ಸ್ವಿಗ್ಗಿ, ಜೊಮ್ಯಾಟೋ ಆಟಕ್ಕೆ ಬ್ರೇಕ್ ಬೀಳುತ್ತಾ? Coming Soon ಎಂದ ಕಂಪನಿ

ದೈತ್ಯ ಕಂಪನಿಯೊಂದು  ಸ್ವಿಗ್ಗಿ ಮತ್ತು ಜೊಮ್ಯಾಟೋಗೆ ಪೈಪೋಟಿ ನೀಡಲು ಸಜ್ಜಾಗಿದೆ. ಈ ಹೊಸ ಸೇವೆಯು ಗ್ರಾಹಕರಿಗೆ ಶೇ.30ರಷ್ಟು ರಿಯಾಯಿತಿ ಮತ್ತು ಉಚಿತ ಡೆಲಿವರಿಯನ್ನು ನೀಡುತ್ತದೆ, ಜೊತೆಗೆ ಆರ್ಡರ್‌ಗಳನ್ನು ನಿಗದಿತ ಸಮಯಕ್ಕೆ ತಲುಪಿಸುವ ಆಯ್ಕೆಯನ್ನು ಒದಗಿಸುತ್ತದೆ.

Ola Enters 10 minute Grocery delivery  services market as soon mrq

ನವದೆಹಲಿ: ಇಂದು ಯಾವುದೇ ವಸ್ತು ಆರ್ಡರ್ ಮಾಡಿದ್ರೆ 10 ನಿಮಿಷದಲ್ಲಿ ನೀವಿರುವ ಸ್ಥಳಕ್ಕೆ ಬರುತ್ತದೆ. ಇದಕ್ಕೆ ಕಾರಣ ಸ್ವಿಗ್ಗಿ, ಜೊಮ್ಯಾಟೋ  ಅಂತಹ ಪ್ಲಾಟ್‌ಫಾರಂಗಳು. ಆರಂಭದಲ್ಲಿ ಹೋಟೆಲ್ ಆಹಾರ ಪೂರೈಕೆ ಮಾಡುತ್ತಿದ್ದ ಸ್ವಿಗ್ಗಿ ಮತ್ತು ಜೊಮ್ಯಾಟೋ  ಇದೀಗ ದಿನಬಳಕೆಯ ಸಾಮಾಗ್ರಿಗಳನ್ನು 10 ನಿಮಿಷದಲ್ಲಿ ತಲುಪಿಸುವ ಕೆಲಸವನ್ನು ಮಾಡುತ್ತಿವೆ. ಸ್ವಿಗ್ಗಿ ಇನ್‌ಸ್ಟಾ ಮಾರ್ಟ್‌, ಜೊಮ್ಯಾಟೋ ಬ್ಲಿಂಕ್‌ ಇಟ್ ಮೂಲಕ ಆಹಾರ ಸಾಮಾಗ್ರಿ ಸೇರಿದಂತೆ ಇನ್ನಿತರ ವಸ್ತುಗಳನ್ನು  ತಲುಪಿಸುತ್ತವೆ. ಇದೀಗ ಹೊಸ ಕಂಪನಿಯೊಂದು ಮಾರುಕಟ್ಟೆ ಪ್ರವೇಶ ಮಾಡಿದ್ದು,  Coming Soon ಎಂಬ ಸಂದೇಶವನ್ನು ರವಾನಿಸಿದೆ. 

ರಿಲಯನ್ಸ್, ಮೋರ್, ಜೊಮ್ಯಾಟೋ, ಸ್ವಿಗ್ಗಿ ಇನ್‌ಸ್ಟಾ ಮಾರ್ಟ್, ಬ್ಲಿಂಕ್‌ಇಟ್ ಸೇರಿದಂತೆ ಕೆಲವು ಪ್ಲಾಟ್‌ಫಾರಂಗಳು 10 ನಿಮಿಷದಲ್ಲಿಯೇ ಆರ್ಡರ್ ತಲುಪಿಸುವ ಭರವಸೆಯನ್ನು ನೀಡುತ್ತಿವೆ. ಇದೀಗ ಇವುಗಳ ಸಾಲಿಗೆ ಓಲಾ ಸೇರ್ಪಡೆಯಾಗುತ್ತಿದೆ. Ola Grocery ಪ್ಲಾಟ್‌ಫಾರಂ ಲಾಂಚ್ ಆಗಿದೆ. 

Ola Grocery ಲಾಭವೇನು?
ಗ್ರಾಹಕರು Ola Grocery ಮೂಲಕ ಆರ್ಡರ್ ಮಾಡಿದ್ರೆ ಶೇ.30ರಷ್ಟು ಡಿಸ್ಕೌಂಟ್ ಸಿಗುತ್ತದೆ. ಗ್ರಾಹಕರು ಯಾವುದೇ ಡೆಲಿವರಿ ಚಾರ್ಜ್ ಇಲ್ಲದೇ ಆರ್ಡರ್ ಮಾಡಬಹುದು. ನಿಮಗೆ ಬೇಕಾದ ಸಮಯಕ್ಕೆ ಆರ್ಡರ್‌ನ್ನು ಶೆಡ್ಯೂಲ್ ಮಾಡುವ ಆಯ್ಕೆಯನ್ನು ಓಲಾ ಗ್ರೊಸರಿ ಹೊಂದಿರುತ್ತದೆ ಎಂದು ವರದಿಯಾಗಿದೆ. 
 
ಕಂಪನಿಯ ಸೋಶಿಯಲ್ ಮೀಡಿಯಾ ಪೋಸ್ಟ್‌ ಪ್ರಕಾರ, ದೇಶದ ಎಲ್ಲಾ ಭಾಗದಲ್ಲಿಯೂ Ola Grocery ಆರಂಭವಾಗಲಿದೆ. ಆರಂಭದಲ್ಲಿ ಮಹಾನಗರಗಳಿಂದ ಶುರವಾಗಲಿದ್ದು, ಭವಿಷ್ಯದಲ್ಲಿ ಹಂತ ಹಂತವಾಗಿ Ola Grocery ವಿಸ್ತರಣೆಯಾಗಲಿದೆ ಎಂದು ತಿಳಿದು ಬಂದಿದೆ. Ola Grocery ಆರಂಭ ಯಾವಾಗ ಪ್ರಶ್ನೆಗೆ ಕಮಿಂಗ್ ಸೂನ್ (Coming Soon) ಎಂಬ ಉತ್ತರವನ್ನು ನೀಡಿದೆ.

ಇದನ್ನೂ ಓದಿ: ಅಂಬಾನಿಯನ್ನು ದಿಗ್ಬ್ರಮೆಗೊಳಿಸಿದ ಸುನಿಲ್ ಮಿತ್ತಲ್; ಜಿಯೋವನ್ನು ಹಿಂದಿಕ್ಕಿದ ಏರ್‌ಟೆಲ್

ಭಾರತದ ಕ್ವಿಕ್ ಕಾಮರ್ಸ್ ಮಾರ್ಕೆಟ್ ಜಗತ್ತಿನ ಅತಿದೊಡ್ಡ ಸುಭದ್ರವಾದ ಮಾರುಕಟ್ಟೆ ಎಂದು ಪರಿಗಣಿಸಲಾಗುತ್ತಿದೆ. ಮೋತಿಲಾಲ ಡೇಟಾ ರಿಪೋರ್ಟ್ ಪ್ರಕಾರ, ಶೇ.46ರಷ್ಟು ಮಾರಕಟ್ಟೆಯಲ್ಲಿ ಪಾಲನ್ನು ಹೊಂದುವ ಮೂಲಕ ಜೊಮ್ಯಾಟೋದ ಬ್ಲಿಂಕಿಟ್ (Zomato's Blinkit) ಮೊದಲ ಸ್ಥಾನದಲ್ಲಿದೆ.  ಶೇ.29ರೊಂದಿಗೆ ಜೆಪ್ಟೋ (Zepto) ಮತ್ತು ಶೇ.25ರೊಂದಿಗೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) 3ನೇ ಸ್ಥಾನದಲ್ಲಿದೆ. 

Coming Soon ಸಾಲಿನಲ್ಲಿದ ಅಮೆಜಾನ್
ಕೆಲ ವರದಿಗಳ ಪ್ರಕಾರ, ಇ ಕಾಮರ್ಸ್ ದೈತ್ಯ ಕಂಪನಿಯಾಗಿರುವ ಅಮೆಜಾನ್ ಸಹ 10 ನಿಮಿಷದ ಕ್ವಿಕ್ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ದತೆ ಮಾಡಿಕೊಳ್ಳುತ್ತಿದೆಯಂತೆ. 2025ರಲ್ಲಿ ಅಮೆಜಾನ್ ಸಹ ಕ್ವಿಕ್ ಸರ್ವಿಸ್ ಆರಂಭಿಸುವ ಎಲ್ಲ ಸಾಧ್ಯತೆಗಳಿವೆ. ಜನರು ಸಹ ಫಾಸ್ಟ್ ಡೆಲಿವರಿ ಸರ್ವಿಸ್ ಬಗ್ಗೆ ವ್ಯಾಪಕ  ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಮಾರುಕಟ್ಟೆಯೂ ವಿಸ್ತರಣೆಯಾಗುತ್ತಿದ್ದು, ಹೊಸ ಕಂಪನಿಗಳ ಆಗಮನವಾಗುತ್ತಿದೆ.

ಇದನ್ನೂ ಓದಿ: ಸ್ನೇಹಿತರೆಲ್ಲಾ ವಿದೇಶಕ್ಕೆ ಹೋದ್ರೆ, ಊರಲ್ಲಿದ್ದುಕೊಂಡೇ ವರ್ಷಕ್ಕೆ ₹2.5 ಕೋಟಿ ಗಳಿಸುತ್ತಿರೋ 34ರ ಯುವಕ

Latest Videos
Follow Us:
Download App:
  • android
  • ios