ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಏರಿಳಿತ, ಎಷ್ಟಿದೆ ಇಂದಿನ ಇಂಧನ ದರ?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಜನರು ಹೈರಣಾಗಿದ್ದಾರೆ. 100ರ ಗಡಿ ದಾಟಿ ಮುನ್ನುಗ್ಗುತ್ತಿರುವ ಇಂಧನದಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಜಿಲ್ಲೆಗಳಲ್ಲಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟು?
 

Petrol Diesel prices remain stable after rs 3 hike in Karnataka ckm

ಬೆಂಗಳೂರು(ಜೂ.25) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಜನಸಾಮಾನ್ಯರು ಪ್ರತಿ ದಿನ ಆತಂಕದಲ್ಲೇ ದಿನದೂಡುವಂತಾಗಿದೆ. ವಾಹನ ಸವಾರರು ಹಿಡಿ ಶಾಪಹಾಕುತ್ತಿದ್ದರೆ, ರೈತರ ಕೃಷಿ ಚಟುವಟಿಕೂ ಬಿಸಿ ತಟ್ಟಿದೆ. ಜೂನ್ 16ರಂದು ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 3 ರೂಪಾಯಿ ಮಾರಾಟ ತೆರಿಗೆ ಏರಿಕೆ ಮಾಡಿತ್ತು. ಇದರಿಂದ ಕರ್ನಾಟಕದಲ್ಲಿ ಇಂಧನ ಮತ್ತಷ್ಟು ದುಬಾರಿಯಾಗಿತ್ತು. ಬಳಿಕ ಇಂಧನ ದರ ಸ್ಥಿರತೆ ಕಾಪಾಡಿಕೊಂಡಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ 88.94 ರೂಪಾಯಿ ಆಗಿದೆ. 

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂಪಾಯಿ, ಡೀಸೆಲ್ ಬೆಲೆ ರೂಪಾಯಿ. ಇನ್ನು ಚೆನ್ನಲ್ಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 87.62 ರೂಪಾಯಿ ಹಾಗೂ ಡೀಸೆಲ್ ರೂಪಾಯಿ. ಇತ್ತ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.75 ರೂಪಾಯಿ ಹಾಗೂ ಡೀಸೆಲ್ ಬೆಲೆ 92.34 ರೂಪಾಯಿ ಆಗಿದೆ.

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?

ಬಾಗಲಕೋಟೆ: ಪೆಟ್ರೋಲ್ ದರ:103.63   
ಬೆಳಗಾವಿ: ಪೆಟ್ರೋಲ್ ದರ:  103.07   
ಧಾರವಾಡ: ಪೆಟ್ರೋಲ್ ದರ: 102.63 
ಗದಗ: ಪೆಟ್ರೋಲ್ ದರ:  103.19 
ಹಾವೇರಿ: ಪೆಟ್ರೋಲ್ ದರ: 103.35 
ಉತ್ತರ ಕನ್ನಡ: ಪೆಟ್ರೋಲ್ ದರ:103.44  
ವಿಜಯಪುರ: ಪೆಟ್ರೋಲ್ ದರ: 103.05  
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ: 102.94 
ಬೆಂಗಳೂರು ನಗರ: ಪೆಟ್ರೋಲ್ ದರ: 102.86 
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ: 103.33
ಚಿತ್ರದುರ್ಗ: ಪೆಟ್ರೋಲ್ ದರ:  105.41
ದಾವಣಗೆರೆ: ಪೆಟ್ರೋಲ್ ದರ:  104.43
ಕೋಲಾರ: ಪೆಟ್ರೋಲ್ ದರ:  102.73
ರಾಮನಗರ: ಪೆಟ್ರೋಲ್ ದರ:  103.34
ಶಿವಮೊಗ್ಗ: ಪೆಟ್ರೋಲ್ ದರ:   104.23
ತುಮಕೂರು: ಪೆಟ್ರೋಲ್ ದರ:  103.40
ಬಳ್ಳಾರಿ: ಪೆಟ್ರೋಲ್ ದರ:  104.77
ಬೀದರ್: ಪೆಟ್ರೋಲ್ ದರ:  103.22
ಕಲಬುರಗಿ: ಪೆಟ್ರೋಲ್ ದರ:  102.63
ಕೊಪ್ಪಳ: ಪೆಟ್ರೋಲ್ ದರ:  104.01
ರಾಯಚೂರು: ಪೆಟ್ರೋಲ್ ದರ: 102.76
ವಿಜಯನಗರ: ಪೆಟ್ರೋಲ್ ದರ:  105.01 
ಯಾದಗಿರಿ: ಪೆಟ್ರೋಲ್ ದರ:  103.37
ಚಾಮರಾಜನಗರ: ಪೆಟ್ರೋಲ್ ದರ: 103.03  
ಚಿಕ್ಕಮಗಳೂರು: ಪೆಟ್ರೋಲ್ ದರ: 103.29
ದಕ್ಷಿಣ ಕನ್ನಡ: ಪೆಟ್ರೋಲ್ ದರ:  102.77ರೂ
ಹಾಸನ: ಪೆಟ್ರೋಲ್ ದರ:   103.06
ಕೊಡಗು: ಪೆಟ್ರೋಲ್ ದರ: 104.09  ರೂ 
ಮಂಡ್ಯ: ಪೆಟ್ರೋಲ್ ದರ:  102.52ರೂ
ಮೈಸೂರು : ಪೆಟ್ರೋಲ್ ದರ: 102.41ರೂ
ಉಡುಪಿ: ಪೆಟ್ರೋಲ್ ದರ:   102.35ರೂ

ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರುದ್ದ ಬಿಜೆಪಿ ಭಾರಿ ಪ್ರತಿಭಟನೆ ನಡೆಸಿತ್ತು. ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದೆ. ಇದಕ್ಕಾಗಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಹಾಕುತ್ತಿದೆ. ಜನಸಾಮಾನ್ಯರಿಂದಲೇ ಹಣ ಕಿತ್ತುಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಅಭಿವೃದ್ಧಿಗಾಗಿ ಬೆಲೆ ಏರಿಕೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು.

ಚಿನ್ನ ಖರೀದಿಸುವ ಯೋಚನೆ ಇದೆಯಾ? ಮತ್ಯಾಕೆ ತಡ, ಇಂದೇ ಬಂಗಾರವನ್ನ ನಿಮ್ಮದಾಗಿಸಿಕೊಳ್ಳಿ

ಇದರ ನಡುವೆ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸುವ ಕುರಿತು ಭಾರಿ ಚರ್ಚೆಗಳಾಗುತ್ತಿದೆ.  ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬುದು ಈ ಹಿಂದಿನಿಂದಲೂ ಕೇಂದ್ರ ಸರ್ಕಾರದ ಇಚ್ಛೆಯಾಗಿದೆ. ಆದರೆ ಈ ಬಗ್ಗೆ ಸಮ್ಮತಿ ಸೂಚಿಸುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios