ನವದೆಹಲಿ(ಡಿ.20): ಯಾವುದೇ ಆತಂಕವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡು ಹೂಡಿಕೆ ಮಾಡುವಂತೆ ಭಾರತೀಯ ಉದ್ಯಮ ವಲಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರ ಹೂಡಿಕೆಗೆ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಜಿಡಿಪಿ ಪ್ರಗತಿಯಲ್ಲಿ ಮಹಾ ಕುಸಿತ: 7 ವರ್ಷಗಳಲ್ಲಿ ಕನಿಷ್ಟ!

ಅಸೋಚಾಮ್'ನ ವಾರ್ಷಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಆರ್ಥಿಕತೆ ಸುಧಾರಣೆಗೆ ಸರ್ಕಾರ ಪರಿಶ್ರಮದಿಂದ ಕೆಲಸ ಮಾಡಿದೆ. ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್‌ಗೆ ಏರಿಸುವುದು ನಮ್ಮ ಸದ್ಯದ ಗುರಿಯಾಗಿದ್ದು, ಸರ್ಕಾರ ಯಾವುದೇ ಸವಾಲುಗಳನ್ನು ಸ್ವೀಕರಿಸಲು ಹೆದರುವುದಿಲ್ಲ ಎಂದು ಹೇಳಿದರು.

ಆರ್ಥಿಕ ಹಿಂಜರಿಕೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಸಮರ್ಥವಾಗಿದೆ. ಈಗಾಗಲೇ 5 ಟ್ರಿಲಿಯನ್‌ ಆರ್ಥಿಕತೆಗೆ ಅಡಿಪಾಯ ಹಾಕಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಜಿಡಿಪಿ ವರದಿ ಮುನ್ನವೇ ರೂಪಾಯಿ ಕುಸಿತ: ಎಲ್ಲಿ ತಪ್ಪಿತು ಮೋದಿ ಕಾಗುಣಿತ?

ಕಳೆದ ಮೂರು ವರ್ಷಗಳಿಂದ ಉದ್ಯಮ ಸ್ನೇಹಿ ವಾತಾವರಣದ ಶ್ರೇಯಾಂಕದಲ್ಲಿ ಭಾರತ ಸುಸ್ಥಿರ ಸುಧಾರಣೆ ಸಾಧಿಸಿದೆ. ಶ್ರಮದಿಂದ ಕೆಲಸ ಮಾಡಿದರೆ ಶ್ರೇಯಾಂಕದಲ್ಲಿ ಮೇಲಕ್ಕೇರಬಹುದು ಎಂಬುದು ಇದರಿಂದ ಸಿದ್ಧವಾಗುತ್ತದೆ ಎಂದು ಪ್ರಧಾನಿ ನುಡಿದರು.

ಭಾರತೀಯ ಅಸೋಸಿಯೇಟೆಡ್ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ(ಅಸೋಚಾಮ್)ಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, ಸ್ಮರಣಿಕೆಯ ಅಂಚೆ ಚೀಟಿಯನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್‌ಬಿಐ ಗವರ್ನರ್ ಗುಹೆ!

ಡಿಸೆಂಬರ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ