ಆಕ್ಸಿಜನ್ ಮಾಸ್ಕ್ ಧರಿಸಿದ್ದ ಸೋನಿಯಾ ಗಾಂಧಿ: ಕಾಂಗ್ರೆಸ್ ನಾಯಕಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಾಡಿಕೆಯಂತೆ ಪ್ರಧಾನಿ ಮೋದಿ ಎಲ್ಲ ನಾಯಕರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ಶುಭಾಶಯ ಕೋರಿದರು.ಸೋನಿಯಾರನ್ನು ಸಹ ಮೋದಿ ಭೇಟಿಯಾಗಿ ಕೆಲ ಕಾಲ ಮಾತನಾಡಿದರು. ಈ ವೇಳೆ ಸೋನಿಯಾ ಅವರು ಮಣಿಪುರದ ಕುರಿತು ಚರ್ಚಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ (ಜುಲೈ 21, 2023): ಪ್ರಧಾನಿ ನರೇಂದ್ರ ಮೋದಿ ಗುರುವಾರ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರ ಆರೋಗ್ಯ ಕೂಡ ವಿಚಾರಿಸಿದರು. ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಾಡಿಕೆಯಂತೆ ಪ್ರಧಾನಿ ಮೋದಿ ಎಲ್ಲ ನಾಯಕರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ಶುಭಾಶಯ ಕೋರಿದರು. ಈ ವೇಳೆ ಸೋನಿಯಾರನ್ನು ಮೋದಿ ಭೇಟಿಯಾಗಿ ಕೆಲ ಕಾಲ ಮಾತನಾಡಿದರು.
ಈ ವೇಳೆ ಸೋನಿಯಾ ಅವರು ಮಣಿಪುರದ ಕುರಿತು ಚರ್ಚಿಸುವಂತೆ ಒತ್ತಾಯಿಸಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಂಜನ್ ಚೌಧರಿ ತಿಳಿಸಿದರು. ಮಣಿಪುರದ ಉದ್ವಿಗ್ನ ಸ್ಥಿತಿಯ ಬಗ್ಗೆ ಸದನದಲ್ಲಿ ಚರ್ಚಿಸುವಂತೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಮಣಿಪುರ ಸ್ತ್ರೀಯರ ನಗ್ನ ಪರೇಡ್: ದೇಶಾದ್ಯಂತ ದಿಗ್ಭ್ರಮೆ, ಆಕ್ರೋಶ;ಮಣಿಪುರದಲ್ಲಿ ಭುಗಿಲೆದ್ದ ಪ್ರತಿಭಟನೆ
ಸೋನಿಯಾ, ರಾಹುಲ್ ಇದ್ದ ವಿಮಾನ ತುರ್ತು ಭೂಸ್ಪರ್ಶ
ಭೋಪಾಲ್: ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗಿಯಾಗಿ ಮರಳುತ್ತಿದ್ದ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇದ್ದ ವಿಮಾನ ಪ್ರತಿಕೂಲ ಹವಾಮಾನದ ಹಿನ್ನೆಲೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳವಾರ ನಡೆದಿದೆ. ಈ ವೇಳೆ ಸೋನಿಯಾ ಹಾಗೂ ರಾಹುಲ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಮೂಲಗಳು ತಿಳಿಸಿವೆ. ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಚಾಲನೆ ಅಸಾಧ್ಯವಾದ ಕಾರಣಕ್ಕೆ ತುರ್ತು ಭೂಸ್ಪರ್ಶ ಮಾಡಲಾಗಿದೆ ಎನ್ನಲಾಗಿದೆ.
ಬಳಿಕ ರಾತ್ರಿ 9.30ರ ವೇಳೆಗೆ ಹವಾಮಾನ ಸ್ಥಿತಿ ಸುಧಾರಿಸಿತು ಹಾಗೂ ವಿಮಾನ ದಿಲ್ಲಿಯತ್ತ ಹೊರಟಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ, ತುರ್ತು ಭೂಸ್ಪರ್ಶದ ಸುದ್ದಿ ಅರಿತ ಭೋಪಾಲ್ ಕಾಂಗ್ರೆಸ್ಸಿಗರು ಏರ್‌ಪೋರ್ಟ್‌ಗೆ ಆಗಮಿಸಿ ಸೋನಿಯಾ ಹಾಗೂ ರಾಹುಲ್ ಅವರ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ಪೆಂಟಗನ್ ಮೀರಿಸಿದ ಸೂರತ್ ಕಚೇರಿ ಸಂಕೀರ್ಣ; ಅರ್ಥಿಕತೆ, ಉದ್ಯೋಗವಕಾಶಕ್ಕೆ ಉತ್ತೇಜನ: ಪ್ರಧಾನಿ ಮೋದಿ ಮೆಚ್ಚುಗೆ
ವಿಮಾನದಲ್ಲಿ ಆಕ್ಸಿಜನ್ ಮಾಸ್ಕಲ್ಲಿ ಸೋನಿಯಾ: ‘ಒತ್ತಡದಲ್ಲಿ ಕರುಣಾಮೂರ್ತಿ’ ಎಂದು ರಾಗಾ ಪೋಸ್ಟ್
ನವದೆಹಲಿ: ಬೆಂಗಳೂರಿನಿಂದ ದೆಹಲಿಗೆ ತೆರಳುವ ವೇಳೆ ಭೋಪಾಲದಲ್ಲಿ ತಮ್ಮ ಖಾಸಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರು ಆಕ್ಸಿಜನ್ ಮಾಸ್ಕ್ ಧರಿಸಿದ್ದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ‘ಅಮ್ಮ, ಕಾರುಣ್ಯದ ಪ್ರತಿರೂಪ ಒತ್ತಡದಲ್ಲಿ’ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಇದು ತುರ್ತು ಭೂಸ್ಪರ್ಶ ಮಾಡಿದ ವಿಮಾನದಲ್ಲಿನ ಫೋಟೋವೇ ಅಥವಾ ಬಳಿಕ ಅವರು ದೆಹಲಿಗೆ ತೆರಳಿದ ಬೇರೆ ವಿಮಾನದೊಳಗಿನ ಫೋಟೋವೇ ಎಂಬುದು ತಿಳಿದುಬಂದಿಲ್ಲ. ಫೋಟೋದಲ್ಲಿ ಸೋನಿಯಾ ಆಕ್ಸಿಜನ್ ಮಾಸ್ಕ್ ಧರಿಸಿ ಗಂಭೀರವಾಗಿ ಕುಳಿತಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರವೇ ಅವರ ಗ್ಯಾರಂಟಿ: ಕುಟುಂಬವೇ ಮೊದಲು, ದೇಶ ಲೆಕ್ಕಕ್ಕಿಲ್ಲ; ವಿಪಕ್ಷ ಸಭೆಗೆ ಮೋದಿ ಕೆಂಡಾಮಂಡಲ