Asianet Suvarna News Asianet Suvarna News

Business Ideas: ಮನೆಯಲ್ಲೇ ಕುಳಿತು ಹಣ ಗಳಿಸಲು ಇಲ್ಲಿದೆ ಉಪಾಯ

Business Startup Idea: ಅನೇಕರು ಗಳಿಕೆ ಮಾರ್ಗ ಹುಡುಗ್ತಿರ್ತಾರೆ. ಕೆಲವರಿಗೆ ಬರೋ ಸಂಬಳ ಸಾಕಾಗೋದಿಲ್ಲ. ಪಾರ್ಟ್ ಟೈಂ ಹುಡುಕಾಟದಲ್ಲಿರುವವರು ಅಥವಾ ಸ್ವಂತ ವ್ಯಾಪಾರದ ಪ್ಲಾನ್ ನಲ್ಲಿರೋರು, ದಿನದ ಸ್ವಲ್ಪ ಸಮಯವನ್ನು ಇದಕ್ಕೆ ಮೀಸಲಿಟ್ಟು ಹಣ ಗಳಿಸ್ಬಹುದು.
 

Papad Making Business startup idea
Author
Bangalore, First Published Jul 5, 2022, 4:33 PM IST

ಮಳೆಗಾಲದಲ್ಲಿ ಮಸಾಲಾ ಪಾಪಡ್ (Masala Papad ) ತಿನ್ನುವ ಮಜವೆ ಬೇರೆ. ಒಂದು ಕಡೆ ಮಳೆ (Rain) ಬೀಳ್ತಿದ್ದರೆ ಒಂದು ಕೈನಲ್ಲಿ ಟೀ ಹಿಡಿದು ಇನ್ನೊಂದು ಕೈನಲ್ಲಿ ಮಸಾಲೆ ಹಪ್ಪಳ ತಿನ್ನುತ್ತಿದ್ರೆ ಹೊಟ್ಟೆಗೆ ಎಷ್ಟು ಹಪ್ಪಳ ಹೋಯ್ತು ಎನ್ನೋದು ನೆನಪಿರೋದಿಲ್ಲ. ಬರೀ ಮಳೆಗಾಲದಲ್ಲಿ ಮಾತ್ರವಲ್ಲ ಯಾವುದೇ ವಿಶೇಷ ಸಂದರ್ಭದಲ್ಲಿ ಅಡಿಗೆಯಲ್ಲಿ ಅನೇಕ ಭಾರತೀಯರ ಮನೆಯಲ್ಲಿ ಹಪ್ಪಳವಿರಬೇಕು. ಹೋಟೆಲ್ (Hotel) ಗಳಲ್ಲಿ ಪ್ರತಿ ದಿನ ಹಪ್ಪಳದ ಊಟ ನೀಡಲಾಗುತ್ತದೆ. ಅಂದ್ಮೇಲೆ ಅತಿ ಬೇಡಿಕೆ ಇರುವ ಆಹಾರದಲ್ಲಿ ಹಪ್ಪಳವೂ ಒಂದು ಎಂದಾಯ್ತು. ಸ್ವಂತ ಉದ್ಯೋಗ ಶುರು ಮಾಡ್ಬೇಕು, ಒಂದಿಷ್ಟು ಹಣ ಸಂಪಾದನೆ ಮಾಡ್ಬೇಕು ಎನ್ನುವವರು ಈ ಹಪ್ಪಳ ತಯಾರಿ ಕೆಲಸ ಶುರು ಮಾಡ್ಬಹುದು. ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ (investment) ಮಾಡಿ ನೀವು ಹಪ್ಪಳ ತಯಾರಿ ಶುರುಮಾಡ್ಬೇಕಾಗಿಲ್ಲ. ಸಣ್ಣದಾಗಿಯೂ ಈ ವ್ಯಾಪಾರ ಆರಂಭಿಸಬಹುದು. ಮನೆಯಿಂದ ನೀವು ಪಾಪಡ್ ತಯಾರಿಕೆಯ ವ್ಯಾಪಾರ (Business) ವನ್ನು ಪ್ರಾರಂಭಿಸಬಹುದು. ಇಂದು ನಾವು ಹಪ್ಪಳ ಬ್ಯುಸಿನೆಸ್ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಹಪ್ಪಳ ತಯಾರಿಸಿ ವ್ಯಾಪಾರ ಮಾಡುವುದು ಹೇಗೆ?: ಮಾರುಕಟ್ಟೆಯಲ್ಲಿ ಹಪ್ಪಳಕ್ಕೆ ಎಷ್ಟು ಬೇಡಿಕೆ ಇದ್ಯೋ ಅಷ್ಟೇ ವೆರೈಟಿ ಹಪ್ಪಳವಿದೆ. ಹಾಗಾಗಿ ನಿಮಗೆ ಯಾವ ಹಪ್ಪಳ ಸುಲಭ ಎಂಬುದನ್ನು ನೀವು ಮೊದಲು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಪ್ಪಳಕ್ಕೆ ಕೆಲ ಕಾಳುಗಳನ್ನು ರುಬ್ಬಬೇಕಾಗುತ್ತದೆ ಮತ್ತು ಮಸಾಲೆ ಬೆರೆಸಬೇಕಾಗುತ್ತದೆ. ಯಾವ ಹಪ್ಪಳಕ್ಕೆ ಯಾವ ಮಸಾಲೆ ಹಾಕ್ಬೇಕು ಎಂಬುದನ್ನು ನೀವು ಮೊದಲೇ ತಿಳಿದಿದ್ದರೆ ಉತ್ತಮ. ಮನೆಯಲ್ಲಿ ಮಹಿಳೆಯರು ಆರಾಮವಾಗಿ ಈ ಹಪ್ಪಳ ತಯಾರಿಸಬಹುದು. ದಿನಕ್ಕೆ 2-3 ಗಂಟೆಗಳ ಪಾಪಡ್ ಗೆ ಮೀಸಲಿಟ್ಟರೆ ಸಾಕು. 

ಇದನ್ನೂ ಓದಿ: LIC Policy For Children:ಎಲ್ಐಸಿ ಈ ಯೋಜನೆಯಲ್ಲಿ ದಿನಕ್ಕೆ 150 ರೂ. ಹೂಡಿಕೆ ಮಾಡಿದ್ರೆ 8.5ಲಕ್ಷ ರೂ. ರಿಟರ್ನ್!

ಸಣ್ಣ ಪ್ರಮಾಣದ ಬದಲು ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಶುರು ಮಾಡ್ತೇವೆ ಎನ್ನುವವರು ಅದಕ್ಕೆ ಬೇಕಾದ ಯಂತ್ರಗಳನ್ನು ಅಳವಡಿಸಿಕೊಳ್ಳಬಹುದು. ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಇದಲ್ಲದೆ ಜಾಗ ಹಾಗೂ ಕಚ್ಚಾ ವಸ್ತು ಮತ್ತು ಕೆಲಸಗಾರರನ್ನು ನೇಮಿಸಿಕೊಂಡು ವ್ಯಾಪಾರ ಶುರು ಮಾಡಬಹುದು. ದೇಶದೊಳಗೆ ಮಾತ್ರವಲ್ಲದೆ ವಿದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಬಯಸಿದರೆ ನೀವು FSSAI ನಂತಹ ಆಹಾರ ನಿಯಂತ್ರಕರ ಪರವಾನಗಿ ಪಡೆಯಬೇಕು.

ಹಪ್ಪಳ ವ್ಯಾಪಾರದಲ್ಲಿ ಎಷ್ಟು ನಷ್ಟ ? ಎಷ್ಟು ಲಾಭ ? : ಹಪ್ಪಳದ ವ್ಯಾಪಾರದಲ್ಲಿ ಸುಮಾರು ಶೇಕಡಾ 30-40 ರಷ್ಟು ಲಾಭವನ್ನು ನೀವು ಪಡೆಯಬಹುದು. ಒಂದು ಲಕ್ಷ ರೂಪಾಯಿ ಮೌಲ್ಯದ ಕಚ್ಚಾವಸ್ತು ತಂದರೆ ಅದರಿಂದ ಪಾಪಡ್ ತಯಾರಿಸಿ ಸುಮಾರು 1.3-1.4 ಲಕ್ಷ ರೂಪಾಯಿವರೆಗೆ ಮಾರಾಟ ಮಾಡಬಹುದು. ವೆಚ್ಚ ಹಾಗೂ ಲಾಭಗಳು ನೀವು ಹೇಗೆ ಹಪ್ಪಳ ತಯಾರಿಸುತ್ತಿದ್ದೀರಿ ಎಂಬುದನ್ನು ಅವಲಂಭಿಸಿರುತ್ತದೆ.  

ಒಂದ್ವೇಳೆ ನೀವು ವ್ಯಾಪಾರವನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಿದ್ರೆ ವೆಚ್ಚವೂ ಹೆಚ್ಚಿರುತ್ತದೆ. ಬೇಳೆಕಾಳು, ರುಬ್ಬುವ ಯಂತ್ರ, ಮಸಾಲೆ, ಮಿಕ್ಸಿಂಗ್ ಯಂತ್ರ, ಹಪ್ಪಳ ತಯಾರಿಸುವ ಯಂತ್ರ, ಒಣಗಿಸುವ ಯಂತ್ರ,ಪ್ಯಾಕಿಂಗ್ ಹೇಗೆ ಖರ್ಚು ಹೆಚ್ಚಾಗುತ್ತದೆ. ನೀವು ವರ್ಷಕ್ಕೆ 30 ಸಾವಿರ ಕೆಜಿ ಸಾಮರ್ಥ್ಯದ ಹಪ್ಪಳ ವ್ಯವಹಾರವನ್ನು ಮಾಡಲು ಬಯಸಿದರೆ  ನೀವು ಸುಮಾರು 6 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. 

ಇದನ್ನೂ ಓದಿ: Business Idea: ಅತಿ ಹೆಚ್ಚು ಬೇಡಿಕೆಯಿರೋ ಈ ಬ್ಯುಸಿನೆಸ್ ಶುರು ಮಾಡಿ ಲಾಭ ಗಳಿಸಿ

ಹಪ್ಪಳ ವ್ಯಾಪಾರದ ಪ್ರಚಾರ : ಸಣ್ಣ ಮಟ್ಟದಲ್ಲಿ ಮನೆಯಲ್ಲಿಯೇ ಮಾಡ್ತೇನೆ ಎನ್ನುವವರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಬಹುದು. ಸ್ಥಳೀಯ ಅಂಗಡಿಗಳಿಗೆ ನಿಮ್ಮ ಹಪ್ಪಳವನ್ನು ನೀವು ಮಾರಾಟ ಮಾಡಬಹುದು. ಗುಣಮಟ್ಟ ಚೆನ್ನಾಗಿದ್ದಲ್ಲಿ ಗ್ರಾಹಕರು ತಾವಾಗಿಯೇ ನಿಮ್ಮ ಬಳಿ ಬರಲು ಶುರು ಮಾಡ್ತಾರೆ ಎಂಬುದನ್ನು ಮರೆಯಬಾರದು. 
 

Follow Us:
Download App:
  • android
  • ios