Asianet Suvarna News Asianet Suvarna News

US Recession ಭೀತಿ: 80 ಡಾಲರ್‌ಗಿಂತ ಕಡಿಮೆಗೆ ಕುಸಿದ Crude Oil; ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಯಾವಾಗ..?

ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಾಡುತ್ತಿದೆ. ಅಲ್ಲದೆ, ಬಹುತೇಕ ದೇಶಗಳಲ್ಲಿ ಬಡ್ಡಿ ದರ ಹೆಚ್ಚಳಗೊಂಡಿದ್ದು, ಹಣದುಬ್ಬರೂ ಹೆಚ್ಚಾಗುತ್ತಿರುವ ಪೂರೈಕೆಯಲ್ಲಿ ಇಳಿಕೆಯಾಗಿ ಕಚ್ಚಾ ತೈಲ ಬೆಲೆ ಕುಸಿದಿದೆ. 

oil falls below 80 dollars en route to biggest run of weekly losses this year ash
Author
First Published Sep 24, 2022, 12:07 PM IST

ಅಮೆರಿಕದಲ್ಲಿ ಆರ್ಥಿಕ ಹಿಂಜರಿತ (Economic Recession) ಭೀತಿ ಎದುರಾಗಿದ್ದು, ಈ ಹಿನ್ನೆಲೆ ಕಚ್ಚಾ ತೈಲ ಬೆಲೆಯಲ್ಲಿ (Crude Oil Price) ತೀವ್ರ ಕುಸಿತವಾಗಿದೆ. ಸೆಪ್ಟೆಂಬರ್ 23 ರಂದು ತೈಲ ಬೆಲೆಗಳು ತೀವ್ರ ಕುಸಿತವಾಗಿದ್ದು, ಈ ವರ್ಷದಲ್ಲೇ (ಸಾಪ್ತಾಹಿಕವಾಗಿ) ಕನಿಷ್ಠ ಮಟ್ಟಕ್ಕೆ ಕುಸಿದಿದೆ. US ಕಚ್ಚಾ ಬೆಂಚ್‌ಮಾರ್ಕ್‌ ಜನವರಿಯ ಆರಂಭದ ನಂತರ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ ಅಮೆರಿಕ ಡಾಲರ್‌ 80 ಕ್ಕಿಂತ ಕಡಿಮೆಯಾಗಿದೆ. ಜಗತ್ತಿನಾದ್ಯಂತ ಬಡ್ಡಿ ದರಗಳು ಹೆಚ್ಚುತ್ತಿದ್ದು, ಪ್ರಮುಖ ಸರಕುಗಳ ಬೇಡಿಕೆಯ ದೃಷ್ಟಿಕೋನವನ್ನು ಆತಂಕದೆಡೆಗೆ ದೂಡಿದ್ದು, ಈ ಹಿನ್ನೆಲೆ ಕಚ್ಚಾ ತೈಲ ಬೆಲೆ ಕುಸಿದಿದೆ. ಪ್ರಪಂಚದಾದ್ಯಂತದ ಕೇಂದ್ರೀಯ ಬ್ಯಾಂಕುಗಳು (Central Banks) ಬೆಳವಣಿಗೆಯ ವೆಚ್ಚದಲ್ಲಿ ಹಣದುಬ್ಬರದ (Inflation) ವಿರುದ್ಧ ತಮ್ಮ ಹೋರಾಟವನ್ನು ಹೆಚ್ಚಿಸಿದ ಕಾರಣ ಕಚ್ಚಾ ತೈಲವು ಈ ವರ್ಷ ನಷ್ಟದ ದೀರ್ಘಾವಧಿಯ ಹಾದಿಯಲ್ಲಿದೆ. ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (West Texas Intermediate) (WTI) ಜನವರಿಯ ನಂತರ ಮೊದಲ ಬಾರಿಗೆ ಶುಕ್ರವಾರ ಅಂದರೆ ಸೆಪ್ಟೆಂಬರ್ 23, 2022 ರಂದು ಬ್ಯಾರೆಲ್‌ಗೆ 80 ಡಾಲರ್‌ಗಿಂತ ಕಡಿಮೆಯಾಗಿದೆ ಮತ್ತು ಸತತ 4ನೇ ವಾರ ಕುಸಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ (Federal Rserve) ಈ ವಾರ ತನ್ನ ಸ್ಪಷ್ಟವಾದ ಸಂಕೇತವನ್ನು ನೀಡಿದ್ದು, ಹಣದುಬ್ಬರದ ನಿಯಂತ್ರಣವನ್ನು ಮರಳಿ ಪಡೆಯುವ ವ್ಯಾಪಾರವಾಗಿ ಅಮೆರಿಕ ಆರ್ಥಿಕ ಹಿಂಜರಿತವನ್ನು ಸಹಿಸಿಕೊಳ್ಳಲು ಸಿದ್ಧವಾಗಿದೆ ಎಂದಿದೆ. ಇನ್ನೊಂದೆಡೆ, UK, ನಾರ್ವೆ ಮತ್ತು ದಕ್ಷಿಣ ಆಫ್ರಿಕಾ ಕೂಡ ಬಡ್ಡಿದರಗಳನ್ನು ಹೆಚ್ಚಿಸಿವೆ.

ಸೆಪ್ಟೆಂಬರ್ 23, 2022 ರ 06:54 pm IST ಕ್ಕೆ, ಬ್ರೆಂಟ್ ತೈಲ ಫ್ಯೂಚರ್ಸ್ (Brent Oil Futures) ಪ್ರತಿ ಬ್ಯಾರೆಲ್‌ಗೆ 87 ಡಾಲರ್‌ನಿಂದ 3.79 ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 79.79 ಡಾಲರ್‌ ಮೌಲ್ಯದಲ್ಲಿ ವಹಿವಾಟು ನಡೆಸುತ್ತಿತ್ತು. ಈ ಹಿನ್ನೆಲೆ oilprice.com ಪ್ರಕಾರ ಕಚ್ಚಾ ತೈಲ ಬೆಲೆ  ಶೇ. 4.53 ರಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ರಷ್ಯಾ-ಉಕ್ರೇನ್ ಸಂಘರ್ಷದ ಪ್ರಯೋಜನ ಪಡೆದ ಭಾರತ; ತೈಲ ಆಮದಿನಿಂದ 35,000 ಕೋಟಿ ರೂ. ಲಾಭ

ಈ ಹಿನ್ನೆಲೆ ಕಪ್ಪು ಚಿನ್ನ (Black Gold) ಎಂದೇ ಕರೆಯಲಾದ ಕಚ್ಚಾ ತೈಲ ಬೆಲೆ ಈ ವಾರದಲ್ಲಿ ತೀವ್ರ ಕುಸಿತ ಕಂಡಿದ್ದು, ಈ ವರ್ಷದ ದೀರ್ಘಾವಧಿಯ ಸಾಪ್ತಾಹಿಕ ನಷ್ಟಕ್ಕೆ ಸಿದ್ಧವಾಗಿದೆ ಮತ್ತು ಎರಡು ವರ್ಷಗಳಲ್ಲಿ ಮೊದಲ ತ್ರೈಮಾಸಿಕ ನಷ್ಟಕ್ಕೆ (Quarterly Loss) ಸಹ ಸಿದ್ಧವಾಗಿದೆ. ರಷ್ಯಾ ಜನಾಭಿಪ್ರಾಯ ಸಂಗ್ರಹಣೆಯನ್ನು ಪ್ರಾರಂಭಿಸಿದ ನಂತರ ಮತ್ತಷ್ಟು ಅಡ್ಡಿಯಾಗುವ ಆತಂಕದ ನಡುವೆ ಕಚ್ಚಾ ತೈಲದ ಬೇಡಿಕೆ ಇನ್ನೂ ದುರ್ಬಲಗೊಂಡಿದೆ. ಉಕ್ರೇನ್‌ನ 4 ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ಸಹ ರಷ್ಯಾ ಹೊಂದಿದೆ.

ಇನ್ನೊಂದೆಡೆ ಪೂರೈಕೆ ಭಾಗದಲ್ಲಿ, 2015 ರ ಇರಾನ್ ಪರಮಾಣು ಒಪ್ಪಂದವನ್ನು (Iran Nuclear Deal) ಪುನರುಜ್ಜೀವನಗೊಳಿಸುವ ಪ್ರಯತ್ನಗಳು ವಿಫಲವಾದ ನಂತರ ಕಚ್ಚಾ ತೈಲ ಬೆಲೆ ಮತ್ತಷ್ಟು ಇಳಿಕೆ ಕಾಣುವ ಆತಂಕ ಹೆಚ್ಚಾಗಿದೆ. ಆದರೆ, ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆ ಅಮೆರಿಕ ಕಚ್ಚಾ ತೈಲದ ಖರೀದಿ ಹೆಚ್ಚಿಸಿದ್ದು, ಈ ಖರೀದಿಯಿಂದ ಕಚ್ಚಾ ತೈಲ ಬೆಲೆಗಳಿಗೆ ಸ್ವಲ್ಪ ಬೆಂಬಲವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಕಚ್ಚಾ ಬೆಲೆಯು ಬ್ಯಾರೆಲ್‌ಗೆ 80 ಡಾಲರ್‌ಗಿಂತ ಕಡಿಮೆಯಾದಾಗ ಅಮೆರಿಕ  ತನ್ನ ತುರ್ತು ತೈಲ ಸಂಗ್ರಹವನ್ನು ಮರುಪೂರಣ ಮಾಡಲು ಪ್ರಾರಂಭಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್‌ (Bloomberg)  ಇತ್ತೀಚೆಗೆ ವರದಿ ಮಾಡಿತ್ತು.

ಇದನ್ನೂ ಓದಿ: Crude Oil Price 7 ತಿಂಗಳ ಕನಿಷ್ಠ: ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಯಾವಾಗ..?

Follow Us:
Download App:
  • android
  • ios