ಭಾರತದಲ್ಲಿ ಪ್ಯಾನ್ ಕಾರ್ಡ್‌ಗಳನ್ನು ಅರ್ಥಮಾಡಿಕೊಳ್ಳುವ ಸಮಗ್ರ ಮಾರ್ಗದರ್ಶಿ. ಅದರ ಪ್ರಾಮುಖ್ಯತೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆಗಳ ಬಗ್ಗೆ ಉತ್ತರ ತಿಳಿದುಕೊಳ್ಳಿ.
ಒಂದು ಕಾಲವಿತ್ತು. ದುಡಿದ ಹಣವನ್ನೆಲ್ಲವನ್ನೂ ಆದಾಯ ಇಲಾಖೆ ಕಣ್ಣಿಗೆ ಮಣ್ಣೆರಿಚಿ ಅನುಭವಿಸಬಹುದಿತ್ತು. ಆದರೀಗ ಡಿಜಿಟಲ್ ಯುಗ. 10 ರೂ. ಆದಾಯದ ಮೇಲೂ ಸಂಬಂಧಿಸಿದ ಇಲಾಖೆ ಕಣ್ಣಿಟ್ಟಿರುತ್ತೆ. ಆದರೆ, ಎಲ್ಲವನ್ನೂ ಮ್ಯಾನೇಜ್ ಮಾಡಲು ನೆರವಾಗುವುದು ಈ ಪ್ಯಾನ್ ಕಾರ್ಡ್. ಏನೀದರ ವಿಶೇಷತೆ?
ಕಂಪ್ಯೂಟರ್ ಆಧಾರಿತ ವ್ಯವಸ್ಥೆಯಾದ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಪ್ರತಿಯೊಬ್ಬ ಭಾರತೀಯನೂ ತೆರಿಗೆ ಪಾವತಿಸಲು ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಈ ವ್ಯವಸ್ಥೆ ಮೂಲಕ, ಒಬ್ಬ ವ್ಯಕ್ತಿಯ ಎಲ್ಲ ತೆರಿಗೆ-ಸಂಬಂಧಿಸಿದ ಮಾಹಿತಿಯನ್ನು ಒಂದೇ ಪ್ಯಾನ್ ಸಂಖ್ಯೆಗೆ ದಾಖಲಿಸಲಾಗುತ್ತದೆ. ಇದು ಮಾಹಿತಿ ಸಂಗ್ರಹಕ್ಕೆ ಮೊದಲ ಕೀಲಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಶಾದ್ಯಂತ ಹಂಚಿಕೊಳ್ಳುವ ಈ ಸಂಖ್ಯೆ, ವಿಶಿಷ್ಟವಾಗಿರುತ್ತದೆ. ಒಬ್ಬರಿಗಿರುವ ಸಂಖ್ಯೆ ಮತ್ತೊಬ್ಬರಿಗೆ ಇರುವುದಿಲ್ಲ.
ಪ್ಯಾನ್ ಕಾರ್ಡ್ ಎಂದರೇನು?: 10 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ ಇದು. ಆದಾಯ ತೆರಿಗೆ ಇಲಾಖೆ ಇದನ್ನು ನೀಡುತ್ತದೆ. ಇದೊಂದು ಸಂಖ್ಯೆಯಾದರೂ, ಪ್ಯಾನ್ ಕಾರ್ಡಿನಲ್ಲಿ ನಿಮ್ಮ ಪ್ಯಾನ್ ಜೊತೆಗೆ ಹೆಸರು, ಜನ್ಮ ದಿನಾಂಕ, ತಂದೆ ಅಥವಾ ಸಂಗಾತಿಯ ಹೆಸರು ಮತ್ತು ಭಾವಚಿತ್ರವೂ ಇರುತ್ತದೆ. ಆದ್ದರಿಂದ ಈ ಕಾರ್ಡ್‌ನ ಪ್ರತಿಗಳನ್ನು ಗುರುತಿನ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಎಲ್ಲೆಡೆ ಬಳಸಬಹುದು.
ಪ್ಯಾನ್ ಕಾರ್ಡ್ ವಿಧಗಳು: ವಿವಿಧ ತೆರಿಗೆ ಪಾವತಿಸುವ ಘಟಕಗಳಿಗೂ ಪ್ಯಾನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಅದರ ಆಧಾರದ ಮೇಲೆ, ಪ್ಯಾನ್ ಕಾರ್ಡನ್ನು ಈ ರೀತಿ ವಿಭಾಗಿಸಲಾಗಿದೆ.
- ಭಾರತೀಯ ವ್ಯಕ್ತಿಗಳಿಗೆ ನೀಡುವ ಪ್ಯಾನ್ ಕಾರ್ಡ್
- ಭಾರತೀಯ ಕಂಪನಿಗಳಿಗೆ ನೀಡುವ ಪ್ಯಾನ್ ಕಾರ್ಡ್
- ವಿದೇಶಿ ನಾಗರಿಕರಿಗೆ ಪ್ಯಾನ್
- ವಿದೇಶಿ ಕಂಪನಿಗಳಿಗೆ ಪ್ಯಾನ್
ವ್ಯಕ್ತಿಗಳಿಗೆ ನೀಡಲಾಗುವ ಪ್ಯಾನ್ ಕಾರ್ಡ್‌ಗಳು ವ್ಯಕ್ತಿಯ ಭಾವಚಿತ್ರ, ಹೆಸರು, ತಂದೆ ಅಥವಾ ಸಂಗಾತಿ ಹೆಸರು, ಜನ್ಮ ದಿನಾಂಕ, ಸಹಿ, ದೃಢೀಕರಣ ಹೊಲೋಗ್ರಾಮ್, QR ಕೋಡ್, ಪ್ಯಾನ್ ನೀಡಿದ ದಿನಾಂಕ ಮತ್ತು ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರುತ್ತವೆ. ಕಂಪನಿಗಳಿಗೆ ನೀಡಲಾಗುವ ಪ್ಯಾನ್ ಕಾರ್ಡ್‌ಗಳು ಕಂಪನಿಯ ಹೆಸರು, ಅದರ ನೋಂದಣಿ ದಿನಾಂಕ, ಪ್ಯಾನ್ ಸಂಖ್ಯೆ, ಹೊಲೊಗ್ರಾಮ್, QR ಕೋಡ್ ಮತ್ತು ಪ್ಯಾನ್ ನೀಡಿದ ದಿನಾಂಕವನ್ನು ಹೊಂದಿರುತ್ತವೆ. ಇದು ಭಾವಚಿತ್ರ ಅಥವಾ ಸಹಿಯನ್ನು ಹೊಂದಿರುವುದಿಲ್ಲ.
ಭಾರತದಲ್ಲಿ ಪ್ಯಾನ್ ಕಾರ್ಡ್ ಏಕೆ ಮುಖ್ಯ?: ತೆರಿಗೆದಾರರ ಎಲ್ಲ ಹಣಕಾಸಿನ ವಹಿವಾಟುಗಳಿಗೆ ಅವಶ್ಯಕವಾಗಿರುವುದದಿಂದ ಪ್ಯಾನ್ ಕಾರ್ಡ್‌ಗೆ ಭಾರತದಲ್ಲಿ ತನ್ನದೇ ಆದ ವಿಶೇಷ ಸ್ಥಾನವಿದೆ. ಹಣದ ಒಳಹರಿವು ಮತ್ತು ಹೊರಹರಿವನ್ನು ಪತ್ತೆ ಹಚ್ಚಲು ಇದನ್ನು ಬಳಸಲಾಗುತ್ತದೆ. ಆದಾಯ ತೆರಿಗೆ ಪಾವತಿಸುವಾಗ, ತೆರಿಗೆ ಮರುಪಾವತಿಗಳನ್ನು ಸ್ವೀಕರಿಸುವಾಗ ಮತ್ತು ಆದಾಯ ತೆರಿಗೆ ಇಲಾಖೆಯಿಂದ ಸಂವಹನವನ್ನು ಸ್ವೀಕರಿಸುವಾಗ ಈ ಸಂಖ್ಯೆ ಪ್ರಮುಖ ಪಾತ್ರವಹಿಸುತ್ತದೆ.
2019 ರ ಕೇಂದ್ರೀಯ ಬಜೆಟ್‌ನಲ್ಲಿ, ಪ್ಯಾನ್ ಇಲ್ಲದವರು ತಮ್ಮ ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಈ ಹಿಂದೆ ಪ್ಯಾನ್ ಕಡ್ಡಾಯವಾಗಿದ್ದ ಪ್ರತಿಯೊಂದೂ ಉದ್ದೇಶಕ್ಕೂ ಬಳಸಬಹುದೆಂದು ಪ್ರಸ್ತಾಪಿಸಲಾಗಿದೆ. ಇದರರ್ಥ ನೀವು ಇನ್ನೂ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಅಥವಾ ಪ್ಯಾನ್ ಹೊಂದಿಲ್ಲದಿದ್ದರೂ ಆಧಾರ್ ಹೊಂದಿದ್ದರೆ, ನೀವು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬೇಕಾಗಿಲ್ಲ ಅಥವಾ ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದಾಗ್ಯೂ, ಇದರ ಬಗ್ಗೆ ನಿಯಮಗಳು ಇನ್ನೂ ರಚನೆ/ನವೀಕರಣ/ಅನುಮೋದನೆಯ ಹಂತದಲ್ಲಿದೆ.
ಆದಾಗ್ಯೂ, ಹೆಚ್ಚಿನ ಸಂಖ್ಯೆಯ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಇನ್ನೂ ಅಗತ್ಯ ಗುರುತಿನ ಪುರಾವೆಯಾಗಿಯೂ ಬಳಸುವ ಈ ಸಂಖ್ಯೆಯಿಂದ ಹಲವು ಉಪಯೋಗಗಳಿವೆ..
ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ಒಂದರಲ್ಲಿ ಪ್ಯಾನ್ ಕಾರ್ಡ್ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಮಾಡಬಹುದು:
Protean e-Gov Technologies Limited (ಹಿಂದಿದ್ದ NSDL) ಹಾಗೂ UTIITSL ವೆಬ್‌ಸೈಟ್‌ಗಳಲ್ಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ ಜಿಲ್ಲಾ ಕೇಂದ್ರಗಳಲ್ಲಿರೋ ಪ್ಯಾನ್ ಏಜೆನ್ಸಿಗಳಲ್ಲಿಯೂ ಆಫ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸಬಹುದು. ಹೊಸ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವುದಲ್ಲದೇ, ತಿದ್ದುಪಡಿ ಮಾಡಲೂ ಅವಕಾಶವಿರಲಿದೆ. ಆಥವಾ ನೀವೇ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಬದಲಾಯಿಸಬಹುದು. ಪ್ಯಾನ್ ಕಾರ್ಡ್ ಕಳ್ಕೊಂಡರೆ ನಕಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಜೊತೆಗ, ಮರುಮುದ್ರಣಕ್ಕೂ ರಿಕ್ವೆಸ್ಟ್ ಕಳುಹಿಸಲು ಇಲ್ಲಿ ಅವಕಾಶವಿದೆ.
ಹೊಸ ಪ್ಯಾನ್‌ಗಾಗಿ, ಭಾರತೀಯ ನಾಗರಿಕರು ಮತ್ತು ಅನಿವಾಸಿ ಭಾರತೀಯರು (ಕಂಪನಿಗಳು, ಎನ್‌ಜಿಒಗಳು, ಪಾಲುದಾರಿಕೆ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಟ್ರಸ್ಟ್‌ಗಳು, ಇತ್ಯಾದಿ) ಫಾರ್ಮ್ 49A ಅನ್ನು ಭರ್ತಿ ಮಾಡಬೇಕು. ವಿದೇಶಿಯರು ಮತ್ತು ವಿದೇಶಿ ಸಂಸ್ಥೆಗಳು ಫಾರ್ಮ್ 49AA ಅನ್ನು ಬಳಸಬೇಕಾಗುತ್ತದೆ. ಅಗತ್ಯವಿರುವ ಎಲ್ಲ ಪ್ಯಾನ್ ದಾಖಲೆಗಳೊಂದಿಗೆ ಈ ಫಾರ್ಮ್‌ಗಳನ್ನು ಆದಾಯ ತೆರಿಗೆ ಪ್ಯಾನ್ ಸೇವಾ ಘಟಕಕ್ಕೆ ಸಲ್ಲಿಸಬೇಕು.
ನೀವು ಹೊಸ ಅಥವಾ ನಕಲಿ ಪ್ಯಾನ್‌ಗಾಗಿ ಅರ್ಜಿ ಸಲ್ಲಿಸಿದ ನಂತರ ಅಥವಾ ತಿದ್ದುಪಡಿಗಳು/ಬದಲಾವಣೆಗಳಿಗಾಗಿ ವಿನಂತಿಸಿದ ನಂತರ, ಒದಗಿಸಲಾದ ಸ್ವೀಕೃತಿ ಸಂಖ್ಯೆಯ ಮೂಲಕ ನೀವು ಪ್ಯಾನ್ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಪ್ರೋಟೀನ್ ಇ-ಗೋವ್ ಟೆಕ್ನಾಲಜೀಸ್ ಲಿಮಿಟೆಡ್ ವೆಬ್‌ಸೈಟ್ (ಹಿಂದೆ ಎನ್‌ಎಸ್‌ಡಿಎಲ್) ಪ್ರಕಾರ, ಕಾರ್ಡ್‌ಗಳನ್ನು ಮುದ್ರಿಸುವ ಮತ್ತು ರವಾನಿಸುವ ಪೂರ್ಣ ಪ್ರಕ್ರಿಯೆಯು ಸರಿ ಸುಮಾರು 2 ವಾರಗಳು ಅಥವಾ 14 ದಿನಗಳನ್ನು ತೆಗೆದುಕೊಳ್ಳುತ್ತದೆ.
ಅಗತ್ಯ ದಾಖಲೆಗಳು
ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಫಾರ್ಮ್ 49A ಅಥವಾ 49AA ಸೇರಿ ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಏನವು?
ನೀವು ವೈಯಕ್ತಿಕ ಅರ್ಜಿದಾರರಾಗಿದ್ದರೆ
- ಆಧಾರ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಇತ್ಯಾದಿ ಗುರುತಿನ ಪುರಾವೆ.
- ಯುಟಿಲಿಟಿ ಬಿಲ್, ನೀರಿನ ಬಿಲ್, ಬ್ಯಾಂಕ್ ಖಾತೆ ಹೇಳಿಕೆ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಚ್ಸ ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಸರ್ಕಾರ ನೀಡಿದ ನಿವಾಸ ಪ್ರಮಾಣಪತ್ರ, ವಿವಾಹ ಪ್ರಮಾಣಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಮುಂತಾದ ವಿಳಾಸದ ಪುರಾವೆ.
ನೀವು ಹಿಂದೂ ಅವಿಭಜಿತ ಕುಟುಂಬಕ್ಕೆ (HUF) ಸೇರಿದವರಾಗಿದ್ದರೆ
- ನೀವು HUFನ ಕರ್ತ ನೀಡಿದ ಅಫಿಡವಿಟ್ ಸಲ್ಲಿಸಬೇಕು. ಅಫಿಡವಿಟ್‌ನಲ್ಲಿ ಹೆಸರು, ವಿಳಾಸ ಮತ್ತು ಪ್ರತಿಯೊಬ್ಬರೂ ಸಂಬಂಧಿ ತಂದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
- ನೀವು HUFಗೆ ಸೇರಿದವರಾಗಿದ್ದು, ವೈಯಕ್ತಿಕವಾಗಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುತ್ತಿದ್ದರೆ, ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.
ಭಾರತದಲ್ಲಿ ನೋಂದಾಯಿಸಲಾದ ಕಂಪನಿಗಳಿಗೆ
- ಕಂಪನಿಗಳಿಗೆ ನೀಡಿರುವ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಭಾರತದಲ್ಲಿ ನೋಂದಾಯಿತ ಸಂಸ್ಥೆಗಳು ಮತ್ತು ಪಾರ್ಟನರ್‌ಶಿಫ್ ಫರ್ಮ್:
- ಕಂಪನಿಗಳ ನೋಂದಣಿ ಪ್ರಮಾಣಪತ್ರ ಹಾಗೂ ಪಾಲುದಾರಿಕೆ ಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಭಾರತದಲ್ಲಿ ರಚಿಸಲಾದ ಅಥವಾ ನೋಂದಾಯಿಸದ ಟ್ರಸ್ಟ್
- ದತ್ತಿ ಆಯುಕ್ತರು ನೀಡಿದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಟ್ರಸ್ಟ್ ಅಥವಾ ನೋಂದಾಯಿತ ಸಂಘಗಳು:
- ಸಹಕಾರಿ ಸಂಘದ ರಿಜಿಸ್ಟ್ರಾರ್ ಅಥವಾ ದತ್ತಿ ಆಯುಕ್ತರು ನೀಡಿದ ಒಪ್ಪಂದದ ಪ್ರತಿ ಅಥವಾ ನೋಂದಣಿ ಸಂಖ್ಯೆಯ ಪ್ರಮಾಣಪತ್ರ, ಅಥವಾ ವಿಳಾಸ ಮತ್ತು ಗುರುತನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಕೇಂದ್ರ ಅಥವಾ ರಾಜ್ಯ ಸರ್ಕಾರವು ನೀಡಿದ ಯಾವುದಾದರೂ ದಾಖಲೆ.
ಭಾರತದ ನಾಗರಿಕರಲ್ಲದಿದ್ದರೆ?
- ಭಾರತ ಸರ್ಕಾರ ನೀಡಿದ PIO (Person of Indian Origin)ಪ್ರತಿ, ಭಾರತ ಸರ್ಕಾರ ನೀಡಿದ OCI (Oversease Citizen of India) ಪ್ರತಿ, ಪಾಸ್‌ಪೋರ್ಟ್ ಪ್ರತಿ ಮುಂತಾದ ಗುರುತಿನ ಪುರಾವೆಗಳು.
- ವಿಳಾಸದ ಪುರಾವೆಯು ವಾಸಿಸುವ ದೇಶದ ಬ್ಯಾಂಕ್ ಸ್ಟೇಟ್‌ಮೆಂಟ್, NRE ಬ್ಯಾಂಕ್ ಸ್ಟೇಟ್‌ಮೆಂಟ್, ಭಾರತೀಯ ಕಂಪನಿಯಿಂದ ನೀಡಲಾದ ವೀಸಾ ಪ್ರತಿ, FRO ನೀಡಿದ ನೋಂದಣಿ ಪ್ರಮಾಣ ಪತ್ರ ಇತ್ಯಾದಿಗಳಾಗಿರಬಹುದು.
ಹಣಕಾಸು ವಹಿವಾಟುಗಳಲ್ಲಿ PAN ಉಪಯೋಗ
- ನೇರ ತೆರಿಗೆಗಳನ್ನು ಪಾವತಿಸುವಾಗ PAN ಉಲ್ಲೇಖಿಸಬೇಕು. ತೆರಿಗೆದಾರರು ಆದಾಯ ತೆರಿಗೆಯನ್ನು ಪಾವತಿಸುವಾಗಲೂ ಈ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ.
- ಬ್ಯುಸಿನೆಸ್ ಅಥವಾ ಕಂಪನಿಯನ್ನು ನೋಂದಾಯಿಸುವಾಗ, PAN ಮಾಹಿತಿಯನ್ನು ಒದಗಿಸಬೇಕಾಗುತ್ತದೆ.
- ಹಲವು ಹಣಕಾಸಿನ ವಹಿವಾಟುಗಳಿಗೆ PAN ಮಾಹಿತಿಯ ಅಗತ್ಯವಿರುತ್ತದೆ. ಈ ವಹಿವಾಟುಗಳಲ್ಲಿ ಕೆಲವು:
PANನಿಂದೇನು ಉಪಯೋಗ?
- PAN ಕಾರ್ಡ್ ಹೆಸರು, ವಯಸ್ಸು ಮತ್ತು ಭಾವಚಿತ್ರ ಹೊಂದಿರುತ್ತದೆ. ಅದನ್ನು ದೇಶಾದ್ಯಂತ ಮಾನ್ಯ ಗುರುತಿನ ಪುರಾವೆಯಾಗಿ ಬಳಸಬಹುದು.
- ನಿಮ್ಮ ತೆರಿಗೆ ಪಾವತಿಯನ್ನು ಟ್ರ್ಯಾಕ್ ಮಾಡಲು PAN ಅತ್ಯುತ್ತಮ ಮಾರ್ಗ. ಇಲ್ಲದಿದ್ದರೆ, ನಿಮ್ಮ ತೆರಿಗೆ ಪಾವತಿಯನ್ನು ಪರಿಶೀಲಿಸಲಾಗದ ಕಾರಣ ನೀವು ಅದನ್ನು ಹಲವು ಬಾರಿ ಪಾವತಿಸಬೇಕಾಗಬಹುದು.
- ಪ್ರತಿಯೊಂದು ಘಟಕಕ್ಕೂ ಪ್ಯಾನ್ ವಿಶಿಷ್ಟವಾಗಿರುವುದರಿಂದ, ತೆರಿಗೆ ವಂಚನೆ ಅಥವಾ ಇತರೆ ವಂಚನೆಯ ಉದ್ದೇಶಗಳಿಗಾಗಿ ಅದರ ದುರುಪಯೋಗ ಅಸಾಧ್ಯ.
- ವಿದ್ಯುತ್ ಬಿಲ್, ದೂರವಾಣಿ, ಎಲ್‌ಪಿಜಿ ಮತ್ತು ಇಂಟರ್ನೆಟ್‌ನಂತಹ ಉಪಯುಕ್ತತಾ ಸಂಪರ್ಕಗಳನ್ನು ಪಡೆಯಲು ಪ್ಯಾನ್ ಕಾರ್ಡ್ ಬಳಸಬಹುದು.
ಯಾರು ಪ್ಯಾನ್ ಪಡೆಯಬೇಕು?
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A ಅಡಿಯಲ್ಲಿ, ಈ ಕೆಳಗಿನ ತೆರಿಗೆ ಪಾವತಿಸುವ ಸಂಸ್ಥೆಗಳು ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರಬೇಕು:
ತೆರಿಗೆ ಪಾವತಿಸಿದ ಅಥವಾ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಪಾವತಿಸಲು ಹೊಣೆಗಾರರಾಗಿರುವ ಪ್ರತಿಯೊಬ್ಬರೂ ಪ್ಯಾನ್ ಹೊಂದಿರಬೇಕು. ಸ್ಲ್ಯಾಬ್‌ಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಯಾವುದೇ ಮೌಲ್ಯಮಾಪನ ವರ್ಷದಲ್ಲಿ ರೂ.5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ವಹಿವಾಟು ಗಳಿಸುವ ವ್ಯವಹಾರ ಅಥವಾ ವೃತ್ತಿಪರ ಅಭ್ಯಾಸವನ್ನು ನಡೆಸುತ್ತಿರುವ ಯಾವುದೇ ವ್ಯಕ್ತಿ.
ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅಥವಾ ಯಾವುದೇ ಪ್ರಚಲಿತ ಕಾನೂನಿನ ಪ್ರಕಾರ ಯಾವುದೇ ರೀತಿಯ ತೆರಿಗೆ ಅಥವಾ ಸುಂಕ ಶುಲ್ಕಗಳನ್ನು ಪಾವತಿಸಲು ಹೊಣೆಗಾರರಾಗಿರುವ ಆಮದುದಾರರು ಮತ್ತು
ರಫ್ತುದಾರರು:
- ಎಲ್ಲ ರೀತಿಯ ಟ್ರಸ್ಟ್‌ಗಳು, ದತ್ತಿ ಸಂಸ್ಥೆಗಳು ಮತ್ತು ಸಂಘಗಳು.
- ಎಲ್ಲ ತೆರಿಗೆ ಪಾವತಿಸುವ ಘಟಕಗಳು - ಅಪ್ರಾಪ್ತ ವಯಸ್ಕರು, ವ್ಯಕ್ತಿಗಳು, HUFಗಳು, ಪಾಲುದಾರರು, ಕಂಪನಿಗಳು, ವ್ಯಕ್ತಿಗಳ ಸಂಸ್ಥೆ, ಟ್ರಸ್ಟ್‌ಗಳು ಮತ್ತು ಇತರರು - ಪ್ಯಾನ್‌ಗೆ ಅರ್ಜಿ ಸಲ್ಲಿಸಬೇಕು.
ಕಾರ್ಡ್‌ನ ಸಿಂಧುತ್ವ ಎಷ್ಟು?
- ವಿಳಾಸದಲ್ಲಿ ಯಾವುದೇ ಬದಲಾವಣೆ ಆದರೂ, ನಿಮ್ಮ ಪ್ಯಾನ್ ಕಾರ್ಡ್ ಜೀವಿತಾವಧಿಗೆ ಮಾನ್ಯವಾಗಿರುತ್ತದೆ.
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಏನಾಗುತ್ತದೆ?
- ತೆರಿಗೆ ಬರುವ ಆದಾಯ ಹೊಂದಿದ್ದರೂ ಪ್ಯಾನ್ ಇಲ್ಲವೆಂದರೆ ಈ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
- ಭಾರತದ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದಂತೆ ನಿಮ್ಮ ಗಳಿಕೆ ಮತ್ತು ಸಂಪತ್ತಿನ ಮೇಲೆ ಫ್ಲಾಟ್ 30% ತೆರಿಗೆ. ಈ ನಿಯಮವು ವ್ಯಕ್ತಿಗಳು, ಕಂಪನಿಗಳು ಮತ್ತು ತೆರಿಗೆಗೆ ಅರ್ಹರಾಗಿರುವ ಎಲ್ಲ ಘಟಕಗಳು ವಿದೇಶಿ ಪ್ರಜೆಗಳು ಮತ್ತು ಭಾರತದ ಹೊರಗೆ ನೋಂದಾಯಿಸಲಾದ ಸಂಸ್ಥೆಗಳಿಗೂ ಅನ್ವಯಿಸುತ್ತದೆ.
- ಮೋಟಾರು ವಾಹನ, ರೂ. 10 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿ ಖರೀದಿಸಲು ಅಥವಾ ಬ್ಯಾಂಕ್ ಖಾತೆಯನ್ನು ತೆರೆಯಲು ಸಾಧ್ಯವಾಗದಿರುವುದು, ಇತರೆ ಚಟುವಟಿಕೆಗಳಲ್ಲಿ ಸೇರಿವೆ.
- ತಮ್ಮ ಹಣಕಾಸಿನ ಚಟುವಟಿಕೆಗಳು ಮತ್ತು ಸಂಗ್ರಹಣೆಯ ದೊಡ್ಡ ಭಾಗವನ್ನು ನಡೆಸಲು ಪ್ಯಾನ್ ಇಲ್ಲದಿದ್ದರೆ ಕಷ್ಟ. ಆದರೆ, ಆಧಾರ್ ಕಾರ್ಡನ್ನೇ ಮಾನ್ಯವೆಂದು ಪರಿಗಣಿಸಿ ಪ್ಯಾನ್ ಇಲ್ಲದಿದ್ದರೂ ನಡೆಯುತ್ತೆ
ಪ್ಯಾನ್ ಅರ್ಜಿ ಏನು ಮಾಡಬೇಕು, ಮಾಡಬಾರದು?
- ನೀವು ಸಲ್ಲಿಸುತ್ತಿರುವ ಗುರುತು ಮತ್ತು ವಿಳಾಸ ಪುರಾವೆ ದಾಖಲೆಗಳ ಪ್ರಕಾರ ಎಲ್ಲ ವಿವರಗಳನ್ನು ಭರ್ತಿ ಮಾಡಿ.
- ಅರ್ಜಿ ತಿರಸ್ಕೃತವಾಗುವುದನ್ನು ತಪ್ಪಿಸಲು ಫಾರ್ಮ್ ಸಲ್ಲಿಸುವ ಮೊದಲು ಮ್ಯಾಜಿಸ್ಟ್ರೇಟ್/ನೋಟರಿಯಿಂದ ನಿಮ್ಮ ಹೆಬ್ಬೆರ ಗುರುತನ್ನು ದೃಢೀಕರಿಸಿ.
- ಫಾರ್ಮ್‌ನಲ್ಲಿ ಸಂಪೂರ್ಣ ವಿಳಾಸದೊಂದಿಗೆ ಸಂಪರ್ಕ ವಿವರಗಳನ್ನು ಒದಗಿಸಿ.
- ಅರ್ಜಿ ನಮೂನೆಯನ್ನು ದೊಡ್ಡ ಅಕ್ಷರಗಳಲ್ಲಿ ಭರ್ತಿ ಮಾಡಿ.
- ಫಾರ್ಮ್‌ನಲ್ಲಿ ಎಲ್ಲಿಯೂ ತಿದ್ದುಪಡಿಗಳನ್ನು ಮಾಡಬೇಡಿ ಅಥವಾ ಅಗ್ತಯಕ್ಕಿಂತ ಹೆಚ್ಚನ್ನೂ ಏನೂ ಬರೆಯಬೇಡಿ.
- ಮೊದಲ ಹೆಸರು ಅಥವಾ ಕೊನೆ ಹೆಸರಿನ ಕಾಲಮ್‌ಗಳಲ್ಲಿ ಮೊದಲಕ್ಷರಗಳನ್ನು ಬಳಸಬೇಡಿ.
- ನಿಮ್ಮ ಹಳೆಯ ಪ್ಯಾನ್ ಕಾರ್ಡ್ ಳೆದುಹೋದರೆ/ಕಳ್ಳತನವಾಗಿದ್ದರೆ/ವಿರೂಪಗೊಂಡಿದ್ದರೆ ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಡಿ. ಬದಲಿಗೆ ನಕಲಿ ಪ್ಯಾನ್‌ಗಾಗಿ ವಿನಂತಿಸಿ.
- ಪ್ಯಾನ್ ಹಂಚಿಕೆಯನ್ನು ವಿನಂತಿಸುವಾಗ ದಯವಿಟ್ಟು 'ಫಾರ್ಮ್ 49AA' ಅನ್ನು ಬಳಸಿ.
- 3.5 ಸೆಂ.ಮೀ X 2.5 ಸೆಂ.ಮೀ ಇರುವ ಎರಡು ಇತ್ತೀಚಿನ ಬಣ್ಣದ ಭಾವಚಿತ್ರಗಳನ್ನು ಲಗತ್ತಿಸಿ.
- ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 114(4) ರ ಪ್ರಕಾರ, ದಯವಿಟ್ಟು ಗುರುತಿನ ಪುರಾವೆ (POI) ಮತ್ತು ವಿಳಾಸದ ಪುರಾವೆ (POA) ಅನ್ನು ಸೇರಿಸಿ. ಅರ್ಜಿಯಲ್ಲಿ ಪಟ್ಟಿ ಮಾಡಲಾದ ವಿಳಾಸವನ್ನು POA ಒಳಗೊಂಡಿರಬೇಕು.
- ಪ್ರತಿನಿಧಿ ಮೌಲ್ಯಮಾಪಕರ ಮಾಹಿತಿಯೊಂದಿಗೆ ಅರ್ಜಿ ನಮೂನೆಯ ಕಾಲಮ್ 14 ಅನ್ನು ಭರ್ತಿ ಮಾಡಿ (ನಿಮಗೆ ಅನ್ವಯವಾಗುವುದಾದರೆ).
- ಪ್ರತಿನಿಧಿ ಮೌಲ್ಯಮಾಪಕರನ್ನು ನೇಮಿಸಿದರೆ, ಅವರ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯನ್ನು ಒದಗಿಸಿ.
- ಅರ್ಜಿ ನಮೂನೆಯಲ್ಲಿ ನಿಮ್ಮ ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸೇರಿಸಿ.
- ವಿಳಾಸ ಕ್ಷೇತ್ರದಲ್ಲಿ ಸರಿಯಾದ ಪಿನ್ ಕೋಡ್ ಅನ್ನು ನಮೂದಿಸಿ.
- ಭಾವಚಿತ್ರವನ್ನು ಎಂದಿಗೂ ಸ್ಟ್ಯಾಪಲ್ ಅಥವಾ ಪಿನ್ ಮಾಡಬೇಡಿ.
- ಅರ್ಜಿದಾರರ ಹೆಸರಿನಲ್ಲಿಲ್ಲದ ವಿಳಾಸ ಪುರಾವೆ ಅಥವಾ ಗುರುತಿನ ಪುರಾವೆಗಳನ್ನು ಎಂದಿಗೂ ಸಲ್ಲಿಸಬೇಡಿ.
- ನಿಮ್ಮ ಹೆಸರಿನ ಮೊದಲಕ್ಷರಗಳನ್ನು ಬಳಸುತ್ತಿಲ್ಲ ಅಥವಾ ಸಂಕ್ಷಿಪ್ತಗೊಳಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಸಹಿಯನ್ನು ಹೊರತುಪಡಿಸಿ ದಿನಾಂಕ, ಹುದ್ದೆ, ಶ್ರೇಣಿ ಇತ್ಯಾದಿಗಳಂತಹ ಯಾವುದೇ ಇತರ ಮಾಹಿತಿಯನ್ನು ಭರ್ತಿ ಮಾಡಬೇಡಿ.
- ನಿಮ್ಮ ಸಹಿಯನ್ನು ಪೆಟ್ಟಿಗೆಯೊಳಗೆ ಇಡುವುದನ್ನು ಖಚಿತಪಡಿಸಿಕೊಳ್ಳಿ.
ಪ್ಯಾನ್ ಕಾರ್ಡ್ ನೀವು ವಿವಿಧ ಉದ್ದೇಶಗಳಿಗಾಗಿ ಬಳಸಬಹುದಾದ ಪ್ರಮುಖ ದಾಖಲೆ. ಇದು ರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಗುರುತಿನ ಪುರಾವೆ ಮಾತ್ರವಲ್ಲದೆ, ಆದಾಯ ತೆರಿಗೆ (ಐಟಿ) ರಿಟರ್ನ್‌ಗಳನ್ನು ಸಲ್ಲಿಸುವಾಗ ಇದು ಪ್ರಮುಖ ದಾಖಲೆಯಾಗಿದೆ. ಇದಲ್ಲದೆ ಇದನ್ನು ವಿವಿಧ ವೈಯಕ್ತಿಕ ಮತ್ತು ವ್ಯವಹಾರ ವಹಿವಾಟುಗಳನ್ನು ನಿರ್ವಹಿಸಬಹುದು.
ಪ್ಯಾನ್ ಕಾರ್ಡ್ ಇದ್ದರೆ ಏನೇನು ವಹಿವಾಟು ಮಾಡಬಹುದು?
- ಬ್ಯಾಂಕ್ ಖಾತೆ ತೆರೆಯುವುದು
- ಐಟಿ ರಿಟರ್ನ್ಸ್ ಸಲ್ಲಿಸುವುದು
- ಸಾಲಕ್ಕೆ ಅರ್ಜಿ ಸಲ್ಲಿಸುವುದು
- ಗ್ಯಾಸ್ ಅಥವಾ ದೂರವಾಣಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವುದು
- ಹೊಸ ಆಸ್ತಿ ಖರೀದಿಸುವುದು ಅಥವಾ ಮಾರಾಟ ಮಾಡುವುದು
- ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯುವುದು
- ಸ್ಥಿರ ಠೇವಣಿ ಖಾತೆ ತೆರೆಯುವುದು
- ವಿಮಾ ಪ್ರೀಮಿಯಂ ಪಾವತಿಸಲು.
ಬಹು ಪ್ಯಾನ್ ಕಾರ್ಡ್ ಹೊಂದಿದರೆ ಅಪಾಯ
ಬಹು ಅಥವಾ ನಕಲಿ ಪ್ಯಾನ್ ಕಾರ್ಡ್‌ಗಳು ಒಂದೇ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಅಥವಾ ಪ್ಯಾನ್ ಸಂಖ್ಯೆಯನ್ನು ನೀಡುವುದನ್ನು ಉಲ್ಲೇಖಿಸುತ್ತವೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A (7) ರ ಪ್ರಕಾರ, ಯಾವುದೇ ವ್ಯಕ್ತಿಯು ಹೊಸ ಸರಣಿಯ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಶಾಶ್ವತ ಖಾತೆ ಸಂಖ್ಯೆಗೆ ಅರ್ಜಿ ಸಲ್ಲಿಸಲು, ಹೊಂದಲು ಅಥವಾ ಪಡೆಯಲು ಸಾಧ್ಯವಿಲ್ಲ.
ಒಬ್ಬ ವ್ಯಕ್ತಿಯು ಅರಿವಿಲ್ಲದೆಯೇ ಒಂದಕ್ಕಿಂತ ಹೆಚ್ಚು ಪ್ಯಾನ್‌ಗಳನ್ನು ಹೊಂದಲು ಸಾಧ್ಯವಿದೆ. ಆದಾಗ್ಯೂ, ಒಂದೇ ಪ್ಯಾನ್ ಕಾರ್ಡ್ ಸಂಖ್ಯೆಯ ಎರಡು ಭೌತಿಕ ಪ್ರತಿಗಳನ್ನು ಹೊಂದಿರುವುದು ಕಾನೂನುಬಾಹಿರವಲ್ಲ; ಎರಡನೆಯದನ್ನು ಕೇವಲ ನಕಲಿ ಪ್ರತಿ ಎಂದು ಪರಿಗಣಿಸಲಾಗುತ್ತದೆ.
ವಹಿವಾಟಿನಲ್ಲಿ ಪ್ಯಾನ್ ಬಳಕೆ ಪತ್ತೆ ಹೇಗೆ?
- ತೆರಿಗೆ ಲೆಕ್ಕಾಚಾರ ಮಾಡಲು ಪ್ಯಾನ್ ಕಾರ್ಡ್ ಮೂಲಕ ಮಾಡಿರುವವಹಿವಾಟುಗಳನ್ನು ಟ್ರ್ಯಾಕ್ ಮಾಡಬಹುದು. ಆದಾಯ ತೆರಿಗೆ ವ್ಯವಹಾರ ಅರ್ಜಿ-ಶಾಶ್ವತ ಖಾತೆ ಸಂಖ್ಯೆ ಅಥವಾ ITBAN-PAN ಎಂದು ಕರೆಯಲ್ಪಡುವ ಇದು, ನಿರ್ದಿಷ್ಟ PAN ಸಂಖ್ಯೆಯನ್ನು ಉಲ್ಲೇಖಿಸಿದವರಿಗೆ ಪ್ರತಿಯೊಂದೂ ವಹಿವಾಟನ್ನು ಟ್ರ್ಯಾಕ್ ಮಾಡಲು ಆದಾಯ ತೆರಿಗೆ ಇಲಾಖೆಗೆ ಅನುವು ಮಾಡಿಕೊಡುತ್ತದೆ.
- ವಿಲೀನಗಳು, ಸ್ವಾಧೀನಗಳು, ದಿವಾಳಿ ಮತ್ತು PAN ಸಂಯೋಜನೆಯಂತಹ ಎಲ್ಲ ಹಣಕಾಸಿನ ವಹಿವಾಟುಗಳನ್ನು ಹಾಗೂ ನಿರ್ದಿಷ್ಟ PAN ಕಾರ್ಡ್ ಅನ್ನು ಉಲ್ಲೇಖಿಸಿದ ವಿಸರ್ಜನಾ ಮಾಹಿತಿಯನ್ನು ಸಾಫ್ಟ್‌ವೇರ್ ಮೂಲಕ ಪತ್ತೆಹಚ್ಚಬಹುದು.
- ಅಸ್ತಿತ್ವದಲ್ಲಿರುವ ಎಲ್ಲಾ PAN ಮಾಹಿತಿ ಮತ್ತು PAN ಮಾಹಿತಿಯ ಸಂಪೂರ್ಣ ಡೇಟಾಬೇಸ್ ಅನ್ನು ಸಹ ಈ ಸಾಫ್ಟ್‌ವೇರ್‌ಗೆ ಸೇರಿಸಲಾಗಿದೆ.
PAN, ಮತ್ತೊಂದಿಷ್ಟು ಮಾಹಿತಿ
- ಮೇಲೆ ಹೇಳಿದಂತೆ, PAN 10 ಅಕ್ಷರಗಳ ಸಂಯೋಜನೆಯಾಗಿದ್ದು, ಹೀಗಿರುತ್ತದೆ,
- ಮೊದಲ 3 ಅಕ್ಷರಗಳು ಇಂಗ್ಲಿಷ್ ವರ್ಣಮಾಲೆಯ ಯೋಜನೆಯಾಗಿರಬಹುದು. ನಾಲ್ಕನೇ ಅಕ್ಷರವು ತೆರಿಗೆದಾರರ ವರ್ಗವನ್ನು ಸೂಚಿಸುವ ವರ್ಣಮಾಲೆಯಾಗಿದೆ. ವರ್ಗಗಳು ಈ ಕೆಳಗಿನಂತಿವೆ:
A - ವ್ಯಕ್ತಿಗಳ ಸಂಘ (Association of Persons)
B - ವ್ಯಕ್ತಿಗಳ ದೇಹ (Body of Persons-BOI)
C - ಕಂಪನಿ (Company)
F - ಸಂಸ್ಥೆಗಳು (Firm )
G - ಸರ್ಕಾರ (Government)
H - ಹಿಂದೂ ಅವಿಭಜಿತ ಕುಟುಂಬ (HUF-Hindu Undivided Family)
L - ಸ್ಥಳೀಯ ಪ್ರಾಧಿಕಾರ (Local Authority)
J - ಕೃತಕ ನ್ಯಾಯಾಂಗ ವ್ಯಕ್ತಿ (Artificial Judicial Person)
P - ವೈಯಕ್ತಿಕ ವ್ಯಕ್ತಿ (Individual)
T - ಟ್ರಸ್ಟ್‌ಗಾಗಿ ವ್ಯಕ್ತಿಗಳ ಸಂಘ (Trust)
- ಐದನೇ ಅಕ್ಷರವು ಸಹ ವರ್ಣಮಾಲೆಯಾಗಿದ್ದು ಅದು ಕಾರ್ಡ್‌ದಾರರ ಉಪನಾಮದ ಮೊದಲ ಅಕ್ಷರವನ್ನು ಸೂಚಿಸುತ್ತದೆ.
- ಮುಂದಿನ ನಾಲ್ಕು ಸಂಖ್ಯೆಗಳು ಮನಸ್ಸಿಗೆ ಬಂದಂತೆ ನೀಡಲಾಗಿರುತ್ತದೆ.
- ಕೊನೆಯ ಅಕ್ಷರವೂ ಮತ್ತೊಂದು ವರ್ಣಮಾಲೆಯಾಗಿರುತ್ತದೆ.
ಹೊಸ ವಿನ್ಯಾಸ
ಆದಾಯ ತೆರಿಗೆ ಇಲಾಖೆಯು ಜನವರಿ 1, 2017 ರ ನಂತರ ನೀಡಲಾದ ಪ್ಯಾನ್ ಕಾರ್ಡ್‌ಗಳಿಗೆ ಹೊಸ ಸ್ವರೂಪವನ್ನು ನೀಡಿದೆ. ಹೊಸ ಪ್ಯಾನ್ ಕಾರ್ಡ್ ವಿನ್ಯಾಸಕ್ಕೆ ಮಾಡಲಾದ ಬದಲಾವಣೆಗಳು ಹೀಗಿವೆ...
- ಹೊಸ ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಮುದ್ರಿಸಲಾಗಿದೆ. ಅದರಲ್ಲಿ ಕಾರ್ಡ್ ಹೊಂದಿರುವವರ ವಿವರಗಳಿರುತ್ತವೆ. ಈ ಕ್ಯೂಆರ್ ಕೋಡ್ ಅನ್ನು ಡೇಟಾ ಪರಿಶೀಲನೆಗಾಗಿ ಬಳಸಬಹುದು.
- ಕಾರ್ಡ್ ಹೊಂದಿರುವವರ ಹೆಸರು, ತಂದೆಯ ಹೆಸರು ಮತ್ತು ಜನ್ಮ ದಿನಾಂಕಕ್ಕಾಗಿ ಹೊಸ ವಿಭಾಗಗಳನ್ನು ಸೇರಿಸಲಾಗಿದೆ.
- ಪ್ಯಾನ್ ಹಾಗೂ ಕಾರ್ಡ್ ಹೊಂದಿರುವವರ ಸಹಿಯನ್ನು ಬದಲಾಯಿಸಲಾಗಿದೆ.
ಪ್ಯಾನ್ ಕಾರ್ಡ್ ನಮೂನೆಗಳು
ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಎರಡು ರೀತಿಯ ಅರ್ಜಿ ನಮೂನೆಗಳಿವೆ - ಫಾರ್ಮ್ 49A ಮತ್ತು ಫಾರ್ಮ್ 49AA. ಎರಡೂ ನಮೂನೆಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಡೆಯಬಹುದು.
ಫಾರ್ಮ್ 49A - ಭಾರತೀಯ ವ್ಯಕ್ತಿಗಳು ಅಥವಾ ಸಂಸ್ಥೆಗಳು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಫಾರ್ಮ್ 49A ಬಳಸುತ್ತಾರೆ. ವಿದ್ಯಾರ್ಥಿಗಳು ಮತ್ತು ಅಪ್ರಾಪ್ತರು ಸಹ ಈ ಫಾರ್ಮ್ ಅನ್ನು ಬಳಸಿಕೊಂಡು ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು.
ಫಾರ್ಮ್ 49AA - ಫಾರ್ಮ್ 49AA ವಿದೇಶಿಯರು ಪ್ಯಾನ್‌ಗಾಗಿ ಅರ್ಜಿ ಸಲ್ಲಿಸುವ ನಮೂನೆಯಾಗಿದೆ.
ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ TIN-ಪ್ರೋಟೀನ್ ಇ-ಗೋವ್ ಟೆಕ್ನಾಲಜೀಸ್ ಲಿಮಿಟೆಡ್ ಕಚೇರಿಗೆ ಕಳುಹಿಸಬೇಕು.
ಪ್ಯಾನ್ ಅರ್ಜಿಯ ವೆಚ್ಚ
ಒಬ್ಬ ವ್ಯಕ್ತಿಯು ತನ್ನ ಪ್ಯಾನ್ ಕಾರ್ಡ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇದನ್ನು ಪ್ರೋಟೀನ್ ಇ-ಗವರ್ನ್ ಟೆಕ್ನಾಲಜೀಸ್ ಲಿಮಿಟೆಡ್ ವೆಬ್‌ಸೈಟ್ (ಹಿಂದೆ NSDL) ಅಥವಾ UTITSL ಪೋರ್ಟಲ್ ಮೂಲಕ ಮಾಡಬಹುದು. ಪ್ಯಾನ್‌ಗೆ ಅರ್ಜಿ ಸಲ್ಲಿಸುವ ವೆಚ್ಚವನ್ನು ಈ ಕೆಳಗಿನಂತೆ ಸಂಕ್ಷೇಪಿಸಬಹುದು:
ಭಾರತದೊಳಗಿನ ವಿಳಾಸಕ್ಕಾಗಿ: ರೂ.93 (GST ಹೊರತುಪಡಿಸಿ)
ವಿದೇಶಿ ವಿಳಾಸಕ್ಕಾಗಿ: ರೂ.864 (GST ಹೊರತುಪಡಿಸಿ)
ಪ್ಯಾನ್ ಕಾರ್ಡ್‌ನಲ್ಲಿ ಬದಲಾವಣೆಗಳು ಅಥವಾ ತಿದ್ದುಪಡಿಗಳನ್ನು ಮಾಡುವುದು ಹೇಗೆ?
ಪ್ಯಾನ್ ಕಾರ್ಡ್‌ನಲ್ಲಿ ಆನ್‌ಲೈನ್‌ನಲ್ಲಿ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಇಚ್ಛಿಸಿದರೆ ಅನುಸರಿಸಬೇಕಾದ ವಿಧಾನಗಳಿವು;
- ಅಧಿಕೃತ ಸೈಟ್‌ಗೆ ಭೇಟಿ ನೀಡಿ
- ‘Changes or Correction in existing PAN Data/ Reprint of PAN Card (No changes in existing PAN Data)’ ಆಯ್ಕೆಮಾಡಿ.
- ಮುಂದೆ, ಸಂಬಂಧಿತ ವಿವರಗಳನ್ನು ನಮೂದಿಸಿ.
- ‘Submit’ ಕ್ಲಿಕ್ ಮಾಡಿ.
- ಪರದೆಯ ಮೇಲೆ ಟೋಕನ್ ಸಂಖ್ಯೆಯನ್ನು ಪ್ರದರ್ಶಿಸಲಾಗುತ್ತದೆ.
- ‘Continue with PAN Application Form’ ಕ್ಲಿಕ್ ಮಾಡಿ,
- ಮುಂದಿನ ಪುಟದಲ್ಲಿ ಸಂಬಂಧಿತ ವಿವರಗಳನ್ನು ನಮೂದಿಸಿ.
- ಮುಂದಿನ ಅರ್ಜಿ ನಮೂನೆಯನ್ನು ನೀವು ಸಲ್ಲಿಸಲು ಬಯಸುವ ವಿಧಾನವನ್ನು ಆರಿಸಿ.
- ಮುಂದೆ, ಪ್ಯಾನ್ ಪ್ರಕಾರವನ್ನು ಆರಿಸಿ.
- ಮುಂದೆ, ನಿಮ್ಮ ಸಂಪರ್ಕ ವಿವರಗಳನ್ನು ನಮೂದಿಸಬೇಕು.
- ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ‘Submit’ ಕ್ಲಿಕ್ ಮಾಡಿ.
- ಶುಲ್ಕ ಪಾವತಿಸಬೇಕು.
- ಅರ್ಜಿ ಸ್ವೀಕರಿಸಿದ ದಿನಾಂಕದಿಂದ ಎರಡು ವಾರಗಳ ಒಳಗೆ ನಿಮ್ಮ ವಿಳಾಸಕ್ಕೆ ಪ್ಯಾನ್ ಕಳುಹಿಸಲಾಗುತ್ತದೆ.
ಆಫ್ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಹೇಗೆ?
- ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ TIN-Protean e-Gov Technologies Limited (ಹಿಂದೆ NSDL) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಹೋಮ್ ಪೇಜಿನಲ್ಲಿ 'ಡೌನ್‌ಲೋಡ್‌ಗಳು ವಿಭಾಗದ ಅಡಿಯಲ್ಲಿ, ‘PAN’ ಮೇಲೆ ಕ್ಲಿಕ್ಕಿಸಿದರೆ ಹೊಸ ಪುಟಕ್ಕೆ ನಿರ್ದೇಶಿಸಲಾಗುತ್ತದೆ.
- ‘ಫಾರ್ಮ್ 49A’ ಮೇಲೆ ಕ್ಲಿಕ್ ಮಾಡಿ.
- ಫಾರ್ಮ್ 49A ಅರ್ಜಿ ನಮೂನೆ ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಪಿಡಿಎಫ್ ಸ್ವರೂಪದಲ್ಲಿ ಗೋಚರಿಸುತ್ತದೆ. ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
- ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನೀವು ನಮೂದಿಸಿದ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
- ನಿಮ್ಮ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಸೇರಿ ಎಲ್ಲ ಅಗತ್ಯ ದಾಖಲೆಗಳನ್ನು ಲಗತ್ತಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಮುಂಬೈನಲ್ಲಿ ಪಾವತಿಸಬೇಕಾದ ‘ಪ್ರೋಟೀನ್ e-Gov Technologies Limited – PAN’ ಪರವಾಗಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬಹುದಾದ ನೋಂದಣಿ ಶುಲ್ಕವನ್ನು ನೀವು ಪಾವತಿಸಬೇಕಾಗುತ್ತದೆ. ನೀವು ರೂ.115.90 ಪಾವತಿಸಬೇಕಾಗುತ್ತದೆ.
- ಅರ್ಜಿ ನಮೂನೆ ಮತ್ತು ನಿಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಲಕೋಟೆಯಲ್ಲಿ ಲಗತ್ತಿಸಿ. ಲಕೋಟೆಯ ಮೇಲೆ 'APPLICATION FOR PAN-N-Acknowledgement Number' ಎಂದು ನಮೂದಿಸುವುದನ್ನು ಮರೆಯಬೇಡಿ. ಅದನ್ನು ಈ ವಿಳಾಸಕ್ಕೆ ಕಳುಹಿಸಬೇಕು
ವಿಳಾಸ: ಆದಾಯ ತೆರಿಗೆ ಪ್ಯಾನ್ ಸೇವೆಗಳ ಘಟಕ, ಪ್ರೋಟೀನ್ ಇ-ಗವರ್ನನ್ಸ್ ಟೆಕ್ನಾಲಜೀಸ್ ಲಿಮಿಟೆಡ್ ಇ-ಗವರ್ನನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, 5 ನೇ ಮಹಡಿ, ಮಂತ್ರಿ ಸ್ಟರ್ಲಿಂಗ್, ಪ್ಲಾಟ್ ಸಂಖ್ಯೆ 341, ಸರ್ವೆ ಸಂಖ್ಯೆ 997/8, ಮಾಡೆಲ್ ಕಾಲೋನಿ, ಡೀಪ್ ಬಂಗಲೋ ಚೌಕ್ ಹತ್ತಿರ, ಪುಣೆ - 411016.
ನಂತರ ನೀವು ನಿಮ್ಮ ಪ್ಯಾನ್ ಕಾರ್ಡ್ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಅರ್ಜಿ ಸಂಖ್ಯೆಯನ್ನು ಸ್ವೀಕರಿಸುತ್ತೀರಿ.
ನಕಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಒರಿಜಿನಲ್ ಪ್ಯಾನ್ ಕಾರ್ಡ್ ಕಳೆದುಕೊಂಡಿದ್ದರೆ, ನಕಲಿ ಪ್ಯಾನ್ ಕಾರ್ಡ್‌ಗೆ ಈ ರೀತಿ ಅಪ್ಲೈ ಮಾಡಬೇಕು:
- ನಕಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು TIN-Protean e-Gov Technologies Limited (ಹಿಂದೆ NSDL) ಅಥವಾ UTIITSL ವೆಬ್‌ಸೈಟ್‌ಗೆ ಭೇಟಿ ನೀಡಿ.
- ನೀವು ಭಾರತದ ನಾಗರಿಕರಾಗಿದ್ದರೆ ಫಾರ್ಮ್ 49A ಅನ್ನು ಸಲ್ಲಿಸಬೇಕಾಗುತ್ತದೆ, ಇಲ್ಲದಿದ್ದರೆ ನೀವು ವಿದೇಶಿಯರಾಗಿದ್ದರೆ ಫಾರ್ಮ್ 49AA ಅನ್ನು ಸಲ್ಲಿಸಬೇಕಾಗುತ್ತದೆ.
- ನಕಲಿ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಪಾವತಿಯನ್ನು ಪೂರ್ಣಗೊಳಿಸಿ. ನೀವು ಡಿಮ್ಯಾಂಡ್ ಡ್ರಾಫ್ಟ್ ಮೂಲಕವೂ ಪಾವತಿಸಬಹುದು.
- ನಮೂನೆಯ ಮುದ್ರಣವನ್ನು ತೆಗೆದುಕೊಂಡು ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಿ:
- ವಿಳಾಸ - ಆದಾಯ ತೆರಿಗೆ ಪ್ಯಾನ್ ಸೇವೆಗಳ ಘಟಕ, ಪ್ರೋಟೀನ್ ಇ-Gov Technologies Limited e-Governance Infrastructure Limited, 5 ನೇ ಮಹಡಿ, ಮಂತ್ರಿ ಸ್ಟರ್ಲಿಂಗ್, ಪ್ಲಾಟ್ ಸಂಖ್ಯೆ 341, ಸರ್ವೆ ಸಂಖ್ಯೆ 997/8, ಮಾಡೆಲ್ ಕಾಲೋನಿ, ಡೀಪ್ ಬಂಗಲೋ ಚೌಕ್ ಹತ್ತಿರ, ಪುಣೆ - 411 016. ಅಪ್ಲಿಕೇಷನ್ ನಂಬರ್ ನಿಮ್ಮ ಕೈ ಸೇರಲಿದೆ. ಅದನ್ನು ಬಳಸಿಕೊಂಡು ನಿಮ್ಮ ಪಾನ್ ಕಾರ್ಡ್ ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು.
- ನಿಮ್ಮ ನಕಲಿ ಪ್ಯಾನ್ ಕಾರ್ಡ್ ಅನ್ನು ಸ್ವೀಕರಿಸಲು ನಿಮಗೆ 45 ದಿನಗಳವರೆಗೆ ಬೇಕಾಗುತ್ತದೆ.
PAN ಕಾರ್ಡ್ ವಿಚಾರಣೆ/ ಟ್ರ್ಯಾಕಿಂಗ್ ಮತ್ತು ಆನ್‌ಲೈನ್ ಸ್ಟೇಟಸ್ ಪರಿಶೀಲನೆ
ಅರ್ಜಿ ಸಲ್ಲಿಸಿದ ನಂತರ ನಿಮ್ಮ ಪ್ಯಾನ್ ಕಾರ್ಡ್ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಅರ್ಜಿಯ ಸ್ಥಿತಿಯು ಕಾರ್ಡ್ ನೀಡಲಾಗಿದೆಯೇ ಅಥವಾ ಡಿಸ್ಪ್ಯಾಚ್ ಆಗಿದೆಯೇ ಎಂಬುದನ್ನು ನಿಮಗೆ ತೋರಿಸುತ್ತದೆ.
- TIN-Protean e-Gov Technologies Limited ಅಥವಾ UTIITSL ವೆಬ್‌ಸೈಟ್‌ನಲ್ಲಿ ನಿಮ್ಮ PAN ಕಾರ್ಡ್ ಅರ್ಜಿಯ ಸ್ಟೇಟಸ್ ಪರಿಶೀಲಿಸಬಹುದು.
- ಹೆಸರು ಮತ್ತು ಜನ್ಮ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವ ಮೂಲಕ PAN ಕಾರ್ಡ್ ಅರ್ಜಿಯ ಸ್ಥಿತಿಯನ್ನು ಕಂಡುಹಿಡಿಯಬಹುದು.
ಭಾರತದಲ್ಲಿ ಯಾವ ಪ್ರಾಧಿಕಾರವು PAN ಕಾರ್ಡ್ ನೀಡುತ್ತದೆ?
PAN ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆಯು ಅಧಿಕೃತ ಜಿಲ್ಲಾ ಮಟ್ಟದ PAN ಏಜೆನ್ಸಿಗಳು, UTI ITSL (UTI ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವೀಸಸ್ ಲಿಮಿಟೆಡ್) ಮತ್ತು Protean e-Gov Technologies Limited (ಹಿಂದೆ ರಾಷ್ಟ್ರೀಯ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್-NSDL) ಸಹಾಯದಿಂದ ನೀಡುತ್ತದೆ. ನಾಗರಿಕರು ತಮ್ಮ PAN ಕಾರ್ಡ್ ಪಡೆಯಲು ಸಹಾಯ ಮಾಡುವ Protean e-Gov Technologies Limited ನಿಂದ ನಡೆಸಲ್ಪಡುವ ಹಲವು TIN-ಸೌಕರ್ಯ ಕೇಂದ್ರಗಳು ಮತ್ತು PAN ಕೇಂದ್ರಗಳು ದೇಶಾದ್ಯಂತ ಇವೆ.
PAN ನೀಡುವ ಪ್ರಕ್ರಿಯೆಯು PPP (ಸಾರ್ವಜನಿಕ ಖಾಸಗಿ ಪಾಲುದಾರಿಕೆ) ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. PAN ಅರ್ಜಿಗಳನ್ನು ನಿರ್ವಹಿಸುವ, ಸಂಸ್ಕರಿಸುವ ಮತ್ತು ನೀಡುವ ಆರ್ಥಿಕತೆ, ದಕ್ಷತೆ ಜೊತೆಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಈ ವ್ಯವಸ್ಥೆಗೆ ಮುಂದಾಗಿದೆ.
PAN ಹಂಚೋದು ಹೇಗೆ?
- ನೀವು ಭರ್ತಿ ಮಾಡಿದ ಫಾರ್ಮ್ ಮತ್ತು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಪ್ಯಾನ್ ಅರ್ಜಿಯನ್ನು ಸಲ್ಲಿಸಿದ ನಂತರ, ಪ್ಯಾನ್ ಕೇಂದ್ರವು ಅದನ್ನು ಮೂಲ ದಾಖಲೆಗಳೊಂದಿಗೆ ಪರಿಶೀಲಿಸುತ್ತದೆ.
- ಆನ್‌ಲೈನ್ ಪ್ರಕ್ರಿಯೆಗಾಗಿ, ನೀವು ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು ಮತ್ತು ನಂತರ ದಾಖಲೆಗಳ ಸ್ವಯಂ-ದೃಢೀಕರಿಸಿದ ನಕಲು ಪ್ರತಿಗಳನ್ನು ಪುಣೆಯ ಪ್ರೋಟೀನ್ ಇ-ಗವರ್ನ್ ಟೆಕ್ನಾಲಜೀಸ್ ಲಿಮಿಟೆಡ್‌ಗೆ ಕಳುಹಿಸಬೇಕು.
- ಮೌಲ್ಯಮಾಪನ ಅಧಿಕಾರಿಗಳು ಅರ್ಜಿ ವಿವರಗಳನ್ನು ನಿರ್ಣಯಿಸುತ್ತಾರೆ. ನಿಮ್ಮ ವಿವರಗಳನ್ನು ಕೇಂದ್ರ ಡೇಟಾಬೇಸ್‌ನಲ್ಲಿರುವ ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ಹೊಂದಿರುವವರ ವಿವರಗಳೊಂದಿಗೆ ತಾಳೆ ನೋಡಲಾಗುತ್ತದೆ.
- ಹಿಂದಿನ ಪ್ಯಾನ್‌ನ ದಾಖಲೆಗಳಿದ್ದರೆ ವಿನಂತಿಯನ್ನು ಸ್ವೀಕರಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ. ನಿಮ್ಮ ತೆರಿಗೆದಾರರ ವರ್ಗೀಕರಣದ ಪ್ರಕಾರ ನಿಮಗೆ ಪ್ಯಾನ್ ಹಂಚಲಾಗುತ್ತದೆ.
ನಿಮ್ಮ ಪ್ಯಾನ್ ಕಾರ್ಡ್ ಅಕ್ಷರಗಳು ಮತ್ತು ಸಂಖ್ಯೆಗಳು ಏನನ್ನು ಸೂಚಿಸುತ್ತವೆ?
ನಿಮ್ಮ ಶಾಶ್ವತ ಖಾತೆಯಲ್ಲಿರೋ ಸಂಖ್ಯೆಗಳು ಮತ್ತು ಅಕ್ಷರಗಳ ಸರಣಿಯಲ್ಲ. ಪ್ಯಾನ್ ರಚನೆಯು ವಾಸ್ತವವಾಗಿ ಸಾಕಷ್ಟು ಆಸಕ್ತಿದಾಯಕವಾಗಿದೆ. ಪ್ಯಾನ್‌ನ ಪ್ರತಿಯೊಂದು ಘಟಕದ ಅರ್ಥ ಇಲ್ಲಿದೆ:
- ಮೊದಲ ಮೂರು ಅಕ್ಷರಗಳು: ಇವು AAA ನಿಂದ ZZZ ವರೆಗಿನ ವರ್ಣಮಾಲೆಗಳಲ್ಲಿರುತ್ತದೆ.
- ನಾಲ್ಕನೇ ಅಕ್ಷರ: ಯಾವ ರೀತಿಯ ತೆರಿಗೆದಾರರು ಎಂಬುದನ್ನು ಸೂಚಿಸುತ್ತದೆ.
- ಐದನೇ ಅಕ್ಷರ: PAN ನಲ್ಲಿರುವ ಐದನೇ ಅಕ್ಷರ ನಿಮ್ಮ ಉಪನಾಮದ ಮೊದಲ ಅಕ್ಷರವಾಗಿದೆ. ಆದ್ದರಿಂದ, ಒಬ್ಬ ವ್ಯಕ್ತಿಗೆ 'ರಾಜೇಶ್ ಖನ್ನಾ' ಎಂದು ಹೆಸರಿಸಿದ್ದರೆ, ಅವರ PAN ನ ಐದನೇ ಅಕ್ಷರವು 'K' ಆಗಿರುತ್ತದೆ.
- ಆರನೇಯಿಂದ ಒಂಬತ್ತನೇ ಅಕ್ಷರಗಳು: ಇದು 0001 ಮತ್ತು 9999 ರ ನಡುವಿನ ಸಂಖ್ಯೆಗಳಲ್ಲಿರುತ್ತದೆ.
- ಕೊನೆಯ ಅಕ್ಷರಗಳು: ಇದು ವರ್ಣಮಾಲೆಯ ಚೆಕ್ ಅಕ್ಷರ
ಭಾರತದಲ್ಲಿ PAN ಇತಿಹಾಸ
PAN ಪರಿಕಲ್ಪನೆಯನ್ನು ಪರಿಚಯಿಸುವ ಮೊದಲು, ತೆರಿಗೆದಾರರಿಗೆ ಕೈಯಿಂದ ಬರೆದ GIR ಸಂಖ್ಯೆಯನ್ನು ನಿಗದಿಪಡಿಸಲಾಗಿತ್ತು. ವಾರ್ಡ್ ಒಳಗೆ ಅಥವಾ ನಿರ್ದಿಷ್ಟ ಮೌಲ್ಯಮಾಪನ ಅಧಿಕಾರಿಯ ಅಡಿಯಲ್ಲಿ ಮಾತ್ರವಿರುತ್ತಿತ್ತು. GIR ವಿಶಿಷ್ಟ ಸಂಖ್ಯೆ ಆಗಿರಲ್ಲದ ಕಾರಣ ತೆರಿಗೆ ಮೌಲ್ಯಮಾಪನದಲ್ಲಿ ಸಹಜವಾಗಿಯೇ ತಪ್ಪು ಲೆಕ್ಕಾಚಾರ ಮತ್ತು ದೋಷಗಳು ಸಂಭವಿಸುತ್ತಿದ್ದವು.
- GIR ಸಂಖ್ಯೆಯನ್ನು ಮೌಲ್ಯಮಾಪನ ಅಧಿಕಾರಿಯು ತೆರಿಗೆ ಪಾವತಿಸುವವರಿಗೆ ನೀಡುತ್ತಿದ್ದು, ಅದರಲ್ಲಿ ಮೌಲ್ಯಮಾಪನ ಅಧಿಕಾರಿಯ ಮಾಹಿತಿ ಇರುತ್ತಿತ್ತು.
- 1972 ರಲ್ಲಿ, ಭಾರತ ಸರ್ಕಾರವು ಪ್ಯಾನ್ ಪರಿಕಲ್ಪನೆಯನ್ನು ಜಾರಿಗೆ ತಂದಿತು. 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139A ಅಡಿಯಲ್ಲಿ ಇದನ್ನು ಶಾಸನಬದ್ಧಗೊಳಿಸಲಾಯಿತು. ಆರಂಭದಲ್ಲಿ ಸ್ವಯಂಪ್ರೇರಿತ ಪ್ರಕ್ರಿಯೆಯಾಗಿ, 1976ರಲ್ಲಿ ಎಲ್ಲ ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ ಪ್ಯಾನ್ ಕಡ್ಡಾಯಗೊಳಿಸಲಾಯಿತು.
- ಆರಂಭಿಕ ಪ್ಯಾನ್ ಸಂಖ್ಯೆ ಹಂಚಿಕೆಗಳನ್ನು ಹಸ್ತಚಾಲಿತವಾಗಿ ಮಾಡಲಾಯಿತು ಮತ್ತು ನಕಲು ಮಾಡುವುದನ್ನು ತಪ್ಪಿಸಲು, ಪ್ರತಿ ವಾರ್ಡ್/ವೃತ್ತದ ಆಧಾರದಲ್ಲಿ ನಿರ್ದಿಷ್ಟ ಸಂಖ್ಯೆಗಳನ್ನು ನೀಡಲಾಗುತ್ತಿತ್ತು. ಈ ವ್ಯವಸ್ಥೆಯನ್ನು 1995ರಲ್ಲಿ ಕೈಬಿಡಲಾಯಿತು.
- ಈ ಬದಲಾವಣೆಗಳ ಹೊರತಾಗಿಯೂ, ಪ್ಯಾನ್ ಕಾರ್ಡ್‌ನ ಮೊದಲ ಅವತಾರವು ಕೆಳಗೆ ಉಲ್ಲೇಖಿಸಿದಂತೆ ಕೆಲವು ತೊಂದರೆಗಳನ್ನು ಎದುರಿಸಿತು:
- ಹಂಚಿಕೆ ಮಾಡಲಾದ ಪ್ಯಾನ್ ಸಂಖ್ಯೆಯ ದಾಖಲೆಗಳನ್ನು ನಿರ್ವಹಿಸಲು ಯಾವುದೇ ಡೇಟಾಬೇಸ್ ಇರಲಿಲ್ಲ, ಬಹಳ ಸೀಮಿತ ಮಾಹಿತಿಯನ್ನು ದಾಖಲಿಸಲಾಯಿತು.
- ಪ್ಯಾನ್ ಕಾರ್ಡ್ ಹೊಂದಿರುವವರಿಗಾಗಿ ಸಂಗ್ರಹಿಸಲಾದ ದತ್ತಾಂಶ ಸರಿಯಾಗಿ ರಚನೆಯಾಗಿಲ್ಲ ಅಥವಾ ಹೆಸರು, ವಿಳಾಸ ಇತ್ಯಾದಿ ಕೆಲವು ಪ್ರಾಥಮಿಕ ವಿವರಗಳನ್ನು ಹೊರತುಪಡಿಸಿ ವಿವರವಾದ ಮಾಹಿತಿ ದಾಖಲಿಸುತ್ತಿರಲಿಲ್ಲ.
- ಪ್ಯಾನ್ ಕಾರ್ಡ್‌ಗಳನ್ನು ನೀಡುವ ಯಾವುದೇ ಕೇಂದ್ರೀಕೃತ ಪ್ರಾಧಿಕಾರ ಇರಲಿಲ್ಲ, ಇದರ ಪರಿಣಾಮವಾಗಿ ವಿವಿಧ ಕೇಂದ್ರಗಳು ದೇಶದ ವಿವಿಧ ವ್ಯಕ್ತಿಗಳಿಗೆ ಒಂದೇ ಸಂಖ್ಯೆಯನ್ನು ಹಂಚುವ ಸಾಧ್ಯತೆ ಇತ್ತು. ಅಲ್ಲದೇ ವಿಳಾಸ ಅವಲಂಬಿತವಾಗಿದ್ದಕಾರಣ, ಶಾಶ್ವತ ಸಂಖ್ಯೆ ಪಡೆಯುವುದು ಕಷ್ಟವಾಗುತ್ತಿತ್ತು.
ಪ್ಯಾನ್ ಕಾರ್ಡ್ ರಚನೆ
KYC ಮಾರ್ಗಸೂಚಿಗಳ ಪ್ರಕಾರ, ಪ್ಯಾನ್ ಕಾರ್ಡ್‌ನಲ್ಲಿ ಒದಗಿಸಲಾದ ವಿವರಗಳು ಈ ಕೆಳಗಿನಂತಿವೆ:
- ಕಾರ್ಡ್‌ದಾರರ ಹೆಸರು
- ಕಾರ್ಡ್‌ದಾರರ ತಂದೆಯ ಹೆಸರು
- ಕಾರ್ಡ್‌ದಾರರ ಜನ್ಮ ದಿನಾಂಕ
- 10-ಅಕ್ಷರಗಳ ಆಲ್ಫಾನ್ಯೂಮರಿಕ್ ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್
- ಕಾರ್ಡ್‌ದಾರರ ಸಹಿ
- ಕಾರ್ಡ್‌ದಾರರ ಭಾವಚಿತ್ರ
- ಪ್ಯಾನ್ ಕಾರ್ಡ್ ಭಾರತ ಸರ್ಕಾರದ ಲೋಗೋ ಮತ್ತು ಹೊಲೊಗ್ರಾಮ್ ಜೊತೆಗೆ ಆದಾಯ ತೆರಿಗೆ ಇಲಾಖೆಯ (ITD) ಟ್ಯಾಗ್‌ನೊಂದಿಗೆ ಬರುತ್ತದೆ.
ಹೊಸ ಪ್ಯಾನ್ ಸರಣಿಯ ಅವಲೋಕನ
1995ರಲ್ಲಿ, ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿ ಮಾಡಿದ ವಿಭಾಗ 139A ಅಡಿಯಲ್ಲಿ, ಆದಾಯ ತೆರಿಗೆ ಇಲಾಖೆಯು ಹೊಸ ಪ್ಯಾನ್ ಸರಣಿಯನ್ನು ಹೊರತಂದಿತು. ಹೊಸ ಪ್ಯಾನ್ ಸರಣಿಯು ಈ ಹಿಂದೆ ಪ್ಯಾನ್ ಸರಣಿಯಲ್ಲಿ ಸೇರಿಸದ ಈ ಕೆಳಗಿನ ಅಂಶಗಳನ್ನು ಸುಗಮಗೊಳಿಸಿತು:
- ಎಲ್ಲಾ ತೆರಿಗೆ-ಸಂಬಂಧಿತ ಮಾಹಿತಿಯನ್ನು, ಪ್ರಸ್ತುತ ಮತ್ತು ಹಿಂದಿನದನ್ನು ಒಂದೇ ಸಂಖ್ಯೆಗೆ ಲಿಂಕ್ ಮಾಡುವುದು.
- ಕೇಂದ್ರ ಡೇಟಾಬೇಸ್‌ನಿಂದ ಮಾಹಿತಿಯನ್ನು ಸುಲಭವಾಗಿ ಮರುಪಡೆಯುವುದು. ಹೊಸ ಪ್ಯಾನ್ ಸರಣಿ ಪ್ರಾರಂಭದೊಂದಿಗೆ, ಡೇಟಾವನ್ನು ಪ್ರತ್ಯೇಕಿಸುವುದು ಹಾಗೂ ದಾಖಲಿಸುವುದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಯಿತು.
- ಎಲ್ಲ ಹಣಕಾಸು ಮಾಹಿತಿಯನ್ನು ಒಂದೇ ಪ್ಯಾನ್‌ಗೆ ಹೊಂದಿಸುವುದರಿಂದ ಸಾಲದ ವಿವರಗಳು, ಕ್ರೆಡಿಟ್ ಮತ್ತು ಡೆಬಿಟ್ ವಿವರಗಳು ಹಾಗೂ ಹೂಡಿಕೆ ವಿವರಗಳನ್ನು ಟ್ರ್ಯಾಕ್ ಮಾಡಿ, ತೆರಿಗೆ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ಯಾನ್ ಕಾರ್ಡ್‌ಗೆ ಹೋಲುವ ಪರಿಕಲ್ಪನೆಗಳು
ಟ್ಯಾನ್ (ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ) : ಇದು ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (ಟಿಡಿಎಸ್) ಭಾಗವಾಗಿ ಮಾಡಿದ ಪಾವತಿಗಳ ಮೇಲೆ ತೆರಿಗೆಯನ್ನು ಸಂಗ್ರಹಿಸುವ ಅಥವಾ ಕಡಿತಗೊಳಿಸಬೇಕಾದ ವ್ಯಕ್ತಿಗಳು ಮತ್ತು ಘಟಕಗಳಿಗೆ ನೀಡಲಾಗುವ ವಿಶಿಷ್ಟ 10-ಅಂಕಿಯ ಸಂಖ್ಯೆ. ಮರುಪಾವತಿಯನ್ನು ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲು ಮಾಡಿದ ಟಿಡಿಎಸ್ ಅಥವಾ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (ಟಿಸಿಎಸ್) ಚಲನ್‌ಗಳಿಗೆ ಅರ್ಜಿ ಸಲ್ಲಿಸುವಾಗ ಟ್ಯಾನ್ ಅನ್ನು ಉಲ್ಲೇಖಿಸಬೇಕು. TAN ಅನ್ನು ಉಲ್ಲೇಖಿಸಲು ವಿಫಲವಾದರೆ ರೂ.10,000 ದಂಡ ವಿಧಿಸಲಾಗುತ್ತದೆ.
TIN (ತೆರಿಗೆದಾರರ ಗುರುತಿನ ಸಂಖ್ಯೆ) : TIN ಸಂಖ್ಯೆಯು ಮೌಲ್ಯವರ್ಧಿತ ತೆರಿಗೆ ಅಡಿಯಲ್ಲಿ ನೋಂದಾಯಿಸಲಾದ ವಿತರಕರನ್ನು ಗುರುತಿಸಲು ಬಳಸಲಾಗುವ ವಿಶಿಷ್ಟ 11-ಅಂಕಿಯ ಸಂಖ್ಯೆ. ಪ್ರತ್ಯೇಕ ರಾಜ್ಯಗಳಿಂದ ಹಂಚಲಾದ ಎಲ್ಲ ತಯಾರಕರು, ವ್ಯಾಪಾರಿಗಳು ಮತ್ತು ವಿತರಕರು TIN ಸಂಖ್ಯೆಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಇನ್‌ವಾಯ್ಸ್, ಆರ್ಡರ್ಸ್ ಅಥವಾ ರೆಫರೆನ್ಸ್ ರಚಿಸುವಾಗ ವಿತರಿಸುವ ಮತ್ತು ಸ್ವೀಕರಿಸುವ ಕಂಪನಿಯು ಈ ಸಂಖ್ಯೆಯನ್ನು ಉಲ್ಲೇಖಿಸಬೇಕು. 1961 ರ ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ತೆರಿಗೆದಾರರನ್ನು ಗುರುತಿಸಲೂ ಇದನ್ನು ಬಳಸಲಾಗುತ್ತದೆ.
e-KYC ಗಾಗಿ ಶಾಶ್ವತ ಖಾತೆ ಸಂಖ್ಯೆ (PAN)
ನೀವು e-KYCಗಾಗಿ ನಿಮ್ಮ PAN ಅನ್ನು ಬಳಸಬಹುದು. e-KYC ಹೆಚ್ಚಿನ ಸೇವಾ ಪೂರೈಕೆದಾರರು ಕೇಳುವ ಪ್ರಮುಖ ಅವಶ್ಯಕತೆ ಮತ್ತು ಇದು ಹಲವು ಪ್ರಯೋಜನಗಳನ್ನು ನೀಡುತ್ತದೆ. PAN e-KYC ಯ ಕೆಲವು ಪ್ರಯೋಜನಗಳಿವು...
- ತ್ವರಿತ ಪ್ರಕ್ರಿಯೆ: ಪ್ಯಾನ್ ಇ-ಕೆವೈಸಿ ಮಾಡಿದರೆ ಸುರಕ್ಷಿತ ಮಾರ್ಗಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಸೇವಾ ಪೂರೈಕೆದಾರರೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು. ಇದು ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ.
- ಕಾಗದರಹಿತ ಪ್ರಕ್ರಿಯೆಯಾಗಿರುವುದರಿಂದ, ಪ್ಯಾನ್ ಇ-ಕೆವೈಸಿ ದಾಖಲೆಗಳು ಮತ್ತು ಮಾಹಿತಿಯ ಯಾವುದೇ ತಕರಾರು ಇಲ್ಲದೇ ನಿರ್ವಹಿಸುತ್ತದೆ.
- ಅಧಿಕಾರ: ಪ್ಯಾನ್ ಇ-ಕೆವೈಸಿ ಮೂಲಕ ಹಂಚಿಕೊಳ್ಳಲಾದ ಅಧಿಕೃತ ಡೇಟಾ ಕಾನೂನುಬದ್ಧವಾಗಿದೆ ಮತ್ತು ವಹಿವಾಟಿನಲ್ಲಿ ಭಾಗಿಯಾಗಿರುವವರಿಗೆ ದೇಶಾದ್ಯಂತ ಸ್ವೀಕಾರಾರ್ಹವಾಗಿದೆ.
- ಸುರಕ್ಷಿತ ಡೇಟಾ: ಕಾರ್ಡ್‌ಹೋಲ್ಡರ್ ಮತ್ತು ಸೇವಾ ಪೂರೈಕೆದಾರರ ನಡುವೆ ವರ್ಗಾಯಿಸಲಾದ ಡೇಟಾವನ್ನು ಸುರಕ್ಷಿತ ಮಾರ್ಗಗಳ ಮೂಲಕ ಮಾತ್ರ ವರ್ಗಾಯಿಸಲಾಗಿರುವುದರಿಂದ ಅದನ್ನು ತಿರುಚಲು ಬರುವುದಿಲ್ಲ. ಇದರ ಜೊತೆಗೆ, ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎರಡೂ ಕಡೆ ಒಪ್ಪಿಗೆಯಿಲ್ಲದೆ ಡೇಟಾ ಬಳಸಲಾಗುವುದಿಲ್ಲ.
ಆದಾಗ್ಯೂ, ವಿವಿಧ ಸೇವಾ ಪೂರೈಕೆದಾರರಿಂದ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಾಯ ಮಾಡುವ ಇ-ಕೆವೈಸಿ ಮತ್ತು ಪರಿಶೀಲನೆಯ ಉದ್ದೇಶಕ್ಕಾಗಿ ನಿಮ್ಮ ಆಧಾರ್ ಮತ್ತು ನಿಮ್ಮ ಪ್ಯಾನ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಪ್ಯಾನ್ ಕಾರ್ಡ್‌ನಲ್ಲಿ FAQ ಗಳು
ಹಂಚಿಕೆ ಮಾಡಿದ ನಂತರ ಪ್ಯಾನ್ ಎಷ್ಟು ಸಮಯದವರೆಗೆ ಮಾನ್ಯವಾಗಿರುತ್ತದೆ?
ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಜೀವಿತಾವಧಿಯವರೆಗೆ ಮಾನ್ಯ. ಒಮ್ಮೆ ಅದನ್ನು ಬಳಕೆದಾರರಿಗೆ ನೀಡಿದ ನಂತರ, ಅದು ಅವರ ಜೀವಿತಾವಧಿಯಲ್ಲಿ ಬದಲಾಗುವುದಿಲ್ಲ.
ಪ್ಯಾನ್ ಡೇಟಾಬೇಸ್‌ನಲ್ಲಿರುವ ಮಾಹಿತಿಯನ್ನು ನಾನು ಹೇಗೆ ಸರಿಪಡಿಸಬಹುದು?
ಅಧಿಕೃತ ಪ್ರೋಟೀನ್ ಇ-ಗವ್ ಟೆಕ್ನಾಲಜೀಸ್ ಲಿಮಿಟೆಡ್ (ಹಿಂದೆ NSDL) ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪ್ಯಾನ್‌ಗೆ ಬದಲಾವಣೆಗೆ ಅಗತ್ಯ ಗುರುತುಗಳನ್ನು ಬಳಸಿಕೊಂಡು ಲಾಗಿನ್ ಮಾಡಬಹುದು.
ಪ್ಯಾನ್ ಅರ್ಜಿ ನಮೂನೆಯನ್ನು ಹೇಗೆ ಭರ್ತಿ ಮಾಡಬೇಕು?
ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ನಮೂನೆಯನ್ನು ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಭರ್ತಿ ಮಾಡಬೇಕು. ವಿವರಗಳನ್ನು ನವೀಕರಿಸಲು ಕ್ಯಾಪಿಟಲ್ ಲೆಟರ್ಸ್ ಮತ್ತು ಕಪ್ಪು ಶಾಯಿಯನ್ನು (ಮೇಲಾಗಿ) ಬಳಸಬೇಕು. ಫಾರ್ಮ್ ಭರ್ತಿ ಮಾಡುವ ಮೊದಲು ನೀವು ಎಲ್ಲ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಪ್ಯಾನ್ ಕಾರ್ಡ್ ಅರ್ಜಿ ನಮೂನೆಯನ್ನು ಎಲ್ಲಿ ಸಲ್ಲಿಸಬೇಕು?
ಪ್ಯಾನ್ ಕಾರ್ಡ್ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ ಸ್ವಯಂ-ದೃಢೀಕರಿಸಿದ ನಂತರ, ಎಲ್ಲ ಸಂಬಂಧಿತ ದಾಖಲೆಗಳೊಂದಿಗೆ ಪ್ರೋಟೀನ್ ಇ-ಗವ್ ಟೆಕ್ನಾಲಜೀಸ್ ಲಿಮಿಟೆಡ್ (ಹಿಂದೆ NSDL) ನಿರ್ವಹಿಸುವ ಯಾವುದೇ ಪ್ಯಾನ್ ಕೇಂದ್ರಗಳು ಅಥವಾ TIN-FC ಗಳಿಗೆ ಸಲ್ಲಿಸಬಹುದು.
ಪ್ಯಾನ್ ಕಾರ್ಡ್‌ಗಾಗಿ ಫಾರ್ಮ್ 49A ಅನ್ನು ಸಲ್ಲಿಸಿದಾಗ, ಯಾವ ಶುಲ್ಕ ಭರಿಸಬೇಕು?
ಭಾರತದೊಳಗಿನ ವಿಳಾಸವಾದರೆ ಪ್ಯಾನ್ ಕಾರ್ಡ್ ಸಂಸ್ಕರಣಾ ಶುಲ್ಕ ರೂ.110, ಅಂದರೆ, ರೂ.93 (ಅರ್ಜಿ ಶುಲ್ಕ) + 18% ಜಿಎಸ್‌ಟಿ.
ವಿಳಾಸ ಭಾರತದ ಹೊರಗಿದ್ದರೆ, ಪ್ಯಾನ್ ಕಾರ್ಡ್ ಸಂಸ್ಕರಣಾ ಶುಲ್ಕ ರೂ.1,020, ಅಂದರೆ, ರೂ.93 (ಅರ್ಜಿ ಶುಲ್ಕ) + ರೂ.771 (ರವಾನೆ ಶುಲ್ಕಗಳು) + 18% ಜಿಎಸ್‌ಟಿ.
ಫಾರ್ಮ್‌ನಲ್ಲಿ ಇಮೇಲ್ ಐಡಿ ಅಥವಾ ದೂರವಾಣಿ ಸಂಖ್ಯೆ ನಮೂದಿಸಬೇಕೇ?
ಎಲ್ಲ ಅರ್ಜಿದಾರರು ಪ್ಯಾನ್ ಅರ್ಜಿ ನಮೂನೆಯಲ್ಲಿ ತಮ್ಮ ಇಮೇಲ್ ಐಡಿ ಅಥವಾ ದೂರವಾಣಿ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ, ಇದರಿಂದ ವ್ಯತ್ಯಾಸವಿದ್ದಲ್ಲಿ ಅವರನ್ನು ಸಂಪರ್ಕಿಸಬಹುದು. ಅರ್ಜಿದಾರರು ಇಮೇಲ್ ಮೂಲಕ ಪ್ಯಾನ್ ಸ್ವೀಕರಿಸಿದಾಗಲೂ ಇದು ಉಪಯುಕ್ತ.
ಪ್ಯಾನ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ನಾನು ಸರಿಪಡಿಸಬಹುದೇ?
ಹೌದು, ಸರಿಪಡಿಸಬಹುದು.
ಕಾರ್ಡ್‌ನಲ್ಲಿರುವ ಭಾವಚಿತ್ರವನ್ನು ಬದಲಾಯಿಸುವುದು ಹೇಗೆ?
ಪ್ಯಾನ್ ಕಾರ್ಡ್‌ನಲ್ಲಿರುವ ಫೋಟೋ ಅಸ್ಪಷ್ಟವಾಗಿದ್ದರೆ, ನೀವು ಪ್ಯಾನ್ ಕಾರ್ಡ್ ಅನ್ನು ಉತ್ತಮ ಗುಣಮಟ್ಟದ ಮತ್ತು ಸ್ಪಷ್ಟತೆಯ ಭಾವ ಚಿತ್ರದೊಂದಿಗೆ ಬದಲಾಯಿಸಬಹುದು. ಈ ಸೌಲಭ್ಯವು 'ಪ್ಯಾನ್ ಕಾರ್ಡ್ ತಿದ್ದುಪಡಿ' ವಿನಂತಿಗಳ ಭಾಗವಾಗಿ ಲಭ್ಯವಿದೆ. ಹೆಸರು ಬದಲಾವಣೆ ಮತ್ತು ಜನ್ಮ ದಿನಾಂಕ ಬದಲಾವಣೆಯಂತೆಯೇ ಇವನ್ನು ಮಾಡಬಹುದು. https://tin.tin.nsdl.com/pan/ ವೆಬ್‌ಸೈಟ್‌ಗೆ ಭೇಟಿ ನೀಡಿ 'PAN card change request form' ಅನ್ನು ಭರ್ತಿ ಮಾಡಬಹುದು. ಸಂಬಂಧಿಸಿದ ದಾಖಲೆಗಳನ್ನು ಫಾರ್ಮ್‌ನಲ್ಲಿ ನಮೂದಿಸಲಾದ ವಿಳಾಸಕ್ಕೆ ಕಳುಹಿಸಬೇಕು.
ಪ್ಯಾನ್ ಕಾರ್ಡ್ ಪಡೆಯಲು, ನಾನು ಸರಳ ಕಾಗದದ ಮೇಲೆ ಅರ್ಜಿ ಬರೆಯಬಹುದೇ?
ಇಲ್ಲ, ಕೈಬರಹದ ಅರ್ಜಿಯ ಮೂಲಕ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲಾಗುವುದಿಲ್ಲ. ಅರ್ಜಿಯನ್ನು ನೇರ ತೆರಿಗೆಗಳ ಕೇಂದ್ರ ಮಂಡಳಿಯು ಸೂಚಿಸಿದ ಸ್ವರೂಪದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಫಾರ್ಮ್‌ಗಳು: ಭಾರತೀಯ ನಾಗರಿಕರಿಗೆ, ಫಾರ್ಮ್ 49A, ವಿದೇಶಿ ನಾಗರಿಕರಿಗೆ, ಫಾರ್ಮ್ 49AA.
ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವೇ?
ಹೌದು. ಎರಡೆರಡು ಪ್ಯಾನ್ ಹೊಂದುವುದು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 272 ಬಿ ಅಡಿಯಲ್ಲಿ ರೂ.10,000 ದಂಡವನ್ನು ವಿಧಿಸಲಾಗುತ್ತದೆ.
ವಿವಾಹಿತ/ವಿಧವೆ/ವಿಚ್ಛೇದಿತ ಮಹಿಳೆಗೆ ಅರ್ಜಿ ನಮೂನೆಯಲ್ಲಿ ತಂದೆ ಹೆಸರನ್ನು ಸೇರಿಸುವುದು ಅಗತ್ಯವೇ?
ಎಲ್ಲ ಮಹಿಳಾ ಅರ್ಜಿದಾರರು ತಮ್ಮ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಪ್ಯಾನ್ ಅರ್ಜಿ ನಮೂನೆಯಲ್ಲಿ ತಮ್ಮ ತಂದೆಯ ಹೆಸರನ್ನು ಮಾತ್ರ ಸೇರಿಸಬೇಕು. ಫಾರ್ಮ್ ಅನ್ನು ಗಂಡನ ಹೆಸರಿನೊಂದಿಗೆ ನವೀಕರಿಸುವ ಅಗತ್ಯವಿಲ್ಲ.
ಒಂದಕ್ಕಿಂತ ಹೆಚ್ಚು ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಲು ಸಾಧ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಒಂದು ಪ್ಯಾನ್ ಅನ್ನು ಮಾತ್ರ ನೀಡಲಾಗುತ್ತದೆ.
TIN-FC ನಲ್ಲಿ ನನ್ನ ಪ್ಯಾನ್ ಅರ್ಜಿ ನಮೂನೆಯನ್ನು ಸಲ್ಲಿಸಿದಾಗ ಸ್ವೀಕೃತಿ ಸಿಗುತ್ತದೆಯೇ?
ಹೌದು, ನೀವು ವಿಶಿಷ್ಟವಾದ 15-ಅಂಕಿಯ ಸಂಖ್ಯೆ ಹೊಂದಿರುವ ಸ್ವೀಕೃತಿಯನ್ನು ಸ್ವೀಕರಿಸುತ್ತೀರಿ.
