Asianet Suvarna News Asianet Suvarna News

Post Office Scheme:ಪ್ರತಿ ತಿಂಗಳು 2500 ರೂ. ಆದಾಯ ಗಳಿಸಬೇಕಾ? ಹಾಗಾದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಮಧ್ಯಮ ವರ್ಗದ ಜನರು ಹೂಡಿಕೆಗೆ ಅಂಚೆ ಕಚೇರಿ ಯೋಜನೆಗಳನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ.ಅದರಲ್ಲೂ ಪ್ರತಿ ತಿಂಗಳು ಒಂದಿಷ್ಟು ಆದಾಯ ಗಳಿಸಬೇಕು ಎಂಬ ಉದ್ದೇಶ ಹೊಂದಿರೋರಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. 

Post Office Scheme Want Rs 2500 Every Month Invest Here Know How Much to Invest
Author
Bangalore, First Published Jul 6, 2022, 6:26 PM IST

Business Desk: ಭಾರತದಲ್ಲಿ (India) ತಿಂಗಳ ವೇತನ ಪಡೆಯೋ ಮಧ್ಯಮ ವರ್ಗದ (Middle class) ಜನರು ಹೂಡಿಕೆಗೆ (Investment) ನೆಚ್ಚಿಕೊಳ್ಳುವ ಆಯ್ಕೆಗಳಲ್ಲಿ ಅಂಚೆ ಕಚೇರಿ (Post office) ಕೂಡ ಒಂದು.  ಅಪಾಯವಿಲ್ಲದ ಹೂಡಿಕೆ ಹಾಗೂ ಉತ್ತಮ ರಿಟರ್ನ್ (Return) ನಿರೀಕ್ಷಿಸೋರಿಗೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಉತ್ತಮ ಆಯ್ಕೆ. ಅದರಲ್ಲೂ ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಯೋಜನೆ ಅಥವಾ ಎಂಐಎಸ್ (MIS) ಮಧ್ಯಮ ಆದಾಯ ಹೊಂದಿರೋರಿಗೆ ಹೂಡಿಕೆಗೆ ಒಳ್ಳೆಯ ಆಯ್ಕೆಯಾಗಿದೆ.

ಏನಿದು ಮಾಸಿಕ ಆದಾಯ ಯೋಜನೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS)ಅಥವಾ ಖಾತೆ ಹೂಡಿಕೆದಾರರಿಗೆ (Investors) ನಿಗದಿತ ರಿಟರ್ನ್ ನೀಡುತ್ತದೆ.  ಈ ಯೋಜನೆಯಡಿಯಲ್ಲಿ ನೀವು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದ್ರೆ ನಿಮಗೆ ಪ್ರತಿ ತಿಂಗಳು ನಿರ್ದಿಷ್ಟ ಮಾಸಿಕ ಆದಾಯ (Monthly Income) ಸಿಗುತ್ತದೆ. 

IT Raids Micro Labs: ಡೋಲೊ 650 ಮಾತ್ರೆ ತಯಾರಕ ಸಂಸ್ಥೆ ಮೇಲೆ IT ದಾಳಿ

ಕನಿಷ್ಠ ಠೇವಣಿ ಎಷ್ಟು?
ಅಂಚೆ ಕಚೇರಿ ಮಾಸಿಕ ಆದಾಯ ಖಾತೆ (MIS) ತೆರೆಯಲು ಕನಿಷ್ಠ 1000 ರೂ. ಹೂಡಿಕೆ ಮಾಡೋದು ಅಗತ್ಯ. ಆ ಬಳಿಕ ಖಾತೆದಾರರು ಒಂದು ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಡಬೇಕು. ಈ ನಿಯಮವು 2020ರ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇನ್ನು ಒಂದು ಖಾತೆಯಲ್ಲಿ ಗರಿಷ್ಠ ಹೂಡಿಕೆ ಮಿತಿ 4.5ಲಕ್ಷ ರೂ. ಇನ್ನು ಜಂಟಿ ಖಾತೆಗಳಲ್ಲಿ ಹೂಡಿಕೆ ಮಿತಿ  9 ಲಕ್ಷ ರೂ. ಒಬ್ಬ ವ್ಯಕ್ತಿ ಎಂಐಎಸ್ ನಲ್ಲಿ ಗರಿಷ್ಠ  4.5ಲಕ್ಷ ರೂ. ಹೂಡಿಕೆ ಮಾಡಬಹುದು (ಜಂಟಿ ಖಾತೆಯಲ್ಲಿನ ಪಾಲು ಸೇರಿ). 

ಬಡ್ಡಿದರ ಎಷ್ಟಿದೆ?
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅಂಚೆ ಕಚೇರಿ ರಾಷ್ಟ್ರೀಯ ಮಾಸಿಕ ಆದಾಯ ಖಾತೆ ಅಥವಾ ಎಂಐಎಸ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗೆ (Small saving Schemes) ಬಡ್ಡಿದರ (Interest rate) ಘೋಷಣೆ  ಮಾಡಿದೆ. ಆದರೆ, ಸರ್ಕಾರ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಈ ಹಿಂದಿನಂತೆ ಶೇ.6.6ರಷ್ಟೇ ಇರಿಸಿದೆ. ಆದ್ರೆ ಈ ಬಡ್ಡಿದರ (Interest rate) ಅನೇಕ ಬ್ಯಾಂಕುಗಳ ಸ್ಥಿರ ಠೇವಣಿ (FD) ಮೇಲಿನ ಬಡ್ಡಿದರಕ್ಕಿಂತ ಹೆಚ್ಚಿದೆ.

ಮಕ್ಕಳು ಎಂಐಎಸ್ ಖಾತೆ ಹೊಂದಬಹುದಾ?
ಅಪ್ರಾಪ್ತ ಮಕ್ಕಳ ಪರವಾಗಿ ಅವರ ಪಾಲಕರು ಅಥವಾ ಪೋಷಕರು ಅಂಚೆ ಕಚೇರಿ ಎಂಐಎಸ್  (MIS) ಖಾತೆ ತೆರೆಯಬಹುದು.ಇನ್ನು 10 ವರ್ಷಗಳ ಮೇಲಿನ ಅಪ್ರಾಪ್ತರ ಹೆಸರಿನಲ್ಲೇ ಖಾತೆ ತೆರೆಯಲು ಅವಕಾಶವಿದೆ.  ಪ್ರತಿ ತಿಂಗಳು ಈ ಖಾತೆಯಲ್ಲಿರುವ ಠೇವಣಿಗೆ ಸಿಗುವ ಬಡ್ಡಿ ಹಣವನ್ನು ಪಾಲಕರು ಮಕ್ಕಳ ಶಾಲಾ ಶುಲ್ಕ ಅಥವಾ ಅವರಿಗೆ ಸಂಬಂಧಿಸಿದ ಇತರ ವೆಚ್ಚಗಳನ್ನು ಭರಿಸಲು ಬಳಸಬಹುದು.  

Family Finance: ತಿಂಗಳ ಕೊನೇಲಿ ಪರ್ಸಲ್ಲಿ ಕಾಸಿರಬೇಕಂದ್ರೆ ಹೀಗಿರಲಿ ಪ್ಲ್ಯಾನ್!

ಎಂಐಎಸ್ ಬಡ್ಡಿ ಲೆಕ್ಕಾಚಾರ ಹೇಗೆ?
ನೀವು ಒಂದೇ ಖಾತೆ ತೆರೆದು 2ಲಕ್ಷ ರೂ. ಠೇವಣಿ ಇಡಲು ಬಯಸಿದರೆ, ಪ್ರಸ್ತುತ ಇರುವ ವಾರ್ಷಿಕ ಬಡ್ಡಿದರದ ಆಧಾರದಲ್ಲಿ ನಿಮಗೆ ಪ್ರತಿ ತಿಂಗಳು 1,100ರೂ. ಸಿಗುತ್ತದೆ. ಇನ್ನು ನೀವು ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ 3.50ಲಕ್ಷ ರೂ. ಠೇವಣಿ ಇಟ್ಟರೆ 1,925ರೂ. ಬಡ್ಡಿ ಸಿಗುತ್ತದೆ. ನೀವು ಈ ಖಾತೆಯಲ್ಲಿ ಗರಿಷ್ಠ 4.5 ಲಕ್ಷ ರೂ. ಠೇವಣಿ ಇರಿಸಿದ್ರೆ ಪ್ರತಿ ತಿಂಗಳು 2,475 ರೂ. ಬಡ್ಡಿದರ ಸಿಗುತ್ತದೆ. ಆದರೆ, ಒಂದು ವಿಷಯ ನೆನಪಿರಲಿ, ಠೇವಣಿದಾರರಿಗೆ ಅವರು ಗಳಿಸುವ ಬಡ್ಡಿ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂಚೆ ಕಚೇರಿ ಎಂಐಎಸ್ ಖಾತೆಯನ್ನು ಐದು ವರ್ಷಗಳ ಅವಧಿ ಮುಗಿದ ಬಳಿಕ ಕ್ಲೋಸ್ ಮಾಡಬಹುದು. 
 

Follow Us:
Download App:
  • android
  • ios