ಬೆಂಗಳೂರು(ಜು.11): ನಿಮ್ಮ ಪ್ಯಾನ್ ಕಾರ್ಡ್’ಗೆ ನಿಮ್ಮ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಇದೇ ಆ.31 ಕೊನೆಯ ದಿನಾಂಕ ಎಂದು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ. 

ಆಧಾರ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳು ಸೆ.01ರಿಂದ ಮಾನ್ಯತೆ ಕಳೆದುಕೊಳ್ಳಲಿವೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ದೇಶದಲ್ಲಿ ಒಟ್ಟು 400 ಮಿಲಿಯನ್ ಪ್ಯಾನ್ ಕಾರ್ಡ್’ಗಳಿದ್ದು, ಇವುಗಳ ಪೈಕಿ 180 ಮಿಲಿಯನ್ ಪ್ಯಾನ್ ಕಾರ್ಡ್’ಗಳು ಆಧಾರ್’ನೊಂದಿಗೆ ಜೋಡಣೆಯಾಗಿಲ್ಲ.

ಆದರೆ ತೆರಿಗೆ ಕಟ್ಟಲು ಪ್ಯಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಕೂಡ ಬಳಸಬಹುದು ಎಂದು ಕೇಂದ್ರ ಬಜೆಟ್’ನಲ್ಲಿ ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕೆಲವೊಂದು ರಿಯಾಯ್ತಿ ನೀಡಿದೆ.

ಪ್ರಮುಖವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳ ಮಾನ್ಯತೆ ರದ್ದಾಗುವುದಾದರೂ, ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಲೆಕ್ಟ್ರಾನಿಕ್ ಪ್ಯಾನ್ ನಂಬರ್’ಗಳನ್ನು ನೀಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಈ ಎಲೆಕ್ಟ್ರಾನಿಕ್ ಪ್ಯಾನ್ ನಂಬರ್’ಗಳನ್ನು ಆನ್’ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಪ್ಯಾನ್ ಕಾರ್ಡ್’ಗೆ ಆಧಾರ್ ಲಿಂಕ್ ಮಾಡಿರದವರಿಗೆ ಕೇಂದ್ರದಿಮದ ರಿಲೀಫ್ ಸಿಕ್ಕಂತಾಗಿದೆ.