ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಹೆಚ್ಚಳ ಬೆಂಗಳೂರಿನಲ್ಲಿ ಪೆಟ್ರೋಲ್ 106.46 ರೂ,ಡೀಸೆಲ್ 90.49 ರೂ ಮಾಚ್‌ರ್ 22 ರಿಂದ ಈವರೆಗೆ ಒಟ್ಟು 9 ಬಾರಿ ಬೆಲೆ ಏರಿಕೆ
ನವದೆಹಲಿ(ಮಾ.31): ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದ್ದು, ಬುಧವಾರ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರಿಗೆ 80 ಪೈಸೆಯಷ್ಟುಏರಿಕೆಯಾಗಿದೆ. ಈ ಮೂಲಕ ಕಳೆದ 9 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ 5.60 ರು.ಗಳಷ್ಟುತುಟ್ಟಿಯಾಗಿದೆ. ಮಾಚ್‌ರ್ 22 ರಿಂದ ಈವರೆಗೆ ಒಟ್ಟು 9 ಬಾರಿ ಇಂಧನದ ಬೆಲೆಯನ್ನು ಪರಿಷ್ಕರಿಸಲಾಗಿದೆ.
ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.01 ರು. ಹಾಗೂ ಡೀಸೆಲ್ ಬೆಲೆಯು 92.27 ರು.ಗೆ ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ 155.88 ರು. ಹಾಗೂ ಡೀಸೆಲ್ ಬೆಲೆ 100.10 ರು. ರಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 106.46 ರು. ಹಾೂ ಡೀಸೆಲ್ ಬೆಲೆ 90.49 ರು.ಗೆ ಏರಿಕೆಯಾಗಿದೆ.
100 ರ ಗಡಿ ದಾಟಿದ ಪೆಟ್ರೋಲ್, ಇಳಿಯದ ಚಿನ್ನ, ಗ್ರಾಹಕರ ಜೇಬು ಬಿಸಿ ಬಿಸಿ..!
ಬೆಲೆಯೇರಿಕೆ ವಿರುದ್ಧ ರಾಹುಲ್ ಕಿಡಿ
ಇಂಧನದ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಟ್ವೀಟರ್‌ನಲ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರೋಜ್ ಸುಭಾ ಕೀ ಬಾತ್’ (ಪ್ರತಿ ಮುಂಜಾನೆಯ ಕೆಲಸ) ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ರಾಹುಲ್ ‘ಪ್ರಧಾನಿಯ ದೈನಂದಿನ ಕೆಲಸದ ಪಟ್ಟಿಯು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಯನ್ನು ಏರಿಸುವುದು, ರೈತರನ್ನು ಮತ್ತಷ್ಟುಅಸಹಾಯಕರನ್ನಾಗಿ ಮಾಡುವುದು ಹಾಗೂ ಯುವಜನತೆಗೆ ಉದ್ಯೋಗದ ಸುಳ್ಳು ಭರವಸೆಯನ್ನು ನೀಡುವುದು, ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವುದು ಮುಂತಾದ ಅಂಶಗಳನ್ನು ಒಳಗೊಂಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ವಿರೋಧಿಸಿ ಭಾರತೀಯ ಯುವ ಕಾಂಗ್ರೆಸ್ ಶ್ರೀನಿವಾಸ್ ಬಿ.ವಿ ಅವರ ನೇತೃತ್ವದಲ್ಲಿ ಪೆಟ್ರೋಲಿಯಂ ಸಚಿವಾಲಯದ ಹೊರಗೆ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಖಾಲಿ ಸಿಲಿಂಡರ್‌ನ ಅಣುಕು ಶವಯಾತ್ರೆ ಮೂಲಕ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇಂಧನ ಬೆಲೆ ಏರಿಕೆಗೆ ಏನು ಕಾರಣ? ಸಚಿವೆ ನಿರ್ಮಲಾ ಕೊಟ್ಟ ಉತ್ತರವಿದು
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀನಿವಾಸ ಅವರು, ಜನರ ಮೇಲೆ ಹಣದುಬ್ಬರದ ಹೊರೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ರಾಹುಲ್ ರಾವ್ ಮತ್ತಿತ್ತರರು ಹಾಜರಿದ್ದರು.
ಕೇಂದ್ರ ಕಾರ್ಮಿಕರ ಸಂಘಟನೆ ಮುಷ್ಕರವು ರಾಯಚೂರು ನಗರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ಅದೇ ರೀತಿ ಸಿಂಧನೂರಿನಲ್ಲಿ ಟಿಯುಸಿಐ ಹಾಗೂ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ನಗರದ ಗಾಂಧಿ ವೃತ್ತದಲ್ಲಿ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿತು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಕ್ಷಣಗಳಿಂದ ರೈತ, ಕಾರ್ಮಿಕರನ್ನೊಳಗೊಂಡು ಪ್ರತಿಯೊಬ್ಬ ನಾಗರಿಕರಿಗೂ ಸಂಕಷ್ಟದ ದಿನಗಳು ಎದುರಾಗುತ್ತಲಿವೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವುದರ ಮೂಲಕ ರೈತರ ಬಾಳಿಗೆ ಗೋರಿ ತೋಡಿದೆ. ಕಾರ್ಮಿಕರು ಹೋರಾಟಿ ಪಡೆದಂತಹ 44 ಕಾರ್ಮಿಕ ಕಾನೂನುಗಳನ್ನು ತಿರಸ್ಕರಿಸಿ ಕೇವಲ 4 ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದು ಕಾರ್ಪೋರೇಟ್ ಕಂಪನಿಗಳಿಗೆ ವರವಾಗಿ ಪರಿಣಮಿಸಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಕೆ ಜನಸಾಮಾನ್ಯರ ಬದುಕಿನ ಮೇಲೆ ಪ್ರವಾಹದಂತೆ ಅಪ್ಪಳಿಸುತ್ತಿವೆ’ ಎಂದು ದೂರಿದರು.
