ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರ ಆಧಾರ್ ಕಾರ್ಡ್‌ಗಳನ್ನೇ ತಿರುಚಿ ದುರುಪಯೋಗ ಮಾಡ್ಕೊಂಡ ಭೂಪ!
ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್‌ಗಳನ್ನು ತಿರುಚುವ ಪ್ರಯತ್ನಗಳು ನಡೆದಿವೆ ಎಂಬ ಮಾಹಿತಿ ಗುಜರಾತ್ ಪೊಲೀಸರಿಗೆ ದೊರೆತಿದೆ. ಬಳಿಕ, ಆರೋಪಿಯ ಐಪಿ ವಿಳಾಸವನ್ನು ಪತ್ತೆಹಚ್ಚಿದ ನಂತರ ಸ್ಥಳೀಯ ಪೊಲೀಸರ ನೆರವು ಪಡೆದುಕೊಂಡು ಗುಜರಾತ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮುಜಾಫರ್‌ಪುರ (ಜುಲೈ 27, 2023): ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಧಾರ್ ಕಾರ್ಡ್‌ಗಳನ್ನು ತಿರುಚಿದ ಆರೋಪದ ಮೇಲೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಗುಜರಾತ್ ಪೊಲೀಸರ ತಂಡ ಬುಧವಾರ ಬಂಧಿಸಿದೆ. ಜಿಲ್ಲೆಯ ಸಾದತ್‌ಪುರ ಪ್ರದೇಶದಲ್ಲಿ ಅರ್ಪಣಾ ದುಬೆ ಅಲಿಯಾಸ್ ಮದನ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಮುಜಾಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
"ಆರೋಪಿಯು ಜಿಲ್ಲೆಯ ಗರೀಬಾ ಗಾಂವ್ ಗ್ರಾಮದವನಾಗಿದ್ದಾನೆ. ಆತ ಕಾಂತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್‌ಪುರ ಪ್ರದೇಶದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ" ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್‌ಗಳನ್ನು ತಿರುಚುವ ಪ್ರಯತ್ನಗಳು ನಡೆದಿವೆ ಎಂಬ ಮಾಹಿತಿ ಗುಜರಾತ್ ಪೊಲೀಸರಿಗೆ ದೊರೆತಿದೆ. ಬಳಿಕ, ಆರೋಪಿಯ ಐಪಿ ವಿಳಾಸವನ್ನು ಪತ್ತೆಹಚ್ಚಿದ ನಂತರ ಸ್ಥಳೀಯ ಪೊಲೀಸರ ನೆರವು ಪಡೆದುಕೊಂಡು ಗುಜರಾತ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನು ಓದಿ: ಹೆದ್ದಾರಿಯಲ್ಲಿ ಸಿಕ್ಕ ಸಿಕ್ಕ ಕಾರುಗಳ ಮೇಲೆ ಶೂಟ್ ಮಾಡಿದ ಬೆತ್ತಲೆ ಮಹಿಳೆ: ವಿಡಿಯೋ ವೈರಲ್
ಈ ಆರೋಪಿಯು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಇಬ್ಬರು ನಾಯಕರ ಜನ್ಮ ದಿನಾಂಕಗಳನ್ನು ಬದಲಾಯಿಸಿದ್ದಾರೆ ಮತ್ತು ಇತರ ವಿಷಯಗಳ ಜೊತೆಗೆ ಆಧಾರ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಆರೋಪಿ ತಿದ್ದಿದ ಆಧಾರ್ ಕಾರ್ಡ್‌ಗಳನ್ನು ಟ್ಯಾಂಪರಿಂಗ್ ಮಾಡಿದ ನಂತರ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ ಎಂದೂ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಬಳಿಕ ಗುಜರಾತ್‌ನ ಪೊಲೀಸ್ ತಂಡವು ಮುಂದಿನ ತನಿಖೆ ಮತ್ತು ಕ್ರಮಕ್ಕಾಗಿ ದುಬೆಯನ್ನು ಕರೆದುಕೊಂಡು ಹೋಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ: ಮಹಿಳೆಗೆ ಮತ್ತು ಬರಿಸಿ ಗ್ಯಾಂಗ್‌ರೇಪ್; ಕೃತ್ಯ ಸೆರೆ ಹಿಡಿದ ಪಾಪಿಗಳು
ಪ್ರಧಾನಿ ಮೋದಿ ನಿವಾಸದ ಮೇಲೆ ಹಾರಾಡಿದ್ದ ಡ್ರೋನ್
ರಾಷ್ಟ್ರ ರಾಜಧಾನಿಯ ಪ್ರಧಾನಿ ಅಧಿಕೃತ ನಿವಾಸದ ಬಳಿ ಡ್ರೋನ್ ಹಾರಾಡಿದೆ. ಪ್ರಧಾನಿ ನಿವಾಸದ ಬಳಿ ನೋ ಫ್ಲೈಯಿಂಗ್ ಝೋನ್ ಇದ್ದರೂ ಡ್ರೋನ್ ಹಾರಾಡಿರೋದು ಆತಂಕ ಮೂಡಿಸಿದ್ದು, ಈ ಹಿನ್ನೆಲೆ ಎಸ್‌ಪಿಜಿ ಕೂಡಲೇ ಅಲರ್ಟ್ ಆಗಿದೆ. ನವದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ನಿವಾಸದ ಬಳಿ ಡ್ರೋನ್ ಹಾರಾಟ ನಡೆಸಿದ್ದು, ಈ ಹಿನ್ನೆಲೆ ಇದನ್ನು ಕಂಡ ಪ್ರಧಾನಿಗಳ ವಿಶೇಷ ಭದ್ರತಾ ಪಡೆಯಾದ ಎಸ್‌ಪಿಜಿ ಕೂಡಲೇ ಅಲರ್ಟ್ ಆಗಿದೆ.
ಪ್ರಧಾನಿ ಮೋದಿ ಅವರ ನಿವಾಸವು ರೆಡ್ ನೋ ಫ್ಲೈ ಝೋನ್ ಅಥವಾ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ನೋ ಫ್ಲೈಯಿಂಗ್ ಝೋನ್‌ನಲ್ಲಿ ಬೆಳಗ್ಗೆ 5 - 5:30ರ ಸಮಯದಲ್ಲಿ ಡ್ರೋನ್ ಹಾರಾಟ ನಡೆಸಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: Manipur: ಬಿಎಸ್‌ಎಫ್ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ