ದೇಶದ್ರೋಹಿ ನ್ಯೂಸ್‌ಕ್ಲಿಕ್ ಮಾಧ್ಯಮ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗೆ 255 ಗಣ್ಯರ ಪತ್ರ!
ಭಾರತದ ನ್ಯೂಸ್‌ಕ್ಲಿಕ್ ವೆಬ್‌ಸೈಟಗೆ ಚೀನಾ ಲಿಂಕ್ ಇರುವು ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇದೀಗ ನಿವೃತ್ತ ಹೈಕೋರ್ಟ್ ಜಡ್ಜ್, ಡಿಜಿಪಿ, ರಾಯಭಾರಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ 255ಕ್ಕೂ ಹೆಚ್ಚು ಮಂದಿ ಸಹಿ ಹಾಕಿ ರಾಷ್ಟ್ರ ಪತಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ನವದೆಹಲಿ(ಆ.11) ಭಾರತದಲ್ಲಿ ಪ್ರಕಟಗೊಳ್ಳುತ್ತಿರುವ ನ್ಯೂಸ್‌ಕ್ಲಿಕ್ ಮಾಧ್ಯಮ ವೆಬ್‌ಸೈಟ್‌ಗೆ ಚೀನಾದ ನಂಟು ಇದೆ ಎಂದು ಅಮೆರಿಕದ ಪ್ರಭಾವಿ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದ ಬೆನ್ನಲ್ಲೇ ಭಾರತದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಚೀನಾ ಚಿಂತನೆಯನ್ನು, ಉದ್ದೇಶಗಳನ್ನು ಭಾರತದಲ್ಲಿ ಪಸರಿಸಲು ನ್ಯೂಸ್‌ಕ್ಲಿಕ್ ಸಹಾಯ ಮಾಡುತ್ತಿದೆ. ಚೀನಾದಿಂದ ಸಾಕಷ್ಟ ಹಣ ಕೂಡ ಹರಿದು ಬರುತ್ತಿದೆ. ಈ ಕುರಿತು ಲೋಕಸಭೆಯಲ್ಲಿ ಬಿಜೆಪಿ ಉಲ್ಲೇಖಿಸಿದ ಬಳಿಕ ಇದೀಗ ನ್ಯೂಸ್‌ಕ್ಲಿಕ್ ಜಾತಕ ಬಯಲಾಗುತ್ತಿದೆ. ಇದೀಗ ನ್ಯೂಸ್‌ಕ್ಲಿಕ್ ಹವಾಲ ಹಣದಲ್ಲಿ ಕಾಂಗ್ರೆಸ್ ಪಕ್ಷದ ನಂಟು ಕೂಡ ಚರ್ಚೆಯಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಹಲವು ನಿವೃತ್ತ ನ್ಯಾಯಾಧೀಶರು, ನಿವೃತ್ತ ಡಿಜಿಪಿ, ಮುಖ್ಯಕಾರ್ಯದರ್ಶಿ ಸೇರಿದಂತೆ 255ಕ್ಕೂ ಹೆಚ್ಚು ಮಂದಿ ನ್ಯೂಸ್‌ಕ್ಲಿಕ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆದಿದೆ. 255 ಮಂದಿ ಸಹಿ ಹಾಕಿ ಬರೆದಿರುವ ಪತ್ರ ಇದೀಗ ನ್ಯೂಸ್‌ಕ್ಲಿಕ್ ಮಾತ್ರವಲ್ಲ, ನ್ಯೂಸ್‌ಕ್ಲಿಕ್‌ಗೆ ರಹಸ್ಯವಾಗಿ ಬೆಂಬಲ ನೀಡಿದ ಹಲವರಿಗೆ ಆತಂಕ ಶುರುವಾಗಿದೆ.
ದೆಹಲಿ, ರಾಜಸ್ಥಾನ, ಕೇರಳ, ಜಾರ್ಖಂಡ್, ಸಿಕ್ಕಿಂ, ಪಂಜಾಬ್ ಸೇರಿದಂತೆ 15ಕ್ಕೂ ಹೆಚ್ಚು ಹೈಕೋರ್ಟ್ ನಿವೃತ್ತ ನ್ಯಾಮೂರ್ತಿಗಳು, ನಿವೃತ್ತ ರಾ ಮುಖ್ಯಸ್ಥ, 12ಕ್ಕೂ ಹೆಚ್ಚು ನಿವೃತ್ತ ರಾಯಭಾರಿಗಳು, 20ಕ್ಕೂ ಹೆಚ್ಚ ನಿವೃತ್ತ ಡಿಜಿಪಿ, ನಿವೃತ್ತ ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಸೇರಿದಂತೆ 255ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳು ಸಹಿ ಹಾಕಿ ಪತ್ರ ಬರೆದಿದ್ದಾರೆ. ಪತ್ರದ ಆರಂಭದಲ್ಲೇ ದೇಶ ವಿರೋಧಿ ಚಟುವಟಿಕೆ ವಿರುದ್ಧ ತೀವ್ರ ಆಘಾತ ವ್ಯಕ್ತಪಡಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆಯಲಾಗಿದೆ.
NewsClick Row: ಭಾರತದ ವೆಬ್‌ಸೈಟ್‌ಗೆ ಚೀನಾ ಲಿಂಕ್, ದೇಶದ್ರೋಹಿಗಳ ಜತೆ ಕೈ ನಂಟು: ಸಂಸತ್ತಲ್ಲಿ ಬಿಜೆಪಿ ಆರೋಪ
ಭಾರತ ವಿರೋಧಿ ಚಟುವಟಿಕೆಯಿಂದ ತೀವ್ರ ನೋವು ಅನುಭವಿಸುತ್ತಿರುವ ಭಾರತೀಯ ನಾಗರೀಕರ ಪರವಾಗಿ ಈ ಪತ್ರ ಬರೆಯುತ್ತಿದ್ದೇವೆ. ನಕಲಿ ಸುದ್ದಿ, ಭಾರತ ವಿರೋಧಿ ಚಟುವಟಿಕೆ ಅಜೆಂಡಾ ಮೂಲಕ ನ್ಯೂಸ್‌ಕ್ಲಿಕ್ ಭಾರತದಲ್ಲಿ ಪಿತೂರಿ ನಡೆಸುತ್ತಿದೆ. ದಿ ನ್ಯೂಯಾರ್ಕ್ ಟೈಮ್ಸ್ ತನಿಖೆಯಿಂದ ನ್ಯೂಸ್‌ಕ್ಲಿಕ್ ಅಸಲಿ ಮುಖ ಬಹಿರಂಗವಾಗಿದೆ. ಶ್ರೀಮಂತ ನೆವಿಲ್ಲೆ ರಾಯ್ ಸಿಂಘಮ್ ಮೂಲಕ ಚೀನಾದಿಂದ ಹಣಪಡೆದಿರುವ ನ್ಯೂಸ್‌ಕ್ಲಿಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಸುಳ್ಳು ಸುದ್ದಿ ಮೂಲಕ ತಪ್ಪು ಮಾಹಿತಿಯನ್ನು ದೇಶದಲ್ಲಿ ಹರಡುತ್ತಿದ್ದಾರೆ. ಈ ಮೂಲಕ ನಮ್ಮ ಪ್ರಜಾಪ್ರಭುತ್ವದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದ್ದಾರೆ.ವಿದೇಶಗಳ ಆಜ್ಞೆ ಮೇರೆಗೆ ಭಾರತದೊಳಗೆ ಪಿತೂರಿ ನಡೆಸುವ ಕಾರ್ಯ ಮಾಡುತ್ತಿದೆ. ಚೀನಾದಿಂದ ಹಣ ಪಡೆದು ಚೀನಾ ಅಜೆಂಡಾಗಳನ್ನು ಭಾರತದಲ್ಲಿ ಪ್ರಚಾರ ಮಾಡುವ ಮೂಲಕ ದೇಶದ ಸಮಗ್ರತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ವಿರೋಧಿ ದೇಶದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಆರ್ಥಿಕ ನೆರವು ಪಡೆದು ಷಡ್ಯಂತ್ರ ರೂಪಿಸುತ್ತಿರುವ ನ್ಯೂಸ್‌ಕ್ಲಿಕ್ ತಪ್ಪು ಮಾಡಿರುವುದು ಬಹಿರಂಗವಾಗಿದೆ.
ದೇಶದ ವ್ಯಕ್ತಿಗಳಿಂದಲೇ ದೇಶದ ವಿರುದ್ಧ ಪಿತೂರಿ: ರಾಜೀವ್ ಚಂದ್ರಶೇಖರ್
2021ರಲ್ಲಿ ಇಡಿ ಅಧಿಕಾರಿಗಳು ನ್ಯೂಸ್‌ಕ್ಲಿಕ್ ಮೇಲೆ ರೇಡ್ ಮಾಡಿತ್ತು. ಅಕ್ರಣ ಹಣವರ್ಗಾವಣೆ ಪ್ರಕರಣದಡಿ ಈ ದಾಳಿ ನಡೆದಿತ್ತು. ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ತ 2018 ರಿಂದ 2021ರ ಅವದಿಯಲ್ಲಿ 76.9 ಕೋಟಿ ರೂಪಾಯಿ ಅಕ್ರಣ ಹಣ ವರ್ಗಾವಣೆ ನಡೆದಿರುವುದನ್ನು ಇಡಿ ಅಧಿಕಾರಿಗಳು ಬಹಿರಂಗ ಪಡಿಸಿದ್ದರು. ಚೀನಾದ ಕಮ್ಯೂನಿಸ್ಟ್ ಪಾರ್ಟಿ ಅಜೆಂಡಾಗಳನ್ನು ಭಾರತದಲ್ಲಿ ಪ್ರಚಾರ ಮಾಡಿ, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದ್ದ ನ್ಯೂಸ್ ಕ್ಲಿಕ್ ಗಂಭೀರ ಅಪರಾಧ ಎಸಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.