ನವದೆಹಲಿ(ಸೆ.21): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾದ ಪರಿಣಾಮ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ, ಈ ವಾರಾಂತ್ಯದಲ್ಲಿ ಏರಿಕೆ ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. 

ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರದತ್ತ ಗಮನಹರಿಸಿದರೆ.....


ರಾಷ್ಟ್ರ ರಾಜಧಾನಿ ನವದೆಹಲಿ:
ಪೆಟ್ರೋಲ್-73.35 ರೂ.
ಡೀಸೆಲ್-66.53 ರೂ.

ವಾಣಿಜ್ಯ ರಾಜಧಾನಿ ಮುಂಬೈ:
ಪೆಟ್ರೋಲ್-79.02 ರೂ.
ಡೀಸೆಲ್-69.79 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:
ಪೆಟ್ರೋಲ್-76.05 ರೂ.
ಡೀಸೆಲ್-68.94  ರೂ.

ತಮಿಳುನಾಡು ರಾಜಧಾನಿ ಚೆನ್ನೈ:
ಪೆಟ್ರೋಲ್-76.24 ರೂ.
ಡೀಸೆಲ್-70.33 ರೂ.

ರಾಜ್ಯ ರಾಜಧಾನಿ ಬೆಂಗಳೂರು:
ಪಟ್ರೋಲ್-75.86 ರೂ.
ಡೀಸೆಲ್-68.80 ರೂ.