ಪಾಕಿಸ್ತಾನ ಷೇರು ಮಾರುಕಟ್ಟೆ ವಿಶ್ವದ ಎರಡನೇ ಅತ್ಯುತ್ತಮ ಸ್ಟಾಕ್ ಮಾರ್ಕೆಟ್; ಸೂಚ್ಯಂಕ ದಾಖಲೆ ಮಟ್ಟಕ್ಕೆ ಏರಿಕೆ

ಪಾಕಿಸ್ತಾನ ಷೇರು ಮಾರುಕಟ್ಟೆ ಸೂಚ್ಯಂಕ ಆರು ವರ್ಷಗಳ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗುವ ಮೂಲಕ ವಿಶ್ವದ ಎರಡನೇ ಅತ್ಯುತ್ತಮ ಷೇರುಮಾರುಕಟ್ಟೆ ಎಂದು ಗುರುತಿಸಿಕೊಂಡಿದೆ. 
 

Pakistan is worlds second best stock market as key index rises anu

Business Desk: ಪಾಕಿಸ್ತಾನದ ಷೇರು ಮಾರುಕಟ್ಟೆ ಗೌಜ್ ಸೂಚ್ಯಂಕ  ಆರು ವರ್ಷಗಳ ಅತ್ಯಧಿಕ ಮಟ್ಟಕ್ಕೆ ಏರಿಕೆಯಾಗುವ ಮೂಲಕ ವಿಶ್ವದ ಎರಡನೇ ಅತ್ಯುತ್ತಮ ಷೇರುಮಾರುಕಟ್ಟೆ ಎಂದು ಗುರುತಿಸಿಕೊಂಡಿದೆ. ಇದು ಪಾಕಿಸ್ತಾನದ ಕರೆನ್ಸಿಯನ್ನು ಬಲಗೊಳಿಸುವ ಮೂಲಕ ಹಣದುಬ್ಬರ ಒತ್ತಡವನ್ನು ತಗ್ಗಿಸುವ ನಿರೀಕ್ಷೆಯಿದೆ. ಕೆಎಸ್ ಇ -100 ಸೂಚ್ಯಂಕ ಶೇ.  0.9ರಷ್ಟು ಏರಿಕೆ ಕಂಡು 50,673.04ಕ್ಕೆ ತಲುಪಿದೆ. ಈ ಮೂಲಕ ಈ ತಿಂಗಳ ಗಳಿಕೆಯನ್ನು ಸುಮಾರು ಶೇ.10ಕ್ಕೆ ಹೆಚ್ಚಿಸಿದೆ. ಬ್ಲೂಮ್ ಬರ್ಗ್ ಬಿಡುಗಡೆಗೊಳಿಸಿರುವ ಈ ತಿಂಗಳ  90ಕ್ಕೂ ಹೆಚ್ಚಿನ  ಜಾಗತಿಕ ಈಕ್ವಿಟಿ ಸೂಚ್ಯಂಕಗಳಲ್ಲಿ ಗೌಜ್ ಎರಡನೇ ಅತ್ಯುತ್ತಮ ನಿರ್ವಹಣೆ ತೋರಿದೆ. ಇತ್ತೀಚಿನ ಕೆಲವು ತಿಂಗಳಿಂದ ಭಾರತದ ಆರ್ಥಿಕ ಸ್ಥಿತಿ ಸಾಕಷ್ಟು ಹದಗೆಟ್ಟಿತ್ತು. ಪಾಕಿಸ್ತಾನದ ಜಿಡಿಪಿ ಅಂದಾಜು 376.493 ಅರಬ್ ಡಾಲರ್ ತಲುಪಿದೆ. ಇದ್ರಿಂದಾಗಿ  ಪಾಕಿಸ್ತಾನಿ ಜನರು ದಿನನಿತ್ಯದ ವಸ್ತುಗಳ ಖರೀದಿಗೂ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಎಲ್ಲ ಸರಕುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಹಾಲು, ನೀರು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಪಾಕಿಸ್ತಾನಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆ ಪಾಕಿಸ್ತಾನದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

'ಪಾಕಿಸ್ತಾನ ರೂಪಾಯಿಯಲ್ಲಿ ಚೇತರಿಕೆ, ಸೆಕೆಂಡರಿ ಡೆಟ್ ಮಾರ್ಕೆಟ್ ಏರುದರದಲ್ಲಿರೋದು ಹಾಗೂ ಹಣದುಬ್ಬರ ಪ್ರಸ್ತುತ ತಾಜಾ ನಿಧಿಯನ್ನು ಮರಳಿ ಈಕ್ವಿಟಿಗಳಲ್ಲಿ ತೊಡಗುವಂತೆ ಮಾಡಿದೆ' ಎಂದು ಅಲ್ಫಲಾ ಸಿಎಲ್ ಎಸ್ ಎ ಸೆಕ್ಯುರಿಟೀಸ್ ಪ್ರೈವೇಟ್ ಲಿಮಿಟೆಡ್ ಅಂತಾರಾಷ್ಟ್ರೀಯ ಮಾರಾಟದ ಮುಖ್ಯಸ್ಥರಾದ ಫೈಸಲ್ ಬಿಲ್ವಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರು ವರ್ಷಗಳ ಬಳಿಕ ಕೆಎಸ್ ಇ-100 ಮಾರುಕಟ್ಟೆಯಲ್ಲಿ ಪಾಕಿಸ್ತಾನದ ಷೇರು ಮಾರುಕಟ್ಟೆ 50,000 ಮಾರ್ಕ್ ದಾಟಿದ ಹಿನ್ನೆಲೆಯಲ್ಲಿ ಇದು ಲೈಮ್ ಲೈಟ್ ನಲ್ಲಿ ಇರಲಿದೆ ಎಂಬ ಅಭಿಪ್ರಾಯವನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.

ಇವ್ರೇ ನೋಡಿ ಪಾಕಿಸ್ತಾನದ ಶ್ರೀಮಂತ ಹಿಂದೂಗಳು: ಅವರ ಆಸ್ತಿ ಮೌಲ್ಯ, ವೃತ್ತಿ, ಇತರ ವಿವರ ಇಲ್ಲಿದೆ..

ಈ ಎಲ್ಲ ಬೆಳವಣಿಗೆಗಳ ನಡುವೆ ದೇಶದ ಆರ್ಥಿಕತೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹಣದುಬ್ಬರ ಅಂದಾಜು ಶೇ.30ರ ಆಸುಪಾಸಿನಲ್ಲಿದೆ. ಅಲ್ಲದೆ, ಇದು ಇಂಧನ ಬೆಲೆಗಳಲ್ಲಿನ ಹೆಚ್ಚಳದಿಂದ ಇನ್ನಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಜಾಗತಿಕ ತೈಲ ಬೆಲೆಗಳಲ್ಲಿನ ಏರಿಕೆ ಪಾಕಿಸ್ತಾನದ ಷೇರು ಮಾರುಕಟ್ಟೆ ಓಟಕ್ಕೆ ಲಗಾಮು ಹಾಕಲಿದೆ. ಇದರ ಜೊತೆಗೆ ವಿದೇಶಿ ವಿನಿಮಯ ಮೀಸಲು ಕೂಡ ಕಡಿಮೆಯಿರೋದು ಹಾಗೂ ಹಣದುಬ್ಬರ ದರ ಹೆಚ್ಚಿರೋದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿವೆ. ಅಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ಬಳಿಕ ಕಚ್ಚಾ ತೈಲಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಯುದ್ಧ ನಿಲ್ಲುವ ಸೂಚನೆ ಕಾಣುತ್ತಿಲ್ಲವಾದ ಕಾರಣ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. 

ತೀವ್ರ ಆರ್ಥಿಕ ಸಂಕಷ್ಟದಿಂದ ನಲುಗುತ್ತಿರೋ ಪಾಕ್‌ಗೆ ವೆಂಕಟರಮಣನಾದ IMF: 3 ಬಿಲಿಯನ್‌ ಡಾಲರ್‌ ಸಾಲ ಘೋಷಣೆ

ಪಾಕಿಸ್ತಾನದಲ್ಲಿ ಆರ್ಥಿಕತೆ  ದುಸ್ಥಿತಿ ತಲುಪಿದ್ದು, ಆಹಾರದ ಬೆಲೆಗಗನಕ್ಕೇರಿದೆ. ಹೀಗಾಗಿ ಜನರಿಗೆ ಜೀವನ ಮಾಡುವುದು ಕಷ್ಟವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ವಲಸೆ ಹೋಗಲು ಆರಂಭಿಸಿದ್ದಾರೆ. ಇವರೆಲ್ಲರೂ ಉಮ್ರಾ ವೀಸಾ (ಪವಿತ್ರ ಸ್ಥಳಗಳ ಭೇಟಿಗಾಗಿ ಕೊಡುವ ವೀಸಾ)ಗಳನ್ನು ಪಡೆದುಕೊಂಡು ಸೌದಿ ಅರೇಬಿಯಾಗೆ ತೆರಳಿ ಬಳಿಕ ಅಲ್ಲಿ ಭಿಕ್ಷೆ ಬೇಡಲು ಆರಂಭಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೆಕ್ಕಾದ ಗ್ರಾಂಡ್‌ ಮಸೀದಿಯ ಬಳಿ ಜೇಬುಗಳ್ಳತನ ಆರೋಪದಡಿ ಬಂಧನಕ್ಕೊಳಪಟ್ಟ ಬಹುತೇಕ ಕಳ್ಳರು ಪಾಕಿಸ್ತಾನಿಯರೇ ಆಗಿದ್ದಾರೆ. ಹೀಗೆ ವಿದೇಶಗಳಿಗೆ ಹೋದ ಭಿಕ್ಷುಕರಲ್ಲಿ ಶೇ.90ರಷ್ಟು ಮಂದಿ ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಜೈಲು ಪಾಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.


 

Latest Videos
Follow Us:
Download App:
  • android
  • ios