Asianet Suvarna News Asianet Suvarna News

ಕೊರೋನಾ ಹೊಡೆತ; ಬಾಷ್ ಆದಾಯ ಶೇ.64ರಷ್ಟು ಕುಸಿತ!

  • 2020-21 ನೇ ಹಣಕಾಸು ಸಾಲಿನಲ್ಲಿ ಕಾರ್ಯಾಚರಣೆಗಳ ಒಟ್ಟು ಆದಾಯದಲ್ಲಿ ಶೇ.64 ರಷ್ಟು ಇಳಿಕೆ
  • ಒಟ್ಟು ಆದಾಯದಲ್ಲಿನ ಪಿಎಟಿ ನಷ್ಟ ಶೇ.12.1 ರಷ್ಟು ಕಡಿಮೆ
  • ಹಸಿರು ಇಂಧನಕ್ಕೆ ಹೂಡಿಕೆ ಮಾಡುವ ಮೂಲಕ ಕಾರ್ಬನ್ ತಟಸ್ಥತೆ ಸಾಧಿಸುವತ್ತ ಹೆಜ್ಜೆ
     
Bosch Limited incurs 0 3 percent loss before tax
Author
Bengaluru, First Published Aug 11, 2020, 8:13 PM IST

ಬೆಂಗಳೂರು(ಆ.11): ತಂತ್ರಜ್ಞಾನ ಮತ್ತು ಸೇವೆಗಳ ಮುಂಚೂಣಿಯ ಪೂರೈಕೆದಾರ ಸಂಸ್ಥೆಯಾದ ಬಾಷ್ ಲಿಮಿಟೆಡ್ 2020-21 ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 992 ಕೋಟಿ ರೂ.ಗಳ ಒಟ್ಟಾರೆ ಆದಾಯವನ್ನು ಕಾರ್ಯಾಚರಣೆಗಳಿಂದ ಗಳಿಸಿರುವುದಾಗಿ ಪ್ರಕಟಿಸಿದೆ. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲಾ ವಿಭಾಗಗಳ ಮಾರಾಟದಲ್ಲಿನ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.64 ರಷ್ಟು ಇಳಿಕೆಯಾಗಿದೆ.

ಕೊರೋನಾ ಹೋರಾಟಕ್ಕೆ ಬಾಷ್ ಮತ್ತಷ್ಟು ನೆರವು; ಮಾಸ್ಕ್ ಉತ್ಪಾದನಾ ಘಟಕಕ್ಕೆ ಚಾಲನೆ!.

ತೆರಿಗೆ ಪೂರ್ವ ನಷ್ಟವು 3 ಕೋಟಿ ರೂಪಾಯಿಗಳಾಗಿದೆ. ಇದು ಕಾರ್ಯಾಚರಣೆಯ ಶೇ.0.3 ರಷ್ಟು ಒಟ್ಟು ಆದಾಯವಾಗಿದೆ. ಈ ತ್ರೈಮಾಸಿಕದಲ್ಲಿ ಲಾಕ್ ಡೌನ್ ಇದ್ದಿದ್ದರಿಂದ ಈ ಪರಿಣಾಮಗಳು ಉಂಟಾಗಿವೆ.

ಭಾರತೀಯ ಆಟೋಮೋಟಿವ್ ಮಾರುಕಟ್ಟೆಯಲ್ಲಿ ರಚನಾತ್ಮಕ ಬದಲಾವಣೆ ಮುಂದುವರಿದಿದೆ. ಬಾಷ್ ಲಿಮಿಟೆಡ್ ಪುನರ್ ರಚನೆ, ಪುನರ್ ಕೌಶಲ್ಯ ಮತ್ತು ಇನ್ನಿತರೆ ರೂಪಾಂತರಿತ ಯೋಜನೆಗಳಿಗೆ ಬಂಡವಾಳ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ. ಹೆಚ್ಚುವರಿಯಾಗಿ 197 ಕೋಟಿ ರೂಪಾಯಿಗಳ ಅವಕಾಶವನ್ನು 2020ರ ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ ಕಲ್ಪಿಸಿದೆ.

ನಿಮ್ಮ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಬದಲಾಯಿಸಬಹುದು - ಇಲ್ಲಿದೆ ಸುಲಭ ವಿಧಾನ.

ಕಾರ್ಯಾಚರಣೆಗಳಿಂದ ಕಳೆದ ಸಾಲಿಗಿಂತ ಒಟ್ಟು ಆದಾಯದಲ್ಲಿ ಶೇ.29.9 ರಷ್ಟು ಕುಸಿತವಾಗಿದೆ. ಇನ್ನು ಒಟ್ಟು ಆದಾಯದ ತೆರಿಗೆಪೂರ್ವ ಲಾಭ(ಪಿಬಿಟಿ) 1636 ಕೋಟಿ ರೂ.ಗಳಾಗಿದೆ. 2019-20 ನೇ ಸಾಲಿನಲ್ಲಿ ಒಟ್ಟು ಆದಾಯದ ಪಿಬಿಟಿ ಶೇ.16.6 ರಷ್ಟು ದಾಖಲಾಗಿದೆ.

ಅಸಾಧಾರಣವಾದ ಉತ್ಪನ್ನದಿಂದ ತೆರಿಗೆ ಪೂರ್ವ ನಷ್ಟ(ಪಿಬಿಟಿ) 200 ಕೋಟಿ ರೂಪಾಯಿ ಮತ್ತು ತೆರಿಗೆ ನಂತರದ ನಷ್ಟವು (ಪಿಎಟಿ) 120 ಕೋಟಿ ರೂಪಾಯಿಗಳಾಗಿದೆ. ಇನ್ನು ಅಸಾಧಾರಣ ಉತ್ಪನ್ನಗಳು ಕಾರ್ಯಾಚರಣೆಗಳ ಒಟ್ಟು ಆದಾಯ ಶೇ.2.7 ರಷ್ಟು ಪಿಎಟಿಯನ್ನು ದಾಖಲಿಸಿದೆ.

ನಿರೀಕ್ಷೆಯಂತೆ 2020-21 ನೇ ಹಣಕಾಸು ಸಾಲು ಸವಾಲುಗಳಿಂದ ಆರಂಭವಾಗಿದೆ. ಪ್ರಸಕ್ತ ಹಣಕಾಸು ಸಾಲಿನಲ್ಲಿ ಜಿಡಿಪಿಯು ಮೈನಸ್ ಶೇ.4 ಮತ್ತು ಶೇ.6 ರಷ್ಟು ಆಗಲಿದೆ ಎಂಬ ನಿರೀಕ್ಷೆಯೊಂದಿಗೆ ಭಾರತೀಯ ಆರ್ಥಿಕತೆಯ ಕುಗ್ಗುತ್ತಿರುವುದನ್ನು ಕಾಣುತ್ತಿದ್ದೇವೆ. ಹಲವಾರು ರಾಜ್ಯಗಳಲ್ಲಿ ಹಲವು ಬಾರಿ ಲಾಕ್ ಡೌನ್ ಏರಿಕೆ ಆಗಿದ್ದರಿಂದ ಪೂರೈಕೆ ಚೈನ್ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮುಂದಿನ ವರ್ಷಗಳಲ್ಲಿಯೂ ಈ ಪರಿಣಾಮ ಮುಂದುವರಿಯಲಿದೆ ಎಂದು ಭಾವಿಸಲಾಗಿದೆ. ನಮ್ಮ ಸಹಕರ್ಮಿಗಳನ್ನು ಹಿತರಕ್ಷಣೆಗೆ ಆದ್ಯತೆ ನೀಡುವ ಮೂಲಕ ನಮ್ಮ ವ್ಯವಹಾರ ಪರಿಸ್ಥಿತಿಯನ್ನು ಸುಧಾರಣೆ ಮಾಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಭವಿಷ್ಯದಲ್ಲಿ ಬಾಷ್ ಲಿಮಿಟೆಡ್ ಮತ್ತಷ್ಟು ಬಲಯುತ ಕಂಪನಿಯಾಗುವಂತೆ ಮಾಡುವ ನಿಟ್ಟಿನಲ್ಲಿ ಸುಧಾರಣೆ ತರಲು ಎಲ್ಲಾ ರೀತಿಯ ಕ್ರಮಗಳನ್ನು ಮುಂದುವರಿಸುತ್ತೇವೆ ಎಂದು ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಹೇಳಿದರು.

``ಮುಂದಿನ ತ್ರೈಮಾಸಿಕಗಳಲ್ಲಿ ನಮ್ಮ ಆದ್ಯತೆ ಕೃಷಿ ಕ್ಷೇತ್ರದ ಮೇಲಿರುತ್ತದೆ. ವಿಶೇಷವಾಗಿ ಟ್ರ್ಯಾಕ್ಟರ್ ಬೇಡಿಕೆಗಳ ಮೇಲಿರುತ್ತದೆ. ಆದಾಗ್ಯೂ, ಒಟ್ಟಾರೆ ಆಟೋ ಕ್ಷೇತ್ರವು  2018-19 ನೇ ಸಾಲಿನ ಪರಿಸ್ಥಿತಿಗೆ ಮರಳಬೇಕಾದರೆ ಕನಿಷ್ಠ ನಾಲ್ಕರಿಂದ ಐದು ವರ್ಷಗಳು ಬೇಕಾಗುತ್ತದೆ’’ ಎಂದು ಹೇಳಿದರು.

ಮೊದಲ ತ್ರೈಮಾಸಿಕದ ಸಾಧನೆಯ ಪಕ್ಷಿನೋಟ
ಆಟೋಮೋಟಿವ್ ಉದ್ಯಮದಲ್ಲಿನ ಹಿನ್ನಡೆ ಮತ್ತು ಕೋವಿಡ್-19 ಹಿನ್ನೆಲೆಯಲ್ಲಿ ಬಾಷ್ ಲಿಮಿಟೆಡ್ ನ ಮಾರಾಟಗಳ ಮೇಲೆ ಪರಿಣಾಮ ಉಂಟಾಗಿದೆ. ಇದರಿಂದಾಗಿ 2020-21 ನೇ ಸಾಲಿನ ಮೊದಲ ತ್ರೈಮಾಸಿಕದ ಮಾರಾಟದಲ್ಲಿ ಶೇ.68.2 ರಷ್ಟು ಕುಸಿತ ಕಂಡುಬಂದಿದೆ. ಪವರ್ ಟ್ರೇನ್ ಸಲೂಶನ್ಸ್ ನಲ್ಲಿ ಶೇ.78.3 ರಷ್ಟು ಕುಸಿತ ಕಂಡು ಬಂದಿದೆ. ಆದಾಗ್ಯೂ, ದ್ವಿಚಕ್ರ ಮತ್ತು ಪವರ್ ಸ್ಪೋರ್ಟ್ಸ್ ಉತ್ಪನ್ನಗಳ ವಿಭಾಗದಲ್ಲಿ ಎರಡಂಕಿಯ ಬೆಳವಣಿಗೆ ಕಂಡುಬಂದಿದೆ. ಮೊಬಿಲಿಟಿ ಸಲೂಶನ್ಸ್ ವ್ಯವಹಾರದ ಕ್ಷೇತ್ರದ ಹೊರತಾಗಿ ವ್ಯವಹಾರದಲ್ಲಿ ಶೇ.59.9 ರಷ್ಟು ಕುಸಿತ ಕಂಡುಬಂದಿದೆ. 2020 ರ ಜೂನ್ ನಲ್ಲಿ ದೇಶಾದ್ಯಂತ ಲಾಕ್ ಡೌನ್ ನಿರ್ಬಂಧಗಳನ್ನು ಸರಳೀಕರಣಗೊಳಿಸಿದ ನಂತರ ಕಂಪನಿಯ ಮಾರಾಟದಲ್ಲಿ ಚೇತರಿಕೆ ಕಂಡುಬಂದಿದೆ.

ಕಂಪನಿಯನ್ನು ಭವಿಷ್ಯಕ್ಕೆ ಹೊಂದುವಂತೆ ಮಾಡಲು 3R ವಿಧಾನಗಳ ಬಳಕೆ
ಸವಾಲಿನ ಪರಿಸ್ಥಿತಿಗಳಿಂದಾಗಿ ಎದುರಾಗುವ ಹೊರೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಬಾಷ್ ಸಂಪನ್ಮೂಲಗಳು ಮತ್ತು ವೆಚ್ಚವನ್ನು ನಿರ್ವಹಣೆ ಮಾಡುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಚುರುಕುತನವು ಮತ್ತು ಕಾರ್ಯಾಚರಣೆಯ ದಕ್ಷತೆಯು ಅದರ ಪ್ರಮುಖವಾದ ವ್ಯವಹಾರಗಳನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಲಿಕ್ವಿಡಿಟಿಯನ್ನು ಸಂರಕ್ಷಿಸಿಕೊಳ್ಳಲು ಉತ್ಪಾದನಾ ಸಾಮರ್ಥ್ಯ ಮತ್ತು ವೆಚ್ಚದ ರಚನೆಗಳನ್ನು ಹೊಂದಿಸಿಕೊಳ್ಳಲು ಪೂರಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಇದೇ ಸಮಯದಲ್ಲಿ ಕಂಪನಿಯು ಎಲೆಕ್ಟ್ರಿಕ್ ಆಧಾರಿತ ವಾಹನಗಳತ್ತ ಗಮನವನ್ನು ಹರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದು 2018-19 ಕ್ಕೆ ಹೋಲಿಕೆ ಮಾಡಿದರೆ ನೇರ ಮಾನವ ಶಕ್ತಿಯ ಬೇಡಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಸಂಸ್ಥೆಯನ್ನು ಸೂಕ್ತ ರೀತಿಯಲ್ಲಿ ಸಂಘಟನೆ ಮಾಡುವುದು ಈಗಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು 3ಆರ್ ವಿಧಾನಗಳಾದ ರೀಸ್ಟ್ರಕ್ಚರ್(ಪುನರ್ ರಚನೆ), ರೀಸ್ಕಿಲ್(ಪುನರ್ ಕೌಶಲ್ಯ) ಮತ್ತು ರೀಡೆಪ್ಲಾಯ್ (ಪುನರ್ ನಿಯೋಜನೆ)ಯತ್ತ ಗಮನಹರಿಸಿದೆ. ಇದಕ್ಕಾಗಿ ಕಂಪನಿಯು 750 ಕೋಟಿ ರೂಪಾಯಿಗಳ ಹೂಡಿಕೆ ಮಾಡಿದೆ.

ಕಠಿಣ ಪರಿಸ್ಥಿತಿಯಲ್ಲೂ ಕಾರ್ಬನ್ ಅನ್ನು ತಟಸ್ಥ ಮಾಡುವ ಬದ್ಧತೆ
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿರುವ ತನ್ನ ಘಟಕಗಳಲ್ಲಿ ಸೋಲಾರ್ ವಿದ್ಯತ್ ಬಳಕೆಗಾಗಿ ಬಾಷ್ ಲಿಮಿಟೆಡ್ ಎಎಂಪಿ ಸೋಲಾರ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಹಿಂದೂಜಾ ರೀನ್ಯೂವೇಬಲ್ಸ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆಯಾ ರಾಜ್ಯಗಳಲ್ಲಿರುವ ನಿಯಮಾನುಸಾರ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತಿದೆ. ಬಾಷ್ ಈ ವಿದ್ಯುತ್ ಯೋಜನೆಗಳಿಂದ ಕಡಿಮೆ ಪಾಲುದಾರಿಕೆಯನ್ನು ಹೊಂದಿದೆ. ಈ ಒಪ್ಪಂದದಿಂದಾಗಿ ಬಾಷ್ ಇಂಡಿಯಾ ಹಸಿರು ಇಂಧನವನ್ನು ಹೆಚ್ಚು ಖರೀದಿ ಮಾಡಲು ಸಹಕಾರಿಯಾಗಲಿದೆ. ಈ ಮೂಲಕ ಬಾಷ್ ನ ಕಾರ್ಬನ್ ತಟಸ್ಥತೆಯ ಬದ್ಧತೆಗೆ ಬೆಂಬಲ ದೊರೆತಂತಾಗುತ್ತದೆ.

Follow Us:
Download App:
  • android
  • ios