Asianet Suvarna News Asianet Suvarna News

ಪೋರ್ಟಿಯಾ ಮೆಡಿಕಲ್‌ಗೆ ಬೃಹತ್ ಸಾಲ.. ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ

* ಪೋರ್ಟಿಯಾ ಮೆಡಿಕಲ್ ಗೆ ಯುಎಸ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್ (ಡಿಎಫ್‌ಸಿ) ಸಾಲ
*ಆರೋಗ್ಯ  ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಹೆಜ್ಜೆ
* ರೋಗಿಗಳ ಆರೈಕೆ ಜತೆ ಅವರ ಮನೆ ಬಾಗಿಲಿಗೆ ಸೇವೆ
* ಭಾರತದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಿಕೆಗೆ ಆದ್ಯತೆ

Portea Medical secures commitment for 7 mn US dollar loan guaranty facility from DFC mah
Author
Bengaluru, First Published Oct 8, 2021, 12:50 AM IST

ಬೆಂಗಳೂರು (ಅ. 07)  ಪೋರ್ಟಿಯಾ ಮೆಡಿಕಲ್ ಸಂಸ್ಥೆ ಯುನೈಟೆಡ್ ಸ್ಟೇಟ್ಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ (DFC) ನಿಂದ 7.7 ಮಿಲಿಯನ್ ಡಾಲರ್ ಸಾಲ ಬದ್ಧತೆಯನ್ನು ಪಡೆದುಕೊಂಡಿದೆ.  ಭಾರತದ ಸ್ಥಳೀಯ ವಾಣಿಜ್ಯ ಬ್ಯಾಂಕಿನಿಂದ ಈ ಸಾಲ ಸೌಲಭ್ಯ ಸಿಗಲಿದೆ.

ಸೇವಾ ಕೊಡುಗೆಗಳನ್ನು ವಿಸ್ತರಿಸುವುದು, ಸೇವೆಗಳ ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಗೃಹಾಧಾರಿತ ಆರೋಗ್ಯ ರಕ್ಷಣೆಗಾಗಿ ನವೀನ ವಿತರಣಾ ಚಾನೆಲ್‌ಗಳನ್ನು ಅಭಿವೃದ್ಧಿಪಡಿಸುವುದು, ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಭಾರತದಲ್ಲಿ ಹೊರೆಯಾಗಿ ಪರಿಣಮಿಸಬಲ್ಲ ಆಸ್ಪತ್ರೆ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೂಲಕ ಪೋರ್ಟಿಯಾ ಮೆಡಿಕಲ್‌ನ ವ್ಯಾಪಾರದ ವಿಸ್ತರಣೆಯನ್ನು ಬೆಂಬಲಿಸಲು ಈ ಹಣ ಬಳಕೆಯಾಗಲಿದೆ.

ರೆಡ್‌ಸೀರ್ ಕನ್ಸಲ್ಟಿಂಗ್‌ನ ವರದಿಯ ಪ್ರಕಾರ, ಭಾರತದಲ್ಲಿ ಗೃಹ ಆರೋಗ್ಯ ಉದ್ಯಮವು 2025 ರ ವೇಳೆಗೆ  11 ರಿಂದ 13 ಬಿಲಿಯನ್‌ ಡಾಲರ್ ಗೆ ಬೆಳೆಯಲಿದೆ. COVID-19 ಸಾಂಕ್ರಾಮಿಕವು ಈ ಬೆಳವಣಿಗೆಗೆ ಮತ್ತಷ್ಟು ವೇಗವನ್ನು ಹೆಚ್ಚಿಸಿದೆ. ಪೋರ್ಟಿಯಾ ಮೆಡಿಕಲ್ ಉತ್ತಮ ಸೇವೆಗಳ ಶ್ರೇಣಿಯನ್ನು ಹೊಂದಿದ್ದು ಸಾಂಕ್ರಾಮಿಕದ ಸಮಯದಲ್ಲಿ ಮನೆಯಲ್ಲಿ ಡಯಾಲಿಸಿಸ್ ಮತ್ತು ಕೀಮೋಥೆರಪಿಯಂತಹ ಸೇವೆಗಳನ್ನು ಪರಿಚಯಿಸಿತು. ಕಂಪನಿಯು ದೇಶದಾದ್ಯಂತ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಮೂಲಕ ಮತ್ತಷ್ಟು ಬೆಳವಣಿಗೆಯನ್ನು ಕಾಣಲು ಸಜ್ಜಾಗಿದೆ.

ರೋಮ್ಯಾಂಟಿಕ್ ಸ್ಪರ್ಶ ನೆಮ್ಮದಿ ನೀಡಬಹುದು

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ದೆಹಲಿ, ಕರ್ನಾಟಕ, ಹರಿಯಾಣ, ಪಂಜಾಬ್, ಚೆನ್ನೈ ಮತ್ತು ಸ್ಥಳೀಯ ಸರ್ಕಾರಗಳೊಂದಿಗಿನ ಒಪ್ಪಂದಗಳ ಅಡಿಯಲ್ಲಿ ಕೋವಿಡ್ -19 ರೋಗಿಗಳಿಗೆ ಹೋಮ್ ಐಸೋಲೇಷನ್ ಸೇವೆಯನ್ನು ತಲುಪಿಸಲು ಪೋರ್ಟಿಯಾ 1,000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಮತ್ತು 500 ವೈದ್ಯರನ್ನು ನೇರವಾಗಿ ಮತ್ತು ಪಾಲುದಾರಿಕೆಯ ಮೂಲಕ ಸೇವೆಗೆಯನ್ನು ಸಲ್ಲಿಸಿತು. ಪೋರ್ಟಿಯಾ ಇಲ್ಲಿಯವರೆಗೆ 4 ಲಕ್ಷ (0.4 ಮಿಲಿಯನ್‌ಗೆ ಸಮನಾದ) COVID-19 ಪಾಸಿಟಿವ್ ರೋಗಿಗಳ ಸೇವೆ ಮಾಡಿದೆ.

ಸದರಿ ಧನಸಹಾಯಕ್ಕೆ ಸಂಬಂಧಿಸಿದಂತೆ, ಪೋರ್ಟಿಯಾ ಮೆಡಿಕಲ್‌ನ ಸಹ-ಸಂಸ್ಥಾಪಕರು, ಎಂಡಿ ಮತ್ತು ಅಧ್ಯಕ್ಷೆ ಮೀನಾ ಗಣೇಶ್ "ಪೋರ್ಟಿಯಾ ಈ ದೇಶದಲ್ಲಿ ಆರೋಗ್ಯ ರಕ್ಷಣೆಯ ಬಾಹ್ಯ ವಲಯದಲ್ಲಿ ಮುಂಚೂಣಿಯಲ್ಲಿದೆ. ಈ ಪ್ರಯಾಣದಲ್ಲಿ ನಮ್ಮೊಂದಿಗೆ ಡಿಎಫ್‌ಸಿ ಪಾಲುದಾರರಾಗಿ ಅತ್ಯುನ್ನತ ಸಾಮರ್ಥ್ಯ ಮತ್ತು ಅನುಭವದ ಅಸ್ತಿತ್ವವನ್ನು ಹೊಂದಿರುವುದು ಬಹಳ ಸಂತೋಷದ ಸಂಗತಿ. ಆರೋಗ್ಯ ರಕ್ಷಣೆ ಸೇರಿದಂತೆ ಉದ್ಯಮಗಳಲ್ಲಿ ಹೂಡಿಕೆಯ ಮೂಲಕ ಉತ್ತಮ ಸಾಮಾಜಿಕ ಫಲಿತಾಂಶವನ್ನು ಸೃಷ್ಟಿಸುವತ್ತ ಅವರು ಗಮನಹರಿಸಿದ್ದಾರೆ.

ಲ್ಯಾಟಿನ್ ಅಮೆರಿಕ, ಸಬ್-ಸಹಾರನ್ ಆಫ್ರಿಕಾ, ಇಂಡೋ-ಪೆಸಿಫಿಕ್ ಮತ್ತು ಪ್ರಪಂಚದಾದ್ಯಂತ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಡಿಎಫ್‌ಸಿಯ ಹೂಡಿಕೆಗಳು ಹರಡಿವೆ. ಕೆಳ ಮತ್ತು ಮತ್ತು ಕೆಳ ಮಧ್ಯಮ-ಆದಾಯದ ದೇಶಗಳಲ್ಲಿ ಸಂಸ್ಥೆಗಳು ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ನೀಡುವಲ್ಲಿ ಅವರು ಗಮನ ಹರಿಸಿದ್ದಾರೆ. ಬೃಹತ್ ವ್ಯಾಪ್ತಿ ಹೊಂದಿರುವ ಅವರು ಹೂಡಿಕೆ ನಿಧಿಗಳಿಗೆ ನೇರ ಇಕ್ವಿಟಿ ಮತ್ತು ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಜೊತೆಗೆ ನೇರ ಸಾಲಗಳು ಮತ್ತು  1 ಬಿಲಿಯನ್ ಡಾಲರ್ ವರೆಗಿನ ಖಾತರಿಗಳು ಕೂಡ ಇವೆ. ಈ ಪಾಲುದಾರಿಕೆಯು ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಪೋರ್ಟಿಯಾ ನಡೆಸುತ್ತಿರುವ ಪ್ರಯತ್ನದಿಂದ ಉಂಟಾಗುತ್ತಿರುವ ಉತ್ತಮ ಬದಲಾವಣೆಯ ಸಾಕ್ಷಿಯಾಗಿದೆ” ಎಂದರು.

ಮಹಿಳೆಯರು ದೀರ್ಘ ಕಾಲ ಮೂತ್ರ ತಡೆಯುವುದು ಅಪಾಯ

"ಮಹಿಳೆಯಿಂದ ಸಹ-ಸ್ಥಾಪಿತವಾದ ಪೋರ್ಟಿಯಾ ಮೆಡಿಕಲ್ ಅನ್ನು ಬೆಂಬಲಿಸಲು ಡಿಎಫ್‌ಸಿ ಹೆಮ್ಮೆಪಡುತ್ತದೆ, ಅತ್ಯಂತ ಶೀಘ್ರ ವೇಗದಲ್ಲಿ ರೋಗಿಗಳ ಮನೆಗಳಿಗೆ ಉತ್ತಮ-ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ತಲುಪಿಸುವುದಲ್ಲದೆ – ಸಾಂಕ್ರಾಮಿಕವು ಹೆಚ್ಚಿನ ಸಂಪನ್ಮೂಲಗಳನ್ನು ವ್ಯಯಿಸುತ್ತ ಒತ್ತಡವನ್ನು ಹೇರುತ್ತಿರುವುದರಿಂದ ಈ ಸೇವೆಗಳ ಅಗತ್ಯ ಎಂದಿಗಿಂತಲೂ ಈಗ ಹೆಚ್ಚಾಗಿದೆ" DFC ಯ ವಿದೇಶಾಂಗ ವ್ಯವಹಾರಗಳ ಉಪಾಧ್ಯಕ್ಷ ಎಂದು ಅಲ್ಜೀನ್ ಸಾಜೆರಿ ಹೇಳಿದರು.

ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರನ್ನು ಆರೋಗ್ಯ ರಕ್ಷಣೆಯ ವೃತ್ತಿಗಳಿಗೆ ತರಬೇತಿ ನೀಡುವ ಮೂಲಕ ಬಡತನದಿಂದ ಮೇಲಕ್ಕೆತ್ತಲು ಪೋರ್ಟಿಯಾ ಮೆಡಿಕಲ್‌ನ ನಿರಂತರ ಬದ್ಧತೆಯನ್ನು ಕಂಡು ನನಗೆ ಬಹಳ ಸಂತೋಷವಾಗಿದೆ, ಇದರ ಪ್ರಭಾವ ಮತ್ತು ಫಲಿತಾಂಶ ಮುಂದಿನ ಪೀಳಿಗೆಗಳ ಜೀವನದ ಮೇಲೆ ಉತ್ತಮ ಪರಿಣಾಮ ಬೀರಲಿದೆ" ಎಂದರು.

ಅಮಾನ್ ಖನ್ನಾ ನೇತೃತ್ವದ ವಾಷಿಂಗ್ಟನ್ ಡಿಸಿ ಮೂಲದ ಸೇತುಕಾ ಪಾರ್ಟ್‍ನರ್ಸ್ ಎಲ್‌ಎಲ್‌ಪಿ ಈ ವಹಿವಾಟಿನ ವಿಶೇಷ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದೆ. ಡಿಎಫ್‌ಸಿ ಖಾತರಿಯು ಭಾರತದ ಸ್ಥಳೀಯ ವಾಣಿಜ್ಯ ಬ್ಯಾಂಕ್‌ನಿಂದ ಪೋರ್ಟಿಯಾಕ್ಕೆ ರೂ 52 ಕೋಟಿ ಸಾಲವನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ. ಪೋರ್ಟಿಯಾಕ್ಕಾಗಿ ಸ್ಥಳೀಯ ಬಂಡವಾಳವನ್ನು ಸಜ್ಜುಗೊಳಿಸಲು ಮತ್ತು ಪೋರ್ಟಿಯಾದ ಬ್ಯಾಲೆನ್ಸ್ ಶೀಟ್‌ನಿಂದ ವಿದೇಶಿ ವಿನಿಮಯದ ಅಪಾಯವನ್ನು ತಗ್ಗಿಸಲು ಸಹಾಯ ಮಾಡುವ ಕಾರಣ ಈ ವ್ಯವಸ್ಥೆಯು ಮಹತ್ವ ಹೊಂದಿದೆ.

ಯುನೈಟೆಡ್ ಸ್ಟೇಟ್ಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (DFC) ಅಮೆರಿಕದ ಅಭಿವೃದ್ಧಿ ಬ್ಯಾಂಕ್ ಆಗಿದ್ದು ಹಾಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎದುರಿಸುತ್ತಿರುವ ಅತ್ಯಂತ ನಿರ್ಣಾಯಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಡಿಎಫ್‌ಸಿ ಖಾಸಗಿ ವಲಯದೊಂದಿಗೆ ಪಾಲುದಾರಿಕೆ ಹೊಂದಿದೆ. ಶಕ್ತಿ, ಆರೋಗ್ಯ ರಕ್ಷಣೆ, ನಿರ್ಣಾಯಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತೇವೆ. ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ DFC ಸಣ್ಣ ಉದ್ಯಮಗಳಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಹಣಕಾಸು ಒದಗಿಸುತ್ತದೆ. DFC ಹೂಡಿಕೆಯು ಉನ್ನತ ಗುಣಮಟ್ಟಕ್ಕೆ ಮತ್ತು ಪರಿಸರ, ಮಾನವ ಹಕ್ಕುಗಳು ಮತ್ತು ಕಾರ್ಮಿಕರ ಹಕ್ಕುಗಳಿಗೆ ಬದ್ಧವಾಗಿದೆ.

ಪೋರ್ಟಿಯಾ ಮೆಡಿಕಲ್ (www.portea.com) ಭಾರತದ ಪ್ರಮುಖ ಗ್ರಾಹಕ ಆರೋಗ್ಯ ಪೂರೈಕೆದಾರರಾಗಿದ್ದು ಸಾಮಾನ್ಯ ಪ್ರಾಥಮಿಕ ಆರೋಗ್ಯ ರಕ್ಷಣೆ, ಆಸ್ಪತ್ರೆಯ ನಂತರದ ಆರೈಕೆ, ದೀರ್ಘಕಾಲದ ರೋಗ ನಿರ್ವಹಣೆ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ವೈದ್ಯರು, ದಾದಿಯರು, ಶುಶ್ರೂಷಕರು ಮತ್ತು ಫಿಸಿಯೋತೆರಪಿಸ್ಟ್ ಗಳನ್ನು ಹೊಂದಿದ್ದು ರೋಗಿಗಳ ಮನೆಯಲ್ಲೇ ಸೇವೆ ನೀಡುತ್ತದೆ. ಇದರ ಜೊತೆಯಲ್ಲಿ, ಪೋರ್ಟಿಯಾ ಲ್ಯಾಬ್ ಪರೀಕ್ಷೆಗಾಗಿ ಮಾದರಿಗಳ ಮನೆ ಸಂಗ್ರಹದ ಸೌಲಭ್ಯವನ್ನು ಸಹ ಒದಗಿಸುತ್ತದೆ.

ವೈದ್ಯಕೀಯ ಸಲಕರಣೆಗಳನ್ನು ಮಾರಾಟ / ಬಾಡಿಗೆಗೆ ನೀಡುತ್ತದೆ, ಇದು ಆರೋಗ್ಯ ಸೇವೆಗಳ ಸಂಪೂರ್ಣ ವ್ಯಾಪ್ತಿಯನ್ನು ರೋಗಿಯ ಮನೆಬಾಗಿಲಿಗೆ ತಂದಿದೆ. 2013 ರಲ್ಲಿ ಆರಂಭವಾದಾಗಿನಿಂದ, ಪೋರ್ಟಿಯಾ ದೇಶಾದ್ಯಂತ 3.4 ದಶಲಕ್ಷಕ್ಕೂ ಹೆಚ್ಚು ರೋಗಿಗಳ ಭೇಟಿಗಳನ್ನು ಪೂರ್ಣಗೊಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ, ಪೋರ್ಟಿಯಾ ಮನೆಯಲ್ಲಿ ಕೀಮೋಥೆರಪಿ ಮತ್ತು ಡಯಾಲಿಸಿಸ್‌ನಂತಹ ಹೊಸ ಸೇವೆಗಳನ್ನು ಪರಿಚಯಿಸಿತು. ಅವರು ಕೋವಿಡ್ -19 ಪಾಸಿಟಿವ್ ಆದ ರೋಗಿಗಳಿಗೆ ಹಾಗೂ ಸೌಮ್ಯ ರೋಗಲಕ್ಷಣಗಳನ್ನು ಪ್ರದರ್ಶಿಸುವ ಅಥವಾ ಲಕ್ಷಣರಹಿತರಿಗೆ ಹೋಮ್ ಕ್ವಾರಂಟೈನ್ ಸೇವೆಗಳನ್ನು ಸಹ ನೀಡುತ್ತಿದೆ. ಇಲ್ಲಿಯವರೆಗೆ 4 ಲಕ್ಷಕ್ಕೂ ಹೆಚ್ಚು (0.4 ಮಿಲಿಯನ್‌ಗೆ ಸಮನಾದ) ಕೋವಿಡ್ ಪಾಸಿಟಿವ್ ರೋಗಿಗಳಿಗೆ ಈ ಸೇವೆಗಳನ್ನು ನೀಡಲಾಗಿದೆ.

ಸೇತುಕಾ ಪಾರ್ಟ್‍ನರ್ಸ್ ಎಲ್‌ಎಲ್‌ಪಿ ಒಂದು ಧ್ಯೇಯೋದ್ಧೇಶವುಳ್ಳ ವಿವಿಧ ಸಲಹಾ ಸಂಸ್ಥೆಯಾಗಿದೆ, ಇದು ಉದಯೋನ್ಮುಖ ಮತ್ತು ಗಡಿನಾಡು ಮಾರುಕಟ್ಟೆಯಲ್ಲಿ ಅಭಿವೃದ್ಧಿ ಆಗುತ್ತಿರುವ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ (ಸಾಲ, ಇಕ್ವಿಟಿ, ಅನುದಾನ) ಮತ್ತು ಸಾಗರೋತ್ತರ ಪೂರೈಕೆದಾರರಿಂದ ಅರ್ಹ ಸಾಮಾಜಿಕ ಉದ್ಯಮಗಳಿಗೆ ಸಾಮರ್ಥ್ಯದ ಬೆಂಬಲ ನೀಡಬಲ್ಲ ಪಾಲುದಾರಿಕೆಗಳನ್ನು ರೂಪಿಸುತ್ತದೆ. ವಾಷಿಂಗ್ಟನ್ ಡಿಸಿ ಮೂಲದ ಈ ಸಂಸ್ಥೆಯು ಏಪ್ರಿಲ್ 2019 ರಲ್ಲಿ ಅಮಾನ್ ಖನ್ನಾ ಅವರಿಂದ ಸ್ಥಾಪಿಸಲ್ಪಟ್ಟಿತು.  ಹೂಡಿಕೆದಾರರಿಗೆ ಮತ್ತು ಈ ಮಾರುಕಟ್ಟೆಗಳಲ್ಲಿ ಹಲವಾರು ಸಾಮಾಜಿಕ ಉದ್ಯಮಗಳಿಗೆ ಸಾಮರ್ಥ್ಯ ಹಾಗೂ ವೇಗವರ್ಧಕ ಬಂಡವಾಳ ಮತ್ತು ಮೌಲ್ಯ ಸೃಷ್ಟಿಯನ್ನು ಈಗಾಗಲೇ ಅನುವು ಮಾಡಿದೆ.

Follow Us:
Download App:
  • android
  • ios