ಇಂಟೆಲ್‌ನಿಂದ ಹೊರದಬ್ಬಲ್ಪಟ್ಟ ಸಿಇಒಗೆ 101 ಕೋಟಿ ರೂಪಾಯಿ ಪರಿಹಾರ!
ಒಂದೋ ನೀವು ನಿವೃತ್ತರಾಗಬೇಕು, ಇಲ್ಲವೇ ನಾವೇ ನಿಮ್ಮನ್ನು ತೆಗೆದುಹಾಕುತ್ತೇವೆ ಎಂದು ಇಂಟೆಲ್ ಮಂಡಳಿ ಮಾಜಿ ಸಿಇಒ ಪ್ಯಾಟ್ ಗೆಲ್ಸಿಂಗರ್ ಅವರಿಗೆ ತಿಳಿಸಿತ್ತು. ಕೊನೆಗೆ ಗೆಲ್ಸಿಂಗರ್ ನಿವೃತ್ತರಾಗಲು ನಿರ್ಧಾರ ಮಾಡಿದ್ದರು.
ಬೆಂಗಳೂರು (ಡಿ.8): ಜಗತ್ತಿನ ಅತ್ಯಂತ ಪ್ರಸಿದ್ಧ ಚಿಪ್‌ಮೇಕರ್‌ಗಳಲ್ಲಿ ಒಂದಾಗಿರುವ ಇಂಟೆಲ್ ಇತ್ತೀಚಿನ ವರ್ಷಗಳಲ್ಲಿ ಎನ್‌ವಿಡಿಯಾದಿಂದ ದೊಡ್ಡ ಮಟ್ಟದ ಪ್ರತಿರೋಧ ಎದುರಿಸುತ್ತಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ಜಗತ್ತಿನಲ್ಲಿ ಇಂಟೆಲ್ ಅನ್ನೋ ಚಿಪ್ ಮೇಕಿಂಗ್ ಕಂಪನಿಯ ಬಗ್ಗೆಯೇ ಜನರಿಗೆ ಮರೆತುಹೋಗುವಷ್ಟು ಎನ್‌ವಿಡಿಯಾ ಸುದ್ದಿಯಾಗುತ್ತಿದೆ. ಇದರ ಬೆನ್ನಲ್ಲಿಯೇ ಕಂಪನಿಯ ಆಂತರಿಕವಾಗಿ ಕೆಲವೊಂದಿಷ್ಟು ಬದಲಾವಣೆ ಮಾಡಲು ಇಂಟೆಲ್ ಮುಂದಾಗಿತ್ತು. ಇದರ ಆರಂಭ ಎನ್ನುವಂತೆ ಮಾಜಿ ಸಿಇಒ ಪ್ಯಾಟ್ ಗೆಲ್ಸಿಂಗರ್ ಕಳೆದ ವಾರ ಒಂದು ಆಫರ್ ನೀಡಿತ್ತು. ಅದರಂತೆ ಒಂದೋ ಅವರು ನಿವೃತ್ತರಾಗಬೇಕು ಇಲ್ಲವೇ ನಾವೇ ನಿಮ್ಮನ್ನು ತೆಗೆದುಹಾಕುತ್ತೇವೆ ಎನ್ನುವ ಆಫರ್ ನೀಡಿತ್ತು. ಕೊನೆಗೆ ಪ್ಯಾಟ್ ಗೆಲ್ಸಿಂಗರ್ ನಿವೃತ್ತಿ ಪಡೆದುಕೊಂಡಿದ್ದರು. ನಿವೃತ್ತಿ ಪಡೆದುಕೊಂಡ ಪ್ಯಾಟ್‌ಗೆ ಈಗ ಕಂಪನಿ 101 ಕೋಟಿ ರೂಪಾಯಿ ಅಂದರೆ 12 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಪಾವತಿ ಮಾಡಲಿದೆ ಎಂದು ಕಂಪನಿ ತಿಳಿಸಿದೆ.
ಬೇರ್ಪಡಿಕೆ ಪಾವತಿಯು 18 ತಿಂಗಳುಗಳ ಮೂಲ ವೇತನವಾಗಿ $1.9 ಮಿಲಿಯನ್ ಮತ್ತು 18 ತಿಂಗಳವರೆಗೆ ಪಾವತಿಸಬೇಕಾದ $3.4 ಮಿಲಿಯನ್ ಅವರ ಗುರಿಯ ಬೋನಸ್‌ನ 1.5 ಪಟ್ಟು ಒಳಗೊಂಡಿರುತ್ತದೆ ಎಂದು ಕಂಪನಿ ಹೇಳಿದೆ. ಗೆಲ್ಸಿಂಗರ್ ಅವರು 2024 ರಲ್ಲಿ CEO ಆಗಿ ಸೇವೆ ಸಲ್ಲಿಸಿದ 11 ತಿಂಗಳುಗಳ ವಾರ್ಷಿಕ ಬೋನಸ್‌ಗೆ ಅರ್ಹರಾಗಿದ್ದಾರೆ, ಇದು ರಾಯಿಟರ್ಸ್ ಲೆಕ್ಕಾಚಾರದ ಪ್ರಕಾರ ಒಟ್ಟು $12 ಮಿಲಿಯನ್‌ಗೆ ತರಲಿದೆ ಎನ್ನಲಾಗಿದೆ.
ಉದ್ಘಾಟನೆ ಆದ ಬೆನ್ನಲ್ಲೇ ಎದುರಾಯ್ತು ಲೀಲಾವತಿ ದೇಗುಲಕ್ಕೆ ಕುತ್ತು!
ಕಂಪನಿಯ ಚುಕ್ಕಾಣಿ ಹಿಡಿದ ನಾಲ್ಕು ವರ್ಷಗಳ ಅವಧಿಯಲ್ಲೇ ಗೆಲ್ಸಿಂಗರ್ ಅವರನ್ನು ಬಲವಂತವಾಗಿ ಕಂಪನಿಯಿಂದ ಹೊರಹಾಕಲಾಗಿದೆ. ಸಿಇಒ ಸ್ಥಾನಕ್ಕೆ ಹೊಸಬರ ಹುಡುಕಾಟದಲ್ಲಿರುವಂತೆ ತಾತ್ಕಾಲಿಕವಾಗಿ ಕಂಪನಿಯ ನಿಯಂತ್ರಣವನ್ನು ಇಬ್ಬರು ಅಧಿಕಾರಿಗಳಿಗೆ ನೀಡಿದೆ.
ಡಿಸೆಂಬರ್ 1 ರಂದು ರಾಜೀನಾಮೆ ನೀಡಿದ ಗೆಲ್ಸಿಂಗರ್, ಕಳೆದ ವಾರ ಮಂಡಳಿಯ ಸಭೆಯ ನಂತರ ನಿರ್ಗಮಿಸಿದರು, ಈ ಸಮಯದಲ್ಲಿ ನಿರ್ದೇಶಕರು ಅವರ ದುಬಾರಿ ಮತ್ತು ಮಹತ್ವಾಕಾಂಕ್ಷೆಯ ಯೋಜನೆಯು ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಒಂದೋ ನೀವು ನಿವೃತ್ತರಾಗಬೇಕು, ಇಲ್ಲವೇ ನಾವೇ ನಿಮ್ಮನ್ನು ತೆಗೆದುಹಾಕುತ್ತೇವೆ ಎಂದು ಇಂಟೆಲ್ ಮಂಡಳಿ ಮಾಜಿ ಸಿಇಒ ಪ್ಯಾಟ್ ಗೆಲ್ಸಿಂಗರ್ ಅವರಿಗೆ ತಿಳಿಸಿತ್ತು. ಕೊನೆಗೆ ಗೆಲ್ಸಿಂಗರ್ ನಿವೃತ್ತರಾಗಲು ನಿರ್ಧಾರ ಮಾಡಿದ್ದರು.