LIC Policy For Children:ಎಲ್ಐಸಿ ಈ ಯೋಜನೆಯಲ್ಲಿ ದಿನಕ್ಕೆ 150 ರೂ. ಹೂಡಿಕೆ ಮಾಡಿದ್ರೆ 8.5ಲಕ್ಷ ರೂ. ರಿಟರ್ನ್!

ಮಕ್ಕಳ ಶಿಕ್ಷಣ ವೆಚ್ಚ,ಭವಿಷ್ಯದ ಸುರಕ್ಷತೆಗೆ ಹೂಡಿಕೆ ಮಾಡಲು ಬಯಸುವ ಪಾಲಕರಿಗೆ ಎಲ್ಐಸಿ ಜೀವನ್ ತರುಣ್ ಯೋಜನೆ ಉತ್ತಮ ಆಯ್ಕೆ ಎಂದೇ ಹೇಳಬಹುದು. ಈ ಯೋಜನೆಯನ್ನು ಮಕ್ಕಳ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ನೆರವಾಗುವಂತೆಯೇ ರೂಪಿಸಲಾಗಿದೆ. 

LIC Policy for Children Get Rs 8.5 Lakh Return at Maturity if You Invest Rs 150 Daily

Business Desk:ಜೀವ ವಿಮಾ ಪಾಲಿಸಿ ಅಂದ ತಕ್ಷಣ ಮೊದಲಿಗೆ ನೆನಪಾಗೋ ಹೆಸರೇ ಎಲ್ ಐಸಿ (LIC).ಭಾರತೀಯ ಜೀವ ವಿಮಾ ನಿಗಮ (LIC) ಆಯಾ ವಯೋಮಾನದ ಜನರಿಗೆ ಅನ್ವಯವಾಗುವಂತೆ ನಿರ್ದಿಷ್ಟ ಯೋಜನೆಗಳನ್ನು ಹೊಂದಿದೆ. ಕೇಂದ್ರ ಸರ್ಕಾರ ಎಲ್ಐಸಿಯಲ್ಲಿ ಬಹುಪಾಲು ಷೇರುಗಳನ್ನು ಹೊಂದಿರುವ ಕಾರಣ ಅಪಾಯವಿಲ್ಲದ (Risk free) ಹೂಡಿಕೆ (Investment) ನೆಚ್ಚಿಕೊಂಡಿರೋರಿಗೆ ಇದು ಉತ್ತಮ ಆಯ್ಕೆ. 

ಮಕ್ಕಳ (Children) ಭವಿಷ್ಯದ ಆರ್ಥಿಕ ಸುರಕ್ಷತೆ ಬಗ್ಗೆ ಪ್ರತಿಯೊಬ್ಬ ಪಾಲಕರು ಇಂದು ಯೋಚಿಸಲೇಬೇಕಾದ ಅಗತ್ಯವಿದೆ. ಶೈಕ್ಷಣಿಕ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಾಲ್ಯದಿಂದಲೇ ಒಂದಿಷ್ಟು ಕೂಡಿಡೋದು ಅವಶ್ಯಕ. ಈ ಹಿನ್ನೆಲೆಯಲ್ಲಿ ಭಾರತೀಯ ಜೀವ ವಿಮಾ ನಿಗಮದ (LIC) ಜೀವನ್ ತರುಣ್ ಪಾಲಿಸಿ (Jeevan Tarun policy ) ಅತ್ಯುತ್ತಮವಾದ ಯೋಜನೆಯಾಗಿದೆ. 

Personal Finance : ಗೃಹ- ಕಾರು ಸಾಲಕ್ಕಿಂತ ವೈಯಕ್ತಿಕ ಸಾಲ ಯಾಕೆ ದುಬಾರಿ ಗೊತ್ತಾ?

ಜೀವನ್ ತರುಣ್ ಪಾಲಿಸಿ ವಿಶೇಷತೆಯೇನು?
ಎಲ್ಐಸಿ ಜೀವನ್ ತರುಣ್ ಪಾಲಿಸಿಯನ್ನು (LIC Jeevan Tarun Policy) ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪಾಲಕರು ಮಕ್ಕಳ ಹೆಸರಿನಲ್ಲಿ ಅವರ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ರಿಸ್ಕ್ ಇಲ್ಲದ ಯೋಜನೆಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳೋರಿಗೆ ಎಲ್ಐಸಿ ಜೀವನ್ ತರುಣ್ ಪಾಲಿಸಿ ಉತ್ತಮ ಆಯ್ಕೆ ಎಂದೇ ಹೇಳಬಹುದು. ಏಕೆಂದ್ರೆ ಈ ಯೋಜನೆಯು ಮಕ್ಕಳಿಗೆ ಸುರಕ್ಷೆ ಹಾಗೂ ಉಳಿತಾಯ ಎರಡನ್ನೂ ಒದಗಿಸಬಲ್ಲದು. ಈ ಯೋಜನೆಯನ್ನು ಮಕ್ಕಳ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ನೆರವಾಗುವಂತೆಯೇ ರೂಪಿಸಲಾಗಿದೆ. ವಾರ್ಷಿಕ ಸರ್ವೈವಲ್ ಬೆನಿಫಿಟ್ ಪೇಮೆಂಟ್ಸ್ ಮೂಲಕ 20ರಿಂದ 24 ವಯಸ್ಸಿನ ಮಕ್ಕಳ ಶೈಕ್ಷಣಿಕ ಹಾಗೂ ಇತರ ಅವಶ್ಯಕತೆಗಳ ವೆಚ್ಚಗಳನ್ನು ಭರಿಸಲು ನೆರವು ನೀಡಲಾಗುತ್ತದೆ. ಹಾಗೆಯೇ 25ನೇ ವಯಸ್ಸಿನಲ್ಲಿ ಮೆಚ್ಯುರಿಟಿ ಪ್ರಯೋಜನಗಳನ್ನು (Maturity Benefit) ನೀಡಲಾಗುತ್ತದೆ. ಈ ಪಾಲಿಸಿ ಅವಧಿಯಲ್ಲಿ ಎಷ್ಟು ಪ್ರಮಾಣದ ಸರ್ವೈವಲ್ ಬೆನಿಫಿಟ್ಸ್ ಬೇಕೆಂದು ಪಾಲಿಸಿ ಮಾಡುವ ಸಮಯದಲ್ಲೇ ಪಾಲಿಸಿದಾರರು ಆಯ್ಕೆ ಮಾಡಬಹುದಾಗಿದೆ. ಇದಕ್ಕಾಗಿ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ.
ಆಯ್ಕೆ 1: ಸರ್ವೈವಲ್ ಬೆನಿಫಿಟ್ಸ್ ಇಲ್ಲ; ಯಾವುದೇ ಸರ್ವೈವಲ್ ಬೆನಿಫಿಟ್ಸ್ ಇಲ್ಲ. ಶೇ.100ರಷ್ಟು ಭರವಸೆ ನೀಡಿದ ಮೊತ್ತ
ಆಯ್ಕೆ 2: 5 ವರ್ಷಗಳ ತನಕ ಪ್ರತಿ ವರ್ಷ  ಭರವಸೆ ನೀಡಿರುವ ಮೊತ್ತದ ಶೇ.5ರಷ್ಟು;ಭರವಸೆ ನೀಡಿರುವ ಮೊತ್ತದ ಶೇ.75 
ಆಯ್ಕೆ 3: 5 ವರ್ಷಗಳ ತನಕ ಪ್ರತಿ ವರ್ಷ  ಭರವಸೆ ನೀಡಿರುವ ಮೊತ್ತದ ಶೇ.10ರಷ್ಟು; ಭರವಸೆ ನೀಡಿರುವ ಮೊತ್ತದ ಶೇ.50
ಆಯ್ಕೆ 4: 5 ವರ್ಷಗಳ ತನಕ ಪ್ರತಿ ವರ್ಷ  ಭರವಸೆ ನೀಡಿರುವ ಮೊತ್ತದ ಶೇ.15ರಷ್ಟು; ಭರವಸೆ ನೀಡಿರುವ ಮೊತ್ತದ ಶೇ.25

ಆರ್ಹತೆ?
ಎಲ್ಐಸಿ ಜೀವನ್ ತರುಣ್ ಪಾಲಿಸಿ ಪಡೆಯಲು ಕನಿಷ್ಠ ವಯೋಮಿತಿ 90 ದಿನಗಳು, ಗರಿಷ್ಠ ವಯೋಮಿತಿ 12 ವರ್ಷಗಳು. ಮಗುವಿಗೆ 20 ವರ್ಷವಾಗುವ ತನಕ ಪ್ರೀಮಿಯಂ ಪಾವತಿಸಬೇಕು. ಮಗುವಿಗೆ 25 ವರ್ಷವಾಗುವಾಗ ಪಾಲಿಸಿ ಅವಧಿ ಮುಕ್ತಾಯವಾಗುತ್ತದೆ. ಎಲ್ಐಸಿ ಜೀವನ್ ತರುಣ್ ಪಾಲಿಸಿ ಅಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 75,000ರೂ. 

Business Idea : ಕಣ್ಣೀರು ತರಿಸೋ ಈರುಳ್ಳಿ ಈ ವ್ಯವಹಾರ ಶುರು ಮಾಡಿ ಹಣ ಗಳಿಸಿ

ದಿನಕ್ಕೆ 150ರೂ. ಹೂಡಿಕೆ ಮಾಡಿದ್ರೆ 8.5 ಲಕ್ಷ ರೂ. 
ಎಲ್ಐಸಿ ಜೀವನ್ ತರುಣ್ ಪಾಲಿಸಿ ಅಡಿಯಲ್ಲಿ ನೀವು ಪ್ರೀಮಿಯಂ ಪಾವತಿಸಲು ಪ್ರಾರಂಭಿಸುವಾಗ ನಿಮ್ಮ ಮಗುವಿನ ವಯಸ್ಸು 12 ವರ್ಷಗಳಾಗಿದ್ರೆ, ಆಗ ಪಾಲಿಸಿ ಅವಧಿ 13ವರ್ಷಗಳು. ಭರವಸೆ ನೀಡಿರುವ ಕನಿಷ್ಠ ಮೊತ್ತ 5 ಲಕ್ಷ ರೂ. ಇನ್ನು ಈ ಪಾಲಿಸಿಯಲ್ಲಿ ನೀವು ಪ್ರತಿದಿನ  150ರೂ. ಪಾವತಿಸಿದ್ರೆ ವಾರ್ಷಿಕ ಪ್ರೀಮಿಯಂ ಸುಮಾರು 55,000ರೂ. ಆಗಿರುತ್ತದೆ. ಎಂಟು ವರ್ಷಗಳಲ್ಲಿ ನಿವ್ವಳ ಹೂಡಿಕೆ ಸುಮಾರು 4,40,665ರೂ. ಇದರ ಮೇಲೆ ನೀವು 2,47,000ರೂ. ಬೋನಸ್ ಪಡೆಯುತ್ತೀರಿ. ಈ ಯೋಜನೆಯಲ್ಲಿ ಭರವಸೆ ನೀಡಿರುವ ಮೊತ್ತ 5 ಲಕ್ಷ ರೂ. ಇದರ ಹೊರತಾಗಿ 97,500ರೂ. ಲಾಯಲ್ಟಿ ಕೂಡ ಸಿಗುತ್ತದೆ. ಎಲ್ಲ ಒಟ್ಟು ಸೇರಿಸಿದ್ರೆ ಕೊನೆಯಲ್ಲಿ ನಿಮಗೆ ಎಲ್ಐಸಿ ಜೀವನ್ ತರುಣ್ ಪಾಲಿಸಿ ಅಡಿಯಲ್ಲಿ ಸುಮಾರು 8,44,500ರೂ. ಸಿಗುತ್ತದೆ. 

Latest Videos
Follow Us:
Download App:
  • android
  • ios