Startup ಕಂಪನಿಗೆ ಸೇರುವ ಮುನ್ನ ಕೆಲ ವಿಷ್ಯ ನೆನಪಿಡಿ
ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡಲು ಅನೇಕರು ಮುಂದಾಗ್ತಿದ್ದಾರೆ. ಇವು ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡ್ತಿದೆ. ಆದ್ರೆ ಭವಿಷ್ಯ ಚೆನ್ನಾಗಿರಬೇಕು ಎನ್ನುವವರು ನೀವಾಗಿದ್ದರೆ ಸ್ಟಾರ್ಟ್ ಅಪ್ ಆಯ್ಕೆ ಮಾಡುವ ಮುನ್ನ ಸ್ವಲ್ಪ ಎಚ್ಚರಿಕೆ ಹೆಜ್ಜೆ ಇಡಬೇಕು.
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್ ಅಪ್ ಸಂಖ್ಯೆ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ. ಈ ಸ್ಟಾರ್ಟ್ ಅಪ್ ಗಳು ಉತ್ತಮ ಸಂಬಳವನ್ನೂ ಉದ್ಯೋಗಿಗಳಿಗೆ ನೀಡುತ್ತಿವೆ. ಅನೇಕರಿಗೆ ಸ್ಟಾರ್ಟ್ ಅಪ್ ನಲ್ಲಿ ಉದ್ಯೋಗ ಸಿಗ್ತಿದೆ. ಸ್ಟಾರ್ಟ್ ಅಪ್ ನಲ್ಲಿ ಕೆಲಸ ಮಾಡುವಾಗ ಅನೇಕ ಸವಾಲುಗಳಿರುತ್ತವೆ. ಯಾಕೆಂದ್ರೆ ಈಗತಾನೆ ಆರಂಭವಾದ ಕಂಪನಿ ಅದಾಗಿರುತ್ತದೆ. ಆರಂಭದಲ್ಲಿಯೇ ಲಾಭ ನಿರೀಕ್ಷೆ ಕಷ್ಟ. ಸ್ಟಾರ್ಟ್ ಅಪ್ ಕಂಪನಿಯಲ್ಲಿ ಉದ್ಯೋಗ ಮಾಡುವ ಆಫರ್ ನಿಮಗೆ ಬಂದಿದ್ದರೆ, ಅದ್ರಲ್ಲಿ ಕೆಲಸ ಮಾಡುವ ಆಲೋಚನೆ ನೀವು ಮಾಡಿದ್ರೆ ಯಸ್ ಎನ್ನುವ ಮುನ್ನ ಕೆಲವೊಂದು ವಿಷ್ಯಗಳನ್ನು ಗಮನಿಸಿ. ಸ್ಟಾರ್ಟ್ ಅಪ್ ಕಂಪನಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ನೀವು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೆವೆ.
ಸ್ಟಾರ್ಟ್ ಅಪ್ (Start up) ಕಂಪನಿ ಸೇರುವ ಮುನ್ನ ಇವುಗಳನ್ನು ತಿಳಿದಿರಿ :
ನಿಮಗೆ ಸಿಗುವ ಸಂಬಳ (Salary) ದ ಬಗ್ಗೆ ಮಾಹಿತಿ : ಕೆಲ ಸ್ಟಾರ್ಟ್ ಅಪ್ ಕಂಪನಿಗಳು ಆರಂಭದಲ್ಲಿಯೇ ಹೆಚ್ಚಿನ ಸಂಬಳ ನೀಡುವುದಿಲ್ಲ. ಕೆಲ ಕಂಪನಿ (Company) ಗಳು ಆರಂಭದಲ್ಲಿಯೇ ಹೆಚ್ಚು ಸಂಬಳವನ್ನು ಆಫರ್ ಮಾಡುತ್ತವೆ. ನೀವು ಸ್ಟಾರ್ಟ್ ಅಪ್ ಗೆ ಸೇರುವ ಮುನ್ನ ಅಲ್ಲಿನ ಸಂಬಳದ ಬಗ್ಗೆ ತಿಳಿಯಿರಿ. ನಿಮಗೆ ಕಂಪನಿ ಎಷ್ಟು ಸಂಬಳ ನೀಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಕೆಲವರು ಸ್ಟಾಕ್ ಆಯ್ಕೆ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಸ್ಟಾರ್ಟ್ ಅಪ್ ಕಂಪನಿ ಮುಚ್ಚಿದರೆ ಉದ್ಯೋಗಿ (Employee ) ಗೆ ಸ್ಟಾಕ್ ಆಯ್ಕೆಯು ಯಾವುದೇ ಪ್ರಯೋಜನ ನೀಡುವುದಿಲ್ಲ. ಹಾಗಾಗಿ ನೀವು ಇದ್ರ ಬಗ್ಗೆ ಸ್ಪಷ್ಟವಾಗಿರಬೇಕು.
ಕಂಪನಿ ಹೂಡಿಕೆ ಬಗ್ಗೆ ಮಾಹಿತಿ : ಸ್ಟಾರ್ಟ್‌ಅಪ್‌ನಲ್ಲಿ ಕೆಲಸ ಮಾಡಲು ಹೊರಟಿದ್ದರೆ ಆ ಕಂಪನಿಯಲ್ಲಿ ಹೂಡಿಕೆದಾರರು ಇದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ತಿಳಿದುಕೊಳ್ಳಬೇಕು. ಯಾವ ಹಣಕಾಸು ಕಂಪನಿಗಳು ಈ ಸ್ಟಾರ್ಟ್ಅಪ್ ಕಂಪನಿಯೊಂದಿಗೆ ಸಂಬಂಧ ಹೊಂದಿವೆ, ಯಾವ ಕಂಪನಿಗಳಿಂದ ಸ್ಟಾರ್ಟ್ಅಪ್ ಹಣ ಪಡೆಯುತ್ತಿದೆ ಎಂಬ ಬಗ್ಗೆ ನಿಮಗೆ ಮಾಹಿತಿ ಇರಬೇಕಾಗುತ್ತದೆ. ಒಳ್ಳೆಯ ಕಂಪನಿಗಳು ಸ್ಟಾರ್ಟ್ ಅಪ್ ಕಂಪನಿಯಲ್ಲಿ ಹೂಡಿಕೆ ಮಾಡ್ತಿದ್ದರೆ ಯಾವುದೇ ಭಯಪಡುವ ಅಗತ್ಯವಿರುವುದಿಲ್ಲ. ಶೀಘ್ರದಲ್ಲಿಯೇ ಸ್ಟಾರ್ಟ್ ಅಪ್ ಕಂಪನಿ ಮುಚ್ಚಬಹುದು ಎಂಬ ಆತಂಕವಿರುವುದಿಲ್ಲ. ಸಂಬಳದ ಬಗ್ಗೆಯೂ ಚಿಂತಿಸಬೇಕಾಗಿರುವುದಿಲ್ಲ.
Women Career: ಹಳ್ಳಿಯಲ್ಲಿರೋ ಮಹಿಳೆಯರಿಗೂ ಇದೆ ಹಣ ಸಂಪಾದಿಸುವ ಅವಕಾಶ
ನಿಮ್ಮ ಕೆಲಸವೇನು? : ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಸಾಮಾನ್ಯವಾಗಿ ಕಡಿಮೆ ಉದ್ಯೋಗಿಗಳಿರುತ್ತಾರೆ. ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಆರಂಭದಲ್ಲಿ ಅವರಿಗೆ ಸವಾಲಿನ ಕೆಲಸವಾಗಿರುತ್ತದೆ. ಹಾಗಾಗಿ ಒಬ್ಬ ಉದ್ಯೋಗಿಯಿಂದಲೇ ಅನೇಕ ಕೆಲಸಗಳನ್ನು ಮಾಡಿಸುವ ಸಾಧ್ಯತೆಯಿರುತ್ತದೆ. ನೀವು ಆರಂಭದಲ್ಲಿ ನಿಮ್ಮ ಕೆಲಸವೇನು ಎಂಬುದನ್ನು ತಿಳಿದುಕೊಳ್ಳಿ. ಎಚ್ ಆರ್ ಭೇಟಿಯಾಗಿ ಈ ಬಗ್ಗೆ ಸ್ಪಷ್ಟತೆ ತೆಗೆದುಕೊಳ್ಳಿ. ನಿಮ್ಮ ಸಂಬಳಕ್ಕಿಂತ ಕೆಲಸ ಜಾಸ್ತಿಯಾದ್ರೆ ಇದು ನಿಮ್ಮನ್ನು ಒತ್ತಡಕ್ಕೆ ನೂಕುತ್ತದೆ. ಹಾಗೆಯೇ ಮಿತಿ ಮೀರಿ ಕೆಲಸ ಮಾಡಿದ್ರೆ ಅದು ಕೆಲಸದ ಮೇಲಿನ ಆಸಕ್ತಿ ಕಡಿಮೆಯಾಗುವಂತೆ ಮಾಡುತ್ತದೆ. ಆರಂಭದಲ್ಲಿಯೇ ನಿಮ್ಮ ಗಡಿ ನಿಮಗೆ ತಿಳಿದಿದ್ದರೆ ಒಳ್ಳೆಯದು. ಕೆಲಸಕ್ಕೆ ಸೇರಿದ ಮೇಲೆ ಪರಿತಪಿಸುವುದು ತಪ್ಪುತ್ತದೆ.
ಹೆಚ್ಚು ಹಣ ಮತ್ತು ಕಡಿಮೆ ಒತ್ತಡವನ್ನು ನೀಡುವ 10 ವೃತ್ತಿಗಳು
ಕಂಪನಿಯ ಬೆಳವಣಿಗೆ ತಿಳಿದುಕೊಳ್ಳಿ : ಕಂಪನಿಯ ಕೆಲಸದ ಹಂತದ ಬಗ್ಗೆಯೂ ಮಾಹಿತಿಯನ್ನು ಹೊಂದಿರಬೇಕು. ಇದರಿಂದ ಆ ಕಂಪನಿ ಕೆಲವೇ ತಿಂಗಳುಗಳಲ್ಲಿ ಯಾವ ಹಂತವನ್ನು ತಲುಪಿದೆ ಮತ್ತು ಇದುವರೆಗೆ ಎಷ್ಟು ಲಾಭ ಗಳಿಸಿದೆ ಎಂದು ನಿಮಗೆ ತಿಳಿಯುತ್ತದೆ. ಕಂಪನಿಯು ಕಡಿಮೆ ಸಮಯದಲ್ಲಿ ಸಾಕಷ್ಟು ಲಾಭವನ್ನು ಗಳಿಸಿದ್ದರೆ ಮತ್ತು ಅದರ ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದರೆ ನೀವು ತಕ್ಷಣ ಆ ಕಂಪನಿಗೆ ಸೇರಬಹುದು.