ಪ್ರತಿ ಉತ್ಪನ್ನಗಳಿಗೂ ಜಾಹೀರಾತು ಮುಖ್ಯ. ಹೀಗಾಗಿ ಪತ್ರಿಕೆ, ಸುದ್ದಿ ವಾಹಿನಿ, ಸಾಮಾಜಿಕ ಜಾಲತಾಣ, ಇತರ ಮನರಂಜನಾ ವಾಹನಿಗಳ ಮೂಲಕ ಉತ್ಪನ್ನಗಳು ಜಾಹೀರಾತು ನೀಡುತ್ತವೆ. ಇದೀಗ ದೇಶದ ಹೆಮ್ಮೆಯ ಪಾರ್ಲೆG ಬಿಸ್ಕೆಟ್, ಭಾರತೀಯ ಸುದ್ದಿವಾಹನಿಗಳಲ್ಲಿ ಜಾಹೀರಾತು ನೀಡುವುದಿಲ್ಲ ಎಂದು ಘೋಷಿಸಿದೆ. ಇದಕ್ಕೆ ನೀಡಿದ ಕಾರಣಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ನವದೆಹಲಿ(ಅ.12): ಭಾರತದಲ್ಲಿ ಪಾರ್ಲೆ ಬಿಸ್ಕೆಟ್ ಅತ್ಯಂತ ಜನಪ್ರಿಯವಾಗಿದೆ. ಹಲವರ ನೆಚ್ಚಿನ ಬಿಸ್ಕೆಟ್ ಪಾರ್ಲೆG ತಗೆದುಕೊಂಡಿರುವ ನಿರ್ಧಾರಕ್ಕೆ ಇದೀಗ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಭಾರತೀಯ ಸುದ್ದಿ ವಾಹಿನಿಗಳಲ್ಲಿ ಪಾರ್ಲೆ ಜಾಹೀರಾತು ನೀಡುವುದಿಲ್ಲ ಎಂದು ಘೋಷಿಸಿದೆ. ಭಾರತೀಯ ಸುದ್ದಿ ವಾಹಿನಿಗಳು ಆಕ್ರಮಣಕಾರಿ ಹಾಗೂ ವಿಷಕಾರಿ ಅಂಶಗಳನ್ನು ಉತ್ತೇಜಿಸುತ್ತಿದೆ ಎಂದು ಪಾರ್ಲೆG ಹೇಳಿದೆ.

TRP ಸಮರಕ್ಕೆ ದೊಡ್ಡ ಟ್ವಿಸ್ಟ್ , FIRನಲ್ಲಿ ರಿಪಬ್ಲಿಕ್ ಟಿವಿ ಹೆಸರೇ ಇಲ್ಲ!

ಮಿಂಚ್ ವರದಿ ಪ್ರಕಾರ , ಭಾರತೀಯ ಸುದ್ದಿ ವಾಹನಿಗಳು ಟಿಆರ್‌ಪಿ ಗಾಗಿ ಕಸರತ್ತು ಮಾಡುತ್ತಿದೆ. ಮುಂಬೈ ಪೊಲೀಸರು ಟಿಆರ್‌ಪಿ ಹಗರಣ ಬಯಲಿಗೆಳಿದಿದ್ದಾರೆ. ಹೀಗಾಗಿ ಸುದ್ದಿ ವಾಹಿನಿಗಳಲ್ಲಿ ಜಾಹೀರಾತು ನೀಡುವುದಿಲ್ಲ ಎಂದು ಪಾರ್ಲೆ ಮುಖ್ಯಸ್ಥ ಕೃಷ್ಣರಾವ್ ಬುದ್ಧ ಹೇಳಿದ್ದಾರೆ.

Scroll to load tweet…

TRP ವಾರ್, ಮುಂಬೈ ಪೊಲಿಸ್ ಕಮಿಷನರ್ ವಿರುದ್ಧ ಅರ್ನಬ್ ಕೆಂಡ!

ಟಿವಿ ರೇಟಿಂಗ್‌ಗಾಗಿ ಸುದ್ದಿ ವಾಹನಿಗಳು ಹಗರಣ ನಡೆಸುತ್ತಿದೆ. ಹೀಗಾಗಿ ಜಾಹೀರಾತು ನೀಡುವುದಿಲ್ಲ ಎಂದು ಪಾರ್ಲೆ ಅಧೀಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ಇನ್ನು ಪಾರ್ಲೆG ಕಂಪನಿಗೂ ಮೊದಲು ಬಜಾಜ್ ಇದೇ ನಿರ್ಧಾರ ಕೈಗೊಂಡಿತ್ತು. ಟಿಆರ್‌ಪಿ ರೇಟಿಂಗ್ ಹರಗಣ ನಡೆಸಿದ 3 ಚಾನೆಲ್‌ಗಳಿಗೆ ಯಾವುದೇ ಜಾಹೀರಾತು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.