ಮುಂಬೈಗೆ ಆಗಮಿಸಿದ ಇಶಾ ಅಂಬಾನಿ, ಮಕ್ಕಳಿಗೆ ಅದ್ಧೂರಿ ಸ್ವಾಗತ: 300 ಕೆಜಿ ಚಿನ್ನ ದಾನ ಮಾಡ್ತಿರೋ ಅಂಬಾನಿ ಕುಟುಂಬ..!
ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವಳಿ ಮಕ್ಕಳನ್ನು ಹೊತ್ತುಕೊಂಡಿರುವ ಫೋಟೋ ವೈರಲ್ ಆಗಿದೆ. ಇನ್ನು, ಅವಳಿ ಮಕ್ಕಳು ಆಗಮಿಸಿರುವ ಹಿನ್ನೆಲೆ ತಿರುಮಲ, ಶ್ರೀ ದ್ವಾರಕಾದೀಶ್ ದೇವಸ್ಥಾನ ಇತ್ಯಾ ದೇವಾಲಯಗಳ ಅರ್ಚಕರು ಅವಳಿಗಳಿಗೆ ವಿಶೇಷ ಪೂಜೆಯನ್ನು ಮಾಡುತ್ತಾರೆ ಎಂದು ಹೇಳಲಾಗಿದೆ.
ಕಳೆದ ತಿಂಗಳು ಮುಖೇಶ್ ಅಂಬಾನಿ (Mukesh Ambani) ಅವರ ಪುತ್ರಿ ಇಶಾ ಅಂಬಾನಿ (Isha Ambani) ಮತ್ತು ಪತಿ ಆನಂದ್ ಪಿರಾಮಲ್ (Anand Piramal) ಅವರು ನವೆಂಬರ್ 19 ರಂದು ಅವಳಿ ಮಕ್ಕಳಿಗೆ (Twins) ಜನ್ಮ ನೀಡಿದ್ದರು. ಅಮೆರಿಕಕ್ಕೆ ತೆರಳಿದ್ದ, ರಿಲಯನ್ಸ್ ರೀಟೇಲ್ ನಿರ್ದೇಶಕಿ ಇಶಾ ಅಂಬಾನಿ ಅವರು ತಮ್ಮ ನವಜಾತ ಅವಳಿ ಮಕ್ಕಳೊಂದಿಗೆ ಶನಿವಾರ ಮುಂಬೈ (Mumbai) ನಿವಾಸಕ್ಕೆ ಆಗಮಿಸಿದ್ದು, ಅವರಿಗೆ ಅದ್ಧೂರಿ ಸ್ವಾಗತ ದೊರಕಿದೆ. ಇನ್ನು, ಡಿಸೆಂಬರ್ 25 ರಂದು ಅವರ ಮುಂಬೈ ನಿವಾಸ ಕರುಣಾ ಸಿಂಧುದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ (Nita Ambani) ಅವಳಿ ಮಕ್ಕಳನ್ನು ಹೊತ್ತುಕೊಂಡಿರುವ ಫೋಟೋ ವೈರಲ್ ಆಗಿದೆ. ಇನ್ನು, ಅವಳಿ ಮಕ್ಕಳು ಆಗಮಿಸಿರುವ ಹಿನ್ನೆಲೆ ತಿರುಮಲ, ಶ್ರೀ ದ್ವಾರಕಾದೀಶ್ ದೇವಸ್ಥಾನ ಇತ್ಯಾ ದೇವಾಲಯಗಳ ಅರ್ಚಕರು ಅವಳಿಗಳಿಗೆ ವಿಶೇಷ ಪೂಜೆಯನ್ನು ಮಾಡುತ್ತಾರೆ ಎಂದು ಹೇಳಲಾಗಿದೆ.
ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಪತಿ ಆನಂದ್ ಪಿರಾಮಲ್ ಅವರು ನವೆಂಬರ್ 19 ರಂದು ಅವಳಿ ಮಕ್ಕಳಿಗೆ ಪೋಷಕರಾದರು. ಹೆಣ್ಣು ಮಗುವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ಹೆಸರಿಡಲಾಗಿದೆ. ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಆನಂದ್ ಪಿರಾಮಲ್ ಅವರ ಪೋಷಕರಾದ ಸ್ವಾತಿ ಮತ್ತು ಅಜಯ್ ಪಿರಾಮಲ್ ಅವರು ನೀಡಿದ ಅಧಿಕೃತ ಹೇಳಿಕೆಯಲ್ಲಿ, ಇಶಾ ಮತ್ತು ಮಕ್ಕಳು ಇಬ್ಬರೂ ಚೆನ್ನಾಗಿದ್ದಾರೆ ಎಂದು ತಿಳಿಸಲಾಗಿದೆ.
ಇದನ್ನು ಓದಿ: ಅವಳಿ ಮಕ್ಕಳಿಗೆ ತಾಯಿಯಾದ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ
ಇಶಾ ಮತ್ತು ಆನಂದ್ 2018 ರಲ್ಲಿ ವಿವಾಹವಾಗಿದ್ದು, ಆನಂದ್ ಪಿರಮಲ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇಶಾ ಅಂಬಾನಿ ಅವರಿಗೆ ಶನಿವಾರ ಭವ್ಯ ಸ್ವಾಗತ ದೊರಕಿದ್ದು, ಸೆಲೆಬ್ರಿಟಿ ಫೋಟೋ ಜರ್ನಲಿಸ್ಟ್ ವೈರಲ್ ಭಯಾನಿ ಅವರು ಈ ಭವ್ಯ ಸ್ವಾಗತದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮನೆಯನ್ನು ಅಲಂಕರಿಸಿರುವುದು ಸಹ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಇಶಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇನ್ನು, ನಾಳೆಯ ಪೂಜೆಯ ಸಂದರ್ಭದಲ್ಲಿ ಅಂಬಾನಿ ಕುಟುಂಬವು 300 ಕೆಜಿ ಚಿನ್ನವನ್ನು ದಾನ ಮಾಡಲಿದೆ ಎಂದು ವೈರಲ್ ಭಯಾನಿ ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. "ಕರುಣಾ ಸಿಂಧು ಮತ್ತು ಆಂಟಿಲಿಯಾದಲ್ಲಿ ಅವಳಿ ಮಕ್ಕಳನ್ನು ನೋಡಿಕೊಳ್ಳಲು ನರ್ಸರಿಗಳನ್ನು ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದಾರೆ. ಈ ನರ್ಸರಿಯಲ್ಲಿ ರೊಟೇಟಿಂಗ್ ಬೆಡ್‌ಗಳು ಮತ್ತು ಸ್ವಯಂಚಾಲಿತ ರೂಫ್ ಟಾಪ್‌ಗಳನ್ನು ಒಳಗೊಂಡಿದೆ. ಅವಳಿ ಮಕ್ಕಳಿಗೆ ನೈಸರ್ಗಿಕ ಸೂರ್ಯನ ಬೆಳಕು ಬೀಳಲಿ ಎಂದು ರೂಫ್ ಟಾಪ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ: ರಿಲಯನ್ಸ್ ರೀಟೇಲ್ ಮುಖ್ಯಸ್ಥೆಯಾಗಿ ಇಶಾ ಅಂಬಾನಿಯನ್ನು ಪರಿಚಯಿಸಿದ ತಂದೆ
ಹಾಗೂ, ಎಲ್ಲಾ ಪೀಠೋಪಕರಣಗಳನ್ನು ಲೋರೋ ಪಿಯಾನಾ, ಹರ್ಮ್ಸ್ ಮತ್ತು ಡಿಯರ್ ಕಂಪನಿಗಳು ಕಸ್ಟಮೈಸ್ಟ್ ಮಾಡಿ ನಿರ್ಮಿಸಿದ್ದಾರೆ. ಇನ್ನು, ಅವಳಿ ಮಕ್ಕಳು ಡೋಲ್ಸ್ & ಗಬ್ಬಾನಾ, ಗುಸ್ಸಿ ಮತ್ತು ಲೋರೋ ಪಿಯಾನಾದಂತಹ ವಿಶ್ವ-ಪ್ರಸಿದ್ಧ ಕಂಪನಿಗಳ ಕ್ರೀಡಾ ಉಡುಪುಗಳನ್ನು ಧರಿಸಲಿದ್ದಾರೆ. ಅಷ್ಟೇ ಅಲ್ಲ ಅವರು ಬಿಎಂಡಬ್ಲ್ಯುನಿಂದ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಕಾರಿನ ಸೀಟ್‌ಗಳನ್ನು ಸಹ ಹೊಂದಿದ್ದಾರೆ" ಎಂದು ವೈರಲ್ ಭಯಾನಿಯ ಪೋಸ್ಟ್ ಹೇಳುತ್ತದೆ.
ಅಷ್ಟೇ ಅಲ್ಲದೆ, "ವಿಶೇಷವಾಗಿ ತರಬೇತಿ ಪಡೆದ 8 ಅಮೆರಿಕದ ದಾದಿಯರು ಮತ್ತು ವಿಶೇಷ ದಾದಿಯರು ಅವಳಿ ಮಕ್ಕಳನ್ನು ನೋಡಿಕೊಳ್ಳಲಿದ್ದು, ಅವರು ಭಾರತದಲ್ಲಿಯೇ ಉಳಿಯಲಿದ್ದಾರೆ ಎಂದೂ ಪೋಸ್ಟ್ ಹೇಳುತ್ತದೆ.
ಇದನ್ನೂ ಓದಿ: ರಿಲಯನ್ಸ್ ರಿಟೇಲ್ ಕಂಪನಿಗೆ ಇಶಾ ಅಂಬಾನಿ ಚೇರ್ಮನ್?