ಭಾರತ ಬಿಟ್ಟು ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವ ಶ್ರೀಮಂತರು, ಉದ್ಯಮಿಗಳ ಸಂಖ್ಯೆ ಅಚ್ಚರಿಕೆ ಕಾರಣವಾಗಿದೆ. ಈ ವರ್ಷ ಬರೋಬ್ಬರಿ 3,500 ಶ್ರೀಮಂತರು ಭಾರತ ತೊರೆದು ಬೇರೆ ದೇಶಗಳಲ್ಲಿ ನೆಲೆಸಲು ತೆರಳುತ್ತಿದ್ದಾರೆ. ಇದರಿಂದ ಭಾರತಕ್ಕೆ ಬರೋಬ್ಬರಿ 26 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ.
ನವದೆಹಲಿ (ಜೂ.27) ಭಾರತ ಶ್ರೀಮಂತರು, ಉದ್ಯಮಿಗಳು ಸೇರಿದಂತೆ ಹಲವು ಕೋಟ್ಯಾಧೀಶರು ಭಾರತ ತೊರೆದು ಬೇರೆ ದೇಶಗಳಲ್ಲಿ ನೆಲೆಸುತ್ತಿರುವುದು ಹೊಸದೇನಲ್ಲ. ಆದರೆ ಈ ವರ್ಷ ಬರೋಬ್ಬರಿ 3,500 ಕೋಟ್ಯಾಧೀಶರು ಭಾರತ ತೊರೆಯಲು ಸಜ್ಜಾಗಿದ್ದಾರೆ. ಈಗಾಗಲೇ ಬೇರೆ ದೇಶದಲ್ಲಿ ನೆಲೆಸಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ದಾಖಲೆ ಪತ್ರಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಈ ವರ್ಷ 3,500 ಶ್ರೀಮಂತರು ಭಾರತ ತೊರದು ಬೇರೆ ದೇಶದಲ್ಲಿ ನೆಲೆಸಿದರೆ ದೇಶಕ್ಕೆ ಬರೋಬ್ಬರಿ 26 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ನಷ್ಟವಾಗುತ್ತಿದೆ ಎಂದು ಹೆನ್ಲೇ ಪ್ರೈವೇಟ್ ವೆಲ್ತ್ ಮೈಗ್ರೇಶನ್ 2025 ವರದಿ ಮಾಡಿದೆ.
2023ರಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ
2025ರಲ್ಲಿ 3,500 ಕೋಟ್ಯಾಧೀಶರು ವಿದೇಶದಲ್ಲಿ ನೆಲೆಸಲು ತಯಾರಿ ಮಾಡಿಕೊಂಡಿದ್ದಾರೆ. 2025ರ ಡಿಸೆಂಬರ್ ವೇಳೆಗೆ ಸರಿಸುಮಾರು 3,500 ಮಂದಿ ಬೇರೆ ಬೇರೆ ದೇಶಗಳಲ್ಲಿ ನೆಲೆ ಕಂಡುಕೊಳ್ಳಲಿದ್ದಾರೆ. ಈ ಪೈಕಿ ಹಲವರು ಈಗಾಗಲೇ ವಿದೇಶಗಳಲ್ಲಿ ಉದ್ಯಮ, ಉದ್ಯೋಗ ಎಂದು ಓಡಾಡುತ್ತಿದ್ದಾರೆ. ಇದೀಗ ಭಾರತ ತೊರೆದು ಶಾಶ್ವತವಾಗಿ ವಿದೇಶದಲ್ಲಿ ನೆಲೆಸಲಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಟ್ರೆಂಡ್ ಕಡಿಮೆಯಾಗುತ್ತಿದೆ. ಭಾರತ ತೊರೆದು ಬೇರೆ ದೇಶದಲ್ಲಿ ನೆಲೆಸುತ್ತಿರುವವರ ಸಂಖ್ಯೆ ಇಳಿಕಮುಖವಾಗುತ್ತಿದೆ. 2023ರಲ್ಲಿ 4,300 ಮಂದಿ ಭಾರತ ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ. ಇನ್ನು ಈ ವರ್ಷ ಈ ಸಂಖ್ಯೆ ಸರಿಸುಮಾರು 3,500. ವರ್ಷದಿಂದ ವರ್ಷಕ್ಕೆ ವಿದೇಶದಲ್ಲಿ ನೆಲೆಸುತ್ತಿರುವ ಕೋಟ್ಯಾಧೀಶರ ಸಂಖ್ಯೆ ಕಡಿಮೆಯಾಗುತ್ತಿದೆ.
10 ವರ್ಷಗಳಲ್ಲಿ ಭಾರತದ ಮಿಲೇನಿಯರ್ ಸಂಖ್ಯೆ
2014ರಿಂದ 2025ರ ವರೆಗಿನ ಅಂಕಿ ಅಂಶಗಳನ್ನು ತೆಗೆದರೆ ಕಳೆದ 10 ವರ್ಷದಲ್ಲಿ ಭಾರತದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗಿದೆ. 2024ರಿಂದ 2024ರ ವರೆಗೆ ಭಾರತದಲ್ಲಿ ಶೇಕಡಾ 72ರಷ್ಟು ಮಿಲೇನಿರ್ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಹಲವು ವರ್ಗದ ಆರ್ಥಿಕತೆ, ಆರ್ಥಿಕ ಶಕ್ತಿ ಹೆಚ್ಚಾಗಿದೆ. ಜಾಗತಿಕ ವರದಿ ಪ್ರಕಾರ ಭಾರತದಲ್ಲಿ ಕಡು ಬಡತನದ ಸಂಖ್ಯೆ ಕೂಡ ಇಳಿಕೆಯಾಗಿದೆ.
ವಲಸೆಯಲ್ಲಿ ಯುಕೆ ಮೊದಲ ಸ್ಥಾನ
ಭಾರತದಿಂದ ಬೇರೆ ದೇಶಕ್ಕೆ ಹೋಗಿ ಸೆಟ್ಲ್ ಆಗುತ್ತಿರುವ ಸಂಖ್ಯೆಯೂ ಕಳೆದ ಕೆಲ ವರ್ಷದಲ್ಲಿ ಇಳಿಮುಖವಾಗುತ್ತಿದೆ. ಇದು ಭಾರತದ ಮಾತ್ರ ಸಮಸ್ಯೆಯಲ್ಲ. ಹಲವು ದೇಶಗಳು ಈ ಸಮಸ್ಯೆ ಎದುರಿಸುತ್ತಿದೆ. ಶ್ರೀಮಂತರಾಗುತ್ತಿದ್ದಂತೆ ದೇಶ ತೊರೆದು ಬೇರೆ ತಮ್ಮಿಷ್ಟ ದೇಶದಲ್ಲಿ, ತಮ್ಮ ಉದ್ಯೋಗ, ಉದ್ಯಮ ಬೆಳೆದಿರುವ ದೇಶದಲ್ಲಿ ನೆಲೆಸುವುದು ಸಾಮಾನ್ಯವಾಗಿದೆ. ಈ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ಡಮ್ ಮೊದಲ ಸ್ಥಾನದಲ್ಲಿದೆ. ಈ ವರ್ಷ ಯುಕೆ ತೊರೆದೆ ಬೇರೆ ದೇಶದಲ್ಲಿ ನೆಲೆಸುತ್ತಿರುವವರ ಸಂಖ್ಯೆ ಬರೋಬ್ಬರಿ 16,500. ಇನ್ನು ಚೀನಾದಿಂದ ಈ ವರ್ಷ 7,800 ಮಂದಿ ದೇಶ ತೊರೆಯುತ್ತಿದ್ದಾರೆ.
ಜಾಗತಿಕವಾಗಿ ಈ ರೀತಿ ವಲಸೆ ಹೋಗಿ ಬೇರೆ ದೇಶದಲ್ಲಿ ಸೆಟ್ಲ್ ಆಗುತ್ತಿರುವವರ ಈ ವರ್ಷದ ಸಂಖ್ಯೆ 1,42,000. ಪ್ರತಿ ದೇಶದಿಂದ ಬೇರೆ ದೇಶಕ್ಕೆ ವಲಸೆ ಹೋಗುವುದು ಸರ್ವೇ ಸಾಮಾನ್ಯ. ಆದರೆ ಕೆಲ ದೇಶಗಳ ಈ ವಲಸೆ ಸಂಖ್ಯೆ ಆತಂಕ ಹುಟ್ಟಿಸುವಂತಿದೆ. ಭಾರತ ಸಂಖ್ಯೆ ಈ ವರ್ಷ 3,500 ಮಾತ್ರ. ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಸಂಖ್ಯ ಕಡಿಮೆ. ಆದರೆ ಭಾರತದ ಸಂಪತ್ತು, ಆರ್ಥಿಕತೆಗೆ ಇದು ತೀವ್ರ ಹೊಡೆತ ನೀಡಲಿದೆ.
ಹೆಚ್ಚಿನವರ ಆಯ್ಕೆ ಯುಎಇ, ಯಎಸ್ ಹಾಗೂ ಸೌದಿ
ಭಾರತ, ಯುಕೆ ಸೇರಿದಂತೆ ಹಲವು ದೇಶಗಳಿಂದ ಶ್ರೀಮಂತರು ಬೇರೆ ದೇಶಗಳಲ್ಲಿ ಹೋಗಿ ನೆಲೆಸುತ್ತಿರುವ ಶ್ರೀಮಂತ ಮೊದಲ ಆಯ್ಕೆ ಯುಎಇ, ಅಮೆರಿಕ ಹಾಗೂ ಸೌದಿ ಅರೇಬಿಯಾ. ಯುನೈಟೆಡ್ ಅರಬ್ ಎಮಿರೈಟ್ಸ್ ಈ ವರ್ಷವೂ ಅತೀ ಹೆಚ್ಚು ವಲಸಿಗರನ್ನು ಆಕರ್ಷಿಸುತ್ತಿದೆ. ಬರೋಬ್ಬರಿ 9,800 ಮಂದಿ ಯುಎಇನಲ್ಲಿ ಸೆಟ್ಲ್ ಆಗುತ್ತಿದ್ದಾರೆ. ಇನ್ನು ಈ ವರ್ಷ ಅಮೆರಿಕದಲ್ಲಿ ಸೆಟ್ಲ್ ಆಗುತ್ತಿರುವವರ ಸಂಖ್ಯೆ 7,500 ಮಂದಿ.
