Asianet Suvarna News Asianet Suvarna News

ಹೊಸ ಫ್ಲೇವರ್, ಪ್ಯಾಕ್‌ ಬಿಡುಗಡೆ ಮಾಡಿದ ಪಾರ್ಲೆಜಿ: ನೆಟ್ಟಿಗರಿಂದ ತೀವ್ರ ಚರ್ಚೆ..!

ಪಾರ್ಲೆ-ಜಿ ಕಂಪನಿ ಬಿಡುಗಡೆ ಮಾಡಿರುವ ಹೊಸ ಪ್ಯಾಕೆಟ್‌, ಫ್ಲೇವರ್‌ಗಳನ್ನು ಹಲವರು ವಿರೋಧಿಸಿದ್ದಾರೆ. ಅಲ್ಲದೆ, ಹಳೆಯ ಪಾರ್ಲೆ-ಜಿ ಶ್ರೇಷ್ಠತೆಗೆ ಯಾವು ಸರಿಸಾಟಿ ಇಲ್ಲ ಎಂದೂ ಹೇಳಿದ್ದಾರೆ. 

people are suddenly discovering new parle g flavours and indian twitter has thoughts ash
Author
First Published Jan 4, 2023, 8:17 PM IST

ನೀವು ಭಾರತಿಯರೇ (Indian) ಆಗಿದ್ದರೆ, ನಿಮಗೆ ಪಾರ್ಲೆ- ಜಿ (Parle-G) ಬಿಸ್ಕೆಟ್‌ (Biscuit) ಬಗ್ಗೆ ಖಂಡಿತ ಗೊತ್ತಿರುತ್ತದೆ. ಅದರಲ್ಲೂ 80 - 90 ದಶಕಗಳಲ್ಲಿ ಹುಟ್ಟಿ - ಬೆಳದವರ ನೆಚ್ಚಿನ ಬಿಸ್ಕೆಟ್‌ಗಳಲ್ಲಿ ಒಂದು ಈ ಪಾರ್ಲೆ-ಜಿ. ನಮಗೆ ಪ್ರತಿದಿನ ಬೆಳಿಗ್ಗೆ ಚಾಯ್ ಅಥವಾ ಟೀ (Tea) ಜೊತೆ ಪಾರ್ಲೆ-ಜಿ ಬಿಸ್ಕೆಟ್ ಬೇಕು ಎಂದರೂ ನೀವು ಭಾರತೀಯರು ಎಂದೇ ಹೇಳಿದಂತಾಗುತ್ತದೆ..!  ಏಕೆಂದರೆ ಈ ಬಿಸ್ಕತ್ತುಗಳು ಬಾಲ್ಯದಿಂದಲೂ (Childhood) ಪ್ರತಿಯೊಬ್ಬ ಭಾರತೀಯರ ಮೆಚ್ಚಿನವುಗಳಾಗಿವೆ. ಈ ಬಿಸ್ಕೆಟ್‌ನ ಮೂಲ ರುಚಿ ಯಾವ ದೇಸಿ ಬಿಸ್ಕೆಟ್‌ಗೂ ಸರಿಸಾಟಿ ಇಲ್ಲ ಎಂಬ ಮಾತನ್ನು ಅನೇಕರು ಈಗಲೂ ಹೇಳುತ್ತಾರೆ. ಪಾರ್ಲೆ-ಜಿ ಬಿಸ್ಕತ್ತುಗಳು ನಮ್ಮ ಬಾಲ್ಯವನ್ನು ವ್ಯಾಖ್ಯಾನಿಸುತ್ತವೆ ಎಂದು ನಾವು ಹೇಳಿದರೆ, ಅನೇಕರು ಇದನ್ನು ಒಪ್ಪುತ್ತಾರೆ. ಅಷ್ಟೇ ಅಲ್ಲ, ಟೀ ಮತ್ತು ಪಾರ್ಲೆಜಿಯ ಕಾಂಬಿನೇಷನ್‌ ನಮ್ಮ ಊಹೆಗೂ ನಿಲುಕದು. ಆದರೆ, ಇಂತಹ ಪಾರ್ಲೆ-ಜಿ ವಿಭಿನ್ನ ರುಚಿಗಳಲ್ಲಿ ಲಭ್ಯವಿದೆ ಎಂದರೆ ನಿಮಗೆ ಗೊತ್ತೇ..? ಈ ಬಿಸ್ಕತ್‌ನ ಪ್ಯಾಕೆಟ್‌ಗಳನ್ನು (Pack) ನೀವು ನೋಡಿಲ್ಲ ಅಲ್ವಾ..? 

ಹೌದು, ಇತ್ತೀಚೆಗೆ ಪಾರ್ಲೆ-ಜಿ ಕೆಲವು ಹೊಸ ರುಚಿ ಅಥವಾ ಫ್ಲೇವರ್ಸ್‌ಗಳನ್ನು (Flavours) ಬಿಡುಗಡೆ ಮಾಡಿದೆ. ಇದು ಎಂದಿನಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ತೀವ್ರ ಚರ್ಚೆಗೊಳಗಾಯಿತು. ಅಲ್ಲದೆ, ಹೊಸ ಪ್ಯಾಕೆಟ್‌ ಬಣ್ಣಗಳೂ ಚರ್ಚೆಗೆ ಗ್ರಾಸವಾಗುತ್ತಿದೆ. ಹಲವು ಬಳಕೆದಾರರು,  ಪಾರ್ಲೆ-ಜಿ ಯ 'ಓಟ್ಸ್ ಮತ್ತು ಬೆರ್ರಿಸ್' ಫ್ಲೇವರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕೆಲವು ಇತರ ಪ್ರಭೇದಗಳೊಂದಿಗೆಯೂ ಪಾರ್ಲೆಜಿ ಹೊಸ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. 

ಇದನ್ನು ಓದಿ: ಕೊರೋನಾದಲ್ಲಿ ದಾಖಲೆ ಬರೆದಿತ್ತು ಪಾರ್ಲೇಜಿ ಬಿಸ್ಕತ್ ಸೇಲ್!

ಹೊಸ ಪಾರ್ಲೆ-ಜಿಯ ಹಲವಾರು ಪ್ಯಾಕೆಟ್‌ಗಳು ದೇಶಾದ್ಯಂತ ಹರಡುತ್ತಿದ್ದಂತೆ, ಭಾರತೀಯ ಟ್ವೀಟಿಗರು ಈ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಹೊಸ ರುಚಿಗಳನ್ನು ಪ್ರಯತ್ನಿಸಲು ಬಯಸುವುದಾಗಿ ಹೇಳಿದರೆ, ಇತರರು ಅದನ್ನು 'ಕೆಟ್ಟ ಕಲ್ಪನೆ' ಎಂದು ಪಾರ್ಲೆ - ಜಿ ವಿರುದ್ಧ ಟೀಕೆ ಮಾಡಿದ್ದಾರೆ. 

"ಪಾರ್ಲೆ-ಜಿ ನನ್ನ ಗೌರವವನ್ನು ಕಳೆದುಕೊಂಡಿದೆ.. ಈಗ ಅದು ನನಗೆ ಪಾರ್ಲೆ ಮಾತ್ರ" ಎಂದು ಕಂಪನಿಯ ಹೊಸದಾಗಿ ಪ್ರಾರಂಭಿಸಿದ ರುಚಿಯನ್ನು ಇಷ್ಟಪಡದ ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ. "ನನಗೆ ಇದರ ಬಗ್ಗೆ ಸಾಕಷ್ಟು ಆಲೋಚನೆಗಳಿವೆ. ಅವುಗಳಲ್ಲಿ ಯಾವುದೂ ಸಕಾರಾತ್ಮಕವಾಗಿಲ್ಲ. OG Parle G >>>>, ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಹಾಗೆ, ಇನ್ನೊಬ್ಬರು, "parle g ಪಾರ್ಲೆ- ಜಿಯೇ ಆಗಿರಲಿ, ಈ ಹೊಸ ಲಾಂಛ್‌ ನೋಡಿ ನನಗೆ ತುಂಬಾ ಬೇಸರವಾಗಿದೆ ಎಂದೂ ಅವರು ಟ್ವೀಟ್‌ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಭಾರತದ ಸುದ್ದಿ ವಾಹಿನಿಯಲ್ಲಿ ಜಾಹೀರಾತು ನೀಡಲ್ಲ; ಕಾರಣ ಹೇಳಿದ ಪಾರ್ಲೆGಗೆ ಮೆಚ್ಚುಗೆ!

ಆದರೆ, ಈ ಹೊಸ ಪಾರ್ಲೆಜಿಯನ್ನೂ ಸಹ ಕೆಲವರು ಮೆಚ್ಚಿಕೊಂಡಿದ್ದಾರೆ. "ನಾನು ಅದನ್ನು 6 ತಿಂಗಳ ಹಿಂದೆ ಖರೀದಿಸಿದೆ ಮತ್ತು ಇದು ಅದ್ಭುತವಾಗಿದೆ. ಕಿಸ್ಮಿ ಫ್ಲೇವರ್ ಉತ್ತಮವಾಗಿಲ್ಲ, ಆದರೆ ಈ ಓಟ್ಸ್ ಮತ್ತು ಬೆರ್ರಿ ಫ್ಲೇವರ್‌ ಅದ್ಭುತವಾಗಿದೆ" ಎಂದು ಬರೆದುಕೊಂಡಿದ್ದಾರೆ. ಹಾಗೆ, ಮತ್ತೊಬ್ಬರು ‘’ ಇದು ಮತ್ತು ಪಾರ್ಲೆ ಕಿಸ್ಮಿ ದಾಲ್ಚಿನಿ, ಎರಡೂ ನಿಜವಾಗಿಯೂ ಒಳ್ಳೆಯದು! ದಾಲ್ಚಿನಿ ಪಾರ್ಲೆಜಿ ಟೀನೊಂದಿಗೆ ಉತ್ತಮ ರುಚಿಯನ್ನು ನೀಡುತ್ತದೆ’’ ಎಂದು ಮತ್ತೊಬ್ಬ ಟ್ವೀಟಿಗ ಹೇಳಿದ್ದಾರೆ. 

ಒಟ್ಟಾರೆ ಪಾರ್ಲೆ-ಜಿ ಕಂಪನಿ ಬಿಡುಗಡೆ ಮಾಡಿರುವ ಹೊಸ ಪ್ಯಾಕೆಟ್‌, ಫ್ಲೇವರ್‌ಗಳನ್ನು ಹಲವರು ವಿರೋಧಿಸಿದ್ದಾರೆ. ಅಲ್ಲದೆ, ಹಳೆಯ ಪಾರ್ಲೆ-ಜಿಯ ಶ್ರೇಷ್ಠತೆಯು ದೇಸಿಗಳ ಹೃದಯದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ಹೇಳಬಹುದಾಗಿದೆ. 

ಇದನ್ನೂ ಓದಿ: ಕೊರೋನಾ ಸಮರಕ್ಕೆ 'ಪಾರ್ಲೆ-ಜಿ' ಸಾಥ್: ಬಡವರಿಗೆ ಫ್ರೀ ಬಿಸ್ಕೆಟ್!

Follow Us:
Download App:
  • android
  • ios