ಭಾರತ ಸೆಮಿಕಂಡಕ್ಟರ್‌ನ ‘ಕಂಡಕ್ಟರ್‌’; ಚಿಪ್ ಉತ್ಪಾದನಾ ಘಟಕ ಸ್ಥಾಪಿಸಿದರೆ ಶೇ.50 ಸಹಾಯಧನ: ಮೋದಿ ಘೋಷಣೆ

ಭಾರತವು ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್‌ನ ಅತಿದೊಡ್ಡ ಕಂಡಕ್ಟರ್‌ ಆಗಲಿದೆ. ಅಂದರೆ ಈ ವಲಯದ ಅತಿದೊಡ್ಡ ಉತ್ಪಾದಕ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

pm modi s mega 50 percent offer for firms to set up semiconductor manufacturing ash

ಗಾಂಧಿನಗರ (ಜುಲೈ 29, 2023): ‘ಭಾರತ ‘ಸೆಮಿಕಂಡಕ್ಟರ್‌’ ವಲಯದ ‘ಕಂಡಕ್ಟರ್‌’ ಆಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಸೆಮಿಕಂಡಕ್ಟರ್‌ ಉತ್ಪಾದನಾ ಘಟಕ ಸ್ಥಾಪಿಸುವವರಿಗೆ ಶೇ.50ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ ಎಂದು ಘೋಷಿಸಿದ್ದಾರೆ.

3 ದಿನಗಳ ಸೆಮಿಕಾನ್‌-2023 ಸಮ್ಮೇಳನಕ್ಕೆ ಶುಕ್ರವಾರ ಇಲ್ಲಿ ಚಾಲನೆ ನೀಡಿದ ಮೋದಿ, ‘ಭಾರತವು ‘ಸೆಮಿಕಂಡಕ್ಟರ್‌’ ವಲಯದ ‘ಕಂಡಕ್ಟರ್‌’ ರೀತಿ ಕೆಲಸ ಮಾಡುತ್ತಿದೆ. ಕಂಡಕ್ಟರ್‌ ಯಾವ ರೀತಿ ಟಿಕೆಟ್‌ನಲ್ಲಿರುವ ಬಾಕ್ಸ್‌ಗಳಿಗೆ (ನಿರ್ದಿಷ್ಟ ಪ್ರಯಾಣ ಸ್ಥಳದ ಸ್ಟೇಜ್‌ಗೆ) ಪೆನ್ನಿನಿಂದ ರಂಧ್ರ ಮಾಡುತ್ತಾನೋ ಆ ರೀತಿ ಭಾರತ ಕೂಡ ಸರಿಯಾದ ಹೆಜ್ಜೆಯನ್ನೇ ಇರಿಸಿದೆ. ಭಾರತವು ಮುಂಬರುವ ದಿನಗಳಲ್ಲಿ ಸೆಮಿಕಂಡಕ್ಟರ್‌ನ ಅತಿದೊಡ್ಡ ಕಂಡಕ್ಟರ್‌ ಆಗಲಿದೆ. ಅಂದರೆ ಈ ವಲಯದ ಅತಿದೊಡ್ಡ ಉತ್ಪಾದಕ ಆಗಲಿದೆ’ ಎಂದು ಹೇಳಿದರು.

ಇದನ್ನು ಓದಿ: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಅವರ ಆಧಾರ್‌ ಕಾರ್ಡ್‌ಗಳನ್ನೇ ತಿರುಚಿ ದುರುಪಯೋಗ ಮಾಡ್ಕೊಂಡ ಭೂಪ!

ಸೆಮಿಕಂಡಕ್ಟರ್‌ ವಲಯದಲ್ಲಿ ಹೂಡಿಕೆ ಮಾಡಿ ದೇಶದಲ್ಲಿ ಉತ್ಪಾದನಾ ಘಟಕ ಆರಂಭಿಸಲಿರುವ ಕಂಪನಿಗಳಿಗೆ ಕೇಂದ್ರ ಸರ್ಕಾರ ಶೇ.50 ರಷ್ಟು ಸಹಾಯಧನ ನೀಡಲಿದೆ. 1 ವರ್ಷದ ಹಿಂದೆ ದೇಶದಲ್ಲಿ ಸೆಮಿ ಕಂಡಕ್ಟರ್‌ ಉದ್ಯಮದಲ್ಲಿ ಏಕೆ ಹೂಡಿಕೆ ಮಾಡಬೇಕು ಎಂದು ಜನ ಕೇಳುತ್ತಿದ್ದರು. ಆದರೆ ಈಗ ಏಕೆ ಹೂಡಿಕೆ ಮಾಡಿಲ್ಲ ಎಂದು ಕೇಳುತ್ತಿದ್ದಾರೆ. ಭಾರತದಲ್ಲಿ ಈಗ 4ನೇ ಔದ್ಯೋಗಿಕ ಕ್ರಾಂತಿ ಆಗುತ್ತಿದ್ದು, ಜನರ ಆಶೋತ್ತರಗಳನ್ನು ಈಡೇರಿಸುವತ್ತ ಹೆಜ್ಜೆ ಇರಿಸಲಾಗುತ್ತಿದೆ’ ಎಂದರು.

‘ಸೆಮಿ ಕಂಡಕ್ಟರ್‌ ಕುರಿತ ಶಿಕ್ಷಣಕ್ಕೂ ಆದ್ಯತೆ ನೀಡಲಾಗುತ್ತಿದ್ದು, 300 ಕಾಲೇಜುಗಳಲ್ಲಿ ಸೆಮಿಕಂಡಕ್ಟರ್‌ ಡಿಸೈನ್‌ ಕೋರ್ಸ್‌ ಆರಂಭಿಸಲು ತೀರ್ಮಾನಿಸಲಾಗಿದೆ’ ಎಂದರು,

ಇದನ್ನೂ ಓದಿ: ರಾಜಸ್ಥಾನದಲ್ಲಿ ರೆಡ್‌ ಡೈರಿ ಪ್ರಸ್ತಾಪಿಸಿದ ಮೋದಿ: ಕಾಂಗ್ರೆಸ್‌ನದು ಲೂಟಿ ಮತ್ತು ಸುಳ್ಳಿನ ಅಂಗಡಿ ಎಂದು ಪ್ರಧಾನಿ ವ್ಯಂಗ್ಯ

ಏನಿದು ಸೆಮಿಕಂಡಕ್ಟರ್‌?:
ಸೆಮಿಕಂಡಕ್ಟರ್‌ಗಳು (ಚಿಪ್‌ಗಳು) ಮೊಬೈಲ್‌, ಟೀವಿ, ಫ್ರಿಜ್‌, ಕಂಪ್ಯೂಟರ್‌, ವಾಷಿಂಗ್‌ ಮಶಿನ್‌, ಕಾರು ಹಾಗೂ ಇತರ ವಾಹನಗಳಲ್ಲಿ ಬಳಕೆ ಆಗುತ್ತವೆ. ಚಿಪ್‌ಗಳೇ ಈ ಯಂತ್ರಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. 

ಚೀನಾ ಈ ಮುನ್ನ ಸೆಮಿಕಂಡಕ್ಟರ್‌ ಉತ್ಪಾದನಾ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿತ್ತು ಹಾಗೂ ಭಾರತವು ಚೀನಾ ಮೇಲೆ ಹೆಚ್ಚು ಅವಲಂಬಿಸಿತ್ತು. ಭಾರತ-ಚೀನಾ ಸಂಘರ್ಷ ಹಾಗೂ ಕೋವಿಡ್‌ ನಂತರದ ಕಾಲದಲ್ಲಿ ಭಾರತವು ‘ಆತ್ಮನಿರ್ಭರ’ ಘೋಷಣೆಯೊಂದಿಗೆ ಸೆಮಿಕಂಡಕ್ಟರ್‌ ವಲಯದಲ್ಲಿ ಸ್ವಾವಲಂಬಿ ಅಗಬೇಕು ಎಂಬ ಉದ್ದೇಶ ಇರಿಸಿಕೊಂಡಿದೆ. ಹೀಗಾಗಿ ಈ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನಕ್ಕೆ ಉತ್ತೇಜನ ನೀಡುತ್ತಿದೆ.

 

ಇದನ್ನೂ ಓದಿ: ಆಕ್ಸಿಜನ್‌ ಮಾಸ್ಕ್‌ ಧರಿಸಿದ್ದ ಸೋನಿಯಾ ಗಾಂಧಿ: ಕಾಂಗ್ರೆಸ್‌ ನಾಯಕಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

Latest Videos
Follow Us:
Download App:
  • android
  • ios