ಗೃಹಿಣಿಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಅಡುಗೆ ಸಿಲಿಂಡರ್ ಬೆಲೆಯಲ್ಲಿ  ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. 

ನವದೆಹಲಿ[ಜು.1] : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಬೆಳವಣಿಗೆ ಪರಿಣಾಮ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರವನ್ನು 100 ರು. ಕಡಿತ ಮಾಡಲಾಗಿದೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಅಡುಗೆ ಅನಿಲದ ಬೆಲೆ ಇಳಿಕೆಯ ಬಗ್ಗೆ ತಿಳಿಸಿದೆ.

ಬೆಲೆ ಇಳಿಕೆ ಬಳಿಕ ದೆಹಲಿಯಲ್ಲಿ ಸಬ್ಸಿಡಿ ರಹಿತ ಪ್ರತೀ ಸಿಲಿಂಡರ್‌ನ ದರವು 737.50ರು.ನಿಂದ 637 ರು.ಗೆ ಕುಸಿದಿದೆ. ಇನ್ನು ಸಬ್ಸಿಡಿ ಸಹಿತ ಅಡುಗೆ ಅನಿಲದ ಪ್ರತೀ ಸಿಲಿಂಡರ್‌ ದರವು 495.35 ರು. ಇದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮಾಹಿತಿ ನೀಡಿದೆ.