Asianet Suvarna News Asianet Suvarna News

ಮತ್ತೆ 18 ಸಾವಿರ ಉದ್ಯೋಗಿಗಳ ಮನೆಗೆ ಕಳುಹಿಸಿದ ಅಮೇಜಾನ್

ಆನ್‌ಲೈನ್ ಮಾರುಕಟ್ಟೆ ದೈತ್ಯ  ಅಮೇಜಾನ್ ಮತ್ತೆ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ.  18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ದಿಢೀರ್ ವಜಾಗೊಳಿಸಲು ಅಮೇಜಾನ್ ನಿರ್ಧರಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ  ಈ ವಿಚಾರವನ್ನು  ಅಧಿಕೃತಗೊಳಿಸಿದೆ.

online marketing gaint Amazon CEO Andy Jassey Announce 18 thousand employee layoff in Amazon akb
Author
First Published Jan 5, 2023, 2:29 PM IST

ವಾಷಿಂಗ್ಟನ್: ಆನ್‌ಲೈನ್ ಮಾರುಕಟ್ಟೆ ದೈತ್ಯ  ಅಮೇಜಾನ್ ಮತ್ತೆ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ.  18 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ದಿಢೀರ್ ವಜಾಗೊಳಿಸಲು ಅಮೇಜಾನ್ ನಿರ್ಧರಿಸಿದ್ದು, ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ  ಈ ವಿಚಾರವನ್ನು  ಅಧಿಕೃತಗೊಳಿಸಿದೆ.   ಅಮೇಜಾನ್ ಸಿಇಒ  ಆಂಡಿ ಜಾಸ್ಸಿ ಅವರ ಅಧಿಕೃತ ಪ್ರಕಟಣೆಯನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ  ಅಮೇಜಾನ್ ನ್ಯೂಸ್,  ಈ ವಿಚಾರವನ್ನು ಖಚಿತಪಡಿಸಿದ್ದು, ಇದು ಅಮೇಜಾನ್‌ನ ಸಾವಿರಾರು ಉದ್ಯೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.  ಜಗತ್ತಿನ ಎಲ್ಲಾ ದೇಶಗಳನ್ನು ಬಾಧಿಸುತ್ತಿರುವ ಆರ್ಥಿಕ ಅನಿಶ್ಚಿತತೆ ಇದಕ್ಕೆ ಕಾರಣವಾಗಿದ್ದು, ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸಲು ಈ ಕ್ರಮ ಅಗತ್ಯ ಎಂದು ಹೇಳಿದ್ದಾರೆ.  ಇದಕ್ಕೂ ಮೊದಲೆ ಅಮೇಜಾನ್ ನವೆಂಬರ್‌ನಲ್ಲಿ  10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. 

ಅನಿಶ್ಚಿತ ಆರ್ಥಿಕತೆ ಹಾಗೂ ಸಾಂಕ್ರಾಮಿಕ ರೋಗ ಕೋವಿಡ್‌ ಸಮಯದಲ್ಲಿ ಸಾಕಷ್ಟು ಉದ್ಯೋಗಿಗಳನ್ನು ವೇಗವಾಗಿ ನೇಮಕ ಮಾಡಿಕೊಂಡಿದೆ.  ಹೀಗಾಗಿ ಸ್ವಲ್ಪ ಉದ್ಯೋಗ ಕಡಿತ ಮಾಡಲು ನಿರ್ಧರಿಸಿದ್ದು,  18,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿರುವುದಾಗಿ ಹೇಳಿದೆ. ಉದ್ಯೋಗದ ವಜಾವನ್ನು ಸಹಿಸಿಕೊಳ್ಳುವುದು ಸಾವಿರಾರು  ಜನರಿಗೆ ಕಷ್ಟಕರವೆಂದು ಸಂಸ್ಥೆಯ ನಾಯಕತ್ವ ತಿಳಿದಿದೆ.  ಆದರೆ ನಾವು ಈ  ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಈ ಉದ್ಯೋಗ ವಜಾದಿಂದ ಸಂಕಷ್ಟಕ್ಕೊಳಗಾಗುವರ ಬೆಂಬಲಕ್ಕೆ ನಾವಿದ್ದೇವೆ.  ಅವರಿಗೆ ಪ್ರತ್ಯೇಕ ಪಾವತಿ, ಪರಿವರ್ತನೆಯ ಆರೋಗ್ಯವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುತ್ತಿದ್ದೇವೆ ಎಂದು ಆಮೇಜಾನ್  ಜಾಸ್ಸಿ ಹೇಳಿದ್ದಾರೆ.  ವಿಮಾ ಪ್ರಯೋಜನಗಳು ಮತ್ತು  ಹೊರಗಿನಿಂದ ಉದ್ಯೋಗ ನಿಯೋಜನೆ ಬೆಂಬಲವನ್ನು ನೀಡುವ ಅಭಿಲಾಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

Global Layoffs Impact India: ಜಾಗತಿಕ ಮಟ್ಟದ ಉದ್ಯೋಗ ಕಡಿತ ಭಾರತದ ಮೇಲೆ ಹೇಗೆ ಪರಿಣಾಮ ಬೀರಲಿದೆ

ಯುರೋಪ್‌ (Europian country) ದೇಶಗಳಲ್ಲಿಯೂ ಉದ್ಯೋಗ ಕಡಿತ  ಇರಲಿದೆ ಎಂದು ಜೆಸ್ಸಿ ಹೇಳಿದ್ದಾರೆ.  ಈ ಉದ್ಯೋಗ ಕಡಿತದಿಂದ ಪರಿಣಾಮ ಬೀರುವವರಿಗೆ ಜನವರಿ 18 ರಿಂದ ತಿಳಿಸಲಾಗುವುದು.  ಆದರೆ ನಮ್ಮ ತಂಡದ ಸದಸ್ಯರೊಬ್ಬರು ಈ ವಿಚಾರವನ್ನು ಈಗಾಗಲೇ ಸೋರಿಕೆ ಮಾಡಿರುವುದರಿಂದ ಈಗಲೇ ಈ ವಿಚಾರವನ್ನು ಹಠಾತ್ ಆಗಿ ಘೋಷಣೆ (announcement) ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಅಮೆಜಾನ್ ಈ ಹಿಂದೆಯೂ ಅನಿಶ್ಚಿತ ಮತ್ತು ಕಷ್ಟಕರವಾದ ಆರ್ಥಿಕತೆಗಳನ್ನು ಎದುರಿಸಿದೆ ಮತ್ತು ನಾವು ಅದನ್ನು ಮುಂದುವರಿಸುತ್ತಿದ್ದೇವೆ ಎಂದು ಜಾಸ್ಸಿ ಹೇಳಿದರು.  2020  ಹಾಗೂ 2022 ರ ಆರಂಭದ ನಡುವೆ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಅಮೇಜಾನ್ ಜನರಿಗೆ ಸೇವೆ ಪೂರೈಸುವ ಸಲುವಾಗಿ ಜಾಗತಿಕ ಮಟ್ಟದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿತ್ತು.  ಹೀಗಾಗಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ವಿಶ್ವಾದ್ಯಂತ 1.54 ಮಿಲಿಯನ್ ಉದ್ಯೋಗಿಗಳನ್ನು ಅಮೇಜಾನ್ ಹೊಂದಿತ್ತು. 

Job Layoffs: ಉದ್ಯೋಗದಿಂದ ವಜಾಗೊಂಡ ನಂತರ ಖಿನ್ನತೆ ಹೋಗಲಾಡಿಸುವುದು ಹೇಗೆ ?

ಇದರ ಜೊತೆಗೆ ಸಾಫ್ಟ್‌ವೇರ್ ಸಂಸ್ಥೆ ಸೇಲ್ಸ್‌ ಪೋರ್ಸ್ ಕೂಡ ತನ್ನ ಉದ್ಯೋಗಿಗಳಲ್ಲಿ ಶೇಕಡಾ 10 ರಷ್ಟು ಜನರನ್ನು ಉದ್ಯೋಗದಿಂದ ವಜಾಗೊಳಿಸಲು ಹಾಗೂ ಕೆಲವು ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ.  ಕ್ಲೌಡ್-ಆಧಾರಿತ ಸಾಫ್ಟ್‌ವೇರ್ ಸಂಸ್ಥೆಯಾದ ಸೇಲ್ಸ್ ಪೋರ್ಸ್ ಈ ರೀತಿ ಉದ್ಯೋಗ ಕಡಿತದಿಂದ ಸಂಸ್ಥೆಗೆ ಸದ್ಯದ ಮಟ್ಟಿಗೆ $ 1.4 ಶತಕೋಟಿಯಿಂದ $ 2.1 ಶತಕೋಟಿ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.

 

Follow Us:
Download App:
  • android
  • ios