ಇಸ್ಲಾಮಾಬಾದ್(ಫೆ.04): ಭಾರತದ ಸಿಎಎ ವಿರೋಧಿಸಿ ಸಂಕಷ್ಟಕ್ಕೆ ಸಿಲಕಿರುವ ಮಲೇಶಿಯಾ ನೆರವಿಗೆ ಬಂದಿರುವ ಪಾಕಿಸ್ತಾನ, ಭಾರತ ನಿಲ್ಲಿಸಿರುವ ತಾಳೆ ಎಣ್ಣೆಯನ್ನು ತಾನು ಖರೀದಿಸುವುದಾಗಿ ಅಭಯ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಮಲೇಶಿಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಎಣ್ಣೆಯನ್ನು ಖರೀದಿಸುವುದಾಗಿ ಘೋಷಿಸಿದ್ದಾರೆ. ಸಿಎಎ ಕುರಿತು ಮಲೇಶಿಯಾ ಪ್ರಧಾನಿ ಮಹತೀರ್ ಮೊಹ್ಮದ್ ಸತ್ಯವನ್ನೇ ಹೇಳಿದ್ದು, ಅವರ ಬೆಂಬಲಕ್ಕೆ ತಾವಿರುವುದಾಗಿ ಇಮ್ರಾನ್ ಸ್ಪಷ್ಟಪಡಿಸಿದ್ದಾರೆ.

ಸಿಎಎ ವಿರೋಧಿಸಿದ ದೇಶದಿಂದ 'ಎಣ್ಣೆ' ಆಮದು ನಿಲ್ಲಿಸಿದ ಭಾರತ: ಸತ್ಯ ಹೇಳಿದ್ದಕ್ಕೆ 'ಶಿಕ್ಷೆ'?

ಮಲೇಶಿಯಾದಿಂದ ತಾಳೆ ಎಣ್ಣೆ ಆಮದುನ್ನು ನಿಲ್ಲಿಸಿ ಭಾರತ ಕ್ರೂರತೆಯನ್ನು ಮೆರೆದಿದೆ. ಸತ್ಯ ನುಡಿದಿದ್ದಕ್ಕೆ ಭಾರತದ ಪ್ರಧಾನಿ ಮೋದಿ ಈ ಶಿಕ್ಷೆ ನೀಡಿದ್ದು, ಮಲೇಶಿಯಾಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಪಾಕಿಸ್ತಾನದ ಜವಾಬ್ದಾರಿ ಎಂದು ಇಮ್ರಾನ್ ನುಡಿದಿದ್ದಾರೆ.

ಸಿಎಎ ಜಾರಿ ಅನಗತ್ಯ ಎಂದಿದ್ದ ಮಲೇಶಿಯಾ ಪ್ರಧಾನಿ ಮಹತೀರ್ ಮೊಹ್ಮದ್ ಮೇಲೆ ಗರಂ ಆಗಿದ್ದ ಭಾರತ, ಮಲೇಶಿಯಾದಿಂದ ತಾಳೆ ಎಣ್ಣೆ ಆಮದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿತ್ತು.

ವಿಶ್ವದಲ್ಲೇ ಅತೀ ಹೆಚ್ಚು ತಾಳೆ ಎಣ್ಣೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮಲೇಶಿಯಾದಿಂದ ಭಾರತ 2018ರಲ್ಲಿ ಬರೋಬ್ಬರಿ 1.3 ಬಿಲಿಯನ್  ಯುಎಸ್ ಡಾಲರ್ ಮೊತ್ತದ ತಾಳೆ ಎಣ್ಣೆಯನ್ನು ಖರೀದಿಸಿತ್ತು.

ಭಾರತ 'ಎಣ್ಣೆ' ಆಮದು ನಿಲ್ಲಿಸಿದ ರಾಷ್ಟ್ರದ ಪ್ರಧಾನಿಯ ಪ್ರತಿಕ್ರಿಯೆ:ಅವ್ರು ದೊಡ್ಡವರೆಂದ ಮಹತೀರ್!

ಅದರಂತೆ ಪಾಕಿಸ್ತಾನ ಕೂಡ ಕಳೆದ ವರ್ಷ ಮಲೇಶಿಯಾದಿಂದ 1.1 ಮಿಲಿಯನ್ ಟನ್ ತಾಳೆ ಎಣ್ಣೆಯನ್ನು ಖರೀದಿಸಿದ್ದು, ಈ ಬಾರಿ ಆಮದನ್ನು ಹೆಚ್ಚಿಸುವ ಮೂಲಕ ಮಲೇಶಿಯಾ ನೆರವಿಗೆ ಬರುವ ನಿರ್ಣಯ ಕೈಗೊಂಡಿದೆ.

ಅದಾಗ್ಯೂ ತಾಳೆ ಎಣ್ಣೆ ರಫ್ತಿಗೆ ಭಾರತವೇ ಸೂಕ್ತ ಎಂದು ಅರಿತಿರುವ ಮಲೇಶಿಯಾ, ಬಿಕ್ಕಟ್ಟು ಶಮನಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಇಮ್ರಾನ್ ಖಾನ್ ನೆರವಿನ ಘೋಷಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದಿರುವುದು ಸತ್ಯ.