Phonepe, Gpay ಮೂಲಕ ಮನೆಯಲ್ಲಿ ಕುಳಿತು ಹಣ ಗಳಿಸಿ; ಇಲ್ಲಿದೆ ಉತ್ತಮ ಮಾರ್ಗ..!
ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ, ಗೂಗಲ್ ಪೇ, ಪೇಟಿಎಂ ನಂತಹ ಆ್ಯಪ್‌ಗಳು ನೀಡುತ್ತಿವೆ. ಆದರೆ ಇವುಗಳ ಮೂಲಕ ನಾವು ಹಣ ಗಳಿಕೆ ಮಾಡಬಹುದು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ. ಈ ಕುರಿತು ಇಲ್ಲಿದೆ ಮಾಹಿತಿ.
ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ (Phonepe) , ಗೂಗಲ್ ಪೇ (Gpay) , ಪೇಟಿಎಂ ನಂತಹ ಆ್ಯಪ್‌ಗಳು ನೀಡುತ್ತಿವೆ. ಆದರೆ ಇವುಗಳ ಮೂಲಕ ನಾವು ಹಣ (Money) ಗಳಿಕೆ ಮಾಡಬಹುದು ಎಂದು ಎಷ್ಟೋ ಜನರಿಗೆ ಗೊತ್ತಿಲ್ಲ. ಈ ಕುರಿತು ಇಲ್ಲಿದೆ ಮಾಹಿತಿ. ಇಂದಿನ ಓಡುತ್ತಿರುವ ಜಗತ್ತಿನಲ್ಲಿ ಡಿಜಿಟಲ್ ಪೇಮೆಂಟ್ (Digital payment) ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಅನೇಕರು ಆನ್ ಲೈನ್ ಪೇಮೆಂಟ್ ಉಪಯೋಗಿಸುತ್ತಿದ್ದಾರೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚಿನ ವ್ಯವಹಾರಗಳು ಆನ್ ಲೈನ್ (Online) ಮೂಲಕವೇ ನಡೆಯುತ್ತಿವೆ. ಈ ಮೂಲಕ ಯುಪಿಐ (UPI) ಆ್ಯಪ್ ಗಳು ಹೆಚ್ಚು ಬಳಕೆಯಾಗುತ್ತಿದೆ. ಭಾರತ (India) ದಲ್ಲಿ ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂ ಪ್ರಸಿದ್ಧ ಯುಪಿಐ ಪಾವತಿ (UPI payment) ಸೇವೆಯಾಗಿದೆ. ಆದರೆ ಇವುಗಳ ಮೂಲಕ ಕೂಡ ನಾವು ಹಣ ಗಳಿಕೆ ಮಾಡಬಹುದು. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಫೋನ್ ಪೇ, ಗೂಗಲ್ ಪೇ ಹಾಗೂ ಪೇಟಿಎಂಗಳು ಬ್ಯಾಂಕಿಂಗ್ ಹಾಗೂ ವಿವಿಧ ರೀತಿಯ ಸಾಲ ಸೌಲಭ್ಯ ಒದಗಿಸುತ್ತವೆ. ಡೆಬಿಟ್ ಕಾರ್ಡ್, ಉಳಿತಾಯ ಮತ್ತು ಚಾಲ್ತಿ ಖಾತೆಗಳು ಹಾಗೂ ವಿಮಾ ಸೌಲಭ್ಯಗಳನ್ನು ಒದಗಿಸುತ್ತವೆ.
ಕ್ಯಾಶ್‌ಬ್ಯಾಕ್‌ನಿಂದ ಹಣ ಗಳಿಕೆ
ಈ ರೀತಿಯ ಯುಪಿಐ ಪಾವತಿ ಸೇವೆಯ ಆಪ್'ಗಳಿಂದ ಕ್ಯಾಶ್‌ಬ್ಯಾಕ್ ಮೂಲಕ ಹಣ ನಾವು ಗಳಿಸಬಹುದು. ಈ ಅಪ್ಲಿಕೇಶನ್‌ಗಳ ಪ್ರತಿಯೊಂದು ವಹಿವಾಟಿನಲ್ಲೂ ಕೆಲವು ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಯಾವುದೇ ರೀತಿಯ ಶಾಪಿಂಗ್ ಮೊಬೈಲ್ ರೀಚಾರ್ಜ್ ಮತ್ತು ಪಾವತಿ ವರ್ಗಾವಣೆಯಲ್ಲೂ ಕ್ಯಾಶ್‌ಬ್ಯಾಕ್ ಲಭ್ಯವಿದೆ. ಈ ಮೂಲಕ ನಾವು ಸಲೀಸಾಗಿ ಹಣ ಗಳಿಕೆ ಮಾಡಬಹುದು.
ದೇಶದ್ರೋಹಿ ನ್ಯೂಸ್‌ಕ್ಲಿಕ್ ಮಾಧ್ಯಮ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ 255 ಗಣ್ಯರ ಪತ್ರ!
ಸ್ವಂತ ಉತ್ಪನ್ನ ಮಾರಾಟದ ಮೂಲಕ ಹಣ ಗಳಿಕೆ
ನಿಮ್ಮ ಬಳಿ ಯಾವುದೇ ರೀತಿಯ ಅಂಗಡಿ ಸಾಮಗ್ರಿಗಳಿದ್ದರೆ, ಅದನ್ನು ಇಲ್ಲಿ ಮಾರಾಟ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದು.
ಮರು ಮಾರಾಟದಿಂದ ಹಣ ಗಳಿಕೆ
ಇಂದು ಮರು ಮಾರಾಟಗಾರರಾಗಿ ಹಣವನ್ನು ಗಳಿಸುವ ಅನೇಕ ಜನರಿದ್ದಾರೆ. ಈ ಕೆಲಸವನ್ನು ಮಾಡಲು ಈ ಅಪ್ಲಿಕೇಶನ್'ಗಳು ನಿಮಗೆ ಅವಕಾಶವನ್ನು ಒದಗಿಸುತ್ತವೆ.
ಆಟಗಳನ್ನು ಆಡುವ ಮೂಲಕ ಹಣವನ್ನು ಹೇಗೆ ಗಳಿಸುವುದು?
ನೀವು Google Pay ಅಪ್ಲಿಕೇಶನ್ ಬಳಸಿಕೊಂಡು ಆಟಗಳನ್ನು ಆಡುವ ಮೂಲಕ ಹಣವನ್ನು ಗಳಿಸಬಹುದು. Google Pay ಅಪ್ಲಿಕೇಶನ್‌ನಲ್ಲಿ, ನೀವು ಲುಡೋ, ರಮ್ಮಿಯಂತಹ ವಿವಿಧ ಆಟದ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು ಮತ್ತು ಗೆಲ್ಲುವ ಮೂಲಕ ಹಣವನ್ನು ಗಳಿಸಬಹುದು.
50ನೇ ವಯಸ್ಸಿನಲ್ಲಿ ವೃತ್ತಿ ಶುರು ಮಾಡಿ ಲಕ್ಷ ಗಳಿಸ್ತಿದ್ದಾರೆ ಗೃಹಿಣಿ!