11ನೇ ದಿನವೂ ಏರಿಕೆ: ಬೆಂಗಳೂರಲ್ಲಿ ಪೆಟ್ರೋಲ್ ದರ ಎಷ್ಟು..?
ಪೆಟ್ರೋಲ್ ಡೀಸೆಲ್ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೀಗ ಪೆಟ್ರೋಲ್ ದರ ಬೆಂಗಳೂರಲ್ಲಿ ಗಗನಮುಖಿಯಾಗಿ ಸಾಗಿದೆ.. 11 ನೇ ದಿನ ದರ ಏರಿಕೆ ಮಾಡಲಾಗಿದೆ
ನವದೆಹಲಿ (ಫೆ.20): ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಯ ಪರ್ವ ಮುಂದುವರಿದಿದ್ದು, 11ನೇ ದಿನವಾದ ಶುಕ್ರವಾರವೂ ತೈಲ ಕಂಪನಿಗಳು ಪೆಟ್ರೋಲ್‌ಗೆ 31 ಪೈಸೆಯಷ್ಟುಹಾಗೂ ಡೀಸೆಲ್‌ಗೆ 33 ಪೈಸೆಯಷ್ಟುಏರಿಕೆ ಮಾಡಿವೆ.
ಇದರಿಂದಾಗಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತೀ ಲೀ. ಪೆಟ್ರೋಲ್ 90 ರು. ಹಾಗೂ ಡೀಸೆಲ್ 80.60 ರು. ದಾಟಿದೆ. ಇನ್ನು ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ ದರವು 93.21 ರು.ನೊಂದಿಗೆ 100 ರು.ನತ್ತ ದಾಪುಗಾಲಿಡುತ್ತಿದೆ. ಡೀಸೆಲ್ ದರವೂ 85.44 ರು.ಗೆ ಮುಟ್ಟಿದೆ. ಅದೇ ರೀತಿ ದೇಶದ ವಾಣಿಜ್ಯ ನಗರ ಮುಂಬೈನಲ್ಲಿ ಪೆಟ್ರೋಲ್‌ಗೆ 96.62 ರು. ಹಾಗೂ ಡೀಸೆಲ್ 87.62 ರು. ತಲುಪಿದೆ.
ಶತಕ ಬಾರಿಸಿ ಮುನ್ನುಗ್ಗುತ್ತಿದೆ ಪೆಟ್ರೋಲ್, ವಾಹನ ಸವಾರರಿಗೆ ಬಿದ್ದಿದೆ ಬರೆ! ..
ತನ್ಮೂಲಕ ಕಳೆದ 11 ದಿನಗಳಲ್ಲಿ ಪೆಟ್ರೋಲ್ ದರ 3.24 ರು.ನಷ್ಟುಏರಿಕೆಯಾಗಿದ್ದು, 2010ರ ಬಳಿಕ ದಾಖಲಾದ ಗರಿಷ್ಠ ಏರಿಕೆಯ ಬೆಲೆ ಇದಾಗಿದೆ. ಜೊತೆಗೆ 3.47 ರು.ನಷ್ಟುಏರಿಕೆಯಾಗಿದೆ. ಆದರೆ ರಾಜಸ್ಥಾನದ ಶ್ರೀಗಂಗಾನಗರ ಮತ್ತು ಮಧ್ಯಪ್ರದೇಶದ ಅನುಪ್ಪುರದಲ್ಲಿ ಪೆಟ್ರೋಲ್ ದರ ಈಗಾಗಲೇ 100 ರು. ದಾಟಿದೆ.