ಜನಸಾಮಾನ್ಯರಿಗೆ ಮತ್ತೆ ಬೆಲೆಯೇರಿಕೆ ಶಾಕ್; ಏ.1ರಿಂದ 800 ಅಗತ್ಯ ಔಷಧಿಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ಕಳೆದ ವರ್ಷವಷ್ಟೇ ಭಾರೀ ಏರಿಕೆ ಕಂಡಿದ್ದ ಔಷಧಗಳ ಬೆಲೆ ಈ ವರ್ಷ ಮತ್ತೆ ಹೆಚ್ಚಳವಾಗಲಿದೆ. 800 ಅಗತ್ಯ ಔಷಧಿಗಳ ಬೆಲೆಯಲ್ಲಿ ಏಪ್ರಿಲ್ 1ರಿಂದ ಏರಿಕೆಯಾಗಲಿದೆ. 

Prices of 800 essential drugs to increase a tad from April 1 anu

ನವದೆಹಲಿ (ಮಾ.20):  ಕೆಲವು ಅಗತ್ಯ ಔ‍ಷಧಿಗಳ ಬೆಲೆ ಏಪ್ರಿಲ್ 1ರಿಂದ ಏರಿಕೆಯಾಗಲಿದೆ.  ಇದರಲ್ಲಿ ನೋವುನಿವಾರಕಗಳು, ಪ್ರತಿರೋಧಕಗಳು ಹಾಗೂ ಸೋಂಕು ನಿವಾರಕ ಔ‍ಷಧಿಗಳು ಸೇರಿವೆ. ವರದಿಯ ಪ್ರಕಾರ ಸರ್ಕಾರ ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) ವಾರ್ಷಿಕ ಬದಲಾವಣೆ ಮಾಡಿದೆ. ಹಾಗೆಯೇ ಅಗತ್ಯ ಔ‍ಷಧಿಗಳ ರಾಷ್ಟ್ರೀಯ ಪಟ್ಟಿ (ಎನ್ ಎಲ್ ಇಎಂ) ಅಡಿಯಲ್ಲಿ ಔ‍ಷಧಿಗಳ ಬೆಲೆಯನ್ನು ಶೇ. .0055 ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಕಳೆದ ವರ್ಷ ಔ‍ಷಧಿಗಳ ಬೆಲೆಯಲ್ಲಿ ಶೇ.12 ಹಾಗೂ  2022ರಲ್ಲಿ  ಶೇ.10ರಷ್ಟು ಭಾರೀ ಏರಿಕೆ ಮಾಡಲಾಗಿತ್ತು. ಇದರಿಂದ ಈಗಾಗಲೇ ಔ‍ಷಧಿಗಳ ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗಿದೆ. ಹೀಗಿರುವಾಗ ಈಗ ಮತ್ತೊಮ್ಮೆ ಬೆಲೆಯೇರಿಕೆ ಮಾಡಲಾಗಿದ್ದು, ಜನಸಾಮಾನ್ಯರಿಗೆ ಇನ್ನಷ್ಟು ಹೊರೆಯಾಗಲಿದೆ. ವರದಿಗಳ ಪ್ರಕಾರ ರಾಷ್ಟ್ರೀಯ ಔ‍ಷಧಿಗಳ ಪಟ್ಟಿಯಲ್ಲಿರುವ 800ಕ್ಕೂ ಅಧಿಕ ಔ‍ಷಧಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಪಟ್ಟಿಯಲ್ಲಿರುವ ಔ‍ಷಧಿಗಳ ಬೆಲೆ ಪರಿಷ್ಕರಣೆಗೆ  ವರ್ಷದಲ್ಲಿ ಒಂದು ಬಾರಿ ಮಾತ್ರ ಅವಕಾಶ ನೀಡಲಾಗುತ್ತದೆ. 

ಕಳೆದ ಕೆಲವು ವರ್ಷಗಳಿಂದ ಔ‍ಷಧಿಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ  ಸಾಮಗ್ರಿಗಳ ಬೆಲೆಯಲ್ಲಿ ಕೂಡ ಭಾರೀ ಹೆಚ್ಚಳ ಮಾಡಲಾಗಿದೆ. ಇವುಗಳ ಬೆಲೆಯಲ್ಲಿ ಶೇ.15ರಿಂದ ಶೇ.130ರಷ್ಟು ಏರಿಕೆಯಾಗಿದೆ. ಅಗತ್ಯ ಔ‍ಷಧಿಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಪ್ಯಾರಸಿಟಮಾಲ್ ಬೆಲೆ ಶೇ.120ರಷ್ಟು ಏರಿಕೆಯಾಗಿದ್ದರೆ, ಎಕ್ಸಿಪಿಯೆಂಟ್ ಬೆಲೆ ಶೇ.18-20ರಷ್ಟು ಹೆಚ್ಚಳ ಕಂಡಿದೆ. ಇನ್ನು ಸಿರಪ್, ಬಾಯಿಯಿಂದ ತೆಗೆದುಕೊಳ್ಳುವ ಡ್ರಾಪ್ ಗಳು ಹಾಗೂ ಸ್ಟೆರಿಲ್ ಸಿದ್ಧತೆ ಸೇರಿದಂತೆ ದ್ರವ ಮಾದರಿ ಔ‍ಷಧಿಗಳಲ್ಲಿ ಬಳಕೆಯಾಗುವ ಗ್ಲಿಸರಿನ್ ಹಾಗೂ ಪ್ರೊಪೈಲೆನ್ ಗಲೈಕಾಲ್ ದರ ಕ್ರಮವಾಗಿ ಶೇ.263 ಹಾಗೂ ಶೇ.83ರಷ್ಟು ಏರಿಕೆ ಕಂಡಿದೆ.  ಮಧ್ಯಂತರ ಔ‍ಷಧಿಗಳ ಬೆಲೆಗಳು ಶೇ.11ರಿಂದ ಶೇ.175ರಷ್ಟು ಏರಿಕೆಯಾಗಿವೆ. ಪೆನ್ಸಿಲಿನ್ ಜಿ ಬೆಲೆಯಲ್ಲಿ ಕೂಡ ಶೇ.175ರಷ್ಟು ಏರಿಕೆಯಾಗಿದೆ.

ಸೇವಾ ಶುಲ್ಕ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಬರೆ, ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಆದಾಯ; ಯಾವ ಸೇವೆಗೆ ಎಷ್ಟು ಶುಲ್ಕ?

ಈ ಹಿಂದೆ ಭಾರತದ 1,000ಕ್ಕೂ ಅಧಿಕ ಔ‍ಷಧಿ ತಯಾರಕರು ಎಲ್ಲ ಶೆಡ್ಯೂಲ್ಡ್ ಔ‍ಷಧಿಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ.10ರಷ್ಟು ಏರಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿತ್ತು. ಹಾಗೆಯೇ ವರ್ಗೀಕೃತ ಔ‍ಷಧಿಗಳ ಪಟ್ಟಿಯಲ್ಲಿರದ ಔಷಧಗಳ ಬೆಲೆಯನ್ನು ಶೇ.20ರಷ್ಟು ಏರಿಕೆ ಮಾಡುವಂತೆ ಆಗ್ರಹಿಸಿತ್ತು. 

ಇತ್ತೀಚಿನ ದಿನಗಳಲ್ಲಿ ಔ‍ಷಧಿತಯಾರಿಕೆಯ ವೆಚ್ಚವು ಹೆಚ್ಚಿದೆ ಎಂಬುದು ಔಷಧ ತಯಾರಿಕಾ ಕಂಪನಿಗಳ ವಾದ. ಔ‍ಷಧಿ ತಯಾರಿಕೆಯಲ್ಲಿ ಬಳಸುವ ಸಾಮಗ್ರಿಗಳ ಬೆಲೆ ಏರಿಕೆ ಕೂಡ ಈ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಹೀಗಾಗಿ ಔ‍ಷಧಿಗಳ ಬೆಲೆಯಲ್ಲಿ ಹೆಚ್ಚಳ ಮಾಡೋದು ಅನಿವಾರ್ಯ ಅನ್ನೋದು ಈ ಕಂಪನಿಗಳ ವಾದ. 

ಇನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್, ಅಜಿಥ್ರೊಮೈಸಿನ್ ನಂತಹ ಔಷಧಗಳು, ರಕ್ತಹೀನತೆ ತಡೆಗಟ್ಟುವ ಔಷಧಗಳು, ಜೀವಸತ್ವಗಳು ಹಾಗೂ ಖನಿಜಾಂಶಗಳ ಮಾತ್ರೆಗಳು ಕೂಡ ಸೇರಿವೆ. ಇನ್ನು ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ಔ‍ಷಧಿಗಳು ಹಾಗೂ ಸ್ಟಿರಾಯ್ಡ್ ಗಳು ಕೂಡ ಈ ಪಟ್ಟಿಯಲ್ಲಿವೆ. ಈಗಾಗಿ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಬಳಕೆಯಾಗುವ ಅಗತ್ಯಔ‍ಷಧಿಗಳು ಇನ್ನು ಮುಂದೆ ದುಬಾರಿಯಾಗಲಿವೆ. 

ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗಡುವು ವಿಸ್ತರಿಸಿದ ಸರ್ಕಾರ, ಜೂನ್ 14ರ ತನಕ ಕಾಲಾವಕಾಶ

ಔಷಧಿ ಅಸಲಿಯತ್ತು ಪತ್ತೆಗೆ ಕ್ಯುಆರ್ ಕೋಡ್ 
ಆರೋಗ್ಯ ಸಮಸ್ಯೆಗೆ ಸೂಕ್ತ ಹಾಗೂ ಅಸಲಿ ಔಷಧಿ ಸೇವನೆ ಮಾಡಬೇಕು. ಔಷಧಿ ಖರೀದಿಸುವಾತನಿಗೆ ಗುಣಮಟ್ಟದ ಔಷಧಿ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಔಷಧಿಯ ಅಸಲಿಯತ್ತು ಖಚಿತಪಡಿಸಲು ಕ್ಯುಆರ್ ಕೋಡ್  ಶೀಘ್ರದಲ್ಲೇ ಜಾರಿಗೆ ತರುತ್ತಿದೆ. ಆರಂಭಿಕ ಹಂತದಲ್ಲಿ ಗರಿಷ್ಠ ಮಾರಾಟವಾಗುವ 300 ಡ್ರಗ್‌ಗಳಲ್ಲಿ ಕ್ಯುಆರ್ ಕೋಡ್ ಕೋಡ್ ಜಾರಿಗೆ ತರುತ್ತಿದೆ. ಖರೀದಿಸುವ ಮಾತ್ರೆಗಳ ಪ್ಯಾಕೆಟ್ ಕೆಳಭಾಗದಲ್ಲಿ ಕ್ಯುಆರ್ ಕೋಡ್  ಮುದ್ರಿಸಲಾಗುತ್ತದೆ. ಈ ಕ್ಯುಆರ್ ಕೋಡ್ ಕೋಡ್ ಸ್ಕ್ಯಾನ್ ಮಾಡಿದರೆ ಮಾತ್ರೆ ಅಸಲಿಯೋ, ನಕಲಿಯೋ, ಉತ್ಪಾದಕರ ವಿವರ ಸೇರಿದಂತೆ ಎಲ್ಲಾ ಮಾಹಿತಿ ಸಿಗಲಿದೆ. ಈ ಮಾತ್ರೆಗೆ ಕೇಂದ್ರ ಡ್ರಗ್ ಕಂಟ್ರೋಲ್ ಆಫ್ ಇಂಡಿಯಾದ ಅನುಮತಿ ಸೇರಿದಂತೆ ಹಲವು ಮಾಹಿತಿಗಳು ಸಿಗಲಿದೆ.

Latest Videos
Follow Us:
Download App:
  • android
  • ios