ಅಂಬಾನಿಯನ್ನು ದಿಗ್ಬ್ರಮೆಗೊಳಿಸಿದ ಸುನಿಲ್ ಮಿತ್ತಲ್; ಜಿಯೋವನ್ನು ಹಿಂದಿಕ್ಕಿದ ಏರ್‌ಟೆಲ್
ರಿಲಯನ್ಸ್ ಜಿಯೋಗೆ ಬಿಎಸ್ಎನ್ಎಲ್ ಬಳಿಕ ಭಾರ್ತಿ ಏರ್‌ಟೆಲ್ ಬಿಗ್ ಶಾಕ್ ನೀಡಿದೆ. ಕೆಲ ದಿನಗಳ ಹಿಂದೆ ವೊಡಾಫೋನ್ ಐಡಿಯಾ ದೇಶದ ಪ್ರಮುಖ ನಗರಗಳಲ್ಲಿ 5ಜಿ ಸೇವೆ ಆರಂಭಿಸಿತ್ತು.
ನವದೆಹಲಿ: ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್‌ಟೆಲ್, ಮೊದಲ ಸ್ಥಾನದಲ್ಲಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿಯನ್ನು ದಿಗ್ಭ್ರಮೆಗೊಳಿಸಿದೆ. ಹೌದು, ಜಮ್ಮು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾ ಜಿಲ್ಲೆಯ ಏಳು ಗಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಭಾರ್ತಿ ಏರ್‌ಟೆಲ್ ಮೊಬೈಲ್ ಸೇವೆಗಳನ್ನು ಆರಂಭಿಸಿದ ದೇಶದ ಮೊದಲ ಖಾಸಗಿ ಟೆಲಿಕಾಂ ಕಂಪನಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ರಿಲಯನ್ಸ್ ಜಿಯೋಗೆ ಇದು ಅತಿದೊಡ್ಡ ಹಿನ್ನಡೆ ಎಂಬ ಮಾತುಗಳು ಕೇಳಿ ಬಂದಿವೆ. ರಿಲಯನ್ಸ್ ಜಿಯೋ ಅತಿ ಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ಟೆಲಿಕಾಂ ವಲಯದಲ್ಲಿ ಮೊದಲ ಸ್ಥಾನದಲ್ಲಿದೆ.
ಕಚಲ್, ಬಲ್ಬೀರ್, ರಜ್ದಾನ್ ಪಾಸ್, ತಯಾ ಟಾಪ್, ಉಸ್ತಾದ್, ಕಥಿ ಮತ್ತು ಚೀಮಾದಂತಹ ಗ್ರಾಮಗಳನ್ನು ದೇಶದ ಇತರೆ ಭಾಗಗಳಿಗೆ ಸಂಪರ್ಕಿಸಲಾಗಿದೆ ಎಂದು ಏರ್‌ಟೆಲ್ ತನ್ನ ಹೇಳಿಕೆಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಈ ಎಲ್ಲಾ ಗ್ರಾಮಗಳು ಕೇರಾನ್, ಮಚ್ಚಲ್, ತಂಗ್‌ಧರ್, ಗುರೇಜ್ ಮತ್ತು ಉರಿ ಕಣಿವೆ ಪ್ರದೇಶಗಳಲ್ಲಿದ್ದು, ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾ ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಈ ಪ್ರದೇಶದಲ್ಲಿ ತನ್ನ ಸೇವೆ ಆರಂಭಿಸಿದ ದೇಶದ ಮೊದಲ ಖಾಸಗಿ ಕಂಪನಿ ಎಂದು ಏರ್‌ಟೆಲ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಗಡಿ ಪ್ರದೇಶದ ಏಳು ಗ್ರಾಮಗಳಲ್ಲಿ 15 ಟವರ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ಇದರಿಂದ ಈ ಪ್ರದೇಶದಲ್ಲಿ ವಾಸವಾಗಿರುವ ಜನರಿಗೂ ಮತ್ತು ಗಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ಸಮರ್ಪಕ ಸಂವಹನ ಕಲ್ಪಿಸಲಾಗುತ್ತದೆ. ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಕುಪ್ವಾರ, ಬಾರಾಮುಲ್ಲಾ ಮತ್ತು ಬಂಡಿಪೋರ್ ಜಿಲ್ಲೆಗಳ ಗ್ರಾಮಗಳಿಗೆ ಸಂಪರ್ಕವನ್ನು ತರಲು ಭಾರ್ತಿ ಏರ್‌ಟೆಲ್ ಭಾರತೀಯ ಸೇನೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 2025 ಆರಂಭಕ್ಕೂ ಮುನ್ನವೇ ಸದ್ದಿಲ್ಲದೇ ಜಿಯೋ-ಏರ್‌ಟೆಲ್‌ಗೆ ಶಾಕ್ ಕೊಟ್ಟ ವೊಡಾಫೋನ್ ಐಡಿಯಾ
ಈ ಹಿಂದೆಯೇ ಭಾರತೀಯ ಸೇನೆಯೊಂದಿಗಿನ ಸಹಭಾಗಿತ್ವದ ಮಾಹಿತಿಯನ್ನು ಏರ್‌ಟೆಲ್ ನೀಡಿತ್ತು. ಮಿಲಿಟರಿ ನೆಲೆಗಳ ದೂರದ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸಲು ಮತ್ತು ನೆಟವರ್ಕ್ ಸೇವೆಗಳನ್ನು ಸುಧಾರಿಸಲು ಭಾರತೀಯ ಸೇನೆಯ ಸಹಕಾರವನ್ನು ಭಾರ್ತಿ ಏರ್‌ಟೆಲ್ ಕೋರಿದೆ. ಇತ್ತೀಚೆಗಷ್ಟೇ ಗಲ್ವಾನ್ ನದಿ ಪ್ರದೇಶದ ದೌಲತ್ ಬೇಗ್ ಓಲ್ಡಿಯಲ್ಲಿಯೂ (BDO) ಏರ್‌ಟೆಲ್ ಸಂಪರ್ಕ ಸಾಧಿಸಿತ್ತು. ಜೂನ್-2025ರೊಳಗೆ ಭಾರತದ ಎಲ್ಲಾ ಭಾಗದಲ್ಲಿಯ ಜನರು ಟೆಲಿಕಾಂ ಸಂಪರ್ಕ ಸಿಗಲಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಲವು ಬಾರಿ ಹೇಳಿದ್ದಾರೆ. ಹಂತ ಹಂತವಾಗಿ ದೇಶದ ಮೂಲೆ ಮೂಲೆಗೂ ಟೆಲಿಕಾಂ ಸಂಪರ್ಕ ವಿಸ್ತರಣೆಯಾಗುತ್ತಿದೆ.
ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಸುನಿಲ್ ಮಿತ್ತಲ್ ಒಡೆತನದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಭಾರತದಲ್ಲಿ ಎರಡು ದೊಡ್ಡ ಟೆಲಿಕಾಂ ಕಂಪನಿಗಳ ಮಾಲೀಕರಾಗಿದ್ದಾರೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, ಸುನಿಲ್ ಮಿತ್ತಲ್ ಒಡೆತನದ ಏರ್‌ಟೆಲ್, 9.59 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಸುನಿಲ್ ಮಿತ್ತಲ್ ಅವರ ವೈಯಕ್ತಿಕ ನಿವ್ವಳ ಮೌಲ್ಯ ಸುಮಾರು $ 12 ಬಿಲಿಯನ್ ಆಗಿದ್ದು, ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ: ತಿಂಗಳಿಗೆ 10 ಸಾವಿರ ಗಳಿಸುತ್ತಿದ್ದವನ ಖಾತೆಯಲ್ಲಿ 2 ಕೋಟಿ ರೂಪಾಯಿ; ಇದು ನಿಮ್ಮ ಸುತ್ತಮುತ್ತವೇ ಇರೋ ಬ್ಯುಸಿನೆಸ್?