ನವದೆಹಲಿ(ಆ.31): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುವದಿಲ್ಲ, ದೇಶದ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವುದಿಲ್ಲ ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.

ಕಾರಣ ಇಂದು ಮತ್ತೆ ಇಂಧನ ಬೆಲೆ ಏರಿಕೆಯಾಗಿದ್ದು, ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 78.52 ರೂ, ಹಾಗೂ ಡೀಸೆಲ್ 70.21 ರೂ.ಆಗಿದೆ. ನಿನ್ನೆ ಪೆಟ್ರೋಲ್ ದರ ಲೀಟರ್ ಗೆ 22 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 28 ಪೈಸೆಯಷ್ಟು ಹೆಚ್ಚಾಗಿತ್ತು.

ಮುಂಬೈಯಲ್ಲಿ ಪೆಟ್ರೋಲ್ ದರ 85.72 ರೂ ಆಗಿದ್ದು, ಡೀಸೆಲ್ ದರ ಲೀಟರ್ ಗೆ 74.54 ರೂ ಆಗಿದೆ. ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ ಲೀಟರ್ ಗೆ 80.89 ರೂ. ಆಗಿದೆ.