ನಡು ಆಗಸದಲ್ಲಿ ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

 

  • ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
  • ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನ
  • ಟೇಕ್‌ ಆಫ್ ಆದ  27 ನಿಮಿಷಗಳಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್
Air India A320neo plane engine shuts mid-air got emergency landing at Mumbai airport akb

ಮುಂಬೈ: ಟಾಟಾ ಗ್ರೂಪ್ ನಡೆಸುತ್ತಿರುವ ಏರ್ ಇಂಡಿಯಾದ A320neo ವಿಮಾನವು ಟೇಕ್ ಆಫ್ ಆದ ಕೇವಲ 27 ನಿಮಿಷಗಳಲ್ಲಿ  ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷದಿಂದ ನಡು ಆಗಸದಲ್ಲಿ ವಿಮಾನ ಸ್ಥಗಿತಗೊಂಡು ಕೆಲ ನಿಮಿಷದಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಗೊಂಡಿತು. ಗುರುವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬೆಂಗಳೂರಿಗೆ ಹೊರಟಿದ್ದ ವಿಮಾನ ಇದಾಗಿದ್ದು, ನಂತರ ಆ ವಿಮಾನದ ಪ್ರಯಾಣಿಕರನ್ನು ಬೇರೆ ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಲಾಯಿತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮುಂಬೈ ವಿಮಾನ ನಿಲ್ದಾಣದಿಂದ ಟೇಕ್‌ ಆಫ್ ಆದ  ಕೇವಲ 27 ನಿಮಿಷಗಳಲ್ಲಿ  ಏರ್ ಇಂಡಿಯಾದ A320neo ವಿಮಾನವು ನಿಲ್ದಾಣಕ್ಕೆ ಮರಳಿ ತುರ್ತು ಭೂಸ್ಪರ್ಶವಾಯಿತು. ಈ ಘಟನೆಯ ಕುರಿತು ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(Aviation regulator Directorate General of Civil Aviation) ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Air India denies entry ಪ್ರವೇಶ ನಿರಾಕರಿಸಿದ ಆಘಾತದಿಂದ ಕುಸಿದ ಬಿದ್ದ ಮಹಿಳೆ, ತಿರುಗಿ ನೋಡದ ಏರ್ ಇಂಡಿಯಾ ಸಿಬ್ಬಂದಿ!
 

ಏರ್ ಇಂಡಿಯಾದ A320neo ವಿಮಾನಗಳು ಅವುಗಳ ಮೇಲೆ CFM ನ ಲೀಪ್ ಎಂಜಿನ್‌ಗಳನ್ನು ಹೊಂದಿವೆ. A320neo ವಿಮಾನವೂ ಬೆಳಗ್ಗೆ 9.43 ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Chhatrapati Shivaji International Airport) ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ಇಂಜಿನ್‌ಗಳಲ್ಲಿ ಹೆಚ್ಚಿನ ತಾಪಮಾನದ ಇರುವ ಬಗ್ಗೆ ಎಚ್ಚರಿಕೆಯನ್ನು ಸ್ವೀಕರಿಸಿದರು. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಇಂಜಿನ್ ಸ್ಥಗಿತಗೊಂಡಿದ್ದು, ಹೀಗಾಗಿ ತಾಂತ್ರಿಕ ದೋಷವನ್ನು ಗಮನಿಸಿದ ಪೈಲಟ್‌ (pilot) ವಿಮಾನವನ್ನು ಮತ್ತೆ  ಮುಂಬೈ ವಿಮಾನ ನಿಲ್ದಾಣದತ್ತ ತಿರುಗಿಸಿದ್ದು,  ಬೆಳಗ್ಗೆ 10.10 ಕ್ಕೆ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ನಡೆಸಿದರು ಎಂದು ತಿಳಿದು ಬಂದಿದೆ. 

Air India ಏರ್‌ ಇಂಡಿಯಾ ಸಿಇಒ, ಎಂಡಿ ಆಗಿ ಕ್ಯಾಂಪ್‌ಬೆಲ್‌ ವಿಲ್ಸನ್‌ ನೇಮಕ!
ಘಟನೆಯ ಕುರಿತು ಏರ್ ಇಂಡಿಯಾದ ವಕ್ತಾರರನ್ನು (Air India spokesperson) ಕೇಳಿದಾಗ ಏರ್ ಇಂಡಿಯಾ (Air India) ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಮತ್ತು ನಮ್ಮ ಸಿಬ್ಬಂದಿ ಈ ಸಂದರ್ಭಗಳನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ. ನಮ್ಮ ಇಂಜಿನಿಯರಿಂಗ್ ಮತ್ತು ನಿರ್ವಹಣೆ ತಂಡಗಳು ತಕ್ಷಣವೇ ಸಮಸ್ಯೆಯನ್ನು ಪರಿಶೀಲಿಸಲು ಪ್ರಾರಂಭಿಸಿದವು. ವಿಮಾನ ಬದಲಾವಣೆಯ ನಂತರ ನಿಗದಿತ ವಿಮಾನವು ಪ್ರಯಾಣಿಕರೊಂದಿಗೆ ಬೆಂಗಳೂರಿಗೆ (Bengaluru) ಹೊರಟಿದೆ ಎಂದು ವಕ್ತಾರರು ಹೇಳಿದ್ದಾರೆ. 

ಏರ್ ಇಂಡಿಯಾ ಸಂಸ್ಥೆಯನ್ನು 18,000 ಕೋಟಿ ರೂಪಾಯಿ ಪಾವತಿಸಿ ಖರೀದಿಸಿದ ಟಾಟಾ ಸನ್ಸ್ ಕೆಲವೇ ದಿನಗಳಲ್ಲಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ದಿದ್ದಾರೆ. ಇದೀಗ ಮುಂದುವರಿದ ಭಾಗವಾಗಿ ಏರ್ ಏಷಿಯಾದ ಸಂಪೂರ್ಣ ಪಾಲು ಖರೀದಿಗೆ ಏರ್ ಇಂಡಿಯಾ ಮುಂದಾಗಿದೆ. ಇದಕ್ಕಾಗಿ ಭಾರತದ ಸ್ಪರ್ಧಾ ಆಯೋಗದ ಬಳಿ ಅನುಮತಿ ಕೇಳಿದೆ. ಏರ್ ಏಷಿಯಾ ಪ್ರವೈಟ್ ಲಿಮಿಟೆಡ್ ವಿಮಾನಯಾನ ಸಂಸ್ಥೆಯಲ್ಲಿ ಟಾಟಾ ಸನ್ಸ್ ಶೇಕಡಾ 83.67ರಷ್ಟು ಪಾಲು ಹೊಂದಿದೆ. ಇನ್ನುಳಿದ ಶೇಕಡಾ 16.33 ರಷ್ಟು ಪಾಲನ್ನು ಖರೀದಿಸಲು ಟಾಟಾ ಸನ್ಸ್ CCI ಬಳಿ ಅನುಮತಿ ಕೇಳಿದೆ. 

ಏರ್ ಏಷಿಯಾ ಭಾರತದಲ್ಲಿ ದೇಶಿಯ ವಾಯ ಸಾರಿಗೆ ಸೇವೆ ನೀಡುತ್ತಿದೆ. ಜೊತೆಗೆ ಕಾರ್ಗೋ, ಚಾರ್ಟರ್ ಫ್ಲೈಟ್ ಸೇವೆಗಳನ್ನು ನೀಡುತ್ತಿದೆ. ಏರ್ ಏಷಿಯಾದಲ್ಲಿ ಬಹುಪಾಲು ಟಾಟಾ ಅಧಿಪತ್ಯ ಹೊಂದಿದೆ. ಇದೀಗ ಶೇಕಡಾ 100 ರಷ್ಟು ಪಾಲು ಹೊಂದಲು ಟಾಟಾ ಸನ್ಸ್ ನಿರ್ಧರಿಸಿದೆ.

Latest Videos
Follow Us:
Download App:
  • android
  • ios