ನವದೆಹಲಿ[ಜು.02]: ಸಬ್ಸಿಡಿ ರಹಿತ ಎಲ್‌ಪಿಜಿ ದರವನ್ನು 100 ರು. ಇಳಿಕೆ ಮಾಡಿದ ಬೆನ್ನಲ್ಲೇ, ಸಬ್ಸಿಡಿ ಸಹಿತ ಸಿಲಿಂಡರ್‌ ದರವನ್ನು 3 ರು. ಇಳಿಕೆ ಮಾಡಲಾಗಿದೆ.

ಮಾರ್ಚ್ ಬಳಿಕ ಸಿಲಿಂಡರ್‌ ದರ ಏರಿಕೆ ಆಗುತ್ತಲೇ ಇದ್ದು, 3.84 ರು. ಏರಿಕೆ ಕಂಡಿತ್ತು. ದರ ಪರಿಷ್ಕರಣೆಯಿಂದಾಗಿ ಸಬ್ಸಿಡಿ ರಹಿತ ಎಲ್‌ಪಿಜಿ ದರ ಕರ್ನಾಟದಲ್ಲಿ 739 ರು. ಆಗಿದೆ.

ಸಬ್ಸಿಡಿ ರಹಿತ ಸಿಲಿಂಡರ್‌ ದರ ಭಾರೀ ಇಳಿಕೆ

ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ವೈಮಾನಿಕ ಇಂಧನ ದರ ಶೇ.5.8ರಷ್ಟುಇಳಿಕೆಯಾಗಿದೆ. ಹೀಗಾಗಿ ಕಿಲೋ ಲೀಟರ್‌ ವೈಮಾನಿಕ ಇಂಧನ ದರ 3,806 ರು. ಆಗಿದೆ.