿರುವ ಜಿಯೋ 600 ರೂಪಾಯಿಗಿಂತ ಕಡಿಮೆ ಬೆಲೆಗೆ ಈ ರಿಚಾರ್ಜ್ ಪ್ಲಾನ್ ನೀಡ್ತಿದೆ.
ಹೊಸ ಪ್ಲಾನ್ ನಲ್ಲಿ ಏನೆಲ್ಲ ಸಿಗ್ತಿದೆ? : ಜಿಯೋದ ಮೊದಲ ಪ್ಲಾನ್ ನಿಮಗೆ 495 ರೂಪಾಯಿಗೆ ಲಭ್ಯವಿದೆ. ಇದ್ರಲ್ಲಿ ಬಳಕೆದಾರರಿಗೆ 1.5 ಜಿಬಿ ಡೇಟಾ ಪ್ರತಿ ದಿನ ಸಿಗಲಿದೆ. ಇದಲ್ಲದೆ ಪ್ರತ್ಯೇಕವಾಗಿ 5ಜಿ ಡೇಟಾ ಹಾಗೂ ಅನ್ಲಿಮಿಟೆಡ್ ವೈಸ್ ಕಾಲಿಂಗ್ ಲಭ್ಯವಿದೆ. ಜಿಯೋ ಗೇಮ್ಸ್ ಕ್ಲೌಡ್, ಬಿಜಿಎಂಇ, ಫ್ಯಾನ್ ಕೋಡ್, ಜಿಯೋ ಟಿವಿ, ಜಿಯೋ ಎಐ ಕ್ಲೌಡ್ ಚಂದಾದಾರಿಕೆ ನಿಮಗೆ ಸಿಗಲಿದೆ. ಬಳಕೆದಾರರು ತಮ್ಮ ಕಂಪ್ಯೂಟರ್, ಲ್ಯಾಪ್ ಟಾಪ್, ಮೊಬೈಲ್ ಅಥವಾ ಜಿಯೋ ಟಾಪ್ ಬಾಕ್ಸ್ ನಲ್ಲಿ 500 ಕ್ಕಿಂತ ಹೆಚ್ಚು ಗೇಮ್ಸ್ ಆಡಬಹುದು. ಇದಲ್ಲದೆ, ಯೋಜನೆಯಲ್ಲಿ ಪ್ರತಿದಿನ ಅನಿಯಮಿತ ಕರೆ ಡೇಟಾ ಮತ್ತು 100 ಉಚಿತ ಎಸ್ ಎಂಎಸ್ ಸಹ ನೀಡಲಾಗುತ್ತಿದೆ. ಜಿಯೋದ ಈ ಯೋಜನೆಯ ಮಾನ್ಯತೆ 28 ದಿನಗಳು.
ಜಿಯೋದ ಇನ್ನೊಂದು ರಿಚಾರ್ಜ್ ಬೆಲೆ 545 ರೂಪಾಯಿ. ಇದ್ರ ವೆಲಿಡಿಟಿ 28 ದಿನಗಳು. ಇದ್ರಲ್ಲಿ ಬಳಕೆದಾರರಿಗೆ 2 ಜಿಬಿ ಡೇಟಾ ಸಿಗಲಿದೆ. ಇದಲ್ಲದೆ 5 ಜಿಬಿ ಡೇಟಾವನ್ನು ಪ್ರತ್ಯೇಕವಾಗಿ ನೀಡ್ತಿದೆ. ಇದಲ್ಲದೆ 495 ರೂಪಾಯಿ ಪ್ಲಾನ್ ನಲ್ಲಿ ಸಿಗುವ ಎಲ್ಲ ಸೌಲಭ್ಯ ಇದ್ರಲ್ಲಿ ಸಿಗಲಿದೆ.
ಜಿಯೋ ಏನು ಹೇಳುತ್ತದೆ? : ಭಾರತದಲ್ಲಿ ಗೇಮಿಂಗ್ ಈಗ ಡಿಜಿಟಲ್ ಲೈಫ್ ಸ್ಟೈಲ್ ಪ್ರಮುಖ ಭಾಗವಾಗಿದೆ. 5G ಇಂಟರ್ನೆಟ್, ಕ್ಲೌಡ್ ಗೇಮಿಂಗ್ ಮತ್ತು BGMI ಬಹುಮಾನಗಳನ್ನು ಒಟ್ಟಿಗೆ ಒದಗಿಸುವ ಪ್ಯಾಕ್ ಅನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಜಿಯೋ ಹೇಳಿದೆ.
ಎಲ್ಲಿ ರೀಚಾರ್ಜ್ ಮಾಡಬೇಕು? : ಜಿಯೋ ಗೇಮಿಂಗ್ ಪ್ಯಾಕ್ ಈಗ ಎಲ್ಲಾ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ. ನೀವು MyJio ಅಪ್ಲಿಕೇಶನ್ ಅಥವಾ www.jio.com ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ರೀಚಾರ್ಜ್ ಮಾಡಬಹುದು.
ಕ್ರಾಫ್ಟನ್ನ ಹೇಳೋದೇನು? : ಕ್ರಾಫ್ಟನ್ ಇಂಡಿಯಾದ ಮುಖ್ಯಸ್ಥ ಸಿದ್ಧಾರ್ಥ್ ಮೆರೋತ್ರಾ ಪ್ರಕಾರ, ಬಿಜಿಎಂಐ ಕೇವಲ ಆಟವಲ್ಲ, ಅದೀಗ ಒಂದು ಕಲ್ಚರ್ ಆಗಿ ಮಾರ್ಪಟ್ಟಿದೆ ಎಂದಿದ್ದಾರೆ. ಜಿಯೋ ಜೊತೆಗೆ, ನಾವು ಹೊಸ ಗೇಮರುಗಳಿಗೆ ಉತ್ತಮ ಅನುಭವವನ್ನು ನೀಡಲು ಬಯಸುತ್ತೇವೆ. ಜಿಯೋದ ಡಿಜಿಟಲ್ ಶಕ್ತಿ ಮತ್ತು ಬಿಜಿಎಂಐನ ವಿಷಯ ಒಟ್ಟಾಗಿ ಭಾರತದಲ್ಲಿ ಗೇಮಿಂಗ್ನ ಭವಿಷ್ಯ ಅದ್ಭುತವಾಗಲಿದೆ ಎಂದಿದ್ದಾರೆ.


