ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ನ್ಯೂಸ್‌: ಎಲ್‌ಪಿಜಿ ದರದಲ್ಲಿ 25 ರೂ. ಹೆಚ್ಚಳ

ಸಾಮಾನ್ಯ ಜನರು ಬಳಸುವ ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಹಾಗೂ ಅವುಗಳನ್ನು ಪ್ರಸ್ತುತ ಇರುವ ಬೆಲೆಯಲ್ಲೇ ಮಾರಾಟ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

price of commercial lpg hiked by rs 25 on first day of new year 2023 ash

ಹೊಸದಿಲ್ಲಿ, ಜನವರಿ 1, 2023: ದೇಶ ಹೊಸ ವರ್ಷದ  (New Year) ಸಂಭ್ರಮದಲ್ಲಿರುವಾಗಲೇ ತೈಲ ಮಾರುಕಟ್ಟೆ ಕಂಪನಿಗಳು (Oil Marketing Companies) ದೇಶದ ಜನತೆಗೆ ಶಾಕ್‌ ನೀಡಿವೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ (Commercial LPG Cylinder Price) 25 ರೂ. ಏರಿಕೆಯಾಗಿದೆ. ಆದರೆ, ಸಾಮಾನ್ಯ ಜನರು (Common People) ಬಳಸುವ ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆಯಲ್ಲಿ (Domestic LPG Cylinder Price) ಯಾವುದೇ ವ್ಯತ್ಯಾಸವಾಗಿಲ್ಲ ಹಾಗೂ ಅವುಗಳನ್ನು ಪ್ರಸ್ತುತ ಇರುವ ಬೆಲೆಯಲ್ಲೇ ಮಾರಾಟ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಆದರೆ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ದೇಶಾದ್ಯಂತ ಹೆಚ್ಚಳವಾಗಿದೆ. 

ಈ ಹಿನ್ನೆಲೆ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪರಿಷ್ಕೃತ ದರ ಹೀಗಿದೆ ನೋಡಿ.. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1,768 ರೂ.ಗೆ, ಮುಂಬೈನಲ್ಲಿ 1,721 ರೂ. ಗೆ, ಕೋಲ್ಕತ್ತದಲ್ಲಿ 1,870 ರೂ. ಗೆ ಹಾಗೂ ಚೆನ್ನೈನಲ್ಲಿ 1,971 ರೂ. ಗೆ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ. 

ಇದನ್ನು ಓದಿ: ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್‌ ಗೆಹ್ಲೋಟ್‌..!
 
ಇದರಿಂದ ಈಗಾಗಲೇ ಬೆಲೆ ಏರಿಕೆಯ ಶಾಕ್‌ನಲ್ಲಿರುವ ಜನತೆ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ತಿಂಡಿ, ಊಟ ಮಾಡಲು ಹೆಚ್ಚು ದರ ನೀಡಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಆದರೂ, ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಪ್ರಸ್ತುತ ದರದಲ್ಲೇ ಮಾರಾಟ ಮಾಡಲಾಗುತ್ತದೆ. 
 
ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 
ಮುಂಬೈ - ಪ್ರತಿ ಸಿಲಿಂಡರ್‌ಗೆ 1,052.5 ರೂ. 
ದೆಹಲಿ - ಪ್ರತಿ ಸಿಲಿಂಡರ್‌ಗೆ 1,053 ರೂ. 
ಕೋಲ್ಕತ್ತ - ಪ್ರತಿ ಸಿಲಿಂಡರ್‌ಗೆ 1079 ರೂ.
ಚೆನ್ನೈ - ಪ್ರತಿ ಸಿಲಿಂಡರ್‌ಗೆ 1,068.5 ರೂ. 

ಇದನ್ನೂ ಓದಿ: Cylinder Price Slashed: ಕನ್ನಡ ರಾಜ್ಯೋತ್ಸವದಂದು ಗುಡ್‌ ನ್ಯೂಸ್‌: ಅಡುಗೆ ಅನಿಲದ ಬೆಲೆ 115.50 ರೂ. ಕಡಿತ

ಕಳೆದ ಒಂದು ವರ್ಷದಲ್ಲಿ 14.2 ಕೆಜಿ ತೂಕದ ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ 153.5 ರೂ. ಹೆಚ್ಚಳವಾಗಿದೆ. 

2022 ರಲ್ಲಿ ಎಲ್‌ಪಿಜಿ ಸಿಲಿಂಡರ್‌ ದರ ಎಷ್ಟು ಬಾರಿ ಏರಿಕೆಯಾಗಿದೆ..?
2022 ರಲ್ಲಿ ಗೃಹೋಪಯೋಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 4 ಬಾರಿ ಏರಿಕೆ ಮಾಡಲಾಗಿತ್ತು. ಮಾರ್ಚ್‌ ತಿಂಗಳಲ್ಲಿ ಮೊದಲ ಬಾರಿಗೆ ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆಯಲ್ಲಿ 50 ರೂ. ಹೆಚ್ಚಳ ಮಾಡಲಾಗಿತ್ತು. ನಂತರ, ಮತ್ತೆ ಮೇ ತಿಂಗಳಲ್ಲಿ 50 ರೂ. ಏರಿಕೆ ಮಾಡಲಾಗಿತ್ತು. ಬಳಿಕ, ಮೇ ತಿಂಗಳಲ್ಲೇ ಮತ್ತೆ 3. 5 ರೂ. ಏರಿಕೆ ಮಾಡಲಾಗಿತ್ತು. ನಂತರ, ಜುಲೈ ತಿಂಗಳಲ್ಲೂ 50 ರೂ. ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ ಮತ್ತೆ ಗೃಹೋಪಯೋಗಿ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. 

ರಾಜಸ್ಥಾನದಲ್ಲಿ ಅರ್ಧ ಬೆಲೆಗೆ ಎಲ್‌ಪಿಜಿ ಸಿಲಿಂಡರ್..! 
ಬಡತನ ರೇಖೆಗಿಂತ ಕೆಳಗಿರುವ (Below Poverty Line) ಮತ್ತು ಉಜ್ವಲ ಯೋಜನೆಗೆ (Ujjwala Scheme) ಸೇರಿರುವ ಜನರಿಗೆ ರಾಜಸ್ಥಾನ ಸರ್ಕಾರ 500 ರೂ.ಗೆ  ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಡಿಸೆಂಬರ್ 19, 2022ರಂದು ಪ್ರಮುಖ ಘೋಷಣೆಯೊಂದನ್ನು ಹೊರಡಿಸಿದ್ದರು. ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ನಡೆಯುತ್ತಿರುವ ವೇಳೆ ಈ ಘೋಷಣೆ ಮಾಡಲಾಗಿತ್ತು. ಈ ವೇಳೆ ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿದ್ದ ಅವರು, ತಮ್ಮ ಸರ್ಕಾರವು ಈ ಕುಟುಂಬಗಳಿಗೆ ಅರ್ಧಕ್ಕಿಂತ ಕಡಿಮೆ ಬೆಲೆಗೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತದೆ ಎಂದು ಹೇಳಿದ್ದರು.

Latest Videos
Follow Us:
Download App:
  • android
  • ios