ಕೇವಲ 50 ರೂ. ಇಟ್ಕೊಂಡು ಭಾರತ ತೊರೆದ ವ್ಯಕ್ತಿಯೀಗ 15,000 ಕೋಟಿಯ ಮಾಲೀಕ!

ಜೀವನದಲ್ಲಿ ಸಾಧಿಸುವ ಮನಸ್ಸಿದ್ದರೆ ಯಾವುದನ್ನೂ ಸಾಧಿಸುವುದು ಅಸಾಧ್ಯವಲ್ಲ ಅನ್ನೋದನ್ನು ಈಗಾಗ್ಲೇ ಹಲವು ಸಾಧಕರು ಸಾಬೀತುಪಡಿಸಿದ್ದಾರೆ. ಇವರೂ ಸಹ ಅಂಥಾ ಉದ್ಯಮಿಗಳಲ್ಲಿ ಒಬ್ಬರು. ಕೇವಲ ಕೇವಲ 50 ರೂ.ಗೆ ಬಂದ ಕೇವಲ 7 ಡಾಲರ್‌ನೊಂದಿಗೆ ಭಾರತವನ್ನು ತೊರೆದು, ಈಗ ಸುಮಾರು 15,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

PNC Menon, college dropout who left India with Rs 50 and earned Rs 15000 crore Vin

ಜೀವನದಲ್ಲಿ ಸಾಧಿಸುವ ಮನಸ್ಸಿದ್ದರೆ ಯಾವುದನ್ನೂ ಸಾಧಿಸುವುದು ಅಸಾಧ್ಯವಲ್ಲ ಅನ್ನೋದನ್ನು ಈಗಾಗ್ಲೇ ಹಲವು ಸಾಧಕರು ಸಾಬೀತುಪಡಿಸಿದ್ದಾರೆ. ಶೂನ್ಯದಿಂದ ಆರಂಭಿಸಿ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿದವರಿದ್ದಾರೆ. ಕಡು ಬಡತನದಲ್ಲಿ ಬೆಳೆದು, ಒಪ್ಪೊತ್ತಿನ ಆಹಾರವಿಲ್ಲದೆ ದಿನ ಕಳೆದ ಕೆಲವರು ಬಿಲಿಯನೇರ್‌ಗಳಾಗಿದ್ದಾರೆ. ಇವರೂ ಸಹ ಅಂಥಾ ಉದ್ಯಮಿಗಳಲ್ಲಿ ಒಬ್ಬರು. 

75 ವರ್ಷದ ಪಿ.ಎನ್‌ಸಿ ಮೆನನ್ ವಿಶ್ವದ ಅತ್ಯಂತ ಶ್ರೀಮಂತ ಎನ್‌ಆರ್‌ಐಗಳಲ್ಲಿ ಒಬ್ಬರು. ಸಾಧಾರಣ ಕುಟುಂಬದಲ್ಲಿ ಜನಿಸಿದ ಪಿ.ಎನ್‌ಸಿ ಮೆನನ್, ಕೇವಲ 10 ವರ್ಷ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಕಾಲೇಜು ಬಿಟ್ಟ ಮೆನನ್ ತನ್ನ ಜೇಬಿನಲ್ಲಿ ಕೇವಲ 50 ರೂ.ಗೆ ಬಂದ ಕೇವಲ 7 ಡಾಲರ್‌ನೊಂದಿಗೆ ಭಾರತವನ್ನು ತೊರೆದರು. ಇಂದು ಅವರು ಸುಮಾರು 15,000 ಕೋಟಿ ರೂ (1.8 ಬಿಲಿಯನ್ ಡಾಲರ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಕೂಲಿ ಕೆಲಸಕ್ಕೆ ಹೋಗಿ ದಿನಕ್ಕೆ ಕೇವಲ 5 ರೂ. ಸಂಪಾದಿಸ್ತಿದ್ದ ಮಹಿಳೆ, ಈಗ ಕೋಟ್ಯಾಧಿಪತಿ!

ಪಿ.ಎನ್‌ಸಿ ಮೆನನ್ ಎಂದು ಶಾರ್ಟ್ ಆಗಿ ಕರೆಯಲ್ಪಡುವ ಪುತನ್ ನೆಡುವಕ್ಕಾಟ್ ಚೆಂತಮರಾಕ್ಷ ಮೆನನ್, ಭಾರತ, ಮಧ್ಯಪ್ರಾಚ್ಯ ಮತ್ತು ಯುಕೆ ವ್ಯಾಪಿಸಿರುವ ವ್ಯಾಪಾರ ಸಾಮ್ರಾಜ್ಯವನ್ನು ಹೊಂದಿರುವ ಶೋಭಾ ಗ್ರೂಪ್‌ನ ಸಂಸ್ಥಾಪಕರಾಗಿದ್ದಾರೆ. ಕೇರಳದಿಂದ ಬಂದ ಮೆನನ್ ಅವರು ಉದ್ಯಮಿಯಾಗುವ ಕನಸನ್ನು ನನಸಾಗಿಸಲು ತ್ರಿಶ್ಯೂರ್‌ನ ಕೇರಳ ವರ್ಮಾ ಕಾಲೇಜಿನಿಂದ ಹೊರಬರಲು ನಿರ್ಧರಿಸಿದರು. ಅಲ್ಲಿಗೆ ಅವರ ಶಿಕ್ಷಣ ಕೊನೆಗೊಂಡಿತು. ಆ ನಂತರ ಅವರು ಇಂಟೀರಿಯರ್ ಡಿಸೈನಿಂಗ್ ಆರಂಭಿಸಿದರು.

1976ರಲ್ಲಿ, ಮೆನನ್‌ ಒಮಾನ್‌ನ ಮಸ್ಕತ್‌ಗೆ ಹೊರಟರು. ಅವರು 1977ರಲ್ಲಿ ಸುಮಾರು  75,000 ರೂ. ಸಾಲದೊಂದಿಗೆ ತಮ್ಮ ಮೊದಲ ಕಂಪನಿಯಾದ ಎಸ್ & ಟಿ ಇಂಟೀರಿಯರ್ಸ್ ಮತ್ತು ಕಾಂಟ್ರಾಕ್ಟಿಂಗ್‌ನ್ನು ಸ್ಥಾಪಿಸಿದರು. ಈ ವ್ಯವಹಾರವು 1984ರ ಹೊತ್ತಿಗೆ ದೇಶದಲ್ಲಿ ಸುಸ್ಥಾಪಿತವಾದ ಉನ್ನತ ಕಂಪನಿಯಾಗಿ ಗುರುತಿಸಿಕೊಂಡಿತು.

ಕೇವಲ 8000 ರೂ.ನಿಂದ ಬಿಸಿನೆಸ್ ಆರಂಭಿಸಿದ ವ್ಯಕ್ತಿ, ಈಗ ಬಿಲಿಯನೇರ್ ಮುಕೇಶ್ ಅಂಬಾನಿಗೇ ಪ್ರತಿಸ್ಪರ್ಧಿ!

1990ರ ದಶಕದಲ್ಲಿ ಮೆನನ್ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರದ ಸಾಮರ್ಥ್ಯವನ್ನು ಗುರುತಿಸಿದಾಗ ಅವರ ಉದ್ಯಮದಲ್ಲಿ ದೊಡ್ಡ ಬದಲಾವಣೆಯಾಯಿತು. ಭಾರತದಲ್ಲಿ ತಮ್ಮ ಮುಂದಿನ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿದ ಅವರು 1995ರಲ್ಲಿ ಶೋಭಾ ಡೆವಲಪರ್ಸ್‌ನ್ನು ಸ್ಥಾಪಿಸಿದರು. ಮಧ್ಯಪ್ರಾಚ್ಯದಲ್ಲಿ ತಮ್ಮ ವ್ಯಾಪಾರವನ್ನು ನಿರ್ವಹಿಸುವ ಶೋಭಾ ರಿಯಾಲ್ಟಿಯನ್ನು ಸಹ ಹೊಂದಿದ್ದಾರೆ. ಮೆನನ್ ಅವರು ಅಲ್ ಬುಸ್ತಾನ್ ಅರಮನೆ ಮತ್ತು ಒಮಾನ್‌ನ ಸುಲ್ತಾನ್ ಕಬೂಸ್ ಗ್ರ್ಯಾಂಡ್ ಮಸೀದಿಯಂತಹ ಹೆಗ್ಗುರುತು ಕಟ್ಟಡಗಳ ಒಳಾಂಗಣವನ್ನು ರಚಿಸಿದ್ದಾರೆ.

PNC ಮೆನನ್ 2009ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಪ್ರವಾಸಿ ಭಾರತೀಯ ಸಮ್ಮಾನ್ ಪುರಸ್ಕಾರವನ್ನು ಪಡೆದರು. ಅವರ ಶೋಭಾ ರಿಯಾಲ್ಟಿ ಗಲ್ಫ್‌ನಲ್ಲಿ ಪಟ್ಟಿ ಮಾಡದ ಉನ್ನತ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾಗಿದ್ದು, ಮೆನನ್ ಅವರ ಶೋಭಾ ಡೆವಲಪರ್ಸ್ ಸುಮಾರು 9700 ಕೋಟಿ ರೂ. ಆಸ್ತಿ ಮೌಲ್ಯವನ್ನು ಹೊಂದಿದೆ. 

Latest Videos
Follow Us:
Download App:
  • android
  • ios