ಸೆಪ್ಟೆಂಬರ್ 2026ರ ವೇಳೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ನೋಂದಣಿ ಶೇ.31ಕ್ಕೆ ಏರಿಕೆಯಾಗಿದೆ. ಇಂಧನ ಬೆಲೆ ಹೆಚ್ಚಳದಿಂದಾಗಿ ನಗರ ಪ್ರದೇಶದ ಜನರು ಪೆಟ್ರೋಲ್ ವಾಹನಗಳ ಬದಲಿಗೆ ಇವಿಗಳತ್ತ ಮುಖ ಮಾಡುತ್ತಿದ್ದಾರೆ. ಒಂದೇ ತಿಂಗಳಲ್ಲಿ 2.07 ಲಕ್ಷಕ್ಕೂ ಹೆಚ್ಚು ಮಾರಾಟವಾಗಿ ದಾಖಲೆ
ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ 2026ರ ಸೆಪ್ಟೆಂಬರ್‌ನಲ್ಲಿ ಮಹತ್ವದ ಮೈಲಿಗಲ್ಲು ತಲುಪಿದೆ. ದೇಶದಲ್ಲಿ ರಿಜಿಸ್ಟ್ರೆಷನ್ ಆದ ಪ್ರತಿ ಮೂರು ಸ್ಕೂಟರ್‌ಗಳಲ್ಲಿ ಒಂದು ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ!ಮಧ್ಯಪ್ರಾಚ್ಯ ಸಂಘರ್ಷ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳದ ಪರಿಣಾಮವಾಗಿ ಭಾರತೀಯರು ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮನವು ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಸೆಪ್ತೆಂಬರ್‌ನಲ್ಲಿ ಒಟ್ಟು ಸ್ಕೂಟರ್ ನೋಂದಣಿಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್‌ಗಳು ಪಾಲು ಶೇ.31 ರಷ್ಟಿತ್ತು. ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ.22ರಷ್ಟಿತ್ತು. ಅಂದರೆ ಕೇವಲ ಒಂದೇ ವರ್ಷದಲ್ಲಿ ಇದೇ ಸೆಪ್ಟೆಂಬರ್ ತಿಂಗಳ ವೇಳೆಗೆ ಎಲೆಕ್ಟ್ರಾನಿಕ್ ಸ್ಕೂಟರ್‌ಗಳ ಪಾಲು 11 ಶೇಕಡವಾರು ಹೆಚ್ಚಾಗಿದೆ. ಇದು ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಾಹನ ಖರೀದಿಸುವತ್ತ ಹೇಗೆ ಬದಲಾವಣೆಯಾಗಿದೆ ಮತ್ತು ವರ್ಷ ವರ್ಷ ಹೆಚ್ಚುತ್ತಿದೆ ಎಂಬುದನ್ನು ತೋರಿಸುತ್ತೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ನೋಂದಣಿಯಲ್ಲಿ ದಾಖಲೆ!
2026ರ ಸೆಪ್ಟೆಂಬರ್ ವೇಳೆಗೆ ಭಾರತದಲ್ಲಿ 2.07 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಇದು ಎಲೆಕ್ಟ್ರಾನಿಕ್ ವಾಹನಗಳ ಖರೀದಿಯಲ್ಲಿ ಒಂದೇ ತಿಂಗಳಲ್ಲಿ ದಾಖಲಾದ ಅತ್ಯಧಿಕ ನೋಂದಣಿಯಾಗಿದೆ. ಮಾರುಕಟ್ಟೆಯಲ್ಲಿ ಹೊಸ ಹೊಸ ಮಾಡೆಲ್‌ಗಳಿಂದಾಗಿ ಕಂಪನಿಗಳ ನಡುವಿನ ಸ್ಪರ್ಧೆ ಜೊತೆಗೆ ಪೆಟ್ರೋಲ್ ವಾಹನಗಳಿಗೆ ಪರ್ಯಾಯ ಹುಡುಕುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವ ಜನರಲ್ಲಿ ವಿಶೇಶವಾಗಿ ಪ್ರತಿದಿನ ಪ್ರಯಾಣಿಸುವ ನಗರ ಪ್ರದೇಶದಂತಹ ಜನರು ತಮ್ಮ ಪೆಟ್ರೋಲ್ ಡೀಸೆಲ್ ವಾಹನಕ್ಕಿಂತ ಎಲೆಕ್ಟ್ರಿಕ್ ಸ್ಕೂಟರ್ ಖರೀಸುವಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳು ಕೇವಲ ಪರ್ಯಾಯ ವಾಹನಗಳಾಗಿ ಉಳಿಯದೆ, ದೈನಂದಿನ ಆಫೀಸ್, ಮನೆ, ಸಮೀಪದಲ್ಲೇ ಓಡಾಡಲು ಎಲೆಕ್ಟ್ರಿಕ್ ವಾಹನಗಳೇ ಉತ್ತಮವಾಗಿದೆ.
ಇತ್ತೀಚಿನ ಅಂಕಿ-ಅಂಶಗಳು ದೇಶದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಆಗಿರುವ ದೊಡ್ಡ ಬದಲಾವಣೆಯನ್ನು ತೋರಿಸಿದೆ. ಪೆಟ್ರೋಲ್ ಸ್ಕೂಟರ್‌ಗಳಿಗಿಂತ ಬ್ಯಾಟರಿ ಚಾಲಿತ ವಾಹನಗಳು ಹೆಚ್ಚು ಮಾರುಕಟ್ಟೆಗೆ ಬರಲಾರಂಭಿಸಿವೆ.
ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಬೆಲೆಯೂ ಕಮ್ಮಿ
ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಹೆಚ್ಚಲು ಇನ್ನು ಒಂದು ಕಾರಣವಿದೆ. ಪೆಟ್ರೋಲ್ ಡೀಸೆಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯೂ ಕಮ್ಮಿಯಾಗಿದೆ. ದೆಹಲಿಯಲ್ಲಿ ಟಿವಿಎಸ್ ಐಕ್ಯೂಬ್‌ನ ಆನ್‌ರೋಡ್ ಬೆಲೆ ಸುಮಾರು 1.02 ಲಕ್ಷ ರೂಪಾಯಿ ಇದೆ ಎಂದು ವರದಿಯಾಗಿದೆ. ಇದು ಹೋಂಡಾ ಆಕ್ಟಿವಾ 110 ಡಿಎಲ್‌ಎಕ್ಸ್ ಸ್ಕೂಟರ್‌ನ ಬೆಲೆಗೆ ಹೋಲಿಕೆಯಾಗುತ್ತದೆ. ಎರಡೂ ವಾಹನಗಳ ಬೆಲೆ ಒಂದೇ ಆಗಿರುವುದರಿಂದ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನೇ ಖರೀದಿಸುತ್ತಿದ್ದಾರೆ. ಒಮ್ಮೆ ಖರೀದಿಸಿದರೆ ವರ್ಷಗಟ್ಟಲೇ ಪೆಟ್ರೋಲ್ ಖರ್ಚು ಉಳಿತಾಯ. ಪ್ರಯಾಣದ ವೆಚ್ಚ ಕಡಿಮೆಯಾಗುವ ಬಗ್ಗೆ ಜನರ ಯೋಚಿಸಿ ಎಲೆಕ್ಟ್ರಿಕ್ ವಾಹನ ಖರೀದಿಸುತ್ತಿದ್ದಾರೆ.
ಸಾಮಾನ್ಯವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಎಂಜಿನ್ ಆಧಾರಿತ ಸ್ಕೂಟರ್‌ಗಳಿಗಿಂತ ಕಡಿಮೆ ಚಲಿಸುತ್ತವೆ. ಅಲ್ಲದೆ ಎಲೆಕ್ಟ್ರಿಕ್ ವಾಹನಗಳಿಗೆ ಪೆಟ್ರೋಲ್ ಖರೀದಿಸುವ ಅಗತ್ಯವೂ ಇರುವುದಿಲ್ಲ. ಆದರೆ ವಾಹನ ಖರೀದಿಸುವಾಗ ಚಾರ್ಜಿಂಗ್ ಸೌಲಭ್ಯ, ಬ್ಯಾಟರಿ ಲೈಫ್, ಖರ್ಚು ಭವಿಷ್ಯದಲ್ಲಿ ಬ್ಯಾಟರಿ ಬದಲಿಸುವ ವೆಚ್ಚವೂ ಇದರಲ್ಲಿ ಇದೆಯಾದರೂ, ಪೆಟ್ರೋಲ್ ವಾಹನಗಳಿಗೆ ಹೋಲಿಕೆ ಮಾಡಿದರೆ ತುಂಬಾ ಕಡಿಮೆ ಎನ್ನಬಹುದು.
ದಿನೇದಿನೆ ಪೆಟ್ರೋಲ್ ಬೆಲೆ ಏರಿಕೆ; ಎಲೆಕ್ಟ್ರಿಕ್ ವಾಹನ ಖರೀದಿಯತ್ತ ಭಾರತೀಯರು
ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯ ಸಂಘರ್ಷಗಳಿಂದಾಗ ಕಚ್ಚಾತೈಲ ಬೆಲೆ ಏರಿಕೆಯ ಪರಿಣಾಮ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಕೂಡ ಭಾರೀ ಏರಿಕೆಗೆ ಕಾರಣವಾಗಿದೆ. ಇದರಿಂದ ಪೆಟ್ರೋಲ್‌ಗೆ ಪರ್ಯಾಯ ವಾಹನಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್ ವಾಹನಗಳ ಕಂಪನಿಗಳ ನಡುವೆ ತೀವ್ರ ಪೈಪೋಟಿ ಸ್ಪರ್ಧೆಯಿಂದಾಗಿ ಕಡಿಮೆ ಬೆಲೆಯಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರುಕಟ್ಟೇಗೆ ಬಂದಿರುವುದರಿಂದ ಮತ್ತು ಖರ್ಚು, ಬೆಲೆಗಳಿಗೆ ಹೋಲಿಸಿದರೆ ಪೆಟ್ರೋಲ್ ಸ್ಕೂಟರ್‌ಗಳಿಗಿಂತ ಕಡಿಮೆಯಾಗಿರುವುದರಿಂದ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನೇ ಹೆಚ್ಚು ಖರೀದಿಸುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಳಸುವುದರಿಂದ ಪೆಟ್ರೋಲ್ ಮೇಲೆ ಡಿಪೆಂಡ್ ಆಗುವುದು ತಪ್ಪುತ್ತದೆ ಇದು ಜನ ಹಚ್ಚು ಎಲೆಕ್ಟ್ರಿಕ್ ವಾಹನ ಖರೀದಿಸಲು ಕಾರಣಗಳಲ್ಲೊಂದು. ಆದರೆ ಎಲೆಕ್ಟ್ರಿಕ್ ವಾಹನದಿಂದ ಸಿಗುವ ನಿಜವಾದ ಉಳಿತಾಯವು ವಿದ್ಯುತ್ ದರ, ಪ್ರತಿದಿನ ಪ್ರಯಾಣಿಸುವ ದೂರ, ಚಾರ್ಜಿಂಗ್ ವ್ಯವಸ್ಥೆ ಮತ್ತು ವಾಹನದ ಖರೀದಿ ಬೆಲೆಯನ್ನು ಅವಲಂಬಿಸಿರುತ್ತದೆ.
ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳ ನಡುವೆ ಹೆಚ್ಚಿದ ಸ್ಪರ್ಧೆ
ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ವಾಹನ ತಯಾರಕ ಕಂಪನಿಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಸಂಸ್ಥೆಗಳು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.
ಬೆಲೆ, ಹೊಸ ವೈಶಿಷ್ಟ್ಯಗಳು, ಬ್ಯಾಟರಿ ತಂತ್ರಜ್ಞಾನ, ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸಬಹುದಾದ ದೂರ ಮತ್ತು ಚಾರ್ಜಿಂಗ್ ಸೌಲಭ್ಯಗಳ ಮೂಲಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿವೆ.
ಮುಂದಿನ ದಿನಗಳಲ್ಲಿ ಈ ಮಾರುಕಟ್ಟೆ ಮತ್ತಷ್ಟು ಬೆಳೆಯಬೇಕಾದರೆ ಕಂಪನಿಗಳು ವಾಹನಗಳ ಗುಣಮಟ್ಟ ಕಾಪಾಡಿಕೊಳ್ಳುವುದು, ಉತ್ತಮ ಸರ್ವಿಸ್ ಜಾಲವನ್ನು ನಿರ್ಮಿಸುವುದು ಹಾಗೂ ಬ್ಯಾಟರಿಯ ಬಾಳಿಕೆ ಮತ್ತು ಮರುಮಾರಾಟದ ಮೌಲ್ಯದ ಬಗ್ಗೆ ಗ್ರಾಹಕರಲ್ಲಿರುವ ಆತಂಕಗಳನ್ನು ನಿವಾರಿಸುವುದು ಮುಖ್ಯವಾಗಲಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ಹೆಚ್ಚಳ
2026ರ ಸೆಪ್ಟೆಂಬರ್‌ನಲ್ಲಿ ದೇಶದ ಒಟ್ಟು ಸ್ಕೂಟರ್ ನೋಂದಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಾಲು ಶೇ. 33ಕ್ಕೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು ಶೇ. 22ರಷ್ಟಿತ್ತು. ಇದೇ ತಿಂಗಳಲ್ಲಿ 2.07 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ.
ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಬೆಲೆ ವ್ಯತ್ಯಾಸ ಕಡಿಮೆಯಾಗುತ್ತಿರುವುದು, ದಿನನಿತ್ಯದ ಪ್ರಯಾಣದ ವೆಚ್ಚವನ್ನು ತಗ್ಗಿಸಿಕೊಳ್ಳುವ ಅವಕಾಶ ಮತ್ತು ಪೆಟ್ರೋಲ್ ಬೆಲೆಯ ಏರಿಳಿತದ ಆತಂಕ ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಗ್ರಾಹಕರನ್ನು ಸೆಳೆಯುತ್ತಿವೆ. ಈ ಬೆಳವಣಿಗೆ ಮುಂದುವರಿದರೆ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.


