ಮಗನ ಬರ್ತಡೇ ಪಾರ್ಟಿಗೆ ಲ್ಯಾಂಬೋರ್ಗಿನಿಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆಕಾಶ್ ಅಂಬಾನಿ: ಕಾರಿನ ಮೌಲ್ಯ ಎಷ್ಟು ನೋಡಿ..
ಪೃಥ್ವಿ ಅಂಬಾನಿ ಕೆಂಪು ಬಣ್ಣದ ಶರ್ಟ್ ತೊಟ್ಟಿದ್ದ. ಆದರೆ, ಇದೆಲ್ಲಕ್ಕಿಂತ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದು, ಇವರು ಕೊಟ್ಟ ಎಂಟ್ರಿ. ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಆಕಾಶ್ ಹಾಗೂ ಶ್ಲೋಕ ಮುಂಬೈನ ಜಿಯೋ ಗಾರ್ಡನ್‌ಗೆ ಆಗಮಿಸಿದರು.
ಮುಖೇಶ್ ಅಂಬಾನಿ (Mukesh Ambani) ಕುಟುಂಬದಲ್ಲಿ ಇತ್ತೀಚಿಗೆ ಹಲವು ದಿನಗಳಿಂದ ಸಂಭ್ರಮೋ ಸಂಭ್ರಮ. ಇಶಾ ಅಂಬಾನಿ (Isha Ambani) ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ (Twins) ಜನ್ಮ ನೀಡಿದ್ರು, ಹಾಗೂ, ಕೆಲ ದಿನಗಳ ಹಿಂದೆ ಮುಂಬೈಗೆ ಆಗಮಿಸಿದ ಮೊಮ್ಮಕ್ಕಳಿಗೆ ಮುಖೇಶ್ ಅಂಬಾನಿ ಅದ್ಧೂರಿ ಸ್ವಾಗತವನ್ನೇ ಕೋರಿದ್ರು. ನಂತರ, ಮೊನ್ನೆಯಷ್ಟೇ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿಯ (Anant Ambani) ಎಂಗೇಜ್‌ಮೆಂಟ್ (Engagement) ರಾಜಸ್ಥಾನದ ದೇವಾಲಯವೊಂದರಲ್ಲಿ ನಡೆದಿದೆ. ಬಳಿಕ, ಮುಂಬೈನಲ್ಲಿ ಎಂಗೇಜ್‌ಮೆಂಟ್ ಪಾರ್ಟಿ ನಡೆದಿದ್ದು, ಈ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು (Bollywood Celebrities) ಸಹ ಭಾಗಯಾಗಿದ್ದರು. ಈ ಮಧ್ಯೆ, ನಿನ್ನೆ ಅಂದರೆ ಸೋಮವಾರ, ಜನವರಿ 2, 2023 ರಂದು ಮುಖೇಶ್ ಅಂಬಾನಿಯ ಹಿರಿಯ ಮಗ ಆಕಾಶ್ (Akash Ambani) ಹಾಗೂ ಪತ್ನಿ ಶ್ಲೋಕ ಅಂಬಾನಿ (Shloka Ambani) ಅವರ ಪುತ್ರ ಪೃಥ್ವಿ ಅಂಬಾನಿಯ (Pruthvi Ambani) 2ನೇ ವರ್ಷದ ಹುಟ್ಟುಹಬ್ಬ. ಈ ಬರ್ತಡೇ ಪಾರ್ಟಿಯನ್ನು ಸಹ ಅಂಬಾನಿ ಕುಟುಂಬ ಅದ್ಧೂರಿಯಾಗೇ ಆಚರಿಸಿದೆ.
ಡಿಸೆಂಬರ್ 10 ರಂದು ಪೃಥ್ವಿ ಅಂಬಾನಿ 2 ವರ್ಷಕ್ಕೆ ಕಾಲಿಟ್ಟಿದ್ದು, ಆದರೆ ನಿನ್ನೆ, ಜನವರಿ 2 ರಂದು ಮಹಾರಾಷ್ಟ್ರ ರಾಜಧಾನಿ ಮುಂಬೈನ ಜಿಯೋ ಗಾರ್ಡನ್‌ನಲ್ಲಿ ಬರ್ತಡೇ ಪಾರ್ಟಿ ನಡದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಅದ್ಧೂರಿ ಕಾರ್ಯಕ್ರಮದ ಫೋಟೋ, ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಬಾಲಿವುಡ್ ಖ್ಯಾತ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ಕ್ರಿಕೆಟಿಗ ಕ್ರುನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಪತ್ನಿ ನಟಾಶಾ ಸ್ಟಾಂಕೋವಿಕ್, ಬಾಲಿವುಡ್ ನಿರ್ದೇಶಕ ಆಯನ್ ಮುಖರ್ಜಿ ಹಾಗೂ ಕ್ರಿಕೆಟರ್ ರೋಹಿತ್ ಶರ್ಮಾ ಪತ್ನಿ ರಿತಿಕಾ ಮುಂತಾದ ಖ್ಯಾತನಾಮರು ಈ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿಯಾಗಿದ್ದರು. ಹಲವರು ತಮ್ಮ ಮಕ್ಕಳೊಂದಿಗೆ ಈ ಪಾರ್ಟಿಯಲ್ಲಿ ಹಾಜರಿದ್ದರು.
ಇದನ್ನು ಓದಿ: ಮುಂಬೈಗೆ ಆಗಮಿಸಿದ ಇಶಾ ಅಂಬಾನಿ, ಮಕ್ಕಳಿಗೆ ಅದ್ಧೂರಿ ಸ್ವಾಗತ: 300 ಕೆಜಿ ಚಿನ್ನ ದಾನ ಮಾಡ್ತಿರೋ ಅಂಬಾನಿ ಕುಟುಂಬ..!
ಗ್ರ್ಯಾಂಡಾಗಿ, ಸ್ಟೈಲಿಶ್ ಆಗಿ ಕಾಲಿಟ್ಟ ಆಕಾಶ್ ಹಾಗೂ ಶ್ಲೋಕ ಅಂಬಾನಿ
ಇನ್ನು, ಈ ಬರ್ತಡೇ ಪಾರ್ಟಿಯ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದ ಆಕಾಶ್ ಅಂಬಾನಿ ಹಾಗೂ ಶ್ಲೋಕ ಅಂಬಾನಿ ಅವರ ಪುತ್ರ ಪೃತ್ವಿ ಅಂಬಾನಿ ತನ್ನ ಅಪ್ಪ - ಅಮ್ಮನ ಜತೆ ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಆಕಾಶ್ ಹಾಗೂ ಶ್ಲೋಕ ಸರಳ ಉಡುಗೆಯನ್ನೇ ತೊಟ್ಟಿದ್ದರು. ಆಕಾಶ್ ಹಸಿರು ಬಣ್ಣ ಶರ್ಟ್ ಹಾಗೂ ಬ್ಲೂ ಜೀನ್ಸ್ ಧರಿಸಿದ್ದರೆ, ಪತ್ನಿ ಪರ್ಪಲ್ ಬಣ್ಣದ ಡ್ರೆಸ್ ಜತೆಗೆ ಕಪ್ಪು ಬಣ್ಣದ ಜಾಕೆಟ್ ಧರಿಸಿ ಮಿಂಚುತ್ತಿದ್ದರು. ಹಾಗೆ, ಪೃಥ್ವಿ ಅಂಬಾನಿ ಕೆಂಪು ಬಣ್ಣದ ಶರ್ಟ್ ತೊಟ್ಟಿದ್ದ. ಆದರೆ, ಇದೆಲ್ಲಕ್ಕಿಂತ ಪ್ರಮುಖ ಆಕರ್ಷಣೆ ಎನಿಸಿಕೊಂಡಿದ್ದು, ಇವರು ಕೊಟ್ಟ ಎಂಟ್ರಿ.
ಲ್ಯಾಂಬೋರ್ಗಿನಿ ಉರುಸ್ (Lamborghini Urus) ಕಾರಿನಲ್ಲಿ ಆಕಾಶ್ ಹಾಗೂ ಶ್ಲೋಕ ಮುಂಬೈನ ಜಿಯೋ ಗಾರ್ಡನ್‌ಗೆ ಆಗಮಿಸಿದರು. ಇಟಲಿ ಮೂಲದ ಕಾರು ನಿರ್ಮಾಣ ಸಂಸ್ಥೆಯಾದ ಲ್ಯಾಂಬೋರ್ಗಿನಿ ಈ ಲಕ್ಷುರಿ ಎಸ್‌ಯುವಿಯನ್ನು ನಿರ್ಮಾಣ ಮಾಡುತ್ತದೆ. ಡಿಸೆಂಬರ್ 2017 ರಲ್ಲಿ ಮೊದಲ ಬಾರಿಗೆ ಇದನ್ನು ಬಿಡುಗಡೆ ಮಾಡಲಾಗಿತ್ತು. ಇನ್ನು, ಭಾರತದಲ್ಲಿ ಈ ಕಾರಿನ ಮೌಲ್ಯ ಎಷ್ಟು ಗೊತ್ತಾ.. ಬರೋಬ್ಬರಿ 4.5 ಕೋಟಿ ರೂ. ಮೌಲ್ಯ..!
ಇದನ್ನೂ ಓದಿ: ರಾಜಸ್ಥಾನದ ದೇಗುಲದಲ್ಲಿ ಅಂಬಾನಿ ಕಿರಿಯ ಪುತ್ರನ ನಿಶ್ಚಿತಾರ್ಥ
ಇನ್ನು, ಮುಖೇಶ್ ಅಂಬಾನಿ ಸಹ ತನ್ನ ಮೊಮ್ಮಗನ ಬರ್ತಡೇ ಪಾರ್ಟಿಗೆ ಗ್ರ್ಯಾಂಡಾಗೇ ಎಂಟ್ರಿ ಕೊಟ್ಟಿದ್ದರು. ಕರಣ್ ಜೋಹರ್ ತನ್ನ ಮಕ್ಕಳಾದ ಯಶ್ ಹಾಗೂ ರೂಹಿಯೊಂದಿಗೆ ಸ್ಟೈಲಿಶ್ ಉಡುಗೆ ತೊಡುಗೆಗಳೊಂದಿಗೆ ಬಂದಿದ್ದರು. ಹಾಗೆ, ಕ್ರಿಕೆಟಿಗ ಕ್ರುನಾಲ್ ಪಾಂಡ್ಯ ಹಾಗೂ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಹ ತಮ್ಮ ಮಕ್ಕಳೊಂದಿಗೆ ಪಾರ್ಟಿಗೆ ಬಂದಿದ್ದರು. ಹಾರ್ದಿಕ್ ಪಾಂಡ್ಯ ಪತ್ನಿ ನಟಾಶಾ ಸ್ಟಾಂಕೋವಿಕ್ ಹಾಗೂ ಆಯನ್ ಮುಖರ್ಜಿ ಸಹ ಈ ಪಾರ್ಟಿಯಲ್ಲಿ ಕಾಣಿಸಿಕೊಂಡರು.
ಇದನ್ನೂ ಓದಿ: ಅನಂತ್ ಅಂಬಾನಿ ನಿಶ್ಚಿತಾರ್ಥದಲ್ಲಿ ಮಿಂಚಿದ ಸ್ಟಾರ್ ನಟ-ನಟಿಯರು!