ವರ್ಷದ 2ನೇ ಭಾನುವಾರವೂ ಇಂಧನ ಬೆಲೆಯಲ್ಲಿ ಸ್ಥಿರಹುಬ್ಬಳ್ಳಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ 1 ಪೈಸೆ ಇಳಿಕೆಕಲಬುರಿಗಿಯಲ್ಲಿ ಪೆಟ್ರೋಲ್‌ ದರದಲ್ಲಿ 76 ಪೈಸೆ ಇಳಿಕೆ 

ಬೆಂಗಳೂರು (ಜ. 9): ಹೊಸ ವರ್ಷದ 2ನೇ ಭಾನುವಾರವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ, ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಇದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ರಾಜ್ಯ ಹಾಗೂ ದೇಶದಲ್ಲಿ ಕೋವಿಡ್-19 ಹೊಸ ಕೇಸ್ ಗಳಲ್ಲಿ ಏರಿಕೆ ಕಾಣುತ್ತಿದೆ. ಇದರಿಂದಾಗಿ ಕೆಲ ರಾಜ್ಯಗಳು ಜನರ ಓಡಾಟಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಕರ್ನಾಟಕ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಇದು ಪೆಟ್ರೋಲ್, ಡೀಸೆಲ್ ದರದ ಮೇಲೆ ಪರಿಣಾಮ ಬೀರದೇ ಇದ್ದರೂ ಬೇಡಿಕೆಯ ಮೇಲೆ ಖಂಡಿತವಾಗಿ ಪರಿಣಾಮ ಬೀರಿದೆ. ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಧನ ಮೇಲಿನ ಅಬಕಾರಿ ಸುಂಕ(excise duty)ಕಡಿತಗೊಳಿಸೋ ಮೂಲಕ ಬೆಲೆಯಲ್ಲಿ ಇಳಿಕೆ ಮಾಡಿತ್ತು. ಜನವರಿ 9 ರಂದು ರಾಜ್ಯಾದ್ಯಂತ ಇರುವ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂಧನ ದರ

* ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪೆಟ್ರೋಲ್ ದರ 100.58 ರೂ. ಹಾಗೂ ಡೀಸೆಲ್ ದರ 85.01ರೂ. ಆಗಿದೆ. ಹೊಸ ವರ್ಷದ ಆರಂಭದಿಂದಲೂ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

* ಹುಬ್ಬಳ್ಳಿಯಲ್ಲಿ (Hubballi) ಪೆಟ್ರೋಲ್ ದರ 100.30 ರೂ. ಆಗಿದ್ದರೆ, ಡೀಸೆಲ್ ದರ 84.78ರೂ. ಆಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ತಲಾ 1 ಪೈಸೆ ಕಡಿಮೆಯಾಗಿದೆ.

* ಮಂಗಳೂರಿನಲ್ಲಿ (Mangaluru) ಪೆಟ್ರೋಲ್ ದರ 99.76 ರೂ ಹಾಗೂ ಡೀಸೆಲ್ ದರ 84.24 ರೂಪಾಯಿ ಆಗಿದೆ. ಮಂಗಳೂರಿನಲ್ಲಿ ದರದಲ್ಲಿ ಕಳೆದ 15 ದಿನಗಳಿಂದ ಯಾವುದೇ ಬದಲಾವಣೆಯಾಗಿಲ್ಲ.

*ಮೈಸೂರಿನಲ್ಲಿ (Mysore) ಪೆಟ್ರೋಲ್ ದರ 100.08ರೂ. ಆದರೆ ಡೀಸೆಲ್ ದರ 84.56 ರೂಪಾಯಿ ಆಗಿದೆ. ಸತತ 4ನೇ ದಿನ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

* ಕಲಬುರಗಿಯಲ್ಲಿ (Kalaburagi) ಸಾಮಾನ್ಯವಾಗಿ ಏರಿಳಿತ ಕಾಣುತ್ತಿದ್ದ ದರದಲ್ಲಿ ಭಾನುವಾರ ದೊಡ್ಡ ಬದಲಾವಣೆ ಆಗಿದೆ. ಪೆಟ್ರೋಲ್ ದರದಲ್ಲಿ 76 ಪೈಸೆ ಕಡಿಮೆ ಆಗುವ ಮೂಲಕ 100.28 ರೂಪಾಯಿಆಗಿದ್ದರೆ, ಡೀಸೆಲ್ ದರದಲ್ಲಿ 68 ಪೈಸೆ ಕಡಿಮೆ ಆಗುವ ಮೂಲಕ 84.77 ರೂಪಾಯಿ ಆಗಿದೆ. 

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

GST ಇಲ್ಲ

ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ.