Savings Tips: ಈ ಯೋಜನೆಗೆ ಸೇರ್ಪಡೆಯಾದ್ರೆ ರೈತರಿಗೆ ಸಿಗುತ್ತೆ ತಿಂಗಳಿಗೆ 3000ರೂ. ಪಿಂಚಣಿ

Pradhan Mantri Kisan Mandhan Yojana: ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಮನ್ ಧನ್ ಯೋಜನೆಯನ್ನು ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ರೂಪಿಸಲಾಗಿದೆ. ರೈತರು ಈ ಯೋಜನೆಗೆ ನೊಂದಣಿಯಾದ್ರೆ 60 ವರ್ಷವಾದ ಬಳಿಕ ತಿಂಗಳಿಗೆ ಸರ್ಕಾರದಿಂದ 3,000ರೂ. ಪಿಂಚಣಿ ಪಡೆಯಲು ಆರ್ಹರಾಗುತ್ತಾರೆ. 
 

PM Kisan Mandhan Yojana 2022 How to register and get Rs 3000 per month

Business Desk: ಕೇಂದ್ರ ಸರ್ಕಾರ ಸಮಾಜದ ವಿವಿಧ ವರ್ಗದ ಜನರಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರಲ್ಲೂ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಅನೇಕ ಪಿಂಚಣಿ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಅವುಗಳಲ್ಲಿ ಪಿಎಂ ಕಿಸಾನ್ ಮನ್ ಧನ್ ಯೋಜನೆ ಕೂಡ ಒಂದು. ಇದು ಕೇಂದ್ರ ಸರ್ಕಾರ ಸಣ್ಣ ಹಾಗೂ ಮಧ್ಯಮ ರೈತರಿಗೆ ವೃದ್ಧಾಪ್ಯದಲ್ಲಿ ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆ ಒದಗಿಸಲು ರೂಪಿಸಿರುವ ಪಿಂಚಣಿ ಯೋಜನೆಯಾಗಿದೆ. 18-40 ವರ್ಷ ವಯಸ್ಸಿನ ರೈತರು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ತಮ್ಮ ವಯಸ್ಸಿಗೆ ಅನುಗುಣವಾಗಿ ಅವರು ಸರ್ಕಾರದ ಖಾತೆಯಲ್ಲಿ ಪ್ರತಿ ತಿಂಗಳು 55ರೂ.ನಿಂದ 200ರೂ. ತನಕ ಠೇವಣಿಯಿಡಬಹುದಾಗಿದೆ. ಈ ಯೋಜನೆಗೆ ರೈತ ತನಗೆ 60 ವರ್ಷ ವಯಸ್ಸಾಗುವ ತನಕ ಕಂತುಗಳನ್ನು ತುಂಬಬೇಕು. ರೈತನಿಗೆ 60 ವರ್ಷವಾದ ಬಳಿಕ ಈ ಯೋಜನೆ ಅದರಷ್ಟಕ್ಕೆ ನಿಲುಗಡೆಯಾಗುತ್ತದೆ. ಇದಾದ ಬಳಿಕ ಈ ಯೋಜನೆಯಲ್ಲಿ ನೋಂದಣಿಯಾಗಿರುವ ರೈತನಿಗೆ ಸರ್ಕಾರ ಪ್ರತಿ ತಿಂಗಳು  3000ರೂ. ಪಿಂಚಣಿ ನೀಡುತ್ತದೆ.   ಹಾಗಾದ್ರೆ ಈ ಯೋಜನೆಯಲ್ಲಿ ಹೂಡಿಕೆ ಮಾಡೋದು ಹೇಗೆ? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ.

ನೋಂದಣಿ ಹೇಗೆ?
ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ (PM Kisan Mandhan Yojana) ನಿಮ್ಮ ಹೆಸರು ಸೇರ್ಪಡೆಗೊಳಿಸಲು  ಮೊದಲು ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ (PM-KISAN) ನೋಂದಣಿಯಾಗಬೇಕು. ಇದಾದ ಬಳಿಕ ನೀವು ಪಿಎಂ ಕಿಸಾನ್ ಮನ್ ಧನ್ ಯೋಜನೆಗೆ ಸೇರ್ಪಡೆಗೊಳ್ಳಲು ಅರ್ಜಿಯೊಂದನ್ನು ಭರ್ತಿ ಮಾಡಬೇಕು. ಈ ಅರ್ಜಿಯನ್ನು ನೀವು ಭರ್ತಿ ಮಾಡಿದ ತಕ್ಷಣ ನಿಮ್ಮ ಕಂತುಗಳು (Installments) ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಈ ಯೋಜನೆಗೆ ಕಡಿತವಾಗಲು ಪ್ರಾರಂಭವಾಗುತ್ತವೆ. 

ಎಸ್ ಬಿಐ, ಎಚ್ ಡಿಎಫ್ ಸಿ, ಐಸಿಐಸಿಐ, ಆಕ್ಸಿಸ್ ಬ್ಯಾಂಕ್ ಗಳ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಎಷ್ಟಿರಬೇಕು?

ಯಾವೆಲ್ಲ ದಾಖಲೆಗಳು ಬೇಕು?
ಈ ಯೋಜನೆಗೆ ಸಾಮಾನ್ಯ ಸೇವಾ ಕೇಂದ್ರದಲ್ಲಿ ನೋಂದಣಿ (Register) ಮಾಡಿಸಬಹುದು. ಆಧಾರ್ ಕಾರ್ಡ್ ಪ್ರತಿ (Aadhaar card copy), 2 ಫೋಟೋಗಳು (Photos) ಹಾಗೂ ಬ್ಯಾಂಕ್ ಪಾಸ್ ಪುಸ್ತಕ (Bank passbook) ನೋಂದಣಿಗೆ ಅಗತ್ಯ. ಅರ್ಜಿ ಹಾಗೂ ಎಲ್ಲ ಮಾಹಿತಿಗಳನ್ನು ಸಲ್ಲಿಕೆ ಮಾಡಿದ ಬಳಿಕ ರೈತರ ವಿಶಿಷ್ಟ ಪಿಂಚಣಿ ಸಂಖ್ಯೆ (Farmer's Unique pension number) ಹಾಗೂ ಪಿಂಚಣಿ ಕಾರ್ಡ್ (Pension card) ಸೃಷ್ಟಿಯಾಗುತ್ತದೆ. 

ಕಂತುಗಳು ಎಷ್ಟು?
ಈ ಯೋಜನೆಯ ಇನ್ನೊಂದು ಆಸಕ್ತಿಕಾರ ಸಂಗತಿಯೆಂದ್ರೆ ಈ ಯೋಜನೆಯ ಮಾಸಿಕ ಕಂತುಗಳಿಗೆ ನೀವು ನಿಮ್ಮ ದುಡಿಮೆಯ ಹಣ ನೀಡಬೇಕಾಗಿಲ್ಲ. ಬದಲಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಸರ್ಕಾರ ರೈತನಿಗೆ ನೀಡುವ 6 ಸಾವಿರ ರೂ. ನಲ್ಲೇ ಈ ಮೊತ್ತವನ್ನು ಕಡಿತಗೊಳಿಸಿ ಉಳಿದ ಹಣವನ್ನು ನಿಮಗೆ ನೀಡಲಾಗುತ್ತದೆ. 

ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ಮತ್ತೆ ಜಿಗಿದ ಹಣದುಬ್ಬರ; ಆಗಸ್ಟ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019ರಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ಕೃಷಿ ಭೂಮಿ ಹೊಂದಿರೋ ದೇಶದ ಎಲ್ಲ ಭೂ ಹಿಡುವಳಿ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡೋ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳು ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆ ಮುಖಾಂತರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು  6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. 

Latest Videos
Follow Us:
Download App:
  • android
  • ios