ಸೋಶಿಯಲ್ ಮೀಡಿಯಾ ಸುದ್ದಿ ನಕಲಿ: ತೆರಿಗೆ ರಿಟರ್ನ್ಸ್‌ ದಿನಾಂಕ ವಿಸ್ತರಣೆ ಇಲ್ಲ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆ ದಿನಾಂಕ ವಿಸ್ತರಣೆ ಇಲ್ಲ/ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಸುದ್ದಿ ನಕಲಿ/ ಆಗಸ್ಟ್ 31 ನೇ ದಿನಾಂಕವೇ ಕೊನೆ/ ಸಲ್ಲಿಕೆ ಮಾಡದಿದ್ದರೆ ದಂಡ ತುಂಬಬೇಕು

Order of ITR filing deadline extension to Sept 30 is fake CBDT clarification

ನವದೆಹಲಿ[ಆ. 30] ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ನಿಗದಿಗೊಳಿಸಿದ್ದ ಕೊನೆಯ ದಿನಾಂಕವನ್ನು ಹಣಕಾಸು ಇಲಾಖೆ  ವಿಸ್ತರಿಸಿದೆ ಎಂಬ ನಕಲಿ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.

ಸ್ವತಃ ಆದಾಯ ತೆರಿಗೆ ಇಲಾಖೆಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಿಗದಿಗೊಳಿಸಿದ್ದ ಗಡುವು ಅಂದರೆ ಆಗಸ್ಟ್ 31 ನೇ ದಿನಾಂಕವೇ ಕೊನೆ, ದಿನಾಂಕ ವಿಸ್ತರಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

ಇಲಾಖೆ ಐಟಿ ರಿಟರ್ನ್ಸ್‌ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್‌ 30ಕ್ಕೆ ಮುಂದೂಡಿದೆ ಎಂದು ಬರೆಯಲಾಗಿದ್ದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಇದು ನಕಲಿ ಪತ್ರ ಎಂದು ಇಲಾಖೆ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದೆ. 

ಐಟಿ ರಿಟರ್ನ್ಸ್ ಫೈಲ್ ಮಾಡುವವರು ಆದಾಯ ತೆರಿಗೆ ವೆಬ್‍ಸೈಟ್‌ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. https://www.incometaxindiaefiling.gov.in/home ಗೆ ಭೇಟಿ ನೀಡಿದ ನಂತರ ಅದರಲ್ಲಿ ಲೈಟ್‌ ಎಂಬ ಮತ್ತೊಂದು ಟ್ಯಾಬ್‌ ಒದಗಿಸಲಾಗಿದೆ. ಒಂದೊಂದಾಗಿ ಅಗತ್ಯ ಲಿಂಕ್ ಗಳು ತೆರೆದುಕೊಳ್ಳುತ್ತವೆ.

 

 

Latest Videos
Follow Us:
Download App:
  • android
  • ios