ಪೇಟಿಎಂ ಪೇ ಬಳಕೆದಾರರ ಗಮನಕ್ಕೆ, ಗ್ರಾಹಕರಿಗೆ ಹೊಸ ಯುಪಿಐ ಹ್ಯಾಂಡಲ್ಸ್ ನೀಡಲು ಪ್ರಾರಂಭಿಸಿದ ಸಂಸ್ಥೆ
ಗ್ರಾಹಕರಿಗೆ ಹೊಸ ಯುಪಿಐ ಹ್ಯಾಂಡಲ್ಸ್ ನೀಡಲು ಪೇಟಿಎಂ ಪ್ರಾರಂಭಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರಿಗೆ ಬೇರೆ ಬ್ಯಾಂಕಿನ ಯುಪಿಐ ಹ್ಯಾಂಡಲ್ಸ್ ನೀಡುವ ಪ್ರಕ್ರಿಯೆಯನ್ನು ಪೇಟಿಎಂ ಪ್ರಾರಂಭಿಸಿದೆ.
Business Desk: ಭಾರತೀಯ ರಿಸರ್ವ್ ಬ್ಯಾಂಕಿನಿಂದ (ಆರ್ ಬಿಐ) ನಿರ್ಬಂಧಕ್ಕೊಳಗಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಂಗಸಂಸ್ಥೆ ಪೇಟಿಎಂ ಯುಪಿಐ ತನ್ನ ಗ್ರಾಹಕರನ್ನು ಪಾಲುದಾರ ಪೇಮೆಂಟ್ ಸರ್ವಿಸ್ ಪ್ರೊವೈಡರ್ (ಪಿಎಸ್ ಪಿ) ಬ್ಯಾಂಕುಗಳಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಏ.17ರಿಂದ ಚಾಲನೆ ನೀಡಿದೆ. ಪೇಟಿಎಂನ ಜೊತೆಗೆ ಸಹಭಾಗಿತ್ವ ಹೊಂದಿರುವ ಎಕ್ಸಿಸ್, ಎಚ್ ಡಿಎಫ್ ಸಿ ಬ್ಯಾಂಕ್, ಎಸ್ ಬಿಐ ಹಾಗೂ ಯೆಸ್ ಬ್ಯಾಂಕಿಗೆ ಪೇಟಿಎಂ ಗ್ರಾಹಕರನ್ನು ವರ್ಗಾಯಿಸುತ್ತಿದ್ದು, ಅವರಿಗೆ ಹೊಸ ಯುಪಿಐ ಐಡಿಯನ್ನು ನೀಡುತ್ತಿದೆ. ಹೀಗಾಗಿ ಈಗ ಪ್ರತಿ ಪೇಟಿಎಂ ಯುಪಿಐ ಬಳಕೆದಾರರು ಒಂದು ಪಾಪ್ -ಅಪ್ ನೋಟಿಫಿಕೇಷನ್ ಸ್ವೀಕರಿಸಲಿದ್ದಾರೆ. ಇದರ ಮೂಲಕ ಹೊಸ ಯುಪಿಐ ಐಡಿ ಜೊತೆಗೆ ಪೇಟಿಎಂ ಬಳಕೆಗೆ ಒಪ್ಪಿಗೆ ನೀಡುವಂತೆ ಕೇಳಲಾಗುತ್ತದೆ.
ಈ ಹೊಸ ಯುಪಿಐ ಐಡಿ ನಾಲ್ಕು ಹ್ಯಾಂಡಲ್ಸ್ ಗಳಲ್ಲಿ ಒಂದನ್ನು ಹೊಂದಿರುತ್ತದೆ. ಈ ನಾಲ್ಕು ಹ್ಯಾಂಡಲ್ಸ್ @ptsbi, @pthdfc, @ptaxis ಹಾಗೂ @ptyes.ಎಲ್ಲ ಪೇಟಿಎಂ ಬಳಕೆದಾರರು @paytm ಹ್ಯಾಂಡಲ್ಸ್ ಮೂಲಕ ಹೊಸ ಯುಪಿಐ ಐಡಿಗೆ ವರ್ಗಾವಣೆ ಹೊಂದಲು ಮನವಿಗಳನ್ನು ಸ್ವೀಕರಿಸುತ್ತಾರೆ. ಅವರ ಒಪ್ಪಿಗೆ ಮೂಲಕ ಹೊಸ ಹ್ಯಾಂಡಲ್ಸ್ ಗೆ ವರ್ಗಾವಣೆಗೊಳ್ಳುತ್ತಾರೆ. ಅಲ್ಲಿಯ ತನಕ ಪೇಟಿಎಂ ಯುಪಿಐ ಗ್ರಾಹಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಅನ್ನೇ ತಮ್ಮ ಪಿಎಸ್ ಪಿ ಬ್ಯಾಂಕ್ ಆಗಿ ಬಳಸಲಿದ್ದಾರೆ.
ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!
ಪಿಎಸ್ ಪಿ ಯುಪಿಐ ಆಪ್ ಹಾಗೂ ಬ್ಯಾಂಕಿಂಗ್ ಚಾನೆಲ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದೆ. ಬ್ಯಾಂಕ್ ಗಳು ಮಾತ್ರ ಪಿಎಸ್ ಪಿಯಾಗಿ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿವೆ. ಮಾರ್ಚ್ 14ರಂದು ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ಒಸಿಎಲ್ ಗೆ ತಾತ್ಕಾಲಿಕವಾಗಿ ಪಿಎಪಿ ಆಗಿ ಕಾರ್ಯನಿರ್ವಹಿಸಲು ಅನುಮೋದನೆ ನೀಡಿತ್ತು. ಈ ದೀರ್ಘಾವಧಿಯ ಲೈಸೆನ್ಸ್ ಪೇಟಿಎಂಗೆ ಆಪ್ ಬಳಕೆದಾರರಿಗೆ ಯುಪಿಐ ಸೇವೆಗಳನ್ನು ಬಳಸಲು ಅವಕಾಶ ನೀಡಿತ್ತು. ಆ ಬಳಿಕ ಪೇಟಿಎಂ ಎಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಸ್ಟೇಟ್ fಯಾಂಕ್ ಆಫ್ ಇಂಡಿಯಾ ಹಾಗೂ ಯೆಸ್ ಬ್ಯಾಂಕ್ ಜೊತೆಗೆ ಒಪ್ಪಂದ ಮಾಡಿಕೊಂಡಿತು. ಈ ಎಲ್ಲ ನಾಲ್ಕು ಬ್ಯಾಂಕುಗಳು ಟಿಪಿಎಪಿಯಲ್ಲಿ ಈಗ ಕಾರ್ಯನಿರ್ವಹಿಸಲಿವೆ. ಪೇಟಿಎಂಗೆ ಬಳಕೆದಾರರ ಖಾತೆಯನ್ನು ಪಿಎಸ್ ಪಿ ಬ್ಯಾಂಕಿಗೆ ವರ್ಗಾಯಿಸಲಿದೆ ಎಂದು ಸ್ಟಾಕ್ ಎಕ್ಸ್ ಚೇಂಜ್ ಗೆ ಸಲ್ಲಿಕೆ ಮಾಡಿರುವ ಹೇಳಿಕೆಯಲ್ಲಿ ಕಂಪನಿ ತಿಳಿಸಿದೆ.
ಷೇರಿನ ಮೇಲೆ ಹೊಡೆತ
ಎನ್ ಪಿಸಿಐ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಅನ್ವಯ ಮಾರ್ಚ್ ನಲ್ಲಿ ಪೇಟಿಎಂ ಯುಪಿಐ ಮಾರುಕಟ್ಟೆ ಷೇರು ಶೇ.9ಕ್ಕೆ ಇಳಿಕೆಯಾಗಲಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ಆರ್ ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಕಂಪನಿಯ ಷೇರುಗಳು ಶೇ.11ಕ್ಕೆ ಇಳಿಕೆಯಾಗಿದ್ದವು.
ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!
ಪಿಬಿಬಿಎಲ್ ಮೇಲೆ ಆರ್ ಬಿಐ ಕ್ರಮಕ್ಕೆ ಕಾರಣವೇನು?
ಪಿಪಿಬಿಎಲ್ ವಿರುದ್ಧ ಆರ್ ಬಿಐ 2024ರ ಫೆಬ್ರವರಿಯಲ್ಲಿ ಕಠಿಣ ಕ್ರಮ ಕೈಗೊಂಡಿತ್ತು. ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಸಾವಿರಾರು ಬಳಕೆದಾರರ ಸರಿಯಾದ ಗುರುತೇ ಇಲ್ಲದೇ ಅವರ ಹೆಸರಿನಲ್ಲಿ ಖಾತೆಗಳನ್ನು ತೆರೆಯಲಾಗಿದೆ. ಇನ್ನು 1000ಕ್ಕೂ ಹೆಚ್ಚು ಖಾತೆಗಳಿಗೆ 1 ಪಾನ್ ಕಾರ್ಡ್ ಸಂಖ್ಯೆ ಬಳಸಿರುವುದು ಕೂಡಾ ಕಂಡುಬಂದಿದೆ. ಜೊತೆಗೆ ಗ್ರಾಹಕರ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಪರಿಶೀಲನೆಯನ್ನು ಸೂಕ್ತವಾಗಿ ನಡೆಸದೇ ಇರುವುದು ಬೆಳಕಿಗೆ ಬಂದಿದೆ. ಕೆಲವು ಖಾತೆಗಳಲ್ಲಿ ನಡೆದ ದೊಡ್ಡಮಟ್ಟದ ಹಣಕಾಸಿನ ವ್ಯವಹಾರಗಳ ಬಗ್ಗೆ ಗ್ರೂಪ್‌ನ ಒಳಗೆ ಮತ್ತು ಸಹಯೋಗಿ ಪಾಲುದಾರರ ಜೊತೆ ಮಾಹಿತಿ ಹಂಚಿಕೊಂಡಿಲ್ಲ. ಈ ವ್ಯವಹಾರ ಅಕ್ರಮ ಹಣ ವರ್ಗಾವಣೆಗೆ ಬಳಕೆಯಾಗಿರುವ ಸಾಧ್ಯತೆ ಇರುವ ಕಾರಣ ಆರ್ ಬಿಐ ಕ್ರಮ ಕೈಗೊಂಡಿದೆ.
ಸದ್ಯ ಚಾಲ್ತಿಯಲ್ಲಿರುವ ಎಲ್ಲ ವಹಿವಾಟುಗಳನ್ನು ಸೆಟ್ಲ ಮಾಡುವ ಜೊತೆಗೆ 2024ರ ಮಾ.15ರೊಳಗೆ ಅದರ ನೋಡಲ್ ಖಾತೆಗಳನ್ನು ಕ್ಲಿಯರ್ ಮಾಡುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್ ಬಿಐ ನಿರ್ದೇಶನ ನೀಡಿದೆ. 2024ರ ಮಾ.1ರಿಂದ ಯಾವುದೇ ಹೊಸ ಠೇವಣಿಗಳನ್ನು ಸ್ವೀಕರಿಸದಂತೆ ಅಥವಾ ಕ್ರೆಡಿಟ್ ವಹಿವಾಟುಗಳನ್ನು ನಡೆಸದಂತೆ ಪಿಪಿಬಿಎಲ್ ನಿರ್ಬಂಧ ವಿಧಿಸಿತ್ತು. ಇದರಲ್ಲಿ ವ್ಯಾಲೆಟ್ ಮೂಲಕ ನಡೆಸುವ ವಹಿವಾಟುಗಳಿಗೆ ನಿರ್ಬಂಧ ಕೂಡ ಸೇರಿದೆ.