ರಾಜಸ್ಥಾನದ ದೇಗುಲದಲ್ಲಿ ಅಂಬಾನಿ ಕಿರಿಯ ಪುತ್ರನ ನಿಶ್ಚಿತಾರ್ಥ

ಅಂಬಾನಿ ಕುಟುಂಬದಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ನಿಶ್ಚಿತಾರ್ಥದ ಸಂಭ್ರಮದಲ್ಲಿ ಕುಟುಂಬವಿದ್ದು, ರಾಜಸ್ಥಾನದ ನಾಥ್‌ದ್ವಾರದಲ್ಲಿರುವ ಶ್ರೀನಾಥ್‌ಜೀ ದೇಗುಲದಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆದಿದೆ.

Mukesh Ambani and Nita Ambanis youngest son Anant Ambani got engaged to Radhika Merchant at Shrinathji Temple in Rajasthan akb

ಅಂಬಾನಿ ಕುಟುಂಬದಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ನಿಶ್ಚಿತಾರ್ಥದ ಸಂಭ್ರಮದಲ್ಲಿ ಕುಟುಂಬವಿದ್ದು, ರಾಜಸ್ಥಾನದ ನಾಥ್‌ದ್ವಾರದಲ್ಲಿರುವ ಶ್ರೀನಾಥ್‌ಜೀ ದೇಗುಲದಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಅಂಬಾನಿ ಪುತ್ರಿ ಇಶಾ ಅಂಬಾನಿ ಅವಳಿ ಮಕ್ಕಳೊಂದಿಗೆ ಮನೆಗೆ ಆಗಮಿಸಿದಾಗ ಅವರನ್ನು ಮುಕೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಬಹಳ ಅದ್ಧೂರಿಯಾಗಿ ಮನೆಗೆ ಬರ ಮಾಡಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಇನ್ನು ಚರ್ಚೆಯಲ್ಲಿದೆ. ಹೀಗಿರುವಾಗ ಅಂಬಾನಿ ಕುಟುಂಬ ಇನ್ನೊಂದು ಶುಭ ಸಮಾರಂಭಕ್ಕೆ ಸಜ್ಜಾಗಿದೆ.

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ (Nita Ambani) ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani)ಅವರ ವಿವಾಹ ನಿಶ್ಚಿತಾರ್ಥವೂ  ವಿರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಇಂದು ನಡೆದಿದೆ. ಈ ಹಿನ್ನೆಲೆಯಲ್ಲಿ ಇಂದು ಜೋಡಿ ಕುಟುಂಬ ಸಮೇತ ರಾಜಸ್ಥಾನದ ನಾಥ್‌ದ್ವಾರದಲ್ಲಿರುವ ಶ್ರೀನಾಥ್ ಜೀ ದೇಗುಲಕ್ಕೆ ಭೇಟಿ ನೀಡಿದ್ದಾರೆ. ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕ ಪರಿಮಲ್ ನಥ್ವಾನಿ (Parimal Nathwani) ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅನಂತ್ ಹಾಗೂ ರಾಧಿಕಾ ಅವರ ರೊಕಾ ಕಾರ್ಯಕ್ರಮ ಅಥವಾ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ದೇಗುಲದಲ್ಲಿ ನಡೆದಿದೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. 

ಈ ಬಗ್ಗೆ ಟ್ವಿಟ್ ಮಾಡಿರುವ ಪರಿಮಲ್ ನಥ್ವಾನಿ, 'ನಾಥ್‌ದ್ವಾರದ ಶ್ರೀನಾಥ್‌ಜೀ (Shrinathji temple) ದೇಗುಲದಲ್ಲಿ ನಡೆದ ರೋಕಾ ಸೆರೆಮನಿಯಲ್ಲಿ (ನಿಶ್ಚಿತಾರ್ಥ ಕಾರ್ಯಕ್ರಮದ) ಎಂಗೇಜ್ ಆದ ಅನಂತ್ ಹಾಗೂ ರಾಧಿಕಾಗೆ ಅಭಿನಂದನೆಗಳು, ಶ್ರೀನಾಥ್‌ಜೀ ನಿಮ್ಮನ್ನು ಸದಾ ಆಶೀರ್ವಾದಿಸಲಿ ಎಂದು ಟ್ವಿಟ್ ಮಾಡಿದ್ದಾರೆ. ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಅನಂತ ಅವರು ನೀಲಿ ಬಣ್ಣದ ಸಂಪ್ರದಾಯಿಕ ಕುರ್ತಾ ಧರಿಸಿ ಮಿಂಚಿದರೆ ಇತ್ತ ರಾಧಿಕಾ ಮರ್ಚೆಂಟ್ ಅವರು ಪೀಚ್ ಬಣ್ಣದ ಲೆಹೆಂಗಾ ಧರಿಸಿದ್ದರು. 

ಅನಂತ್ ವಿವಾಹವಾಗುತ್ತಿರುವ ರಾಧಿಕಾ ಮರ್ಚೆಂಟ್ (Radhika Merchant) , ಅವರು ವಿರೇನ್ ಮರ್ಚೆಂಟ್ (Viren Merchant) ಹಾಗೂ ಶೈಲಾ ಮರ್ಚೆಂಟ್ (Shaila Merchant) ಅವರ ಪುತ್ರಿಯಾಗಿದ್ದು, ನ್ಯೂಯಾರ್ಕ್ (New York University) ವಿಶ್ವವಿದ್ಯಾನಿಲಯದಿಂದ ರಾಜಕೀಯ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿರುವ  ರಾಧಿಕಾ ಅವರು, ಮುಂಬೈನ ಶ್ರೀ ನಿಭಾ ಅರ್ಟ್ಸ್ ಡಾನ್ಸ್ ಅಕಾಡೆಮಿಯಲ್ಲಿ ಗುರುವಾಗಿರುವ ಭವನ್ ಥಾಕರ್ ಅವರಿಂದ ತರಬೇತಿ ಪಡೆದಿದ್ದಾರೆ. ಸಣ್ಣ ಪ್ರೊಫೈಲ್ ಹೊಂದಿರುವ ರಾಧಿಕಾ, ಅಂಬಾನಿ ಕುಟುಂಬದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೇ ರಾಧಿಕಾ 2018ರಲ್ಲಿ ಅಂಬಾನಿ ಪುತ್ರಿ ಇಶಾ ಅಂಬಾನಿ (Isha Ambani) ವಿವಾಹದ ಸಂಗೀತಾ ಕಾರ್ಯಕ್ರಮದಲ್ಲಿ (sangeet ceremony) ನೃತ್ಯ ಪ್ರದರ್ಶನವನ್ನು ಕೂಡ ನೀಡಿದ್ದರು.

ಕಳೆದ ಜೂನ್‌ನಲ್ಲಿ ಮುಕೇಶ್ ಅಂಬಾನಿ (Mukesh Ambani) ಹಾಗೂ ಪತ್ನಿ ನೀತಾ ಅಂಬಾನಿ ಅವರು ಮುಂಬೈನ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ರಾಧಿಕಾ ಮರ್ಚೆಂಟ್ ಅವರ ಶಾಸ್ತ್ರೀಯ ನೃತ್ಯದ ರಂಗಪ್ರವೇಶ (arangetram) ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅರಂಗ್ರೇಟಮ್ ಎಂದರೆ ರಂಗಪ್ರವೇಶ ಶಾಸ್ತ್ರೀಯ (classical dance) ನೃತ್ಯವನ್ನು ಕಲಿತ ಕಲಾಕಾರರು ಮೊದಲ ಬಾರಿಗೆ ಸ್ವತಂತ್ರವಾಗಿ ವೇದಿಕೆಯಲ್ಲಿ ತಮ್ಮ ನೃತ್ಯವನ್ನು ಪ್ರದರ್ಶಿಸುವುದಾಗಿದೆ. 
 

 

Latest Videos
Follow Us:
Download App:
  • android
  • ios